Tayi tandeyara seve Kannada lesson grade V ICSE curriculum. Tayi tandeyara seve means taking care of mother and father. It is a story about a boy named Pundalika. His parents were blind, and he never took care of them; he was very playful. Once he felt to visit Kashi, without thinking twice he left. Since he didn’t had money, he had to walk to Kashi. While walking he became tired and found a hermitage to rest. He found a boy of his age pressing his parents’ legs and taking good care. Pundalika asked the boy if he knows how far is Kashi? The boy responded that his parents are Kashi and Rameshwara for him. Pundalika realized his mistake and rushed back home. He started to take care of his parents well. God appreciated his service toward his parents, i.e Tayi tandeyara seve. He came in front of him and asked him what boon he wanted. Pundalika asked for his parents eyes and asked god to stay there and bless all.
ತಾಯಿ ತಂದೆಯರ ಸೇವೆ
ಅ) ಪದಗಳ ಅರ್ಥ ಬರೆಯಿರಿ. (Write the word meaning)
ಪಾಲನೆ = ಸಲಹು (To take care)
ನಿರ್ಲಕ್ಷಿಸು = ಕಡೆಗಣಿಸು (neglect)
ಆಶ್ರಮ = ಋಷಿಗಳ ವಾಸಸ್ಥಾನ (Hermitage)
ಸೋದರ = ಸಹೋದರ, ಒಡಹುಟ್ಟಿದವ (Brother)
ಗಮನ = ಆಸಕ್ತಿ, ಲಕ್ಷ್ಯ (Interest, Attention)
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಪುಂಡಲೀಕನು ಹೇಗೆ ಕಾಲ ಕಳೆಯುತ್ತಿದ್ದನು?
ಉ: ಪುಂಡಲೀಕನು ಹುಡುಗತನದಿಂದ ಕಾಲ ಕಳೆಯುತ್ತಿದ್ದನು.
೨. ಪುಂಡಲೀಕನಿಗೆ ಯಾವ ಊರಿಗೆ ಹೋಗಲು ಆಸೆ ಆಯಿತು?
ಉ: ಪುಂಡಲೀಕನಿಗೆ ಕಾಶಿಗೆ ಹೋಗಲು ಆಸೆ ಆಯಿತು.
೩. ತಾಯಿ ತಂದೆಯರ ಪಾದಗಳನ್ನು ಯಾರು ಒತ್ತುತ್ತಿದ್ದರು?
ಉ:ತಾಯಿ ತಂದೆಯರ ಪಾದಗಳನ್ನು ಪುಂಡಲೀಕನ ವಯಸ್ಸಿನ ಹುಡುಗ ಒತ್ತುತ್ತಿದ್ದರು.
೪. ದೇವರಲ್ಲಿ ಯಾವ ವರವನ್ನು ಬೇಡಿದನು?
ಉ: ತನ್ನ ತಾಯಿ ತಂದೆಯರಿಗೆ ಕಣ್ಣುಗಳು ಬರುವಂತೆ ವರ ನೀಡಿ ಈ ಜಾಗದಲ್ಲಿ ನೆಲೆಸಿ ನಾಡನ್ನು ಸಲಹು ಎಂದು ಬೇಡಿದನು.
ಇ) ಯಾರು ಯಾರಿಗೆ ಹೇಳಿದರು? (Who told whom)
೧. “ಸೋದರ ಕಾಶಿ ಇಲ್ಲಿಂದ ಇನ್ನು ಎಷ್ಟು ದೂರ ಇದೆ”
ಉ:ಈ ಮಾತನ್ನು ಪುಂಡಲೀಕನು ಆಶ್ರಮದ ಹುಡುಗನಿಗೆ ಕೇಳಿದನು.
೨. “ನನಗೆ ಯಾವ ಕಾಶಿಯ ವಿಚಾರವು ಗೊತ್ತಿಲ್ಲ”
ಉ: ಈ ಮಾತನ್ನು ಆಶ್ರಮದ ಹುಡುಗ ಪುಂಡಲೀಕನಿಗೆ ಹೇಳಿದನು.
೩. “ಅಪ್ಪ ಅಮ್ಮ ನಾನೆಂದು ಇನ್ನೆಲ್ಲಿಗೂ ಹೋಗುವುದಿಲ್ಲ”
ಉ: ಈ ಮಾತನ್ನು ಪುಂಡಲೀಕನು ತಂದೆ ತಾಯಿಯರಿಗೆ ಹೇಳಿದನು.
೪. “ನಿನಗೇನು ವರ ಬೇಕು ಕೇಳು”
ಉ: ಈ ಮಾತನ್ನು ಭಗವಂತ ಪುಂಡಲೀಕನಿಗೆ ಕೇಳಿದನು.
ಈ) ವಿರುದ್ಧ ಪದಗಳನ್ನು ಬರೆಯಿರಿ. (Write the opposite words)
ಪ್ರತ್ಯಕ್ಷ X ಅಪ್ರತ್ಯಕ್ಷ ಕತ್ತಲು X ಬೆಳಕು
ಆಸೆ X ನಿರಾಸೆ ಲಕ್ಷ್ಯ X ನಿರ್ಲಕ್ಷ್ಯ
ಉ) ಲಿಂಗ ಬದಲಿಸಿ ಬರೆಯಿರಿ (Change the gender)
ಅವನು = ಅವಳು ಸೋದರ = ಸೋದರಿ
ಹುಡುಗ = ಹುಡುಗಿ ಮಾವ = ಅತ್ತೆ
ಮಗ = ಮಗಳು ಚಿಕ್ಕಪ್ಪ= ಚಿಕ್ಕಮ್ಮ
ಅಜ್ಜ = ಅಜ್ಜಿ ದೊಡ್ಡಪ್ಪ = ದೊಡ್ಡಮ್ಮ
ಗೆಳೆಯ = ಗೆಳತಿ
ಊ) ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ (Correct the sentence)
೧. ಪುಂಡಲೀಕನಿಗೆ ದೆಹಲಿಗೆ ಹೋಗಿ ಬರುವ ಆಸೆ ಆಯಿತು.
ಉ: ಪುಂಡಲೀಕನಿಗೆ ಕಾಶಿಗೆ ಹೋಗಿ ಬರುವ ಆಸೆ ಆಯಿತು.
೨. ಪುಂಡಲೀಕನ ಮನೆಯಲ್ಲಿ ಕುಂಟ ತಂದೆ ತಾಯಿಗಳಿದ್ದರು.
ಉ: ಪುಂಡಲೀಕನ ಮನೆಯಲ್ಲಿ ಕುರುಡ ತಂದೆ ತಾಯಿಗಳಿದ್ದರು.
೩. ಪುಂಡಲೀಕನು ಕೂಡಲೇ ಬೆಳಕಿನಲ್ಲಿಯೇ ಬೇಗ ಬೇಗ ಮನೆಗೆ ಹಿಂದಿರುಗಿದ.
ಉ:ಪುಂಡಲೀಕನು ಕೂಡಲೇ ಕತ್ತಲಲ್ಲಿಯೇ ಬೇಗ ಬೇಗ ಮನೆಗೆ ಹಿಂದಿರುಗಿದ.
ಋ) ಹೊಂದಿಸಿ ಬರೆಯಿರಿ. (Match the following)
ಅ ಬ
ದಟ್ಟವಾದ ರಾಮೇಶ್ವರ ಕಾಡು
ತಾಯಿ ಕಾಡು ತಂದೆ
ಕಾಶಿ ವರ ರಾಮೇಶ್ವರ
ಭಗವಂತ ತಂದೆ ವರ
ಎ) ಬಹುವಚನಗಳನ್ನು ಬರೆಯಿರಿ. (Write the Plural)
ಹುಡುಗ = ಹುಡುಗರು ಕಾಡು = ಕಾಡುಗಳು
ತಾಯಿ = ತಾಯಂದಿರು ಪಾದ = ಪಾದಗಳು