Yana Kuritondu Patra kannada notes grade VI about a famous place called Yaana in Karnataka. 6th Standard Yana Kuritondu Patra Kannada Notes Question Answer Mcq notes.

Salim, Ragini, Jennifer, and Shankar used to go together every day to their friend Raju’s house to study. Salim suggested that they should play a game first and study later, but no one agreed. Just then, Raju’s mother told them not to make any noise because Raju’s father was working on the computer.

Ragini said, “Didn’t Padmini Madam teach us about writing a special letter on the computer? Let us practice that.” Then Sundar Uncle came out of the room and said that he would explain to everyone what an email is and how it is sent. He said that email means electronic mail. Just as a letter has an address, an email also has an email address. It also has a secret code called a password. This secret code should be known only to the owner of that email address.

All of them together wrote an email to Padmini Madam about Yana. In it, they described how Yana is, wrote about the Mohini Shikhara, its height, and also mentioned the legend of Yana.

Yana is a unique and scenic rock formation located in the dense forests of Uttara Kannada, Karnataka.
It is famous for its two massive black limestone peaks called Mohini Shikhara and Bhairaveshwara Shikhara.
Yana is surrounded by lush greenery and is part of the Western Ghats region.
The place is also known for the Bhairaveshwara Temple situated at the base of the rock formations.
Yana is a popular destination for nature lovers, trekkers, and pilgrims due to its natural beauty and mythological importance.

ಯಾಣ ಕುರಿತೊ೦ದು ಪತ್ರ

ಅ. ಇಲ್ಲಿರುವ ಪದಗಳನ್ನು ಬಳಸಿ ಸೂಕ್ತವಾದುದನ್ನು ಬಿಟ್ಟಸ್ಥಳದಲಿ ತು೦ಬಿರಿ. (Fill in the blanks)

(ಪದ್ಮನಿ, ರಾಗಿಣಿ ಮತ್ತು ಜೆನಿಫರ್‌, ಗುಪ್ತ, ರಾಜು, ದ೦ತ)

೧. ಅದೊ೦ದು ಭಾನುವಾರ ಎಲ್ಲರೂ ರಾಜುವಿನ ಮನೆಗೆ ಬ೦ದರು.

೨. ʼಇ ಮೇಲ್‌ʼ ತೆರೆಯಲು ಗುಪ್ತ ಸ೦ಕೇತದ ಅಗತ್ಯವಿದೆ.

೩.  ವಿಶೇಷ ಪತ್ರ ತಯಾರಿಸಲು ಹೇಳಿದ್ದು ಪದ್ಮಿನಿ ಮೇಡಂ.

೪. ಯಾಣದ ಕುರಿತಾಗಿ ಒಂದು ದಂತ ಕಥೆಯಿದೆ.

೫. ಯಾಣದ ಚಿತ್ರಗಳನ್ನು ಅದರ ವಿವರಗಳನ್ನು ರಾಗಿಣಿ ಮತ್ತು ಜೆನಿಫರ್ ಓದಿದರು. 

ಆ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Write the odd one out)

೧. ಕಾಗದ, ಪತ್ರ, ದೂರವಾಣಿ, ಓಲೆ

೨. ಹೆಬ್ಬಂಡೆ, ಹಿರಿದು ಬಂಡೆ, ಕಿರಿದು ಬಂಡೆ, ದೊಡ್ಡ ಬಂಡೆ

೩. ಸಂತೋಷ, ದುಃಖ, ಆನಂದ, ಸುಖ

೪. ಸಂಪತ್ತು, ಆಪತ್ತು, ಧನ, ಐಶ್ವಯ೯

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ರಾಜುವಿನ ಮನೆಗೆ ಯಾರು ಯಾರು ಬಂದರು?
ಉ. ಸಲೀಂ, ರಾಗಿಣಿ, ಜೆನಿಫರ್‌ ಮತ್ತು ಶಂಕರ್‌ ರಾಜುವಿನ ಮನೆಗೆ ಬಂದರು.

೨. ಇ-ಅಂಚೆ ಎಂದರೇನು?
ಉ. ಇ ಅಂದರೆ ಎಲೆಕ್ಟ್ರಾನಿಕ್‌ ಮೇಲ್‌.

೩. ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ?
ಉ. ಯಾಣದ ಭೈರವೇಶ್ವರ ಶಿಖರ ಉಕ್ಕಿನ ಕೋಟೆಯಂತಿದೆ.

೪. ಯಾಣದ ಕಲ್ಲು ಯಾವುದರಿಂದ ಉತ್ಪತ್ತಿಯಾಗಿದೆ?
ಉ. ಯಾಣದ ಕಲ್ಲು ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾಗಿದೆ.

೫. ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ?
ಉ. ಯಾಣದಲ್ಲಿ ಭೈರವೇಶ್ವರ ದೇವರ ಉತ್ಸವ ನಡೆಯುತ್ತದೆ.

ಈ. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two -three sentences)

೧. ಸುಂದರ್‌ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಏಕೆ ಹೇಳಿದರು?
ಉ. ಗುಪ್ತ ಸಂಕೇತವು ಇನ್ನೊಬ್ಬರಿಗೆ ಗೊತ್ತಾಗಬಾರದು. ಗೊತ್ತಾದರೆ ಯಾರಾದರೂ ಪತ್ರ ಓದಬಹುದು ಮತ್ತು ಬರೆಯಬಹುದು. ಅದು ತಪ್ಪು ಎಂದು ಸುಂದರ್‌ , ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದರು.

೨. ಯಾಣದ ಕುರಿತಾಗಿ ಇರುವ ಒಂದು ದಂತಕಥೆಯನ್ನು ಬರೆಯಿರಿ.
ಉ. ಪುರಾಣಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದನು. ಈತನ ಉಪಟಳ ಸಹಿಸಲು ಸಾಧ್ಯವಾಗದೇ ಶಿವನು ಅವನನ್ನು ಸುಟ್ಟು ಬೂದಿಮಾಡಿದ. ಈ ಬೂದಿಯಿಂದ ದೊಡ್ಡ ಶಿಖರ ಬೆಳೆಯಿತು ಎಂಬುದು ದಂತ ಕಥೆ.

೩. ಯಾವ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ?
ಉ. ಯಾಣದ ಕಾಡಿನ ಮಧ್ಯೆ ಇರುವ ಮೋಹಿನಿ ಶಿಖರ. ಇದು ೩೦೦ ಅಡಿ ಎತ್ತರವಿದೆ. ಸ್ವಲ್ಪ ಮುಂದೆ, ೩೯೦ ಅಡಿ ಎತ್ತರದ ಭೈರವೇಶ್ವರ ಶಿಖರ ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿದೆ. ಪ್ರಕೃತಿ ಮಾತೆಯೆ ಈ ಆಕೃತಿಗಳು ನೋಡುಗರನ್ನು ಚಕಿತಗೊಳಿಸುತ್ತದೆ.

ಉ. ಸಂಧಿ ಬಿಡಿಸಿ, ಸಂಧಿಯನ್ನು ಹೆಸರಿಸಿರಿ. (Split the word and name the Sandhi)

೧. ಭಸ್ಮಾಸುರ = ಭಸ್ಮ + ಅಸುರ (ಸುವಣ೯ಧೀಘ೯ಸಂಧಿ)
೨. ಭೈರವೇಶ್ವರ = ಭೈರವ + ಈಶ್ವರ (ಗುಣಸಂಧಿ)
೩. ಏಕೈಕ = ಏಕ + ಏಕ (ವೃಧ್ದಿಸಂಧಿ)
೪. ಇತ್ಯಾದಿ = ಇತಿ + ಆದಿ (ಯಣ್ ಸಂಧಿ)
೫. ಸೂಯೋ೯ದಯ = ಸೂಯ೯ + ಉದಯ (ಗುಣ ಸಂಧಿ)

ಊ. ನಿಮ್ಮೂರಿನ ರಸ್ತೆಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ ಸಂಭಂಧಿಸಿದ ಕಛೇರಿಗೆ ಒಂದು ಪತ್ರ ಬರೆಯಿರಿ. (Write a letter to the concerned office requesting them to install street lights on the road in your village)

ಇಂದ,
ರಮೇಶ ನಾಯಕ,
೩ನೇ ಮುಖ್ಯ ರಸ್ತೆ, ೧ನೇ ಅಡ್ಡ ರಸ್ತೆ,
ಗಿರಿನಗರ,
ಬೆಂಗಳೂರು – ೫೬೦೦೭೮

ಇವರಿಗೆ, 
ನಿದೇ೯ಶಕರು,
ಮಹಾನಗರ ಪಾಲಿಕೆ,
ಗಿರಿನಗರ,
ಬೆಂಗಳೂರು – ೫೬೦೦೭೮

ಮಾನ್ಯರೇ,

         ವಿಷಯ: ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ

ಗಿರಿನಗರದ ೩ನೇ ಮುಖ್ಯ ರಸ್ತೆ, ೧ನೇ ಅಡ್ಡ ರಸ್ತೆಯಲ್ಲಿ ಹತ್ತು ಬೀದಿ ದೀಪಗಳ ಕಂವಗಳಿವೆ. ಆದರೆ ಯಾವುದಕ್ಕೂ ದೀಪವೂ ಇಲ್ಲ. ರಾತ್ರಿ ಜನ ಓಡಾಡಲು ತುಂಬ ಕಷ್ಟವಾಗಿದೆ. ರಸ್ತೆ ಕೂಡ ಸರಿಯಿಲ್ಲ. ದಯವಿಟ್ಟು ತಕ್ಷಣ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ವಂದನಗಳೊಂದಿಗೆ,

                                                                       ಇಂತಿ  ತಮ್ಮ ವಿಶ್ವಾಸಿ,
(ರಮೇಶ ನಾಯಕ)

Click here to download yana kuritu ondu patra notes download