ರೈಲಿನ ಆಟ
ಅ. ಪದಗಳ ಅರ್ಥ ಬರೆಯಿರಿ (Write the word meaning)
ದಾರಿ = ಹಾದಿ, ಬೀದಿ (Road / Way)
ರಭಸ = ವೇಗ (Speed)
ಚಂದ = ಸುಂದರ (Beautiful)
ಬಿಡುವು =ವಿರಾಮ (Leisure)
ಆನಂದಿಸು = ಸಂತೋಷ ಪಡು (Enjoy)
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one sentence)
೧. ಯಾವುದು ನೋಡಲು ಚಂದ?
ಉ: ರೈಲಿನ ಆಟ ನೋಡಲು ಚಂದ.
೨. ಎಂದು ಶಾಲೆಗೆ ಬಿಡುವು?
ಉ: ರವಿವಾರ ಶಾಲೆಗೆ ಬಿಡುವು.
೩. ಯಾರು ಯಾರು ರೈಲಿನ ಆಟ ಆಡಿದರು?
ಉ: ರಾಮು, ಜಾನ್, ರೂಪ, ಕರೀಂ ರೈಲಿನ ಆಟ ಆಡಿದರು.
೪. ರೈಲಿನಲ್ಲಿ ಏನನ್ನು ಮಾರುವವರು ಬಂದರು?
ಉ: ರೈಲಿನಲ್ಲಿ ಚಹಾ, ತಿಂಡಿ ಮಾರುವವರು ಬಂದರು.
೫. ರೈಲು ಯಾವ ಊರು ಸೇರಿತು?
ಉ: ರೈಲು ಬೆಂಗಳೂರು ಸೇರಿತು.
ಇ. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ಮೈಸೂರಿನಿಂದ ಹೊರಟಿದೆ ನಮ್ಮ ರೈಲು.
೨. ಸೀಟಿ ಊದುತ್ತಾ ರೈಲು ಚಲಿಸುವುದು.
೩. ರಾಮು ಮತ್ತು ಗೆಳೆಯರು ತಿಂಡಿಯನ್ನು ಕೊಂಡು ತಿಂದರು.
೪. ರೈಲು ಸಾಯಂಕಾಲ ಬೆಂಗಳೂರು ಸೇರಿತು.
ಈ. ಸರಿ ತಪ್ಪು ಬರೆಯಿರಿ. (Write true/false)
೧. ಅಂದು ಸೋಮವಾರ ಶಾಲೆಗೆ ಬಿಡುವು. ತಪ್ಪು
೨. ರೈಲುಗಾಡಿ ರಸ್ತೆಯ ಮೇಲೆ ಉರುಳುತ್ತಾ ಚಲಿಸಿತು. ತಪ್ಪು
೩. ರೈಲಿನಲ್ಲಿ ತಿಂಡಿ, ಹಣ್ಣು, ಚಹ ಮಾರುವವರು ಬಂದರು. ಸರಿ
೪. ಎಲ್ಲರೂ ರೈಲು ಪ್ರಯಾಣವನ್ನು ಆನಂದಿಸಿದರು. ಸರಿ