Shikshakara Dinacharane means Teacher’s Day in kannada. Teachers’ Day in India is celebrated on September 5th every year, marking the birth anniversary of Dr. Sarvepalli Radhakrishnan, a distinguished philosopher, scholar, and India’s second President. This day honors the contributions and dedication of teachers in shaping the future. Students express gratitude through various activities, cultural programs, and heartfelt gestures, acknowledging the pivotal role teachers play in imparting knowledge and values. It’s a time to reflect on the profound impact educators have on the lives of students and the importance of education in shaping a brighter tomorrow.

ಭಾರತದಲ್ಲಿ ಶಿಕ್ಷಕರ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ, ಇದು ಪ್ರಸಿದ್ಧ ತತ್ವಜ್ಞಾನಿ, ವಿದ್ವಾಂಸ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಗುರುತಿಸುತ್ತದೆ. ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಮತ್ತು ಸಮರ್ಪಣೆಯನ್ನು ಈ ದಿನ ಗೌರವಿಸುತ್ತದೆ. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ, ಜ್ಞಾನ ಮತ್ತು ಮೌಲ್ಯಗಳನ್ನು ನೀಡುವಲ್ಲಿ ಶಿಕ್ಷಕರು ವಹಿಸುವ ಪ್ರಮುಖ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಜೀವನದ ಮೇಲೆ ಶಿಕ್ಷಕರು ಬೀರುವ ಆಳವಾದ ಪ್ರಭಾವ ಮತ್ತು ಉಜ್ವಲ ನಾಳೆಯನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವವನ್ನು ಪ್ರತಿಬಿಂಬಿಸುವ ಸಮಯ ಇದು.

ಶಿಕ್ಷಕರ ದಿನಾಚರಣೆ

ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write the word meaning)

ಹುಟ್ಟು = ಜನನ (Birth)                             ರಾಷ್ಟ್ರ = ದೇಶ  (Country)                      
ಶಿಕ್ಷಣ = ಕಲಿಯುವಿಕೆ (Education)        ಭೋದಿಸು = ಕಲಿಸು (Teach)

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.  (Answer the following in one sentence)

೧. ಶಿಕ್ಷಕರು ಯಾರಿಗೆ ಶುಭಾಶಯಗಳನ್ನು ತಿಳಿಸಿದರು?
ಉ: ಶಿಕ್ಷಕರು ಸುರೇಖಾಳಿಗೆ ಶುಭಾಶಯಗಳನ್ನು ತಿಳಿಸಿದರು.
೨. ಶಿಕ್ಷಕರ ದಿನಾಚರಣೆಯನ್ನು ಯಾವ ದಿನ ಆಚರಿಸುತ್ತೇವೆ?
ಉ: ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5 ರಂದು ಆಚರಿಸುತ್ತೇವೆ.
೩. ಯಾರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತೇವೆ?
ಉ: ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತೇವೆ.
೪. ರಾಧಾಕೃಷ್ಣನ್ ಅವರು ಏನಾಗಿದ್ದರು?
ಉ: ರಾಧಾಕೃಷ್ಣನ್ ಅವರು ಶಿಕ್ಷಕರಾಗಿದ್ದರು.
೫. ರಾಧಾಕೃಷ್ಣನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವ ವಿಷಯ ಬೋಧಿಸುತ್ತಿದ್ದರು?
ಉ: ರಾಧಾಕೃಷ್ಣನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತತ್ವಶಾಸ್ತ್ರ ವಿಷಯ ಬೋಧಿಸುತ್ತಿದ್ದರು.

ಇ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (Who told whom)

೧. “ಮಕ್ಕಳೇ ಇಂದು ಸಪ್ಟೆಂಬರ್ 5 ನೇ ತಾರೀಖು”
ಉ: ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು
೨. “ಮಿಸ್, ಡಾ|| ರಾಧಾಕೃಷ್ಣನ್ ಯಾರು?
ಉ: ಈ ಮಾತನ್ನು ಆಜಾದ್ ಶಿಕ್ಷಕರಿಗೆ ಕೇಳಿದನು.
೩. “ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಯಾಕೆ ಆಚರಿಸಬೇಕು ಮಿಸ್?”
ಉ: ಈ ಮಾತನ್ನು ಸೌಮ್ಯ ಶಿಕ್ಷಕರಿಗೆ ಕೇಳಿದಳು.
೪. “ಮಿಸ್, ತಮಗೆ ʼಶಿಕ್ಷಕರ ದಿನಾಚರಣೆಯʼ ಶುಭಾಶಯಗಳು.”
ಉ: ಈ ಮಾತನ್ನು ವಿದ್ಯಾರ್ಥಿಗಳು ಶಿಕ್ಷಕರಿಗೆ ಹೇಳಿದರು.

ಈ. ಬಿಟ್ಟಿರುವ ಪದ ತುಂಬಿರಿ. (Fill in the blanks)

೧. ಸುರೇಖಾ ಳಿಗೆ ಹುಟ್ಟು ಹಬ್ಬದ ಶುಭಾಶಯಗಳು.
೨.  ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ನಮ್ಮ ಭಾರತ ದೇಶದ ರಾಷ್ಟ್ರಪತಿಗಳಾಗಿದ್ದರು.
೩. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.
೪. ಸಪ್ಟೆಂಬರ್ 5ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.

Click here to download shikshakara dinacharane lesson exercises