Parivarthane kannada ICSE lesson is about transformation. Parivarthane written by G S Basavarajashastri, about famous Ganekal Shivayya and Taranatha are stories about transformatoin.

No one is born as a bad person. Circumstances make people turn bad. When such people are given opportunities to change, there are one or two instances where even the hearts of thieves are transformed through noble behavior and correction of their mistakes. We should cultivate and practice such virtuous conduct in our own lives.

Ganekal Shivaiah was a renowned violinist and a celebrated drama director. Once, after completing a drama performance, he was returning home when four thieves stopped him and demanded his money. Calmly, Shivaiah requested them to listen to his music for half an hour, promising to give them the money afterward. As he played his melodious violin, the thieves became deeply absorbed and emotionally moved by his music. Touched by his art and goodness, they told him they no longer wanted his money but only his blessings. Shivaiah, in return, gave them the money willingly and advised them to start an honest business and give up theft. His kindness and art transformed their hearts.

Taranath was a kind, courageous, and compassionate human being known for his service to society. He built a shelter for poor children, provided them free education, and earned admiration even from foreigners. One foreign admirer gifted him a watch, which Taranath never used. One day, a boy from his ashram stole the watch and sold it to a businessman. When Taranath’s brother informed the police, they came to arrest the boy. However, Taranath protected him by telling the police that he had sent the watch for repair. The police left without taking action. Realizing his mistake, the boy repented and cried. Taranath gently advised him to study well and become a good person, proving that true transformation happens through kindness and good deeds.

ಪರಿವರ್ತನೆ

I. ಪದಗಳಅರ್ಥ(Word Meaning)

ಅರಿವು = ತಿಳಿವಳಿಕೆ, ಪ್ರಜ್ಞೆ
ಈಚಲ = ತಾಳೆಯ ಜಾತಿಗೆ ಸೇರಿದ ಮರ
ತಕರಾರು = ಆಕ್ಷೇಪಣೆ
ಪರಿವರ್ತನೆ = ಬದಲಾವಣೆ
ಪಶ್ಚಾತಾಪ = ತಪ್ಪು ಮಾಡಿದ ಕೆಲಸಕ್ಕೆ ಮರುಗುವಿಕೆ
ಮೈಮರೆ = ತಲ್ಲೀನತೆ
ಸಂಭಾವನೆ = ಗೌರವ ಧನ
ಅರೆಷ್ಟು = ಬಂಧಿಸು, ಸೆರೆಹಿಡಿ
ಗಂಟುಬೀಳು = ಬೆನ್ನುಹತ್ತು
ತಲೆದೂಗು = ಮೆಚ್ಚುಗೆ ಸೂಚಿಸು
ಪರೋಪಕಾರಿ = ಇತರರಿಗೆ ನೆರವು ನೀಡುವವನು
ಬಯಲಾಟ = ಬಯಲಲ್ಲಿ ನಡೆಯುವ ಜಾನಪದ ನಾಟಕ ಪ್ರಕಾರಗಳಲ್ಲಿ ಒಂದು ಬಗೆ
ಸನ್ಮಾರ್ಗ = ಒಳ್ಳೆಯ ದಾರಿ, ಸರಿಯಾದ ಮಾರ್ಗ

II. ಪ್ರಶ್ನೆಗಳು

ಅ) ಬಿಟ್ಟಸ್ಥಳಗಳನ್ನುಸೂಕ್ತಪದಗಳಿಂದಭರ್ತಿಮಾಡಿರಿ. (Fill in the blanks)

೧. ಜಿ ಎಸ್ ಬಸವರಾಜಶಾಸ್ತ್ರೀ ಅವರ ತಾತನ ಹೆಸರು ಗಣೇಕಲ್ ಶಿವಯ್ಯ.
೨. ತಾರಾನಾಥರ ಊರು ರಾಯಚೂರು.
೩. ತಾರಾನಾಥರ ವಾಚನ್ನು ಕದ್ದವನು ಆಶ್ರಮದ ಬಾಲಕ.
೪. ಪರಿವರ್ತನೆ ಪಾಠದ ಆಕಾರ ಕೃತಿ ಶಾಸ್ತ್ರಿ ಕನಸು.

ಆ) ಕೆಳಗಿನಪ್ರಶ್ನೆಗಳಿಗೆಒಂದುವಾಕ್ಯದಲ್ಲಿಉತ್ತರಿಸಿರಿ. (Answer the following questions in one sentence)

೧. ಮನಸ್ಸು ಯಾವ ಮಾತುಗಳಿಂದ ಪರಿವರ್ತನೆಯಾಗುತ್ತದೆ?
ಉ: ಮನಸ್ಸಿಗೆ ಹಿತಕರವಾದ, ಆನಂದದಾಯಕವಾದ ಮಾತುಗಳಿಂದ ಪರಿವರ್ತನೆಯಾಗುತ್ತದೆ.

೨. ಗಣೇಕಲ್ ಶಿವಯ್ಯನವರು ಯಾವುದಕ್ಕೆ ಪ್ರಸಿದ್ಧರಾಗಿದ್ದರು?
ಉ: ಗಣೇಕಲ್ ಶಿವಯ್ಯನವರು ಪೀಟಿಲು ವಾದಕರು, ಬಯಲಾಟದ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದರು.

೩. ಗಣೇಕಲ್ ಶಿವಯ್ಯನವರ ಸಂಗೀತ ಕೇಳಲು ಕಳ್ಳರು ಏಕೆ ಒಪ್ಪಿಕೊಂಡರು?
ಉ: ಗಣೇಕಲ್ ಶಿವಯ್ಯನವರ ಆಸೆ ಪೂರೈಸಲು ಸಂಗೀತ ಕೇಳಲು ಕಳ್ಳರು ಒಪ್ಪಿಕೊಂಡರು.

೪. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಆಶೀರ್ವದಿಸಿದರು?
ಉ: ಗಣೇಕಲ್‌ ಶಿವಯ್ಯನವರು ಕಳ್ಳರನ್ನು “ ನಾಲ್ವರೂ ಕೂಡಿ ಕಳ್ಳತನ ಬಿಟ್ಟು, ವ್ಯಾಪಾರ ಮಾಡಿ, ಸತ್ಯವಂತರಾಗಿ ಬಾಳಿರಿ” ಎಂದು ಆಶೀರ್ವದಿಸಿದರು.

೫. ತಾರಾನಾಥರು ಆಶ್ರಮವನ್ನು ಏಕೆ ಕಟ್ಟಿದರು?
ಉ: ತಾರಾನಾಥರು ಬಡಮಕ್ಕಳಿಗಾಗಿ ಆಶ್ರಮ ಕಟ್ಟಿದರು.

ಇ) ಕೆಳಗಿನಪ್ರಶ್ನೆಗಳಿಗೆಮೂರು- ನಾಲ್ಕುವಾಕ್ಯಗಳಲ್ಲಿಉತ್ತರಿಸಿರಿ. (Answer the following questions in three – four sentences)

೧. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಕೇಳಿಕೊಂಡರು?
ಉ: ಗಣೇಕಲ್ ಶಿವಯ್ಯನವರು ಕಳ್ಳರನ್ನು, ಅವರ ಆಸೆ ಪೂರೈಸಲು ಕೇಳಿಕೊಂಡರು. ತನ್ನ ಸಂಗೀತವನ್ನು ನಿಶ್ಚಿಂತೆಯಿಂದ ಅರ್ಧ ತಾಸು ಕೇಳಬೇಕೆಂದು ಕೇಳಿಕೊಂಡರು.

೨. ಗಣೇಕಲ್ ಶಿವಯ್ಯನವರ ಸಂಗೀತ ಕೇಳಿದ ನಂತರ ಕಳ್ಳರು ಏನು ಮಾಡಿದರು?
ಉ: ಗಣೇಕಲ್ ಶಿವಯ್ಯನವರ ಸಂಗೀತ ಕೇಳಿದ ನಂತರ ಕಳ್ಳರು ಅವರಿಗೆ “ ತಾತ, ನಿಮ್ಮ ಹಣವು ನಮಗೆ ಬೇಡ, ನಿಮ್ಮ ಆಶೀರ್ವಾದ ಸಾಕು” ಎಂದು ಹೊರಡತೊಡಗಿದರು.

೩. ತಾರಾನಾಥರ ವ್ಯಕ್ತಿತ್ವದ ವಿಶೇಷತೆಗಳೇನು?
ಉ: ತಾರಾನಾಥರು ಮಹಾಜ್ಞಾನಿಗಳೂ, ದಯಾಳುಗಳೂ, ಧೈರ್ಯವಂತರೂ, ಪರೋಪಕಾರಿಗಳೂ, ಪರರ ಹಿತೈಷಿಗಳೂ ಆತ್ಮವಿಶ್ವಾಸಿಗಳೂ ಆಗಿದ್ದರು. ಅವರಿಗೆ ಅಸಾಧ್ಯವಾದ ಕೆಲಸವೇ ಇರಲಿಲ್ಲ. ಎಲ್ಲವನ್ನೂ ಸಾಧಿಸುವ ಶಕ್ತಿ ಅವರಲ್ಲಿತ್ತು. ಅವರು ದೇಶದವರಿಗಷ್ಟೇ ಅಲ್ಲದೆ, ವಿದೇಶಿಯರಿಗೂ ಬೇಕಾಗಿದ್ದರು.

೪. ಬಾಲಕನು ಶಿಕ್ಷೆ ಅನುಭವಿಸುವುದನ್ನು ತಾರಾನಾಥರು ಹೇಗೆ ತಪ್ಪಿಸಿದರು?
ಉ: ಪೋಲಿಸರು ಬಂದಾಗ ತಾರಾನಾಥರು “ ಇವನು ಕಳ್ಳನಲ್ಲ. ತಪ್ಪು ಮಾಡಿಲ್ಲ. ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ. ಈ ವಾಚನ್ನು ರಿಪೇರಿ ಮಾಡಿಸಲು ನಾನೇ ಅವನ ಕೈಯಲ್ಲಿ ಕೊಟ್ಟು ಕಳಿಸಿದ್ದೆ. ನನ್ನ ಸಹೋದರನು ಮತ್ತು ಆ ವ್ಯಾಪಾರಿ ಇಬ್ಬರು ಸುಳ್ಳರು” ಅವರ ಮಾತನ್ನು ನಂಬಬೇಡಿ ಎಂದು ಹೇಳಿ ಬಾಲಕನು ಶಿಕ್ಷೆ ಅನುಭವಿಸುವುದನ್ನು ತಾರಾನಾಥರು ತಪ್ಪಿಸಿದರು.

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು- ಹತ್ತುವಾಕ್ಯಗಳಲ್ಲಿಉತ್ತರಿಸಿರಿ. (Answer the following questions in eight – ten sentences)

೧. ಗಣೇಕಲ್ ಶಿವಯ್ಯನವರು ಕಳ್ಳರ ಮನಸ್ಸನ್ನು ಹೇಗೆ ಪರಿವರ್ತಿಸಿದರು?
ಉ: ಗಣೇಕಲ್ ಶಿವಯ್ಯನವರು ಬಯಲಾಟ ಮುಗಿಸಿ ಬರುವಾಗ ಕಳ್ಳರು ಗಂಟು ಬಿದ್ದರು. ಆಗ ಅವರು ಕಳ್ಳರಿಗೆ ನಿಮಗೆ ಹಣ ಕೊಡುತ್ತೇನೆ, ಆದರೆ ನನ್ನ ಸಂಗೀತವನ್ನು ನೀವು ನಿಶ್ಚಿಂತೆಯಿಂದ ಅರ್ಧ ತಾಸು ಕೇಳಬೇಕೆಂದು ಕೇಳಿಕೊಂಡರು. ಕಳ್ಳರು ಒಪ್ಪಿದರು. ಗಣೇಕಲ್ ಶಿವಯ್ಯನವರು ಪೀಟಿಲು ನುಡಿಸುತ್ತಾ ಮಧುರ ಕಂಠದಿಂದ ಹಾಡಿದರು. ಕಳ್ಳರು ಮೈಮರೆತು ಅವರ ಹಾಡನ್ನು ಕೇಳಿದರು. ನಂತರ ಕಳ್ಳರು ಅವರಿಗೆ ನಮಗೆ ನಿಮ್ಮ ಹಣ ಬೇಡ, ನಿಮ್ಮ ಆಶೀರ್ವಾದ ಸಾಕು ಎಂದರು. ಅದಕ್ಕೆ ಗಣೇಕಲ್ ಶಿವಯ್ಯನವರು ನಾನು ಹಣ ಕೊಡುತ್ತೇನೆ, ಆ ಹಣದಿಂದ ವ್ಯಾಪಾರ ಮಾಡಿ ಜೀವನ ನಡೆಸಿ ಎಂದು ಹೇಳಿದರು. ಹೀಗೆ ಗಣೇಕಲ್ ಶಿವಯ್ಯನವರು ಕಳ್ಳರ ಮನಸ್ಸನ್ನು ಪರಿವರ್ತಿಸಿದರು.

೨. ತಾರಾನಾಥರು ವಾಚನ್ನು ಕದ್ದ ಬಾಲಕನ ಮನಸ್ಸನ್ನು ಹೇಗೆ ಪರಿವರ್ತಿಸಿದರು?
ಉ: ತಾರಾನಾಥರು ಬಡಮಕ್ಕಳಿಗಾಗಿ ಆಶ್ರಮ ಕಟ್ಟಿದರು. ಅವರಿಗೆ ವಿದೇಶಿಯರು ಕೊಟ್ಟ ವಾಚನ್ನು ಹಾಗೇ ಇಟ್ಟಿದ್ದರು. ಅದನ್ನು ಆಶ್ರಮದ ಒಬ್ಬ ಬಾಲಕ ಕದ್ದು ಒಬ್ಬ ವ್ಯಾಪಾರಿಗೆ ಮಾರಿಬಿಟ್ಟನು. ತಾರಾನಾಥರ ಸಹೋದರನಿಗೆ ಆ ಬಾಲಕನೇ ಕಳ್ಳನೆಂದು ತಿಳಿದು ಪೋಲಿಸರಿಗೆ ದೂರು ಕೊಟ್ಟನು. ಪೋಲಿಸರು ಅವನನ್ನು ಬಂಧಿಸಲು ಬಂದಾಗ ತಾರಾನಾಥರು ಪೋಲಿಸರಿಗೆ ಆ ಬಾಲಕ ಕಳ್ಳನಲ್ಲ. ಅವನನ್ನು ಬಂಧಿಸುವ ಅವಶ್ಯಕತೆ ಇಲ್ಲ. ಈ ವಾಚನ್ನು ರಿಪೇರಿ ಮಾಡಿಸಲು ನಾನೇ ಅವನ ಕೈಯಲ್ಲಿ ಕೊಟ್ಟು ಕಳಿಸಿದ್ದು ಎಂದು ಹೇಳಿ ಬಾಲಕನು ಶಿಕ್ಷೆ ಅನುಭವಿಸುವುದನ್ನು ತಾರಾನಾಥರು ತಪ್ಪಿಸಿದರು. ಇದರಿಂದ ಬಾಲಕನು ಪಶ್ಚಾತಾಪದಿಂದ ಅಳುತ್ತಾ ತನಗೆ ಶಿಕ್ಷೆ ಕೊಡಿರಿ ಎಂದನು. ತಾರಾನಾಥರು ಆ ವಾಚನ್ನು ಅವನಿಗೆ ಕೊಟ್ಟು ಚೆನ್ನಾಗಿ ಓದು ಎಂದರು. ಹೀಗೆ ತಾರಾನಾಥರು ವಾಚನ್ನು ಕದ್ದ ಬಾಲಕನ ಮನಸ್ಸನ್ನು ಪರಿವರ್ತಿಸಿದರು.

ಉ) ಸಂದರ್ಭದಲ್ಲಿ ವಿವರಿಸಿರಿ. (Explain the context in details)

೧. “ನೀವು ನಿಶ್ಚಿಂತೆಯಿಂದ ಕುಳಿತು ಅರ್ಧ ತಾಸು ನನ್ನ ಸಂಗೀತವನ್ನು ಕೇಳಬೇಕು”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಬಸವರಾಜಶಾಸ್ತ್ರೀ ಅವರು ಬರೆದ ʼಶಾಸ್ತ್ರಿ ಕನಸುʼ ಎಂಬ ಕೃತಿಯ ʼಪರಿವರ್ತನೆʼ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಗಣೇಕಲ್ ಶಿವಯ್ಯನವರು ಕಳ್ಳರಿಗೆ ಹೇಳಿದರು.
ಸಂದರ್ಭ: ಗಣೇಕಲ್ ಶಿವಯ್ಯನವರು ಬಯಲಾಟ ಮುಗಿಸಿ ಬರುವಾಗ ಕಳ್ಳರು ಗಂಟು ಬಿದ್ದರು. ಆಗ ಅವರು ಕಳ್ಳರಿಗೆ ನಿಮಗೆ ಹಣ ಕೊಡುತ್ತೇನೆ, ಆದರೆ ನನ್ನ ಸಂಗೀತವನ್ನು ನೀವು ನಿಶ್ಚಿಂತೆಯಿಂದ ಅರ್ಧ ತಾಸು ಕೇಳಬೇಕೆಂದು ಕೇಳಿಕೊಂಡರು.
ಸ್ವಾರಸ್ಯ: ಕಳ್ಳರಿಗೆ ಹೆದರದೇ ಅವರ ಪರಿವರ್ತನೆ ಮಾಡುವ ಗಣೇಕಲ್ ಶಿವಯ್ಯನವರ ಮನಸ್ಸು ಇಲ್ಲಿಯ ಸ್ವಾರಸ್ಯವಾಗಿದೆ.

೨. “ತಾತ ನಿಮ್ಮ ಹಣವು ನಮಗೆ ಬೇಡ ನಿಮ್ಮ ಆಶೀರ್ವಾದವಷ್ಟೇ ಸಾಕು”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಬಸವರಾಜಶಾಸ್ತ್ರೀ ಅವರು ಬರೆದ ʼಶಾಸ್ತ್ರಿ ಕನಸುʼ ಎಂಬ ಕೃತಿಯ ʼಪರಿವರ್ತನೆʼ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕಳ್ಳರು ಗಣೇಕಲ್ ಶಿವಯ್ಯನವರಿಗೆ ಹೇಳಿದರು.
ಸಂದರ್ಭ: ಗಣೇಕಲ್ ಶಿವಯ್ಯನವರ ಸಂಗೀತವನ್ನು ಕೇಳಿದ ಕಳ್ಳರು ಈ ಮೇಲಿನ ಮಾತನ್ನು ಹೇಳಿದರು.
ಸ್ವಾರಸ್ಯ: ಗಣೇಕಲ್ ಶಿವಯ್ಯನವರು ಕಳ್ಳರನ್ನು ಪರಿವರ್ತಿಸಿದ  ಸ್ವಾರಸ್ಯವಿಲ್ಲಿದೆ.

೩. “ಇವನು ಕಳ್ಳನಲ್ಲ ತಪ್ಪು ಮಾಡಿಲ್ಲ, ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಬಸವರಾಜಶಾಸ್ತ್ರೀ ಅವರು ಬರೆದ ʼಶಾಸ್ತ್ರಿ ಕನಸುʼ ಎಂಬ ಕೃತಿಯ ʼಪರಿವರ್ತನೆʼ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ತಾರಾನಾಥರು ಪೋಲಿಸರಿಗೆ ಹೇಳಿದರು.
ಸಂದರ್ಭ: ಪೋಲಿಸರು ಬಾಲಕನನ್ನು ಬಂಧಿಸಲು ಬಂದ ಸಂದರ್ಭದಲ್ಲಿ ತಾರಾನಾಥರು ಹೇಳಿದರು.
ಸ್ವಾರಸ್ಯ: ತಾರಾನಾಥರು ಬಾಲಕನನ್ನು ಪೋಲಿಸರಿಂದ ಉಳಿಸಲು ಮಾಡಿದ ಪ್ರಯತ್ನವು ಇಲ್ಲಿಯ ಸ್ವಾರಸ್ಯವಾಗಿದೆ.

೪. “ಗುರುಗಳೇ ನನಗೆ ಶಿಕ್ಷೆ ಕೊಡಿಸಬೇಕಿತ್ತು”
ಆಯ್ಕೆ: ಈ ವಾಕ್ಯವನ್ನು ಜಿ ಎಸ್ ಬಸವರಾಜಶಾಸ್ತ್ರೀ ಅವರು ಬರೆದ ʼಶಾಸ್ತ್ರಿ ಕನಸುʼ ಎಂಬ ಕೃತಿಯ ʼಪರಿವರ್ತನೆʼ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಬಾಲಕನು ತಾರಾನಾಥರಿಗೆ ಹೇಳಿದರು.
ಸಂದರ್ಭ: ಪೋಲಿಸರು ತಾರಾನಾಥರ ಮಾತನ್ನು ಕೇಳಿ ಬಾಲಕನನ್ನು ಬಿಟ್ಟರು. ಆ ಸಂದರ್ಭದಲ್ಲಿ ಬಾಲಕನು ಮೇಲಿನ ಮಾತನ್ನು ತಾರಾನಾಥರಿಗೆ ಹೇಳಿದನು.
ಸ್ವಾರಸ್ಯ: ಬಾಲಕನ ಪಶ್ಚಾತಾಪ ಇಲ್ಲಿಯ ಸ್ವಾರಸ್ಯವಾಗಿದೆ.

III ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬರೆಯಿರಿ. (Make your own sentence)

ಸನ್ಮಾರ್ಗ = ನಾವು ಸನ್ಮಾರ್ಗದಲ್ಲಿ ನಡೆಯಬೇಕು.
ಮೈಮರೆ = ಕಳ್ಳರು ಶಿವಯ್ಯನವರ ಸಂಗೀತಕ್ಕೆ ಮೈಮರೆತರು.
ತಲೆದೂಗು = ಒಳ್ಳೆಯ ಸಂಗೀತಕ್ಕೆ ಎಲ್ಲರೂ ತಲೆದೂಗುತ್ತಾರೆ.
ದಯಾಳು = ತಾರಾನಾಥರು ದಯಾಳುವಾಗಿದ್ದರು.
ಪರೋಪಕಾರಿ = ತಾರಾನಾಥರು ಪರೋಪಕಾರಿಯಾಗಿದ್ದರು.
ವ್ಯಸನ =  ಕೆಟ್ಟ ವ್ಯಸನಗಳಿಗೆ ಬೀಳಬಾರದು.
ಪರಿವರ್ತನೆ = ಉತ್ತಮವಾದ ಮಾತುಗಳಿಂದ ಮನುಷ್ಯರನ್ನು ಪರಿವರ್ತನೆ ಮಾಡಬಹುದು.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನುಬರೆಯಿರಿ. (Write the opposite words)

ನಿಶ್ಚಿಂತೆ X ಚಿಂತೆ
ಸನ್ಮಾರ್ಗ X ದುರ್ಮಾಗ
ಅಸಾಧ್ಯ X ಸಾಧ್ಯ
ಧೈರ್ಯ X ಅಧೈರ್ಯ
ವಿದೇಶಿ X ದೇಶಿ
ವಿದ್ಯಾವಂತ X ಅವಿದ್ಯಾವಂತ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)

ಪರೋಪಕಾರಿ = ಪರ + ಉಪಕಾರಿ
ತಲೆದೂಗು = ತಲೆ + ತೂಗು
ಒಟ್ಟುಗೂಡಿ = ಒಟ್ಟು + ಕೂಡಿ
ಸಹೋದರ = ಸಹ + ಉದರ

ಈ) ಕೆಳಗಿನ ಮಾದರಿಯಂತೆ ʼವಂತʼ ಪ್ರತ್ಯಯ ಸೇರಿರುವ ಪದಗಳನ್ನು ಪಟ್ಟಿಮಾಡಿರಿ. (Make a list of words given in the example)

ಸತ್ಯ + ವಂತ = ಸತ್ಯವಂತ
ಹಣ + ವಂತ = ಹಣವಂತ
ಗುಣ + ವಂತ = ಗುಣವಂತ
ಬುದ್ಧಿ + ವಂತ = ಬುದ್ಧಿವಂತ

Click here to download parivarthane notes kannada ICSE