Rastrapitha, Mahatma Gandhi was a leader known for his simplicity, humility, and commitment to truth and non-violence. Through his philosophy of Satyagraha, he inspired India’s freedom struggle and advocated for social reform. His life of integrity, empathy, and resilience continues to influence people worldwide today.
ರಾಷ್ಟ್ರಪಿತ, ಮಹಾತ್ಮ ಗಾಂಧಿಯವರು ತಮ್ಮ ಸರಳತೆ, ನಮ್ರತೆ ಮತ್ತು ಸತ್ಯ ಮತ್ತು ಅಹಿಂಸೆಯ ಬದ್ಧತೆಗೆ ಹೆಸರಾದ ನಾಯಕರಾಗಿದ್ದರು. ಅವರ ಸತ್ಯಾಗ್ರಹದ ತತ್ತ್ವಶಾಸ್ತ್ರದ ಮೂಲಕ, ಅವರು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರೇರೇಪಿಸಿದರು ಮತ್ತು ಸಾಮಾಜಿಕ ಸುಧಾರಣೆಗಾಗಿ ಪ್ರತಿಪಾದಿಸಿದರು. ಅವರ ಸಮಗ್ರತೆ, ಸಹಾನುಭೂತಿ ಮತ್ತು ಸ್ಥಿತಿಸ್ಥಾಪಕತ್ವದ ಜೀವನವು ಇಂದು ಪ್ರಪಂಚದಾದ್ಯಂತದ ಜನರ ಮೇಲೆ ಪ್ರಭಾವ ಬೀರುತ್ತಿದೆ.
ರಾಷ್ಟ್ರಪಿತ
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following)
೧. ಮಹಾತ್ಮ ಗಾಂಧಿಯವರು ಹುಟ್ಟಿದ್ದು ಎಲ್ಲಿ? ಯಾವಾಗ?
೨. ನಮ್ಮ ದೇಶದ ರಾಷ್ಟ್ರಪಿತ ಯಾರು?
೩. ನಮ್ಮ ದೇಶ ಯಾವುದು?
೪. ಮಹಾತ್ಮ ಗಾಂಧಿಯವರು ಹೆಂಡತಿಯ ಹೆಸರು ಏನು?
೫. ಮಹಾತ್ಮ ಗಾಂಧಿಯವರ ತಾಯಿ ತಂದೆಯರು ಯಾರು?
೬. ಮಹಾತ್ಮ ಗಾಂಧಿಯವರು ಯಾವಾಗ ಮರಣ ಹೊಂದಿದರು?
೭. ಮಹಾತ್ಮ ಗಾಂಧಿಯವರ ಅಸ್ತ್ರಗಳು ಯಾವುವು?
೮. ಗಾಂಧೀಜಿಯವರ ಪೂರ್ಣ ಹೆಸರೇನು?
೯. ಅವರನ್ನು ರಾಷ್ಟ್ರಪಿತ ಎಂದು ಯಾವಾಗ ಕರೆಯಲಾಯಿತು?
ಆ. ಪದಗಳ ಅರ್ಥ ಬರೆಯಿರಿ. (Write the word meaning)
ಅಸ್ತ್ರ, ಹಿಂಸೆ, ಪಿತ, ಮಿತ್ರ, ನೇತ, ದೊರೆ
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಗಾಂಧಿ ತಾತ ಹೇಗೆ ಸರಳ ಬದುಕು ನಡೆಸಿದರು?
೨. ಬಿಳಿಯ ದೊರೆ ಯಾವುದಕ್ಕೆ ಸೋತ?
೩. ಗಾಂಧಿತಾತ ಹೇಗೆ ಆಂಗ್ಲರನ್ನು ಜಯಿಸಿದರು?
೪. ಹಿಂಸೆಯೆಂಬ ಮಾತು ಯಾರಲ್ಲಿ ಇಲ್ಲ?
ಈ. ಕೆಳಗಿನ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ. (Complete the poem)
ಮಿತ್ರನಿರಲಿ ………………………
…………………………………………
…………………………………………
………………………………… ಬೆಲ್ಲ
ಸತತ ………………………………
…………………………………………
…………………………………………
…………………………… ಜಯಿಸಿದ
ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ರಾಷ್ಟ್ರಪಿತ ಪದ್ಯದ ಕವಿ ………………………
೨. ……………… ಕಂಡರವಗೆ ಬಾಯಿ ತುಂಬಾ ಬೆಲ್ಲ.
೩. ಸತತ ನಗುತ ……………… ಎನ್ನುತ ಬದುಕಿದ.
೪. ಜನರ ………….. ಕಂಡುಕೊಂಡು ………………ಕೂಡ ಕಳಚಿದ.
ಊ. ಈ ಪದ್ಯದಲ್ಲಿ ಬರುವ ಐದು ಪ್ರಾಸ ಪದಗಳನ್ನು ಬರೆಯಿರಿ. (Write the rhyming words)
ಋ. ಮಾದರಿಯಂತೆ ಬರೆಯಿರಿ. (Write as per the example given)
ಕಲಿ – ಕಲಿಯಿರಿ
ತಿಳಿ –
ಆಡಿ –
ಹಾಡಿ –
ಕುಣಿ –
ಎ: ಕೊಟ್ಟಿರುವ ಕನ್ನಡ ಪದಗಳಿಗೆ ಇಂಗ್ಲೀಷ್ ನಲ್ಲಿ ಅರ್ಥ ಬರೆಯಿರಿ. (Write the English word meaning)
ತಾತ , ರಾಷ್ಟ್ರ, ಜನರು, ಅಸ್ತ್ರ, ದೊರೆ, ಹಿಂಸೆ , ಜಯಿಸು, ಬಡವ, ಸರಳ, ಶತ್ರು
ಏ: ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗಮನಿಸಿ, ಅದೇ ರೀತಿ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬಿಟ್ಟ ಜಾಗದಲ್ಲಿ ಬರೆಯಿರಿ. (Note the relationship between the first two words, similarly write the word related to the third word in the space provided)
ಗಂಡ : ಹೆಂಡತಿ :: ಮಾವ :
ತಂದೆ : ತಾಯಿ :: ತಾತ :
ರಾಜ : ರಾಣಿ :: ಸೇವಕ :
ಹುಡುಗ : ಹುಡುಗಿ :: ತರುಣ :
ದೊಡ್ಡಪ್ಪ : ದೊಡ್ಡಮ್ಮ :: ಚಿಕ್ಕಪ್ಪ :