Sravankumar grade V worksheet helps to revise the chapter exercise. Sravankumar was a devoted and dutiful son, known for his deep love and respect for his blind parents. According to the Ramayana, he dedicated his life to their service, carrying them in baskets on his shoulders as he traveled to various holy places to fulfill their wishes. His devotion was unwavering, and he sought only to bring them happiness.
One day, while fetching water from a river, King Dasharatha, who was out hunting, mistook the sound for that of an animal and shot an arrow. Tragically, the arrow struck Sravankumar, fatally wounding him. As he lay dying, he expressed his last wish—that the king bring water to his thirsty parents. Deeply remorseful, Dasharatha fulfilled his request. However, when Shravanakumara’s parents learned of his death, they were overcome with grief. In their sorrow, they cursed Dasharatha, foretelling that he too would one day die mourning the loss of his own son.
Shravanakumara’s story is a timeless example of love, sacrifice, and unwavering duty toward one’s parents. His devotion continues to inspire people to honor and care for their elders, emphasizing the values of respect, responsibility, and selfless service in family life.
ಶ್ರವಣಕುಮಾರ
I. ಪದಗಳ ಅರ್ಥ ಬರೆಯಿರಿ. (Write the word meaning)
ಅನರ್ಥ, ಗಾಬರಿ, ಗೋಗರೆ, ಕಾವಡಿ, ಕುಟೀರ, ತತ್ರಾಣಿ, ತೀರ್ಥಯಾತ್ರೆ,
ವೇಧಿ, ದಾಪುಗಾಲು, ಮಡು, ರೋಧಿಸು, ಶಬ್ದವೇದಿ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ದಶರಥನು ಶ್ರವಣಕುಮಾರನಿಗೆ ಏನೆಂದು ಭರವಸೆ ನೀಡಿದನು?
೨. ದಶರಥನು ಶ್ರವಣ ಕುಮಾರನ ಬಳಿ ಏನೆಂದು ಗೋಗರೆದನು?
೩. ದಶರಥನು ಎಲ್ಲಿ ಯಾವ ನಗರದಲ್ಲಿ ನೆಲೆಸಿದ್ದನು?
೪. ಶ್ರವಣಕುಮಾರನ ತಂದೆ ತಾಯಿ ಮುಪ್ಪಿನ ಕಾಲದಲ್ಲಿ ಯಾವುದಕ್ಕೆ ಚಡಪಡಿಸಿದರು?
೫. ಶ್ರವಣಕುಮಾರನ ತಂದೆಯ ಹೆಸರೇನು?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ತೀರ್ಥಯಾತ್ರೆಗೆ ಹೇಗೆ ಕರೆದೊಯ್ದನು?
೨. ಶ್ರವಣಕುಮಾರನು ದಶರಥನ ಬಾಣಕ್ಕೆ ಹೇಗೆ ಬಲಿಯಾದನು?
೩. ಶ್ರವಣಕುಮಾರನು ದಶರಥನ ಬಳಿ ಏನೆಂದು ರೋಧಿಸಿದನು?
೪. ತೀರ್ಥಯಾತ್ರೆಯ ಸಮಯದಲ್ಲಿ ಶ್ರವಣ ಕುಮಾರನು ತನ್ನ ತಂದೆ ತಾಯಿಗಳನ್ನು ಹೇಗೆ ಉಪಚರಿಸಿದನು?
ಇ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ. (who told whom)
೧. “ ಅಯ್ಯೋ! ಅಮ್ಮ! ನಾನು ಸತ್ತೆ”
೨. “ಮಗು ಹತ್ತಿರದಲ್ಲಿ ಎಲ್ಲಿಯಾದರೂ ನೀರಿದೆಯಾ ನೋಡು”
೩. “ನನ್ನ ಮುಪ್ಪಿನ ತಂದೆ – ತಾಯಿಗಳಿಗೆ ಇನ್ನಾರು ಗತಿ?”
ಈ) ಬಿಟ್ಟ ಸ್ಥಳಗಳನ್ನು ತುಂಬಿರಿ. (Fill in the blanks)
೧. ಶ್ರವಣ ಕುಮಾರನ ತಂದೆ ತಾಯಿಗಳು …………….. ಆಗಿದ್ದರು.
೨. ಶ್ರವಣಕುಮಾರನು ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ ………………. ಕರೆದೊಯ್ದನು.
೩. ಶ್ರವಣಕುಮಾರನು ತನ್ನ ತಂದೆ ತಾಯಿಗಳನ್ನು ……………… ಕರೆದೊಯ್ದನು.
೪. ದಶರಥನು …………… ವಿದ್ಯೆಯಲ್ಲಿ ಪರಿಣಿತನಾಗಿದ್ದನು.
III. ಭಾಷಾಭ್ಯಾಸ
ಅ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
೧. ಚಡಪಡಿಸು:
೨. ಅಭಿಮಾನ:
೩. ರೋಧಿಸು:
೪. ಭರವಸೆ:
೫. ಭಾವಿಸು:
ಆ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ತಪ್ಪು ಅನರ್ಥ
ಪುಣ್ಯ ಶಬ್ದ
ಸಮಾಧಾನ ಆಸೆ
ಉಪಾಯ ಅಭಿಮಾನ
ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಆಸೆಯನ್ನು =
೨. ಆಯಾಸವರಿತು =
೩. ಕರೆದೊಯ್ದನು =
೪. ದಾಪುಗಾಲು =