Pramanika balaka kannada lesson grade 3 is about Lal bahadur Sastri. Pramanika balaka grade III means obedient boy.

One day, a group of children were playing together and wandered into a mango farm. They began plucking mangoes when the owner saw them and came angrily to scold them. He said, “Is this what your parents and teachers have taught you?” Hearing this, one little boy started crying and replied, “Please don’t blame my parents or my teacher.” The owner was touched by the boy’s words and said, “You will become a great man one day.” That little boy later grew up to be Lal Bahadur Shastri.

al Bahadur Shastri, born on 2nd October 1904 in Uttar Pradesh, was India’s second Prime Minister. He was admired for his honesty, simplicity, and leadership. Shastri gave the inspiring slogan “Jai Jawan, Jai Kisan” to honor soldiers and farmers. He guided India during the 1965 war with Pakistan and promoted the White Revolution. He is remembered as a great leader who dedicated his life to the nation.

ಪ್ರಾಮಾಣಿಕ ಬಾಲಕ ಕನ್ನಡ

ಪ್ರವೇಶಿಸು = ಒಳಗೆ ಹೋಗು, ಪ್ರಾಮಾಣಿಕತೆ = ನಂಬಿಕೆಗೆ ಅರ್ಹ ಒಡನಾಟ = ಸಹವಾಸ,
ಪತಾಕೆ = ಬಾವುಟ, ಧ್ವಜ

ಅ) ಬಿಟ್ಟಿರುವ ಸ್ಥಳವನ್ನು ತುಂಬಿ ಬರೆ. (Fill in the blanks)

೧. ದಾರಿ ಬದಿಯ ಮಾವಿನ ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು .

೨. ಶಾಸ್ತ್ರಿಯವರಲ್ಲಿ ದೇಶಪ್ರೇಮ ಪುಟಿದೆದ್ದಿತು .

೩. ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡರು.

೪. ನಮ್ಮ ದೇಶವು ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು .

೫. ಭಾರತ ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು.

೬. ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ಜೈ ಜವಾನ್ ಜೈ ಕಿಸಾನ್.

ಆ) ಒಂದು ವಾಕ್ಯದಲ್ಲಿ ಉತ್ತರ ಬರೆ. (Answer in one sentence)

೧. ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು?
ಉ: ಮಕ್ಕಳು ತೋಪನ್ನು ಮಾವಿನ ಹಣ್ಣಿಗಾಗಿ ಪ್ರವೇಶಿಸಿದರು.

೨. ಮಕ್ಕಳು ಏಕೆ ಗಲಿವಿಲಿಗೊಂಡರು?
ಉ: ಅನಿರೀಕ್ಷಿತವಾಗಿ ಬಂದ ತೋಟದ ಮಾಲೀಕನನ್ನು ಕಂಡು ಮಕ್ಕಳು ಗಲಿವಿಲಿಗೊಂಡರು.

೩. ಮಾಲೀಕನ ಮನಸ್ಸು ಏಕೆ ಕರಗಿತು?
ಉ: ಬಾಲಕನ ಮುಗ್ಧ ಮತ್ತು ಪ್ರಾಮಾಣಿಕ ಮಾತುಗಳನ್ನು ಕೇಳಿ ಮಾಲೀಕನ ಮನಸ್ಸು ಕರಗಿತು.

೪. ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತು?
ಉ: ಸರ್ಕಾರವು ಶಾಸ್ತ್ರಿಯವರಿಗೆ ‘ಭಾರತ ರತ್ನ‘ ಪ್ರಶಸ್ತಿ ನೀಡಿ ಗೌರವಿಸಿತು. .

ಇ) ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆ. (Answer the following in two – three senetnces)

೧. ಬಾಲಕ ಮಾಲಿಕನಿಗೆ ಏನೆಂದು ಹೇಳಿದನು?
ಉ: “ನಾನು ಮಾಡಿದ್ದು ತಪ್ಪು. ಇನ್ನೆಂದೂ ಇಂತಹ ತಪ್ಪನ್ನು ಮಾಡುವುದಿಲ್ಲ. ಆದರೆ ನಾನು ಮಾಡಿದ ತಪ್ಪಿಗೆ ನನ್ನ ತಂದೆ, ತಾಯಿ ಮತ್ತು ಗುರುಗಳು ನಿಂದನೆಗೆ ಗುರಿಯಾದರಲ್ಲಾ ಎಂದು ದುಃಖಿಸುತ್ತಿರುವೆ” ಎಂದು ಬಾಲಕ ಮಾಲಿಕನಿಗೆ ಹೇಳಿದನು.

೨. ಮಾಲಿಕ ಬಾಲಕನನ್ನು ಹೇಗೆ ಸಮಾಧಾನಪಡಿಸಿದನು?
ಉ: “ಮಗು, ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವೆ. ನಿನ್ನ ಪ್ರಾಮಾಣಿಕತೆ ನನಗೆ ಇಷ್ಟವಾಯಿತು. ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ನಿನ್ನ ಈ ಗುಣ, ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ” ಎಂದು ಹೇಳಿ ಮತ್ತಷ್ಟು ಮಾವಿನಹಣ್ಣುಗಳನ್ನು ಬಾಲಕನಿಗೆ ನೀಡಿ ಸಮಾಧಾನಪಡಿಸಿದನು.

೩. ಶಾಸ್ತ್ರಿಯವರು ಮಂತ್ರಿ ಪದವಿಗೆ ಏಕೆ ರಾಜೀನಾಮೆ ನೀಡಿದರು?
ಉ: ಶಾಸ್ತ್ರಿಯವರು ರೈಲ್ವೆ ಮಂತ್ರಿಯಾಗಿದ್ದಾಗ ರೈಲ್ವೆ ಅಪಘಾತವಾಯಿತು. ಅದಕ್ಕೆ ತಾವೇ ಹೊಣೆ ಎಂದು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.

ಈ) ಈ ಕೆಳಗಿನ ಪ್ರಶ್ನೆಗಳಿಗೆ ಕಾರಣಕೊಡು. (Explain the reason)

೧. ಮಾಲಿಕ ಹೊಡೆಯದಿದ್ದರೂ ಬಾಲಕ ಅತ್ತನು.
ಉ: ಮಾಲಿಕನು ಬಾಲಕ ಮಾಡಿದ ತಪ್ಪಿಗೆ ಅವನ ತಂದೆ, ತಾಯಿ ಮತ್ತು ಗುರುಗಳ ನಿಂದನೆ ಮಾಡಿದನು. ಆ ಕಾರಣಕ್ಕೆ ಬಾಲಕ ಅಳುವನು.

೨. ಶಾಸ್ತ್ರಿಯವರು ದೇಶದೆಲ್ಲೆಡೆ ಮನೆಮಾತಾದರು.
ಉ: ಕೇವಲ ಹದಿನೆಂಟು ತಿಂಗಳ ಅವಧಿಯಲ್ಲಿ ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಯ ಕಾರಣದಿಂದ ದೇಶದೆಲ್ಲೆಡೆ ಮನೆಮಾತಾದರು.

ಉ ) ಇಲ್ಲಿ ಕೊಟ್ಟಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಎಂದು ಬರೆ. (Who told whom)

೧. “ನಿನ್ನ ಅಪ್ಪ , ಅಮ್ಮ ಮತ್ತು ಗುರುಗಳು ಇದನ್ನೇ ಏನು ಕಲಿಸಿದ್ದು?”
ಉ: ಈ ಮಾತನ್ನು ತೋಟದ ಮಾಲಿಕ ಬಾಲಕನಿಗೆ ಹೇಳುವನು.

೨. “ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ.”
ಉ: ಈ ಮಾತನ್ನು ಬಾಲಕ ಮಾವಿನ ತೋಪಿನ ಮಾಲಿಕನಿಗೆ ಹೇಳುವನು.

೩. “ನಿನ್ನ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ. ”
ಉ: ಈ ಮಾತನ್ನು ತೋಟದ ಮಾಲಿಕ ಬಾಲಕನಿಗೆ ಹೇಳುವನು.

ಊ) ಕೊಟ್ಟಿರುವ ಪದಗಳನ್ನು ಓದಿ , ನಂತರ ವಾಕ್ಯ ರಚಿಸು. (Make your own sentence)

೧. ಮನೆ ಮಾತಾಗು : ಶಾಸ್ತ್ರಿಯವರು ದೇಶದೆಲ್ಲೆಡೆ ಮನೆಮಾತಾದರು.
೨. ಹೊಣೆ ಹೊತ್ತು: ಶಾಸ್ತ್ರಿಯವರು ಮಂತ್ರಿ ಪದವಿಯ ಹೊಣೆಹೊತ್ತರು.
೩. ಪುಟಿದೇಳು : ಶಾಸ್ತ್ರಿಯವರಲ್ಲಿ ದೇಶಪ್ರೇಮ ಪುಟಿದೆದ್ದಿತು.
೪. ಆಕರ್ಷಿಸು : ಮಕ್ಕಳನ್ನು ಮಾವಿನ ತೋಪು ಆಕರ್ಷಿಸಿತು.

Click here to download pramanika balaka kannada notes