Sahasi Ramesha grade kannada VI lesson is about a boy named Ramesh. The ICSE Grade VI lesson “Sahasi Ramesha” tells the story of a brave boy named Ramesh. In the village of Ramapura, a farmer named Ranga lived with his wife Mallamma, their parents, and their one-year-old son. One day, while Ranga was at the farm and Mallamma was busy in the cowshed, a fire suddenly broke out in their hut. Everyone rushed outside, but Mallamma’s baby was still inside, lying in the cradle. Panicked, she cried for help. Nearby, young Ramesh, who was at school, heard her and bravely dashed into the burning hut to rescue the child. Thanks to his courage, he saved the baby, and from that day onward, he was honored with the name “Sahasi Ramesha,”. Sahasi Ramesha chapter class VI means Adventurous Ramesh. This chapter highlights his heroic act and teaches the value of bravery and selflessness.
ಸಾಹಸಿ ರಮೇಶ
ಅ.ಪದಗಳ ಅರ್ಥ ಬರೆಯಿರಿ (Write word Meaning)
ಗುಡಿಸಲು = ಜೋಪಡಿ (Hut) ಆವರಿಸು = ಹರಡು (Spread)
ಧೈರ್ಯ = ದಿಟ್ಟತನ, ಕೆಚ್ಚು (Courage) ರಕ್ಷಿಸು = ಕಾಪಾಡು (Protect)
ಸಹಾಯ = ನೆರವು (Help) ಕೊಂಡಾಡು = ಹೊಗಳು (Praise)
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one word)
೧. ರಂಗನ ಗುಡಿಸಿಲಿನಲ್ಲಿ ಯಾರು ಯಾರು ವಾಸಿಸುತ್ತಿದ್ದರು?
ಉ: ರಂಗನ ಗುಡಿಸಿಲಿನಲ್ಲಿ ಅವನ ತಂದೆ, ತಾಯಿ, ಹೆಂಡತಿ ಮತ್ತು ಮಗು ವಾಸವಾಗಿದ್ದರು.
೨. ಮಲ್ಲಮ್ಮ ಯಾರು ಏನು ಮಾಡುತ್ತಿದ್ದಳು?
ಉ: ಮಲ್ಲಮ್ಮ ರಂಗನ ಹೆಂಡತಿ ಅವಳು ಕೊಟ್ಟಿಗೆಯನ್ನು ಗುಡಿಸುತ್ತಿದ್ದಳು.
೩. ರಂಗನ ತಂದೆ ತಾಯಿಯರು ಮನೆಯಿಂದ ಏಕೆ ಹೊರಗೆ ಬಂದರು?
ಉ: ರಂಗನ ತಂದೆ ತಾಯಿಯರು ಗುಡಿಸಲಿಗೆ ಬೆಂಕಿ ಹತ್ತಿದ್ದಕ್ಕೆ ಹೊರಗೆ ಬಂದರು.
೪. ಬೆಂಕಿ ಹೇಗೆ ಆವರಿಸಿ ಉರಿಯುತ್ತಿತ್ತು?
ಉ: ಬೆಂಕಿ ಕಿಟಕಿ ಬಾಗಿಲುಗಳಿಗೆ ಆವರಿಸಿ ಧಗಧಗ ಎಂದು ಉರಿಯುತ್ತಿತ್ತು.
೫. ಹುಡುಗ ಧೈರ್ಯದಿಂದ ಏನು ಮಾಡಿದ ?
ಉ: ಹುಡುಗ ಧೈರ್ಯದಿಂದ ಮಗುವನ್ನು ರಕ್ಷಿಸಿದನು.
ಇ. ಸರಿ ತಪ್ಪು ಗುರುತಿಸಿ. (True or False)
೧. ಎಂದಿನಂತೆ ರಂಗ ಊರಿಗೆ ಹೋಗಿದ್ದನು. ತಪ್ಪು
೨.ಮಲ್ಲಮ್ಮ ಕೊಟ್ಟಿಗೆಯಿಂದ ಓಡಿ ಬಂದಳು. ಸರಿ
೩. ಆದರೆ ಜನರು ಅವಳನ್ನು ಹೋಗಲು ಬಿಡಲಿಲ್ಲ. ಸರಿ
೪. ಒಬ್ಬ ಶಾಲಾ ಹುಡುಗಿಗೆ ಮನೆಯೊಳಗೆ ಮಗು ಮಲಗಿರುವ ವಿಷಯ
ತಿಳಿಯಿತು. ತಪ್ಪು
೫. ಅವನ ಮೈ ಕೈಯಲ್ಲ ಸುಟ್ಟ ಗಾಯಗಳಾಗಲಿಲ್ಲ. ತಪ್ಪು
ಈ.ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಉತ್ತರಿಸಿರಿ. (Write the Kannada word meaning)
Cowshed = ಕೊಟ್ಟಿಗೆ Evening = ಸಂಜೆ fire = ಬೆಂಕಿ
doors = ಬಾಗಿಲುಗಳು help = ಸಹಾಯ grass = ಹುಲ್ಲು suddenly = ಇದ್ದಕ್ಕಿದ್ದಂತೆ
farmer = ರೈತ Praised = ಹೊಗಳು Bless = ಹರಸು
ಉ. ವಿರುದ್ಧ ಪದಗಳನ್ನು ಬರೆಯಿರಿ. (Write the opposite word)
ಧೈರ್ಯ X ಅಧೈರ್ಯ ಹೊಗಳು X ತೆಗಳು ಸಹಾಯ X ಅಸಹಾಯ ಹತ್ತಿರ X ದೂರ ಒಳಗೆ X ಹೊರಗೆ
ಊ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಮಲ್ಲಮ್ಮ ಕೊಟ್ಟಿಗೆಯಿಂದ ಓಡಿ ಬಂದಳು.
೨. ರಂಗನ ಹೆಂಡತಿ ಮಲ್ಲಮ್ಮ.
೩. ಎಂದಿನಂತೆ ರಂಗ ಹೊಲಕ್ಕೆ ಹೋಗಿದ್ದನು.
೪. ರಾಮಪುರವೆಂಬ ಹಳ್ಳಿಯಲ್ಲಿ ರಂಗ ಎಂಬ ರೈತನಿದ್ದನು.
೫. ಅವನ ಹೆಸರು ಸಾಹಸಿ ರಮೇಶ ಎಂದೇ ಹೆಸರಾಯಿತು.
ಋ. ಲಿಂಗ ಬದಲಿಸಿ ಬರೆಯಿರಿ. (change the gender)
ರಾಜ – ರಾಣಿ ಗೆಳೆಯ – ಗೆಳತಿ ಅಜ್ಜ – ಅಜ್ಜಿ
ಮಗ – ಮಗಳು ಶಿಕ್ಷಕ – ಶಿಕ್ಷಕಿ ತಂದೆ – ತಾಯಿ
ಮುದುಕ – ಮುದುಕಿ ಗಂಡ – ಹೆಂಡತಿ
ಎ. ವಚನ ಬದಲಿಸಿ ಬರೆಯಿರಿ. (change to plural)
ಮರ = ಮರಗಳು ಬಾಗಿಲು = ಬಾಗಿಲುಗಳು
ಮನೆ = ಮನೆಗಳು ಹಳ್ಳಿ = ಹಳ್ಳಿಗಳು
ತೊಟ್ಟಿಲು = ತೊಟ್ಟಿಲುಗಳು
ಏ. ಸ್ವಂತ ವಾಕ್ಯ ರಚಿಸಿರಿ. (Make your own sentence)
ಸಾಯಂಕಾಲ: ನಾಳೆ ಸಾಯಂಕಾಲ ಬನ್ನಿ.
ರಕ್ಷಿಸು: ಸೈನಿಕರು ದೇಶವನ್ನು ರಕ್ಷಿಸುತ್ತಾರೆ.
ಕೆಲಸ: ಓದುವದು ನನ್ನ ಕೆಲಸ
ಶಾಲೆ: ನನಗೆ ಶಾಲೆ ಇಷ್ಟ.
ಆನಂದ: ನಾನು ಆನಂದವಾಗಿದ್ದೇನೆ.
ಗುಡಿಸಿಲು: ಗುಡಿಸಿಲು ಚೆನ್ನಾಗಿದೆ.
ಕಾಪಾಡು: ಸೈನಿಕರು ದೇಶವನ್ನು ಕಾಪಾಡುತ್ತಾರೆ.
ಸಹಾಯ: ನಾವು ಎಲ್ಲರಿಗೂ ಸಹಾಯ ಮಾಡಬೇಕು.
ಚೀರುತ್ತಾ: ಅವನು ಚೀರುತ್ತಿದ್ದಾನೆ.
ಐ. ಹೊಂದಿಸಿ ಬರೆಯಿರಿ. (Match the following)
೧. ರಂಗ ರಂಗನ ಹೆಂಡತಿ ರೈತ
೨. ಗುಡಿಸಲು ರಮೇಶ ಬೆಂಕಿ
೩. ಸಾಹಸಿ ರೈತ ರಮೇಶ
೪. ಮಲ್ಲಮ್ಮ ದನಗಳು ರಂಗನ ಹೆಂಡತಿ
೫. ಕೊಟ್ಟಿಗೆ ಬೆಂಕಿ ದನಗಳು
ಒ. ಸಮನಾರ್ಥಕ ಪದವನ್ನು ಬರೆಯಿರಿ. (Write the synonyms)
ಹಳ್ಳಿ = ಗ್ರಾಮ, ಊರು
ಗುಡಿಸಲು = ಕುಟೀರ, ಜೋಪಡಿ
ಬೆಂಕಿ = ಅಗ್ನಿ,ಕಿಚ್ಚು
ಆನಂದ = ಸಂತೋಷ, ಖುಷಿ
ಸಹಾಯ = ನೆರವು, ಒತ್ತಾಸೆ
ಓ. ಯಾರು ಯಾರಿಗೆ ಹೇಳಿದರು?
೧. “ಮಗು ಎಲ್ಲಿ ಮಲಗಿದೆ?”
ಉ: ಈ ಮಾತನ್ನು ರಮೇಶ ಮಲ್ಲಮ್ಮನಿಗೆ ಕೇಳಿದನು.
೨. “ಅಯ್ಯೋ! ನನ್ನ ಮಗು ನನ್ನ ಮಗು”
ಉ: ಈ ಮಾತನ್ನು ಮಲ್ಲಮ್ಮ ಜನರಿಗೆ ಹೇಳಿದಳು.
೩. “ತೊಟ್ಟಿಲಲ್ಲಿ ಮಲಗಿದೆ”
ಉ: ಈ ಮಾತನ್ನು ಮಲ್ಲಮ್ಮ ರಮೇಶನಿಗೆ ಹೇಳಿದಳು.
ಔ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.( Answer the following in two – three sentences)
೧. ತಾಯಿ ತನ್ನ ಕಂದನಿಗಾಗಿ ಏಕೆ ಗೋಳಾಡುತ್ತಿದ್ದಳು?
ಉ: ಗುಡಿಸಲಿಗೆ ಬೆಂಕಿ ಹತ್ತು ಉರಿಯುತ್ತಿತ್ತು. ಕಂದನು ಗುಡಿಸಲಿನ ಒಳಗೆ ಮಲಗಿದ್ದನು. ಅದಕ್ಕೆ ತಾಯಿ ತನ್ನ ಕಂದನಿಗಾಗಿ ಗೋಳಾಡುತ್ತಿದ್ದಳು.
೨. ಶಾಲಾ ಹುಡುಗ ಮಗುವನ್ನು ಹೇಗೆ ರಕ್ಷಿಸಿದ?
ಉ: ಹುಡುಗ ಬೆಂಕಿ ಹತ್ತಿ ಉರಿಯುತ್ತಿದ್ದ ಗುಡಿಸಿಲಿನ ಒಳಗೆ ನುಗ್ಗಿದ. ಮಗುವನ್ನು ಎತ್ತಿಕೊಂಡು ಬೇಗ ಹೊರಗೆ ಓಡಿ ಬಂದ.
One Response