Santammanna kannada poem grade V is about a small boy. Poet Hoyisala writes about Santammanna in the poem.
ಸಂತಮ್ಮಣ್ಣ
ಕಲ್ಯಾಣ ಸೇವೆ ಜೇಬಿನ ಬುಡದಲ್ಲಿ,
ಪುಟಾಣಿಯ ಪುರಿ ಮೇಲೊಂದಿಷ್ಟು,
ಗೋಲಿ ಬಳಪ ಮತ್ತೊಂದಿಷ್ಟು ,
ಬಂದ, ಬಂದ, ಸಣ್ಣ ತಮ್ಮಣ್ಣ ,
ಪಟಾಸು ಪೆಟ್ಲು ಒಳಜೇಬಲ್ಲಿ ,
ಕಾಸಿನ ಸಾಲು ಕಳ್ಳ ಜೇಬಲ್ಲಿ,
ಚೆಂಡುದಾಂಡು ಎಡಬಲದಲ್ಲಿ,
ಬಂದ, ಬಂದ, ಸಂತಮ್ಮಣ್ಣ ,
ಅಮ್ಮನ ಹಾರ ಉಬ್ಬಿದ ಎದೆಗೆ,
ಬಿದಿರಿನ ಕೊಳ್ಳಲು ಗೆಜ್ಜೆಯೊಳಗೆ,
ಹದ್ದಿನ ರೆಕ್ಕೆ ಎತ್ತಿದ ತಲೆಗೆ,
ಬಂದ, ಬಂದ, ಸಣ್ಣ ತಮ್ಮಣ್ಣ,
ಕತ್ತೂರಿ ಚಂದ್ರ ಹಣೆಯಲ್ಲಿಹುದು,
ಸಂಜೆಯ ಶುಕ್ರ ಕಣ್ಣಲ್ಲಿಹುದು,
ಬೆಳೆದಿಂಗಳು ಗಲ್ಲದ ಮೇಲೆ,
ಬಂದ, ಬಂದ, ಸಣ್ಣತಮ್ಮಣ್ಣ,
ಮೊದಲನೇ ಮಾತು ಹೂವಿನ ಮುತ್ತು,
ಮರು ಮಾತಾಡಲು ಸಿಡಿಲು ಗುಡುಗು,
ಮೂರನೇ ಬಾರಿಗೆ ಆನೆಯ ಕಲ್ಮಳೆ,
ಬಂದ, ಬಂದ, ಸಣ್ಣ ತಮ್ಮಣ್ಣ,
ಬಾರೋ ಬಾರೋ ಸಿಡಿಲಿನ ಮರಿಯೆ,
ಬಾರೋ ನಾಡಿನ ಸುಂಟರಗಾಳಿ,
ತೋರು ಸಿರಿಮುಗೆ ತುಂಟರ ಗುರುವೇ,
ಬಂದ, ಬಂದ, ಸಂತಮ್ಮಣ್ಣ
ಕೃತಿಕಾರರ ಪರಿಚಯ ಹೊಯಿಸಳ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಆರಗ ಲಕ್ಷ್ಮಣರಾಯರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಮೇ ೦೭, ೧೮೯೩ರಂದು ಜನಿಸಿದರು. ಇವರ ತಂದೆ ಸುಬ್ಬಣ್ಣನವರು, ತಾಯಿ ಶ್ರೀಮತಿ ಸುಬ್ಬಮ್ಮನವರು. ಹೊಯಿಸಳರು ಮಕ್ಕಳಿಗಾಗಿ ನೂರಾರು ಪದ್ಯಗಳನ್ನು, ೩೫ ಮಕ್ಕಳ ಕಥೆಗಳನ್ನು, ೫ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ʼಏಳುವ ಹೊತ್ತುʼ, ʼಕಂಕಣʼ, ʼಮಗುವಿನ ಕೂಗುʼ, ʼಚಂದಮಾಮ ಕೋಲು ಕುದುರೆʼ ಮುಂತಾದವು ಇವರ ಕೃತಿಗಳು ಶ್ರೀಯುತರು ಅಕ್ಟೋಬರ್ ೧೦, ೧೯೫೯ ರಂದು ನಿಧನರಾದರು.
ಪದಗಳ ಅರ್ಥ
ಕಲ್ಯಾಣ ಸೇವೆ = ಒಂದು ಬಗೆಯ ಸಿಹಿ
ದಾಂಡು = ಕ್ರಿಕೆಟಿನ ಬ್ಯಾಟು
ಪುಟಾಣಿ ಪುರಿ = ಕಡಲೆಪುರಿ
ಸಂಜೆಯ ಶುಕ್ರ = ಕತ್ತಲಲ್ಲಿ ಹೊಳೆಯುವ ಶುಕ್ರ ಗ್ರಹದ ಬೆಳಕು
ಪಟಾಸು ಪೆಟ್ಲು = ಪಟಾಕಿ ಶಬ್ದ ಬರುವ ಬಿದಿರಿನ ಸಾಧನ
ಕತ್ತೂರಿ = ಕಸ್ತೂರಿ, ಒಂದು ಬಗೆಯ ಸುಗಂಧ ದ್ರವ್ಯ
ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕಲ್ಯಾಣ ಸೇವೆ ಎಲ್ಲಿತ್ತು?
ಉ: ಕಲ್ಯಾಣ ಸೇವೆ ಜೇಬಿನ ಬುಡದಲ್ಲಿತ್ತು.
೨. ಸಂತಮ್ಮಣ್ಣನ ಎಡಬಲದಲ್ಲಿ ಏನಿದ್ದವು?
ಉ: ಸಂತಮ್ಮಣ್ಣನ ಎಡಬಲದಲ್ಲಿ ಚೆಂಡುದಾಂಡು ಇದ್ದವು.
೩. ತತ್ತೂರಿ ಚಂದ್ರ ಇಲ್ಲಿದೆ?
ಉ: ತತ್ತೂರಿ ಚಂದ್ರ ಹಣೆಯಲ್ಲಿದೆ.
೪. ಸಂತಮ್ಮಣ್ಣ ಮರು ಮಾತನಾಡಿದರೆ ಹೇಗಿರುತ್ತದೆ?
ಉ: ಸಂತಮ್ಮಣ್ಣ ಮರು ಮಾತನಾಡಿದರೆ ಸಿಡಿಲು ಗುಡುಗಿನ ಹಾಗಿರುತ್ತದೆ.
೫. ತುಂಟರ ಗುರು ಯಾರು?
ಉ: ತುಂಟರ ಗುರು ಸಂತಮ್ಮಣ್ಣ.
೬. ಸಂತಮ್ಮಣ್ಣ ಪದ್ಯ ಬರೆದವರು ಯಾರು?
ಉ: ಸಂತಮ್ಮಣ್ಣ ಪದ್ಯ ಬರೆದವರು ಹೊಯಿಸಳ.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಸಂತಮ್ಮಣ್ಣನ ಜೇಬಿನ ಬುಡದಲ್ಲಿ ಏನೇನು ಇದ್ದವು?
ಉ: ಸಂತಮ್ಮಣ್ಣನ ಜೇಬಿನ ಬುಡದಲ್ಲಿ ಕಲ್ಯಾಣ ಸೇವೆ, ಪುಟಾಣಿ ಪುರಿ, ಗೋಲಿ ಬಳಪ ಇದ್ದವು.
೨. ಪಠಾಸು ಪೆಟ್ಲು ಮತ್ತು ಕಾಸಿನ ಸಾಲುಗಳು ಎಲ್ಲಿದ್ದವು?
ಉ: ಪಠಾಸು ಪೆಟ್ಲು ಒಳಜೇಬಲ್ಲಿ ಇತ್ತು. ಕಾಸಿನ ಸಾಲುಗಳು ಕಳ್ಳ ಜೇಬಲ್ಲಿ ಇತ್ತು.
೩. ಸಂತಮ್ಮಣ್ಣನ ಹಣೆ ಕಣ್ಣು ಗಲ್ಲಗಳು ಹೇಗೆ ವರ್ಣನೆಗೊಂಡಿವೆ?
ಉ: ಸಂತಮ್ಮಣ್ಣನ ಹಣೆಯಲ್ಲಿ ಕತ್ತೂರಿ ಚಂದ್ರ ಇದ್ದನು. ಕಣ್ಣಲ್ಲಿ ಸಂಜೆಯ ಶುಕ್ರ ಇದ್ದನು. ಗಲ್ಲದಲ್ಲಿ ಬೆಳದಿಂಗಳು ಇತ್ತು.
೪. ನಿಸರ್ಗದ ಯಾವೆಲ್ಲ ಸಂಗತಿಗಳೊಂದಿಗೆ ಸಂತಮ್ಮಣ್ಣನನ್ನು ಹೋಲಿಸಲಾಗಿದೆ?
ಉ: ನಿಸರ್ಗದ ಹೂವಿನ ಮುತ್ತು, ಸಿಡಿಲು ಗುಡುಗು, ಆನೆಯ ಕಲ್ಮಳೆ ಮತ್ತು ಸುಂಟರಗಾಳಿಗೆ ಸಂತಮ್ಮಣ್ಣನನ್ನು ಹೋಲಿಸಲಾಗಿದೆ.
ಇ) ಬಿಟ್ಟ ಸ್ಥಳಗಳನ್ನು ಸರಿಯಾಗಿ ತುಂಬಿರಿ. (Fill in the blanks)
೧. ಕಲ್ಯಾಣ ಸೇವೆ ಜೇಬಿನ ಬುಡದಲ್ಲಿ ಪುಟಾಣಿಯ ಪುರಿ ಮೇಲೊಂದಿಷ್ಟು.
೨. ಚೆಂಡುದಾಂಡು ಎಡಬಲದಲ್ಲಿ ಬಂದ ಬಂದ ಸಂತಮ್ಮಣ್ಣ.
೩. ಸಂಜೆಯ ಶುಕ್ರ ಕಣ್ಣಲ್ಲಿ ಬೆಳುಬೆಲ್ದಿಂಗಳು ಗಲ್ಲದ ಮೇಲೆ.
೪. ಬಾರೋ ಬಾರೋ ಸಿಡಿಲಿನ ಮರಿಯೆ !
ಭಾಷಾಭ್ಯಾಸ
೧. ಹೊಂದಿಸಿ ಬರೆಯಿರಿ. (Match the following)
ಅ ಪಟ್ಟಿ ಬ ಪಟ್ಟಿ
ಅ) ಎಡಬಲದಲ್ಲಿ ೧)ಬೆಳುಬೆಳ್ದಿಂಗಳು ೪)ಚೆಂಡು ದಾಂಡು
ಆ) ಗೆಜ್ಜೆಯೊಳಗೆ ೨)ಆನೆಯ ಕಲ್ಮಳೆ ೩)ಬಿದಿರಿನ ಕೊಳಲು
ಇ) ಗಲ್ಲದ ಮೇಲೆ ೩)ಬಿದಿರಿನ ಕೊಳಲು ೧)ಬೆಳುಬೆಳ್ದಿಂಗಳು
ಈ) ಮೂರನೇ ಬಾರಿಗೆ ೪)ಚೆಂಡು ದಾಂಡು ೨)ಆನೆಯ ಕಲ್ಮಳೆ
೨) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)
ಗೋಲಿ ಬಳಪ : ಸಂತಮ್ಮಣ್ಣ ಗೋಲಿ ಬಳಪ ತಂದನು.
ಚೆಂಡು ದಾಂಡು : ಸಂತಮ್ಮಣ್ಣನ ಎಡಬಲದಲ್ಲಿ ಚೆಂಡುದಾಂಡು ಇದ್ದವು.
ಬೆಳದಿಂಗಳು : ನಿನ್ನೆ ಬೆಳದಿಂಗಳು ಇತ್ತು.
ಸುಂಟರಗಾಳಿ : ಸಂತಮ್ಮಣ್ಣ ಸುಂಟರಗಾಳಿ.
೩) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಎಡ X ಬಲ ಬುಡ X ತುದಿ ಬಂದ X ಹೋದ
ಸಣ್ಣ X ದೊಡ್ಡ ಮೇಲೆ X ಕೆಳಗೆ ಒಳ X ಹೊರಗೆ