Samajika pidugugalu means social issues. Social by nature, humans are inherently communal beings. He follows certain good and bad customs while living in society. Social ills have a bad effect on society—E.g. Alcohol, casteism and racism, female foeticide, the devadasi system, and dowry, etc. The main causes of social ills are unemployment, poverty, lack of education, superstitions, sexism, and lack of proper guidance. Samajika pidugugalu is explained below in kannada.

ಸಾಮಾಜಿಕ ಪಿಡುಗುಗಳು

ಮನುಷ್ಯ ಒಂದು ಸಾಮಾಜಿಕ ಜೀವಿ. ಅವನು ಸಮಾಜದಲ್ಲಿ ಬದುಕುವಾಗ ಕೆಲವು ಒಳ್ಳೆಯ ಮತ್ತು ಕೆಟ್ಟ ಪದ್ಧತಿಗಳನ್ನು ಪಾಲಿಸುತ್ತಾನೆ. ಸಾಮಾಜಿಕ ಪಿಡುಗುಗಳು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಉದಾ: ಮಧ್ಯಪಾನ, ಜಾತಿಯತೇ ಮತ್ತು ವರ್ಣಭೇದ, ಹೆಣ್ಣು ಭ್ರೂಣ ಹತ್ಯೆ, ದೇವದಾಸಿ ಪದ್ಧತಿ ಮತ್ತು ವರದಕ್ಷಿಣೆ ಇತ್ಯಾದಿ. ಸಾಮಾಜಿಕ ಪಿಡುಗುಗಳಿಗೆ ಮುಖ್ಯ ಕಾರಣಗಳು ನಿರುದ್ಯೋಗ, ಬಡತನ, ವಿದ್ಯೆಯ ಕೊರತೆ, ಮೂಢ ನಂಬಿಕೆಗಳು, ಲಿಂಗಭೇದ ನೀತಿ, ಸರಿಯಾದ ಮಾರ್ಗ ದರ್ಶನ ದೊರಕದಿರುವುದು.

ಹೆಣ್ಣು ಮಕ್ಕಳ ಮೇಲೆ ಶೋಷಣೆ :

70% ರಷ್ಟು ಹೆಂಗಸರು ಭಾರತದಲ್ಲಿ ಶೋಷಣೆಗೊಳಗಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಹೊಡೆಯುವುದು, ಅತ್ಯಾಚಾರ, ವರದಕ್ಷಿಣೆ, ಬೆಂಕಿಯಲ್ಲಿ ಸುಡುವುದು ಇವೆಲ್ಲಾ ಹೆಣ್ಣು ಮಕ್ಕಳ ಮೇಲೆ ಆಗುವ ಶೋಷಣೆಗೆ ಉದಾಹರಣೆಯಾಗಿದೆ.
ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದಿಂದ ವಂಚಿತಗೊಳಿಸುವುದು. ಇದು ದೇಶದ ಪ್ರಗತಿಯ ಮೇಲೆ ಪರಿಣಾಮ ಬೀರುವುದಲ್ಲವೇ, ಒಂದು ಕುಟುಂಬದ ಅಭಿವೃದ್ಧಿಯನ್ನು ತಡೆಗಟ್ಟುತ್ತದೆ. ದೇಶದ ಹಲವು ರಾಜ್ಯಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಮಧ್ಯಪಾನ ಹಾಗೂ ಧೂಮಪಾನ

ಇದೊಂದು ಮಾರಕ ದುಶ್ಚಟ . ಮಧ್ಯಪಾನ ಮಾಡುವವನು ತಾನೊಬ್ಬನೇ ದುರ್ಗತಿ ಒಳಗಾಗುವುದಲ್ಲದೇ ತನ್ನ ಸಂಸಾರವನ್ನು ಬೀದಿಗೆ ತರುತ್ತಾನೆ.

ವರದಕ್ಷಿಣೆ:

ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಮನೆಯವರು ಗಂಡಿನ ಮನೆಯವರಿಗೆ ಉಡುಗೊರೆಯ ರೂಪದಲ್ಲಿ ಕಾರು, ಸೈಟ್ ,ಮನೆ, ಚಿನ್ನ ಮತ್ತು ಹಣವನ್ನು ಕೊಡುತ್ತಾರೆ. ಇದೇ ವರದಕ್ಷಿಣೆ. ವಧುವಿನ ಕಡೆಯವರು ವರದಕ್ಷಿಣೆಯನ್ನು ಕೊಡಲಾಗದ್ದಿದಾಗ ವರ ಮತ್ತು ಅವನ ಕುಟುಂಬದವರು ವಧುವಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ. ಈ ಪಿಡುಗಿನಿಂದಾಗಿ ಹಲವಾರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ:

ಹುಟ್ಟಿದ ತಕ್ಷಣ ಅಥವಾ ತಾಯಿ ಗರ್ಭದಲ್ಲಿರುವಾಗಲೇ ಹೆಣ್ಣು ಮಕ್ಕಳನ್ನು ಸಾಯಿಸುವುದಕ್ಕೆ ಹೆಣ್ಣು ಭ್ರೂಣ ಹತ್ಯೆ ಎಂದು ಕರೆಯುತ್ತಾರೆ. ಪುತ್ರ ಪ್ರಧಾನ ಪರಂಪರೆ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಭ್ರಷ್ಟಾಚಾರ:

ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳು ನಿಯಮ ಬಾಹಿರವಾಗಿ ಅಥವಾ ಅಪ್ರಮಾಣಿಕ ರೀತಿಯಿಂದ ಲಾಭ ತೆಗೆದುಕೊಂಡು ಕೆಲಸ ಮಾಡುವುದಕ್ಕೆ ಭ್ರಷ್ಟಾಚಾರವೆಂದು ಕರೆಯುತ್ತಾರೆ. ತಮ್ಮ ಅಧಿಕಾರವನ್ನು ಸ್ವಂತ ಉಪಯೋಗ ಕೈ ಬಳಸಿ ಕೊಳ್ಳುವುದು ಕೂಡಾ ಭ್ರಷ್ಟಾಚಾರ.

ನಾವು ಸಮಾಜವನ್ನು ಸಂಪೂರ್ಣವಾಗಿ ಪಿಡುಗು ರಹಿತ ಮಾಡಲಾಗದ್ದಿದರೂ ಕನಿಷ್ಠ ಪಕ್ಷ ಪಿಡುಗುಗಳನ್ನು ಕಡಿಮೆ ಮಾಡಬಹುದು.
ಪ್ರತಿಯೊಬ್ಬರಿಗೂ ಮೌಲ್ಯಾಧಾರಿತ ವಿದ್ಯಾಭ್ಯಾಸವನ್ನು ಒದಗಿಸಬೇಕು.
ಮಕ್ಕಳಲ್ಲಿ ಸಮಾನತೆಯ ಭಾವನೆಯನ್ನು ಬೆಳಸಬೇಕು.
ಜನರಲ್ಲಿ ಜಾಗೃತಿ ಎಬ್ಬಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು.
ಡ್ರಗ್ಸ, ಮಧ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು.
ದೇಶವನ್ನು ಪ್ರಗತಿಯ ಕಡೆ ಸಾಗಿಸಲು ನಾವು ಈ ಪಿಡುಗುಗಳಿಂದ ಮುಕ್ತಿಯನ್ನು ಪಡೆಯಬೇಕು.

ಸುಮನಾ ಶ್ರೀರಾಮ್

Click here to download Social issues Saamajika pidigugalu