Puttana Galipata is a poem by Dr. Varada Shrinivasa. Puttana Galipata poem 4th grade ICSE syllabus. The poem is about a boy named Putta who buys a kite and feels very proud of it. He calls his friends to show off his new kite but refuses to share it with them. Unfortunately, the kite gets stuck in a tree and gets ruined. Putta starts crying, but his friends comfort him and make him laugh, teaching him that it’s not good to boast about what you have and that sharing is more important. Putana gaalipata grade IV poem basically explains to be down to earth.

ಪುಟ್ಟನ ಗಾಳಿಪಟ ಡಾ.ವರದಾ ಶ್ರೀನಿವಾಸ ಅವರ ಕವಿತೆ. ಪುಟ್ಟಣ ಗಾಳಿಪಟ ಕವಿತೆ 4 ನೇ ತರಗತಿಯ ICSE ಪಠ್ಯಕ್ರಮ. ಪುಟ್ಟ ಎಂಬ ಹುಡುಗ ಗಾಳಿಪಟ ಖರೀದಿಸಿ ಅದರ ಬಗ್ಗೆ ಹೆಮ್ಮೆ ಪಡುವ ಬಗ್ಗೆ ಕವಿತೆ ಇದೆ. ಅವನು ತನ್ನ ಹೊಸ ಗಾಳಿಪಟವನ್ನು ತೋರಿಸಲು ತನ್ನ ಸ್ನೇಹಿತರನ್ನು ಕರೆಯುತ್ತಾನೆ. ಆದರೆ ಅದನ್ನು ಅವರೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಾನೆ. ದುರದೃಷ್ಟವಶಾತ್, ಗಾಳಿಪಟ ಮರಕ್ಕೆ ಸಿಲುಕಿ ಹಾಳಾಗುತ್ತದೆ. ಪುಟ್ಟ ಅಳಲು ಪ್ರಾರಂಭಿಸುತ್ತಾನೆ, ಆದರೆ ಅವನ ಸ್ನೇಹಿತರು ಅವನನ್ನು ಸಮಾಧಾನಪಡಿಸುತ್ತಾರೆ ಮತ್ತು ಅವನನ್ನು ನಗಿಸುತ್ತಾರೆ, ನಿಮ್ಮಲ್ಲಿರುವ ಬಗ್ಗೆ ಹೆಮ್ಮೆಪಡುವುದು ಒಳ್ಳೆಯದಲ್ಲ ಮತ್ತು ಹಂಚಿಕೊಳ್ಳುವುದು ಹೆಚ್ಚು ಮುಖ್ಯ ಎಂದು ಅವನಿಗೆ ಕಲಿಸುತ್ತಾರೆ.

ಪುಟ್ಟನ ಗಾಳಿಪಟ

೧. ಕನ್ನಡದಲ್ಲಿ ಅರ್ಥ ಬರೆಯಿರಿ. (Write Kannada meaning)

ಜಂಭ = ಗರ್ವ, ಬಳಗ = ಸಮೂಹ, ಸಿಲುಕು = ಸಿಕ್ಕಿಕೊಳ್ಳು, ಗಗನ = ಆಕಾಶ, ಪೆಚ್ಚು = ಮಂಕು, ಕರಗು = ಮರುಕಗೊಳ್ಳು

೨. ಆಂಗ್ಲ ಭಾಷೆಯಲ್ಲಿ ಅರ್ಥ ಬರೆಯಿರಿ. (Write English Meaning)

ಜಂಭ = Pride, ಗೆಳೆಯರು = friends, ಹಾಳೆ = Paper, ಉದ್ದ = Length, ಖಂಡಿತ = Sure , ಗಗನ = Sky, ಹಸಿರು = Green, ಗಾಳಿಪಟ = Kite

೩. ವಿರುದ್ಧ ಪದ ಬರೆಯಿರಿ. (Write Opposite words)

ಸರಿ X ತಪ್ಪು                          ಸತ್ಯ X ಸುಳ್ಳು
ಆಸೆ X ನಿರಾಸೆ                       ನಂಬಿಕೆ X ಅಪನಂಬಿಕೆ
ಅನುಕೂಲ X ಅನಾನುಕೂಲ        ಒಳಗೆ X ಹೊರಗೆ
ಲಾಭ X ನಷ್ಟ                         ಜಾಣ X ಪೆದ್ದ
ಏಳು X ಬೀಳು                        ಸಂದೇಹ X ನಿಸ್ಸಂದೇಹ

೪. ಬಹುವಚನ ಬರೆಯಿರಿ. (Write Plural)

ಬಾಲಕ – ಬಾಲಕರು , ಅರಸ – ಅರಸರು, ಗೆಳೆಯ – ಗೆಳೆಯರು , ಶಿಕ್ಷಕ – ಶಿಕ್ಷಕರು, ಹುಡುಗ – ಹುಡುಗರು, ಹಿರಿಯ – ಹಿರಿಯರು

೫. ಗುಂಪಿಗೆ ಸೇರದ ಪದ ಬರೆಯಿರಿ. (Choose the odd one out)

೧. ಹಸಿರು, ಹಳದಿ, ಹಸು, ಕೆಂಪು         

೨. ದಾಂಡು, ಮೈಸೂರು, ಚೆಂಡು, ಗೋಲಿ

೩. ರಾಮ, ರಹೀಮ, ಜೋಸೆಫ್‌, ಕೋಗಿಲೆ      

೪. ಆನೆ, ಮರ, ಗಿಡ, ಬಳ್ಳಿ          

೬. ಪದ್ಯದ ಸಾಲುಗಳನ್ನು ಬರೆಯಿರಿ. (Complete the Poem)

ಗೆಳೆಯರು ಪಟವನು ಬಿಡಿಸಿದರು
ಪುಟ್ಟಗೆ ಕೊಟ್ಟು ನಗಿಸಿದರು
ಪುಟ್ಟನ ಜಂಭವು ಕರಗಿತ್ತು
ಪಟವದು ಎಲ್ಲರ ಪಾಲಾಯ್ತು

೭. ಒಂದು ವಾಕ್ಯದಲ್ಲಿ ಉತ್ತರಿಸಿ. (Write in one sentence)

೧. ಗಾಳಿಪಟವು ಯಾರ ಕೈಯಲ್ಲಿ ಇತ್ತು?
ಉ: ಗಾಳಿಪಟವು ಪುಟ್ಟನ ಕೈಯಲ್ಲಿ ಇತ್ತು.
೨. ಯಾರನ್ನು ಕರೆಯಲು ಪುಟ್ಟ ಮನೆಯಾಚೆ ಹೋದನು?
ಉ: ಗೆಳೆಯರನ್ನು ಕರೆಯಲು ಪುಟ್ಟ ಮನೆಯಾಚೆ ಹೋದನು.
೩. ಗಾಳಿಪಟ ಯಾವುದಕ್ಕೆ ಸಿಕ್ಕಿಕೊಂಡಿತು?
ಉ: ಗಾಳಿಪಟ ಮರಕ್ಕೆ ಸಿಕ್ಕಿಕೊಂಡಿತು.
೪. ಪುಟ್ಟನಿಗೆ ಏಕೆ ಪೆಚ್ಚಾಯಿತು?
ಉ: ಪುಟ್ಟನಿಗೆ ಪಟ ಹಾಳಾಗಿದ್ದಕ್ಕೆ ಪೆಚ್ಚಾಯಿತು.
೫. ಗಾಳಿಪಟ ಯಾರ ಪಾಲಾಯಿತು?
ಉ: ಗಾಳಿಪಟ ಎಲ್ಲರ ಪಾಲಾಯಿತು.

೮. ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ. (Write in 2-3 sentences)

೧. ಪುಟ್ಟನು ಗೆಳೆಯರಿಗೆ ಜಂಭದಿಂದ ಏನನ್ನು ಹೇಳಿದನು?
ಉ: ಉದ್ದದ ಬಾಲಂಗೋಚಿಯ ನನ್ನ ಗಾಳಿಪಟ ಗಗನಕ್ಕೆ ತಲುಪುತ್ತದೆ. ಇದನ್ನು ನಾನು ಯಾರಿಗೂ ಕೊಡುವುದಿಲ್ಲ.
೨. ಗಾಳಿಪಟ ಪದ್ಯದಲ್ಲಿ ಕಂಡುಬರುವ ನೀತಿಯೇನು?
ಉ: ಅತಿ ಆಸೆ ಗತಿಗೇಡು. ನಾವು ಯಾವುದಕ್ಕೂ ಅಹಂಕಾರ ಪಡಬಾರದು.

೯. ಪದಗಳನ್ನು ಬಿಡಿಸಿ ಬರೆಯಿರಿ.

ಮನೆಯಾಚೆ = ಮನೆ + ಆಚೆ
ಕುಣಿದಾಡಿ = ಕುಣಿದು + ಆಡಿ
ಓಡೋಡಿ = ಓಡಿ + ಓಡಿ
ಪೆಚ್ಚಾಯ್ತು = ಪೆಚ್ಚು + ಆಯ್ತು
ಪಾಲಾಯ್ತು = ಪಾಲು + ಆಯ್ತು

೧೦. ಸ್ವಂತ ವಾಕ್ಯದಲ್ಲಿ ಬರೆಯಿರಿ.

ಗಾಳಿಪಟ = ನನ್ನ ಗಾಳಿಪಟ ಹಸಿರು ಬಣ್ಣ ಇದೆ.
ಬಳಗ = ನನ್ನ ಗೆಳೆಯರ ಬಳಗ ತುಂಬಾ ದೊಡ್ಡದು.
ಜಂಭ = ಜಂಭ ಒಳ್ಳೆಯದಲ್ಲ.
ಕರಗು = ಮಂಜು ಕರಗಿತು.

Click here to download putana galipata exercises