Tarakaarigala Melaa kannada notes grade VII tili kannada lesson. Tarakaarigala Melaa means vegetable market.
Tarakaarigala mela kannada lesson explains the importance of the vegetables. It explains the origin of the vegetable and its importance.
ತರಕಾರಿಗಳ ಮೇಳ
ಪದಗಳ ಅರ್ಥ ತಿಳಿಯಿರಿ. (Word Meaning)
ಅಂಗ, ಘಾಟು, ತಂಬೂರಿ, ಅಜಾನುಬಾಹು, ಇರುಳುಗಣ್ಣು, ಕಣಜ, ಕಲರವ, ಖ್ಯಾತಿ, ತವರು, ದಂಡು, ಮೇಳ, ಸಭಿಕರು, ನಮನ, ನೆರೆ, ಬಿಟ್ಟಿ, ಭಿನ್ನವಿಸು
II ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)
೧. ಪ್ರತಿ ವರ್ಷ ವಿಶ್ವ ಆರೋಗ್ಯ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?
೨. ಹೂಕೋಸಿನ ಸಹೋದರರು ಯಾರು?
೩. ತರಕಾರಿಯ ಮೇಳದಲ್ಲಿ ಯಾರು ಯಾರು ಪಾಲ್ಗೊಂಡಿದ್ದರು?
೪. ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಯಾವುದರ ಮೇಳ ಏರ್ಪಟ್ಟಿತ್ತು?
೫. ತರಕಾರಿಗಳ ಕಬ್ಬಿಣಾಂಶ ಯಾವ ಕೊರತೆಯನ್ನು ನಿವಾರಿಸುತ್ತದೆ?
೬. ಈರುಳ್ಳಿಯನ್ನು ಇಂಗ್ಲಿಷ್, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
೭. ಹೂಕೋಸು ಯಾವ ರೋಗಗಳನ್ನು ದೂರ ಮಾಡುತ್ತದೆ?
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in one sentence)
೧. ಹೀರೇಕಾಯಿ ತನ್ನನ್ನು ಹೇಗೆ ಪರಿಚಯಿಸಿಕೊಂಡಿತು?
೨. ತರಕಾರಿಗಳ ಮೇಳದಿಂದ ಜನರಿಗಾದ ಪ್ರಯೋಜನಗಳೇನು?
೩. ನುಗ್ಗೆ ಸೊಪ್ಪಿನ ಪ್ರಯೋಜನಗಳೇನು?
೪. ಕೊತ್ತಂಬರಿ ಸೊಪ್ಪನ್ನು ಯಾವ ಯಾವ ಅಡುಗೆಗಳಿಗೆ ಬಳಸುತ್ತಾರೆ?
೫. ಸೋರೆಕಾಯಿ ತನ್ನ ವಿಶೇಷತೆಯ ಬಗ್ಗೆ ಏನೆಂದು ಹೇಳಿತು?
ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (Who told whom)
೧. “ಗೋಬಿ ಮಂಚೂರಿ ಎಂದರೆ ನಿಮಗೆ ಬಲು ಪ್ರೀತಿ ಅಲ್ಲವೇ?”
೨. “ಸಂಗೀತಕ್ಕೆ ನನ್ನ ಕೊಡುಗೆ ಅಪಾರ”
೩. “ನಾನು ಮರದ ಮೇಲೆ ಇರುವವಳು”
೪. “ಏಕೆ ನನ್ನನ್ನು ನೋಡುತ್ತಿದ್ದಂತೆ ಕಣ್ಣು ಮುಚ್ಚಿದಿರಿ?”
ಈ) ಟಿಪ್ಪಣಿ ಬರೆಯಿರಿ
೧. ಆರೋಗ್ಯವೇ ಭಾಗ್ಯ
೨. ಹಸಿರು ತರಕಾರಿಗಳ ಸೇವನೆ
ಉ) ತರಕಾರಿಗಳನ್ನು ಅವುಗಳ ಬಣ್ಣದೊಂದಿಗೆ ಹೊಂದಿಸಿ ಬರೆಯಿರಿ. (Match the vegetables with the colour)
೧. ಹೀರೇಕಾಯಿ ಅ) ನೇರಳೆ
೨. ಮೂಲಂಗಿ ಆ) ಹಳದಿ
೩. ಕ್ಯಾರೆಟ್ ಇ) ಹಸಿರು
೪. ಟಮೋಟ ಈ) ಬಿಳಿ
೫. ಬೀಟ್ರೂಟ್ ಉ) ಕೇಸರಿ
೬. ನಿಂಬೆ ಊ) ಕೆಂಪು
ಊ) ತರಕಾರಿಗಳನ್ನು ಅವುಗಳ ರುಚಿಯೊಂದಿಗೆ ಹೊಂದಿಸಿ ಬರೆಯಿರಿ. (Match the vegetables with its taste)
೧. ಮೆಣಸಿನ ಕಾಯಿ ಅ) ಖಾರ
೨. ಮೂಲಂಗಿ ಆ) ಹುಳಿ
೩. ನಿಂಬೆ ಇ) ಘಾಟು
೪. ಟಮೋಟ ಈ) ಕಹಿ
೫. ಹಾಗಲ ಕಾಯಿ ಉ) ಸಿಹಿ
III ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
ದಿನಾಚರಣೆ =
ಇರುಳುಗಣ್ಣು =
ಪೌಷ್ಟಿಕಾಂಶ =
ಬುರುಡೆಯಾಕಾರ =
ಒಂದೊಂದು =
ಖನಿಜಾಂಶ =
ಮೈಯೆಲ್ಲ =
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the Opposite words)
ಆರೋಗ್ಯ ರುಚಿ
ಶುದ್ದಿ ಪೌಷ್ಟಿಕತೆ
ರೋಗ ನಿರ್ಗಮಿಸು
ಇ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿ ಬರೆಯಿರಿ. (Make your own sentences)
ಕಣಜ, ಕಲರವ, ಭಿನ್ನವಿಸು, ಮೇಳ
Click here to download the tarakaragala mela kannada notes worksheet