Talidavanu baliyanu is a kannada proverb. “There is no more austerity than patience” is Dasa’s teaching. Never lose patience. This proverb says that such people will have a good life ahead. Happiness and sadness come and go in human life. There is no way that there are no stones and thorns. Bhagavad Gita says to feel happiness and sorrow equally. When happiness comes, it should not expand. Be patient when difficulties arise. Don’t make a hasty decision. If you face difficulties with patience, happy days will come. There will also be a flat ground path. If man’s life is conducted with patience and care, the path to happiness will be found. Hence Talidavanu baliyanu, means Patience is the key. Thalidavani means the one who has patience, baaliyanu means will sustain in life.
ತಾಳಿದವನು ಬಾಳಿಯಾನು. “ತಾಳುವಿಕೆಗಿಂತ ತಪವು ಇಲ್ಲ” ಎನ್ನುವುದು ದಾಸರ ಉಪದೇಶ. ಯಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಅಂತವರಿಗೆ ಮುಂದೆ ಒಳ್ಳೆಯ ಬದುಕು ದೊರೆಯಬಹುದು ಎಂದು ಈ ಗಾದೆ ತಿಳಿಸುತ್ತದೆ. ಮನುಷ್ಯನ ಜೀವನದಲ್ಲಿ ಸುಖ ದುಃಖಗಳು ಬಂದು ಹೋಗುತ್ತಿರುತ್ತವೆ. ಕಲ್ಲು ಮುಳ್ಳುಗಳು ಇರದಿರುವ ದಾರಿಯೇ ಇಲ್ಲ. ಸುಖದುಃಖ ಲಾಭನಷ್ಟಗಳನ್ನು ಸಮಾನವಾಗಿ ಭಾವಿಸು ಎಂದು ಭಗವದ್ಗೀತೆ ಹೇಳುತ್ತದೆ. ಸುಖ ಬಂದಾಗ ಹಿಗ್ಗದೆ ಇರಬೇಕು. ಕಷ್ಟ ಬಂದಾಗ ಸಹನೆಯಿಂದ ಇರಬೇಕು. ಆತುರದ ನಿರ್ಧಾರ ಮಾಡಬಾರದು. ಕಷ್ಟವನ್ನು ತಾಳ್ಮೆಯಿಂದ ಎದುರಿಸಿದರೆ ಮುಂದೆ ಸುಖದ ದಿನಗಳು ಬಂದೇ ಬರುತ್ತವೆ. ಸಮತಟ್ಟಾದ ಮೈದಾನದ ಹಾದಿಯೂ ಇರುತ್ತದೆ. ಮನುಷ್ಯನ ಬದುಕು ಹಾಗೆ ಸಹನೆಯಿಂದ ತಾಳ್ಮೆಯಿಂದ ಎಚ್ಚರಿಕೆಯಿಂದ ಸಾಗಿದರೆ ಸುಖದ ದಾರಿ ಸಿಕ್ಕಿಯೇ ಸಿಗುತ್ತದೆ. ತಾಳಿದವನು ಬಾಳಿಯಾನು ಎಂಬುದು ಕನ್ನಡದ ಗಾದೆ ಮಾತು.
One Response