ಸಹನೆ
ಅ. ಬಿಟ್ಟಸ್ಥಳ ತುಂಬಿರಿ (Fill in the blanks)
೧) ಕೆಂಪರಾಜುವನ್ನು ಕಂಡರೆ ಸುಗುಣಪಾಟೀಲರಿಗೆ ತುಂಬಾ ಪ್ರೀತಿ .
೨) ಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು.
೩) ನಾನು ಕೆಲಸದ ಮೇಲೆ ನಿಗಾ ವಹಿಸದೆ ಹೀಗಾಯಿತು.
೪) ನಿಮ್ಮ ಇಷ್ಟದ ಹೂದಾನಿ ಹಾಳಾಯಿತು.
೫) ಯಜಮಾನರ ಮಾತುಗಳು ಮೆಚ್ಚುಗೆಯಾದವು.
ಆ. ಒಂದು ವಾಕ್ಯದಲ್ಲಿ ಉತ್ತರಿಸಿ (Answer in one sentence)
೧) ಸಿರಿವಂತನ ಹೆಸರೇನು?
ಉ: ಸಿರಿವಂತನ ಹೆಸರು ಸುಗುಣಪಾಟೀಲ.
೨) ಹೂದಾನಿ ಏಕೆ ಒಡೆಯಿತು?
ಉ: ಹೂದಾನಿ ಕೈ ತಗುಲಿ ಒಡೆಯಿತು.
೩) ನಿಷ್ಠಾವಂತ ಸೇವಕನ ಹೆಸರೇನು?
ಉ: ನಿಷ್ಠಾವಂತ ಸೇವಕನ ಹೆಸರು ಕೆಂಪರಾಜು.
೪) ಕೆಂಪರಾಜು ಏನನ್ನು ಒರೆಸುತ್ತಿದ್ದ?
ಉ: ಕೆಂಪರಾಜು ಮೇಜನ್ನು ಒರೆಸುತ್ತಿದ್ದ.
೫) ಕೆಂಪರಾಜುವಿಗೆ ಸುಗುಣಪಾಟೀಲರು ಯಾವುದು ಮುಖ್ಯ ಎಂದು ಹೇಳಿದರು?
ಉ: ಕೆಂಪರಾಜುವಿಗೆ ಸುಗುಣಪಾಟೀಲರು ನಿನ್ನ ತಪ್ಪು ನಿನಗೆ ಅರಿವಾಯಿತಲ್ಲ, ಅದೇ ಮುಖ್ಯ ಎಂದು ಹೇಳಿದರು.
ಇ. ವಾಕ್ಯ ಸರಿಪಡಿಸಿರಿ (Correct the sentence)
೧) ಊರಿನಲ್ಲಿ ಒಬ್ಬ ಸಿರಿವಂತನಿದ್ದ ಒಂದು
ಉ: ಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.
೨) ಒಂದು ಕೆಂಪರಾಜು ಮನೆಯನ್ನು ದಿನ ಶುಚಿಗೊಳಿಸುತ್ತಿದ್ದ
ಉ: ಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ.
೩) ಏನಿದು! ಒಡೆದು ಹೋಗಿದೆ ಹೂದಾನಿ
ಉ: ಏನಿದು! ಹೂದಾನಿ ಒಡೆದು ಹೋಗಿದೆ.
೪) ಸರಿ ಧಣಿ ನೀವು ಹೇಳಿದ್ದು
ಉ: ನೀವು ಹೇಳಿದ್ದು ಸರಿ ಧಣಿ.
೫) ಬೇಕೂಂತ ನೀನು ಮಾಡಿಲ್ಲ
ಉ: ನೀನು ಬೇಕೂಂತ ಮಾಡಿಲ್ಲ.
ಈ. ವಿರುದ್ಧ ಪದ ಬರೆಯಿರಿ (Write the opposite words)
ಜಾಗ್ರತೆ X ಅಜಾಗ್ರತೆ ಸಹನೆ X ಅಸಹನೆ
ಇಷ್ಟ X ಕಷ್ಟ ಸಮಾಧಾನ X ಅಸಮಾಧಾನ
ಋ. ಕನ್ನಡದಲ್ಲಿ ಪದಗಳ ಅರ್ಥ ಬರೆಯಿರಿ (Write Kannada word meaning)
ಅಕಸ್ಮಾತ್ = ಅನಿರೀಕ್ಷಿತ, ಸದ್ಗುಣ = ಒಳ್ಳೆಯ ಗುಣ, ಶುಚಿ = ಶುದ್ಧ,
ಸಿರಿವಂತ = ಧನಿಕ , ಪ್ರಾಮಾಣಿಕ = ಸತ್ಯವಂತ, ಲೋಕ = ಪ್ರಪಂಚ,
ಜಾಗ್ರತೆ = ಜೋಪಾನ, ಬೇಸರ = ಬೇಜಾರು, ಮನ್ನಿಸು = ಕ್ಷಮಿಸು,
ಸೇವಕ = ಆಳು ಪ್ರಮಾದ = ದೊಡ್ಡ ಮೆಚ್ಚುಗೆ = ಒಪ್ಪಿಗೆ
ಎ. ಆಂಗ್ಲ ಭಾಷೆಯಲ್ಲಿ ಅರ್ಥ ಬರೆಯಿರಿ (Write English word meaning)
ಹೂದಾನಿ = Flowervase ಪ್ರೀತಿ = Affection
ಇಷ್ಟ = like ನಿಗಾ = Attention
ಕೈ = Hand ಕೋಪ = Angry
ಸಹನೆ = Patience ಕೆಲಸ = Work
ಮನ = Heart ಜಾಗ್ರತೆ = Careful
ಏ. ಬಹುವಚನ ಬರೆಯಿರಿ (Write plural form )
ಮನೆ = ಮನೆಗಳು ಮೇಜು = ಮೇಜುಗಳು ಹೂದಾನಿ = ಹೂದಾನಿಗಳು ಕೈ = ಕೈಗಳು ಸೇವಕ = ಸೇವಕರು ಯಜಮಾನ=ಯಜಮಾನರು ಸಿರಿವಂತ = ನಿಷ್ಠಾವಂತ
ಎ. ಕೆಳಗಿನ ಪ್ರಶ್ನೆಗಳಿಗೆ ಒಂದು ಎರಡು ಮೂರು ವಾಕ್ಯದಲ್ಲಿ ಉತ್ತರಿಸಿರಿ.
೧. ಕೆಂಪುರಾಜು ಸುಗುಣಪಾಟೀಲರ ಬಳಿ ಏನೆಂದು ಕ್ಷಮೆ ಯಾಚಿಸಿದ?
ಉ: ಕೆಲಸದ ಮೇಲೆ ನಿಗಾವಹಿಸದೆ ನಿಮ್ಮ ಇಷ್ಟದ ಹೂದಾನಿ ಒಡೆಯಿತು. ನನ್ನದೇ ತಪ್ಪು. ಇನ್ನೊಮ್ಮೆ ಇಂತಹ ತಪ್ಪು ಮಾಡುವುದಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕೆಂಪರಾಜು ಸುಗುಣ ಪಾಟೀಲರ ಬಳಿ ಕ್ಷಮೆ ಯಾಚಿಸಿದ.
೨. ಸುಗುಣಪಾಟೀಲರು ಕೆಂಪರಾಜುವನ್ನು ಹೇಗೆ ಸಮಾಧಾನ ಪಡಿಸಿದರು?
ಕೆಂಪ ನೀನು ಬೇಸರ ಮಾಡಿಕೊಳ್ಳಬೇಡ. ಅದು ನನ್ನ ಮೆಚ್ಚಿನ ಹೂದಾನಿಯೇ ಇದ್ದರೂ ನನಗೆ ಕೋಪವೇನು ಇಲ್ಲ. ನೀನು ಬೇಕು ಅಂತ ಮಾಡಿಲ್ಲ. ನಿನ್ನ ತಪ್ಪು ನಿನಗೆ ಅರಿವಾಯಿತಲ್ಲ ಎಂದು ಸುಗುಣ ಪಾಟೀಲರು ಕೆಂಪು ರಾಜುವನ್ನು ಸಮಾಧಾನಪಡಿಸಿದರು.