Tai tendeara seve worksheet is for ICSE grade V. Tai tendeara seve kannada lesson is about how to care about the elderly parents.
ತಾಯಿ ತಂದೆಯರ ಸೇವೆ
ಅ) ಪದಗಳ ಅರ್ಥ ಬರೆಯಿರಿ. (Write the word meaning)
ಪಾಲನೆ, ಸೋದರ, ಗಮನ, ನಿರ್ಲಕ್ಷಿಸು, ಆಶ್ರಮ
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಪುಂಡಲೀಕನಿಗೆ ಯಾವ ಊರಿಗೆ ಹೋಗಲು ಆಸೆ ಆಯಿತು?
೨. ಪುಂಡಲೀಕನು ಹೇಗೆ ಕಾಲ ಕಳೆಯುತ್ತಿದ್ದನು?
೩. ದೇವರಲ್ಲಿ ಯಾವ ವರವನ್ನು ಬೇಡಿದನು?
೪. ತಾಯಿ ತಂದೆಯರ ಪಾದಗಳನ್ನು ಯಾರು ಒತ್ತುತ್ತಿದ್ದರು?
ಇ) ಯಾರು ಯಾರಿಗೆ ಹೇಳಿದರು? (Who told whom)
೧. “ನಿನಗೇನು ವರ ಬೇಕು ಕೇಳು”
೨. “ನನಗೆ ಯಾವ ಕಾಶಿಯ ವಿಚಾರವು ಗೊತ್ತಿಲ್ಲ”
೩. “ಅಪ್ಪ ಅಮ್ಮ ನಾನೆಂದು ಇನ್ನೆಲ್ಲಿಗೂ ಹೋಗುವುದಿಲ್ಲ”
೪. “ಸೋದರ ಕಾಶಿ ಇಲ್ಲಿಂದ ಇನ್ನು ಎಷ್ಟು ದೂರ ಇದೆ”
ಈ) ವಿರುದ್ಧ ಪದಗಳನ್ನು ಬರೆಯಿರಿ. (Write the opposite words)
ಪ್ರತ್ಯಕ್ಷ , ಲಕ್ಷ್ಯ , ಕತ್ತಲು, ಆಸೆ
ಉ) ಲಿಂಗ ಬದಲಿಸಿ ಬರೆಯಿರಿ (Change the gender)
ಅಜ್ಜ, ಮಾವ, ಗೆಳೆಯ, ಅವನು, ದೊಡ್ಡಪ್ಪ, ಸೋದರ, ಹುಡುಗ, ಮಗ, ಚಿಕ್ಕಪ್ಪ
ಊ) ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ (Correct the sentence)
೧. ಪುಂಡಲೀಕನಿಗೆ ದೆಹಲಿಗೆ ಹೋಗಿ ಬರುವ ಆಸೆ ಆಯಿತು.
೨. ಪುಂಡಲೀಕನ ಮನೆಯಲ್ಲಿ ಕುಂಟ ತಂದೆ ತಾಯಿಗಳಿದ್ದರು.
೩. ಪುಂಡಲೀಕನು ಕೂಡಲೇ ಬೆಳಕಿನಲ್ಲಿಯೇ ಬೇಗ ಬೇಗ ಮನೆಗೆ ಹಿಂದಿರುಗಿದ.
ಋ) ಹೊಂದಿಸಿ ಬರೆಯಿರಿ. (Match the following)
ಅ ಬ
ದಟ್ಟವಾದ ರಾಮೇಶ್ವರ
ತಾಯಿ ಕಾಡು
ಕಾಶಿ ವರ
ಭಗವಂತ ತಂದೆ
ಎ) ಬಹುವಚನಗಳನ್ನು ಬರೆಯಿರಿ. (Write the Plural)
ಹುಡುಗ, ಕಾಡು, ತಾಯಿ, ಪಾದ