Sukri Bommagowda kannada grade 8th lesson is about Sukri Bomagowda. Sukri Bommagowda is a famous folk artist. This Kannada lesson is written by Shanti Nayak
Sukri’s mother and elder sister were good singers. Her father was skilled in playing the gumate instrument and in performing the Suggi Kunita folk dance. Sukriya herself had never attended school. As a child, she would go to the fields to collect cow dung. While leaving her dung basket in the fields, she learned several folk games such as Atte Aata, Kankatata, and Hulki Manda Aata. Along with the girls, she would also dance the Tarle Kunita. During times of drought, village women would gather at night in the open fields to sing and perform the Tarle Kunita. These folk songs were never written down.
Sukri had a unique ability to name every plant, tree, and herb through folk traditions. The ancestral knowledge and experiences passed down by her forefathers who once lived in forests remained preserved in her. Sukriya belonged to the “Halakki” farming community. She was deeply familiar with the plants and shrubs that grew along pathways—such as Chirakala, Halcheri, Pepe, Sagade, Hapsagade, Kuchumale, Ekanayaka, and Adakoli. Though she had no formal education, Sukriya clearly understood the difference between social evils and virtues. She actively participated in social reform movements and encouraged her fellow fighters with great enthusiasm.
She joined farmers in their long walks to Karwar to lead movements. Her cultural troupe took part in various campaigns such as the Kotebavi Movement, Tribal District Movement, Literacy Movement, and the Anti-Liquor Movement. She always wore traditional manisaras (bead ornaments) around her neck, a distinctive symbol of Ankola’s heritage. Dressed in the Halakki Okkal Gateegi-style saree, her very presence gave immense strength to social activists. All these qualities proved that Sukri Bommagowda was a woman deeply committed to social concerns.
Sukri received more than fifty awards in her lifetime. Among them were the Rajyotsava Award, Karnataka Janapada and Yakshagana Academy Award, and the Janapada Shri Award. She was also honored with many district- and taluk-level recognitions. In 2007, she received the prestigious Nadoja Award.
ಸುಕ್ರಿ ಬೊಮ್ಮಗೌಡ
ಅ) ಪದಗಳ ಅರ್ಥ (Word Meaning)
ಅಚರ = ಸ್ಥಿರ, ಅಚಲ ಒಕ್ಕಲ = ಮನೆತನ, ಬೇಸಾಯ
ಗಣಿ = ಆಶ್ರಯಸ್ಥಾನ ಚಣ್ಣಮೊಳೆ = ಜೋರಾದ ಮಳೆ
ಪರಂಪರಾಗತ = ಹಿಂದಿನವರಿಂದ ಬಂದಿರುವ
ಬಂಜೆತನ = ಮಕ್ಕಳಾಗದಿರುವುದು
ಬುಡಕಟ್ಟು = ಮೂಲ ಜನಾಂಗ
ಮುಂಚುಣಿ = ಮುಂದಾಳತ್ವ, ನಾಯಕತ್ವ
ಸುಗ್ಗಿ = ಧಾನ್ಯಗಳ ಕೊಯ್ಲಿನ ಕಾಲ
ಹಯನಾಗು = ಸಮೃದ್ಧವಾಗು,
ಹಾಳೆ = ಗದ್ದೆಯ ಸೀಳು
ಹೊಟ್ಟೆಪಾಡು = ಜೀವನೋಪಾಯ
ಅಣಿ = ಸಿದ್ಧತೆ
ಗದ್ದೆ = ಜಮೀನು, ಬೇಸಾಯದ ಭೂಮಿ
ಗವಿಯಗಳೆಲ್ಲ = ಕಾಡಿನ ಜೀವಿಗಳೆಲ್ಲ
ಚರ = ಚಲಿಸು
ಪೂರ್ವಜರು = ವಂಶದ ಹಿರಿಯರು
ಬೆದೆ = ಬಿತ್ತನೆಗೆ ಹದವಾದ ಕಾಲ
ಮಕ್ಕಿಕತ್ತಿ = ಬೆಳೆ ಬೆಳೆದಿರುವ ಎತ್ತರದ ಭೂಮಿ
ಸವ್ದೆ = ಉರುವಲು ಕಟ್ಟಿಗೆ
ಹನಿಸದೆ = ಬೀಳದೆ
ಹಲಗತ್ತಿ = ಹಲ್ಲುಗಳಿರುವ ಕತ್ತಿ
ಹೆಕ್ಕಿ = ಆರಿಸು
ಹೊಯ್ಯಲೆ = ಸುರಿಯುವುದು
ಬೆಳತನಕ = ಬೆಳಗಿನ ತನಕ
ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer the following in one sentence)
೧. ಸುಕ್ರಿಯವರ ತಂದೆ ತಾಯಿಗಳ ಹೆಸರೇನು?
ಉ: ಸುಕ್ರಿಯವರ ತಂದೆಯ ಹೆಸರು ಸುಬ್ಬ ಹಾಗೂ ತಾಯಿಯ ಹೆಸರು ದೇವಿ.
೨. ಸುಕ್ರಿಯವರ ತಂದೆಯಲ್ಲಿದ್ದ ಜಾನಪದ ಕಲೆಗಳಾವುವು?
ಉ: ಸುಕ್ರಿಯವರ ತಂದೆ ಗುಮಟೆ ವಾದ್ಯಗಾರಿಕೆಯನ್ನು ಮತ್ತು ಸುಗ್ಗಿ ಕುಣಿತವನ್ನು ಬಲ್ಲವರಾಗಿದ್ದರು.
೩. ಲೇಖಕರಿಗೆ ಸುಕ್ರಿಯವರು ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು ಯಾವುದು?
ಉ: ಲೇಖಕರಿಗೆ ಸುಕ್ರಿಯವರು ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು “ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚುಡಾಡಿ”.
೪. ಸುಕ್ರಿಯವರಲ್ಲಿ ಕಾಣಬರುವ ವಿಶೇಷ ಗುಣ ಯಾವುದು?
ಉ: ಪೂರ್ವಜರು ಕಾಡಿನಲ್ಲಿ ನೆಲೆಸಿ ಪಡೆದ ಅನುಭವ ಪರಂಪರಾಗತವಾಗಿ ಹಿಡಿದಿಟ್ಟುಕೊಂಡಿರುವುದು ಸುಕ್ರಿಯವರಲ್ಲಿ ಕಾಣಬರುವ ವಿಶೇಷ ಗುಣ.
೫. ಸುಕ್ರಿಯವರು ಯಾವ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?
ಉ: ಸುಕ್ರಿಯವರು “ಹಾಲಕ್ಕಿ” ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧. ಸುಕ್ರಿಯವರು ಬಾಲ್ಯದಲ್ಲಿ ಜನಪದ ಆಟಗಳನ್ನು ಹೇಗೆ ಕಲಿತರು?
ಉ: ಸುಕ್ರಿಯವರು ಬಾಲ್ಯದಲ್ಲಿ ಸಗಣಿ ಹೆಕ್ಕಲು ಗದ್ದೆ ಬಯಲಿಗೆ ಹೋಗುತ್ತಿದ್ದರು. ಸಗಣಿ ಬುಟ್ಟಿಯನ್ನು ಬಯಲಿನಲ್ಲಿ ಇಟ್ಟು ಜನಪದ ಆಟಗಳಾದ ಅಟ್ಟೆ ಆಟ, ಕಣ್ಕಟಾಟ, ಹುಳ್ಕಿ ಮಂಡದ ಆಟಗಳನ್ನು ಕಲಿತರು. ಹಾಗೆ ಹೆಣ್ಣು ಮಕ್ಕಳ ಜೊತೆ ತಾರ್ಲೆ ಕುಣಿದರು.
೨. ಸುಕ್ರಿಯವರಿಗೆ ಯಾವ ಯಾವ ಸೊಪ್ಪುಗಳ ಜ್ಞಾನವಿದೆ?
ಉ: ಸುಕ್ರಿಯವರಿಗೆ ಹಾದಿಯಲ್ಲಿಯ ಇಕ್ಕೆಲಗಳ ಗಿಡಮರಗಳು ತುಂಬಾ ಪರಿಚಿತ. ಚಿರಕಲ, ಹಳ್ಚೆರಿ, ಪೆಪೆ, ಸಗಡೆ, ಹಪ್ಸಗಡೆ, ಕುಚುಮಾಲೆ, ಏಕನಾಯಕ, ಅಡಕೋಳಿ ಮುಂತಾದ ಸೊಪ್ಪುಗಳ ಜ್ಞಾನ ಸುಕ್ರಿಯವರಿಗೆ ಇದೆ.
೩. ಸುಕ್ರಿಯವರ ವೇಷ ಭೂಷಣಗಳು ಹೇಗಿರುತ್ತವೆ?
ಉ: ಸುಕ್ರಿಯವರ ಕೊರಳ ತುಂಬಾ ಅಂಕೋಲೆಯ ಪರಂಪರಾಗತ ಶೈಲಿಯ ಮಣಿಸರಗಳನ್ನು ಧರಿಸುತ್ತಿದ್ದರು. ಹಾಲಕ್ಕಿ ಒಕ್ಕಲ ಗೇಟ್ಗಿ ಶೈಲಿಯ ಸೀರೆ ಉಡುತ್ತಿದ್ದರು.
೪. ಸುಕ್ರಿಯವರಿಗೆ ದೊರೆತ ಪ್ರಶಸ್ತಿಗಳಾವವು?
ಉ: ಸುಕ್ರಿಯವರಿಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ದೊರೆತಿವೆ. ಜಿಲ್ಲೆ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳು ದೊರೆತಿವೆ. ೨೦೦೭ರಲ್ಲಿ ನಾಡೋಜ ಪ್ರಶಸ್ತಿ ದೊರೆತಿದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ಸುಕ್ರಿಯವರು ಜಾನಪದದ ಗಣಿ ಆದುದು ಹೇಗೆ? ವಿವರಿಸಿ.
ಉ: ಸುಕ್ರಿಯ ಅಕ್ಕ ಮತ್ತು ತಾಯಿ ಉತ್ತಮ ಹಾಡುಗಾರರಾಗಿದ್ದರು. ಸುಕ್ರಿಯವರ ತಂದೆ ಗುಮಟೆ ವಾದ್ಯಗಾರಿಕೆಯನ್ನು ಮತ್ತು ಸುಗ್ಗಿ ಕುಣಿತವನ್ನು ಬಲ್ಲವರಾಗಿದ್ದರು. ಸುಕ್ರಿಯು ಶಾಲೆ ಕಲಿತವರಲ್ಲ. ಸುಕ್ರಿಯವರು ಬಾಲ್ಯದಲ್ಲಿ ಸಗಣಿ ಹೆಕ್ಕಲು ಗದ್ದೆ ಬಯಲಿಗೆ ಹೋಗುತ್ತಿದ್ದರು. ಸಗಣಿ ಬುಟ್ಟಿಯನ್ನು ಬಯಲಿನಲ್ಲಿ ಇಟ್ಟು ಜನಪದ ಆಟಗಳಾದ ಅಟ್ಟೆ ಆಟ, ಕಣ್ಕಟಾಟ, ಹುಳ್ಕಿ ಮಂಡದ ಆಟಗಳನ್ನು ಕಲಿತರು. ಹಾಗೆ ಹೆಣ್ಣು ಮಕ್ಕಳ ಜೊತೆ ತಾರ್ಲೆ ಕುಣಿದರು. ಮಳೆ ಬರದ ಸಮಯದಲ್ಲಿ ಊರಿನ ಹೆಂಗಸರು ರಾತ್ರಿ ಬಯಲಿಗಿಳಿದು ಹಾಡುತ್ತಾ ತಾರ್ಲೆ ಕುಣಿಯುತ್ತಿದ್ದರು. ಈ ಜಾನಪದದ ಹಾಡುಗಳು ಬರೆದಿಡಲಿಲ್ಲ. ಸುಕ್ರಿಯವರು ಎಲ್ಲ ಗಿಡಮರಸಸ್ಯಗಳ ಹೆಸರುಗಳನ್ನು ಜನಪದದ ಹೆಸರಿನಲ್ಲಿ ಹೇಳುತ್ತಿದ್ದರು.
೨. ಸುಕ್ರಿ ಬೊಮ್ಮಗೌಡ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ ಎಂಬುದನ್ನು ಹೇಗೆ ಹೇಳಬಹುದು?
ಉ: ಸುಕ್ರಿಯವರು ಓದು ಬರಹ ಕಲಿತಿಲ್ಲವಾದರೂ ಸಾಮಾಜಿಕ ಕೆಡುಕು ಯಾವುದು, ಒಳಿತು ಯಾವುದು ಎಂಬುದನ್ನು ತಿಳಿದಿದ್ದರು. ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಇವರು ಎತ್ತಿದ ಕೈ. ಇವರು ರೈತರ ಜೊತೆ ಕಾಲ್ನಡಿಗೆಯಲ್ಲಿ ಕಾರವಾರಕ್ಕೆ ಹೋಗಿ ಚಳುವಳಿ ನಡೆಸಿದರು. ಕೋಟೆಬಾವಿ ಚಳುವಳಿ, ಬುಡಕಟ್ಟು ಜಿಲ್ಲಾ ಚಳುವಳಿ ಸಾಕ್ಷರತಾ ಆಂದೋಲನ ಮಧ್ಯಪಾನ ವಿರೋಧಿ ಚಳುವಳಿಗಳಲ್ಲಿ ಸುಕ್ರಿಯವರ ಕಲಾತಂಡ ಪಾಲ್ಗೊಂಡಿತ್ತು. ಸುಕ್ರಿಯವರ ಕೊರಳ ತುಂಬಾ ಅಂಕೋಲೆಯ ಪರಂಪರಾಗತ ಶೈಲಿಯ ಮಣಿಸರಗಳನ್ನು ಧರಿಸುತ್ತಿದ್ದರು. ಹಾಲಕ್ಕಿ ಒಕ್ಕಲ ಗೇಟ್ಗಿ ಶೈಲಿಯ ಸೀರೆ ಉಟ್ಟು
ಬಂದರೆ ಚಳುವಳಿಗಾರರಿಗೆ ಆನೆ ಬಲ ಬರುತ್ತಿತ್ತು. ಇದು ಸುಕ್ರಿ
ಬೊಮ್ಮಗೌಡ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ ಎಂಬುದನ್ನು ಸಾಬೀತು ಮಾಡುತ್ತವೆ.
ಈ) ಸಂದರ್ಭದಲ್ಲಿ ವಿವರಿಸಿರಿ. (Explain the context)
೧. “ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ”
ಉ: ಈ ವಾಕ್ಯವನ್ನು ಶಾಂತಿ ನಾಯಕರವರು ಬರೆದಿರುವ “ಸುಕ್ರಿ
ಬೊಮ್ಮಗೌಡ” ಕೃತಿಯ ಪಾಠದಿಂದ ಆರಿಸಲಾಗಿದೆ. ಇದನ್ನು ಲೇಖಕಿ ಹೇಳಿದ್ದಾರೆ. ಲೇಖಕರಿಗೆ ಸುಕ್ರಿಯವರ ಜೊತೆ ಕಾಡಿನಲ್ಲಿ ನಡೆಯುವ ಅನುಭವ ಅಪೂರ್ವವಾಗಿತ್ತು.ಆ ಸಂದರ್ಭದಲ್ಲಿ ಅವರ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಔಷಧಶಾಸ್ತ್ರದ ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ ಎಂದು ಲೇಖಕಿ ಹೇಳಿದ್ದಾರೆ.
೨. “ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚುಡಾಡಿ”
ಉ: ಈ ವಾಕ್ಯವನ್ನು ಶಾಂತಿ ನಾಯಕರವರು ಬರೆದಿರುವ “ಸುಕ್ರಿ
ಬೊಮ್ಮಗೌಡ” ಕೃತಿಯ ಪಾಠದಿಂದ ಆರಿಸಲಾಗಿದೆ. ಇದನ್ನು ಲೇಖಕಿ ಹೇಳಿದ್ದಾರೆ. ಲೇಖಕಿ ಸುಕ್ರಿಯವರ ಜೊತೆ ಬಯಲಿನಲ್ಲಿ ನಡೆಯುವಾಗ ಒಂದು ಜಾತಿಯ ಉದ್ದನೇಯ ತೆನೆಗಳನ್ನು ತೋರಿಸಿ “ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚುಡಾಡಿ” ಎಂದು ಹೇಳಿದರು.
೩. “ಚಳುವಳಿಗಾರರಿಗೆ ಆನೆ ಬಲ ಬರುತ್ತದೆ”
ಉ: ಉ: ಈ ವಾಕ್ಯವನ್ನು ಶಾಂತಿ ನಾಯಕರವರು ಬರೆದಿರುವ “ಸುಕ್ರಿ
ಬೊಮ್ಮಗೌಡ” ಕೃತಿಯ ಪಾಠದಿಂದ ಆರಿಸಲಾಗಿದೆ. ಇದನ್ನು ಲೇಖಕಿ ಹೇಳಿದ್ದಾರೆ. ಸಮಾಜಕ್ಕೆ ಒಳಿತಾಗುವ ಚಳುವಳಿಗಳಲ್ಲಿ ಭಾಗವಹಿಸಿ ಜೊತೆಯ ಹೋರಾಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸುಕ್ರಿಯವರು ಕೊರಳ ತುಂಬಾ ಅಂಕೋಲೆಯ ಪರಂಪರಾಗತ ಶೈಲಿಯ ಮಣಿಸರಗಳನ್ನು ಧರಿಸಿ, ಹಾಲಕ್ಕಿ ಒಕ್ಕಲ ಗೇಟ್ಗಿ ಶೈಲಿಯ ಸೀರೆ ಉಟ್ಟು
ಬಂದರೆ ಚಳುವಳಿಗಾರರಿಗೆ ಆನೆ ಬಲ ಬರುತ್ತಿತ್ತು ಎಂದು ಲೇಖಕಿ ಹೇಳಿದ್ದಾರೆ.
ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ಸುಸ್ತಾಗದ = ಸುಸ್ತು + ಆಗದ
ಕ್ರೀಡಾಂಗಣ = ಕ್ರೀಡೆ + ಅಂಗಣ
ಕಣ್ಕಟಾಟ = ಕಣ್ಕಟ್ಟು + ಆಟ
ಹಲ್ಗತ್ತಿ= ಹಲ್ಲು + ಕತ್ತಿ
ಕಾಲ್ನಡಿಗೆ = ಕಾಲಿನ + ನಡಿಗೆ
ಅತ್ಯುನ್ನತ = ಅತಿ + ಉನ್ನತ
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite word)
ಚರ X ಅಚರ ಜ್ಞಾನ X ಅಜ್ಞಾನ ಕೆಡಕು X ಒಳಿತು
ಸನ್ಮಾನ X ಅವಮಾನ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ಹೊಟ್ಟೆಪಾಡು = ನಾವು ಹೊಟ್ಟೆಪಾಡಿಗಾಗಿ ಬದುಕುತ್ತೇವೆ.
ಆಪ್ತವಾಗು = ನನಗೆ ಗೌರಿ ಆಪ್ತವಾದಳು.
ಅಪೂರ್ವ ಅನುಭವ = ನನಗೆ ಆ ಚಲನಚತ್ರ ನೋಡಿ ಅಪೂರ್ವ ಅನುಭವವಾಯಿತು.
ಜ್ಞಾನ ನಿಧಿ = ಅಬ್ದುಲ್ ಕಲಾಂರವರು ಜ್ಞಾನ ನಿಧಿಯಾಗಿದ್ದರು.
ಪರಂಪರಾಗತ = ನಮ್ಮ ಸಂಸ್ಕ್ರತಿ ಪರಂಪರಾಗತವಾಗಿದೆ.
ಆನೆ ಬಲ = ನನ್ನ ಗೆಳತಿ ನೋಡಿ ಆನೆ ಬಲ ಬಂದಂತಾಯಿತು.
ಈ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write Tatsama Tadbhava)
ಸಾಲೆ = ಶಾಲಾ
ಅಕ್ಷರ = ಅಕ್ಕರ
ಮುಖ = ಮೊಗ
ಪಕ್ಷಿ = ಹಕ್ಕಿ
ಉ) ಕೆಳಗಿನ ಮಾದರಿಯಂತೆ ಹತ್ತು ಪದಗಳನ್ನು ಬರೆಯಿರಿ. ( Write 10 words like the following)
ಹಾಡು + ಗಾರ = ಹಾಡುಗಾರ
ನೃತ್ಯ + ಗಾರ = ನೃತ್ಯಗಾರ
ಬಳೆ + ಗಾರ = ಬಳೆಗಾರ
ಚಳುವಳಿ + ಕಾರ = ಚಳುವಳಿಗಾರ
ಮುಂಚೂಣಿ + ಕಾರ = ಮುಂಚೂಣಿಗಾರ
ಬೇಟೆ + ಗಾರ = ಬೇಟೆಗಾರ
ನಾಟಕ + ಕಾರ = ನಾಟಕಗಾರ
ಬರಹ + ಗಾರ = ಬರಹಗಾರ
ಕತೆ + ಗಾರ = ಕತೆಗಾರ