Savira kambhagalagona poem is written by the poet Shri Aanekal Krishnamurthy Kati. He was born on 07/08/1946 in Anekal. He has written many books named Apsare, Aparanji, Svatantrada Teeru, Swatantrda Sindhoor, Savira Dalagalu, and many more. This poem is selected from the book Svatantrda Sindhur.

Savira kambhagalagona kannada poem is about how we Indians should take care of our country. The poet tells us to become a thousand pillars of our country, India. He further explains to us to become soldiers to protect her. He also says to be human and overcome jealousy to build a strong India.

ಸಾವಿರ ಕಂಬಗಳಗೋಣ ಕವಿತೆಯನ್ನು ಕವಿ ಶ್ರೀ ಆನೇಕಲ್ ಕೃಷ್ಣಮೂರ್ತಿ ಕಟಿ ಅವರು ಬರೆದಿದ್ದಾರೆ. ಇವರು ೦೭/೦೮/೧೯೪೬ ರಂದು ಆನೇಕಲ್ ನಲ್ಲಿ ಜನಿಸಿದರು. ಅವರು ಅಪ್ಸರೆ, ಅಪರಂಜಿ, ಸ್ವತಂತ್ರ ತೀರ, ಸ್ವತಂತ್ರ ಸಿಂಧೂರ, ಸಾವಿರ ದಳಗಳು ಮತ್ತು ಇನ್ನೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಈ ಕವಿತೆಯನ್ನು ಸ್ವತಂತ್ರ ಸಿಂಧೂರ್ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.

ಸಾವಿರ ಕಂಬಗಳಗೋಣ ಕವಿತೆಯು, ಭಾರತೀಯರಾದ ನಾವು ನಮ್ಮ ದೇಶವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಹೇಳುತ್ತದೆ.. ನಮ್ಮ ಭಾರತ ದೇಶದ ಸಾವಿರ ಸ್ತಂಭಗಳಾಗಲು ಕವಿ ಹೇಳುತ್ತಾರೆ. ಭಾರತಮಾತೆಯನ್ನು ರಕ್ಷಿಸಲು ಸೈನಿಕರಾಗಲು ವಿವರಿಸುತ್ತಾರೆ. ಬಲಿಷ್ಠ ಭಾರತವನ್ನು ನಿರ್ಮಿಸಲು ಮಾನವರಾಗಿ ಮತ್ತು ಅಸೂಯೆಯನ್ನು ಜಯಿಸಿ ಎಂದು ಅವರು ಹೇಳುತ್ತಾರೆ.

ಅ) ಬಿಟ್ಟಸ್ಥಳ ತುಂಬಿರಿ. ( Fill in the blanks)

೧. ಭಾರತ ಮಾತೆಯ ಮಂದಿರಕೆ ಸಾವಿರ ಕಂಬಗಳಾಗೋಣ..
೨. ಭರತ ಭೂಮಿಯ ರಕ್ಷಣೆಗೆ ಕೋಟಿ ಸೈನಿಕರಾಗೋಣ.
೩. ಸ್ವಾಭಿಮಾನದ ಸಾರ್ಥಕ ಬದುಕಿನ ಮಾನವತೆಯನ್ನು ಮೆರೆಯೋಣ.
೪. ದ್ವೇಷ-ಅಸೂಯೆ ತೊರೆಯೋಣ ಬಲಿಷ್ಠ ಭಾರತ ಕಟ್ಟೋಣ.

ಆ) ಪದಗಳ ಅರ್ಥ ಬರೆಯಿರಿ. ( Write Kannada word meaning)

ರಕ್ಷಣೆ = ಕಾಪಾಡುವಿಕೆ, ಸಂರಕ್ಷಿಸುವಿಕೆ                ಸೈನಿಕ = ಯೋಧ, ಭಟ
ಸಾರ್ಥಕ = ಸಫಲವಾದುದು                           ವೈವಿಧ್ಯ = ವಿವಿಧತೆ
ಸಮತೆ = ಸಮಾನತೆ, ಸಾದೃಶ್ಯ                      ಮಮತೆ = ಮಮಕಾರ, ಪ್ರೀತಿ
ಬಿತ್ತೋಣ = ಬೀಜ ಹಾಕೋಣ                          ತೊರೆ = ಬಿಡು
ಬಲಿಷ್ಠ = ಬಲಶಾಲಿ, ಶಕ್ತಿವಂತ

ಇ) ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿರಿ. (Complete the poem)

ವಿಶ್ವ ಜೀವನವೆ ನಮ್ಮ ಜೀವನವು
ವಿಶಾಲ
ಹೃದಯಿಗಳಾಗೋಣ
ಎಲ್ಲ ದೇಶಕು ಎಲ್ಲ ಕಾಲಕು
ಸಾಧನೆ ಸಫಲತೆ
ಹಂಚೋಣ

ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (answer in one sentence)

೧.  ನಾವು ಯಾವಾಗ ವಿಶಾಲ ಹೃದಯಿಗಳಾಗುತ್ತೇವೆ?
ಉ: ನಾವು ವಿಶ್ವ ಜೀವನ ನಮ್ಮ ಜೀವನವು ಎಂದುಕೊಂಡಾಗ ವಿಶಾಲ
    ಹೃದಯಿಗಳಾಗುತ್ತೇವೆ.
೨. ಎಲ್ಲ ದೇಶಕು, ಎಲ್ಲ ಕಾಲಕು ಏನನ್ನು ಹಂಚಬೇಕು?
ಉ:ಎಲ್ಲ ದೇಶಕು, ಎಲ್ಲ ಕಾಲಕು ಸಾಧನೆ, ಸಫಲತೆ ಹಂಚಬೇಕು.
೩. ನಾವು ಯಾವ ಬಗೆಯ ರಾಷ್ಟ್ರವನ್ನು ಕಟ್ಟಬೇಕು?
ಉ: ನಾವು ಒಂದೇ ಮನದ ಒಂದೇ ಧ್ವನಿಯ ರಾಷ್ಟ್ರವನ್ನು ಕಟ್ಟಬೇಕು.
೪. ವೈವಿಧ್ಯವನ್ನು ಯಾವ ರೀತಿ ಬೆಳೆಸಬೇಕು?
ಉ: ವೈವಿಧ್ಯವನ್ನು ಬಗೆಬಗೆ ಬಣ್ಣದ ಹೂದಳದಂತೆ ಬೆಳೆಸಬೇಕು.
೫. ನಾವು ಏನನ್ನು ಬೆಳಗಬೇಕು?
ಉ: ನಾವು ಸಮತೆಯ ದೀಪ ಬೆಳಗಬೇಕು.

ಉ) ಎರಡು – ಮೂರು ವಾಕ್ಯಗಳಲ್ಲಿ ಬರೆಯಿರಿ. (Write in two to three sentences)
೧. ನಾವು ಭಾರತ ಮಾತೆಯ ಮಂದಿರದಲ್ಲಿ ಹೇಗೆ ವಿಶಾಲ ಹೃದಯಿಗಳಾಗಿ
    ಬಾಳಬೇಕು?

ಉ: ನಾವು ಭಾರತ ಮಾತೆಯ ಮಂದಿರಕ್ಕೆ ಸಾವಿರ ಕಂಬಗಳಾಗಿ, ಭರತ
     ಭೂಮಿಯ ರಕ್ಷಣೆಗೆ ಸೈನಿಕರಾಗಬೇಕು. ವಿಶ್ವ ಜೀವನವು ನಮ್ಮ ಜೀವನವಾಗಿ
     ವಿಶಾಲ ಹೃದಯಿಗಳಾಗಿ ಬಾಳಬೇಕು?
೨. ಪ್ರಸ್ತುತ ಪದ್ಯದಲ್ಲಿ ನಿಮಗಿಷ್ಟವಾದ ವಿಚಾರವನ್ನು ಮೂರು ವಾಕ್ಯಗಳಲ್ಲಿ
    ಬರೆಯಿರಿ.

ಉ: ಎಲ್ಲ ದೇಶಕ್ಕೆ ಎಲ್ಲ ಕಾಲಕ್ಕೆ ನಮ್ಮ ಸಾಧನೆ, ಸಫಲತೆ ಹಂಚಬೇಕು.
     ಬಗೆಬಗೆ ಬಣ್ಣದ ಹೂದಳದಂತೆ ವೈವಿಧ್ಯವನ್ನು ಬೆಳೆಸಬೇಕು. ಒಂದೇ ಮನದ
     ಒಂದೇ ಧ್ವನಿಯಲ್ಲಿ ರಾಷ್ಟ್ರವನ್ನು ಕಟ್ಟಬೇಕು.

ಊ) ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
೧. ಸಾಧನೆ: ನಾನು ಚೆನ್ನಾಗಿ ಓದಿ ಸಾಧನೆ ಮಾಡಬೇಕು.
೨. ಮಮತೆ: ತಾಯಿಯ ಮಮತೆ ಯಾವಾಗಲೂ ನಿರಂತರ.
೩. ಸ್ವಾಭಿಮಾನ : ನಮಗೆ ಸ್ವಾಭಿಮಾನ ಇರಬೇಕು.
೪. ದೀಪ : ನಾನು ದಿನ ಸಂಜೆ ದೀಪ ಹಚ್ಚುತ್ತೇನೆ.

Click here to download solved exercises Saavira kambagalagona