ಸಾಹಸಿ ಮಹಿಳೆಯರು – ಪ್ರಶ್ನೆ ಪತ್ರಿಕೆ

ಅ) ಪದಗಳ ಅರ್ಥ ಬರೆಯಿರಿ. Write the word meaning.

ಅನಾರೋಗ್ಯ, ಹುಟ್ಟುಹಾಕು, ಆಶಯ, ಹಲಗೆ, ಏಳಿಗೆ, ಕಷ್ಟಕೋಟಲೆ, ಸಿಡಿದೇಳು, ಸಬಲ, ವಿಲೀನ, ವಿಚಾರಶಕ್ತಿ, ಬಹಿಷ್ಕಾರ, ಭಾವಾವೇಶ, ಪುಡಿಪುಡಿಯಾಗು, ದೀನತೆ, ನತ್ತು, ಘೋಷಣೆ, ದಂಗಾಗು, ನಿಷೇಧ

ಆ) ಒಂದು ವಾಕ್ಯದಲ್ಲಿ ಉತ್ತರಿಸಿ. Answer in one sentence.

೧. ಕಲ್ಯಾಣಮ್ಮನವರ ಸಂಸಾರದ ಕನಸು ಪುಡಿಪುಡಿಯಾಗಲು ಕಾರಣವೇನು?
೨. ಹೈದರಾಬಾದ್‌ ಪ್ರಾಂತ ಭಾರತದಲ್ಲಿ ಯಾವಾಗ ವಿಲೀನವಾಯಿತು?
೩. ಹೈದರಾಬಾದ್‌ ಪ್ರಾಂತದ ಜನರು ನಿಜಾಮನ ವಿರುದ್ಧ ಏಕೆ ಸಿಡಿದೆದ್ದರು?
೪. ಮಾಲಗತ್ತಿ ಗ್ರಾಮದ ಜನರು ಎಲ್ಲಿ ಧ್ವಜ ಏರಿಸಲು ನಿರ್ಧರಿಸಿದರು?
೫. ಕಲ್ಯಾಣಮ್ಮನವರು ಯಾವಾಗ ನಿಧನರಾದರು?
೬. ಕಲ್ಯಾಣಮ್ಮನವರ  ತಂದೆ ತಾಯಿಗಳು ಯಾರು?
೭. ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೇಗೆ ಹೊಳಪು ಬಂದಿತು?
೮. ಕಲ್ಯಾಣಮ್ಮ ಯಾರ ಏಳಿಗೆಗಾಗಿ ಚಿಂತಿಸಿದರು?

ಇ) ಎರಡು, ಮೂರು ವಾಕ್ಯದಲ್ಲಿ ಉತ್ತರಿಸಿ. Answer in two , three sentences.

೧. ಧ್ವಜ ಏರಿಸಲು ಬಂದ ಸೀತಮ್ಮನ ರೂಪ ವರ್ಣಿಸಿರಿ.
೨. ಕಲ್ಯಾಣಮ್ಮನವರ ಓದು ಹೇಗೆ ಮುಂದುವರಿಯಿತು?
೩. ಕಲ್ಯಾಣಮ್ಮನವರ ಜೀವನದಲ್ಲಿ ಎರಗಿ ಬಂದ ಕಷ್ಟಗಳಾವುವು?
೪. ಮಾಲಗತ್ತಿಯಲ್ಲಿ ಧ್ವಜವೇರಿಸಲು ಹೇಗೆ ಸಿದ್ಧತೆ ನಡೆಯಿತು?
೫. ಕಲ್ಯಾಣಮ್ಮ ಮಕ್ಕಳಿಗಾಗಿ ಯಾವ ಯಾವ ಕೆಲಸಗಳನ್ನು ಮಾಡಿದರು?
೬. ಹೈದರಾಬಾದ್ ಜನ ನಿಜಾಮನ ವಿರುದ್ಧ ಸಿಡಿದೇಳಲು ಕಾರಣವೇನು

ಈ) ವಿರುದ್ಧಾರ್ಥಕ ಪದ ಬರೆಯಿರಿ. Write opposite words.

ಉತ್ತೀರ್ಣ X               ಅನುಕೂಲ X              ಆರೋಗ್ಯ X ನೀತಿ X                   ಅಬಲ X

ಉ) ಬಿಟ್ಟಸ್ಥಳ ತುಂಬಿರಿ. Fill in the blanks.

೧. ಬಡಿಗೇರ ಸೀತಮ್ಮನ ಊರು ______________________
೨. ಕಲ್ಯಾಣಮ್ಮನವರು ________________ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
೩. ಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ________________
೪. ಭಾರತಕ್ಕೆ ಸ್ವಾತಂತ್ರ ದೊರೆತರೂ ________________ ಭಾರತಕ್ಕೆ ವಿಲೀನವಾಗಲಿಲ್ಲ.

ಊ) ಹೊಂದಿಸಿ ಬರೆಯಿರಿ. Match the following.

೧) ಬಡಿಗೇರ ಸೀತಮ್ಮ           ಅ) ಸರಸ್ವತಿ ಪತ್ರಿಕೆ

೨) ಶ್ರಾವಂತವ್ವ                  ಆ) ರಾಮಸ್ವಾಮಿ ಅಯ್ಯಂಗಾರ್

೩) ಜಾನಕಮ್ಮ                   ಇ) ಬಸಪ್ಪ

೪) ಕಲ್ಯಾಣಮ್ಮ                  ಈ) ಸ್ವಾತಂತ್ರ ಹೋರಾಟಗಾರ್ತಿ

                                  ಉ) ನಿಜಾಮ

ಋ) ಸ್ವಂತ ವಾಕ್ಯದಲ್ಲಿ ಬರೆಯಿರಿ. Make your own sentences.

ದಂಗಾಗು,  ಅಬಲೆ,  ಸಿಡಿದೇಳು,  ಭಾವಾವೇಶ, ಹುಟ್ಟುಹಾಕು, ಕಷ್ಟಕೋಟಲೆ

Click here to download Sahasi Mahileyaru question paper