Sandhigalu - ಸಂಧಿಗಳು

Sandhigalu - ಸಂಧಿಗಳು

ಸವರ್ಣದೀರ್ಘ ಸಂಧಿ:  ಪೂರ್ವಪದದ ಅಂತ್ಯಸ್ವರ ಮತ್ತು ಉತ್ತರ ಉತ್ತರಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದು ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರ ಆದೇಶವಾಗಿರುವುದು ಕಂಡುಬರುತ್ತದೆ.ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಕ್ಷರ ಪರಸ್ಪರ ಸೇರಿ  ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು ಸುವರ್ಣ ದೀರ್ಘ ಸಂಧಿ ಎಂದು ಕರೆಯುತ್ತಾರೆ.

ಗುಣಸಂಧಿ: ‘ಅ’ ಅಥವಾ ‘ಆ’ ಎಂಬ ಸ್ವರಗಳಿಗೆ ‘ಇ’ ಅಥವಾ ‘ಈ’ ಎಂಬ ಸ್ವರ ಸೇರಿದಾಗ ‘ಏ’ಕಾರವು ‘ಉ’ ಅಥವಾ ‘ಊ’ ಸ್ವರ  ಸೇರಿದಾಗ ‘ಓ’  ಕಾರವು ‘ಋ’ ಎಂಬ ಸ್ವರವು ಸೇರಿದಾಗ ‘ಅರ್’ ಕಾರವು ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತಾರೆ.

ವೃದ್ಧಿ ಸಂಧಿ : ಅ’ ‘ಆ’ ಕಾರಗಳ ಮುಂದೆ ‘ಏ’ ‘ಐ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವು ‘ಓ’,’ಔ’ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಔ’ ಕಾರವು ಆದೇಶವಾಗಿ ಬರುವುದು ಇದನ್ನು ವೃದ್ಧಿ ಸಂಧಿ ಎಂದು ಕರೆಯುತ್ತಾರೆ.