Havyasagalu means hobbies. Havyasagalu are part of our life. A hobby is something we do in our free time, away from our daily work. These activities give us health and happiness. We do one thing or another from birth to death.
Hobbies change with age. These bring us peace, happiness, respect and more friends. They increase our mental strength.
Students’ hobbies include reading, writing, playing, collecting, watching, music, painting, acting and many other hobbies. They use their free time to develop knowledge in subjects like stories, poetry, novels, travel and essays. Children like to play and watch games. This hobby makes children strong and healthy.
“Collection”, this is a special hobby. Collecting coins and postage stamps. “Visit” this is visiting historical places, scenic natural parks and museums in their free time. Listening to music, playing it, and singing it makes our body and mind happy.
If we don’t have a hobby, our life will be wasted. Our time will be wasted. Our growth will be stunted. Therefore, good hobbies are necessary for everyone.
ಹವ್ಯಾಸ
ನಾವು ದಿನವೂ ಮಾಡುವ ಕೆಲಸದಿಂದ ಹೊರಬಂದು ನಮ್ಮ ಬಿಡುವಿನ ವೇಳೆಯಲ್ಲಿ ನಮಗೆ ಇಷ್ಟವಾಗಿ ಮಾಡುವ ಕೆಲಸವನ್ನು ಹವ್ಯಾಸ ಎನ್ನುತ್ತಾರೆ. ಈ ನಮ್ಮ ಚಟುವಟಿಕೆಗಳು ನಮಗೆ ಆರೋಗ್ಯ ಮತ್ತು ಸಂತೋಷವನ್ನು ಕೊಡುತ್ತದೆ. ನಾವು ಹುಟ್ಟಿನಿಂದ ಸಾಯುವವರೆಗೂ ಒಂದಲ್ಲೊಂದು ಕೆಲಸವನ್ನು ಮಾಡುತ್ತಿರುತ್ತೇವೆ.
ಹವ್ಯಾಸಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ. ಇವು ನಮಗೆ ನೆಮ್ಮದಿ, ಸಂತೋಷ, ಗೌರವ ಮತ್ತು ಹೆಚ್ಚು ಗೆಳೆಯರನ್ನು ತಂದು ಕೊಡುವದು. ನಮ್ಮ ಮನೋಶಕ್ತಿಯನ್ನು ಹೆಚ್ಚಿಸುವುದು.
ವಿದ್ಯಾರ್ಥಿಗಳ ಹವ್ಯಾಸವೆಂದರೆ ಓದುವದು, ಬರೆಯುವದು, ಆಡುವದು, ಸಂಗ್ರಹಣೆ, ವೀಕ್ಷಣೆ, ಸಂಗೀತ, ಚಿತ್ರಕಲೆ, ಅಭಿನಯ ಹೀಗೆ ಹಲವು ಹವ್ಯಾಸಗಳು. ಕಥೆ, ಕವನ, ಕಾದಂಬರಿ, ಪ್ರವಾಸ ಹಾಗೂ ಪ್ರಬಂಧ ಹೀಗೆ ಮೊದಲಾದ ವಿಷಯದಲ್ಲಿ ತಮ್ಮ ಬಿಡುವಿನ ಸಮಯವನ್ನು ಉಪಯೋಗಿಸಿ ಜ್ಞಾನವನ್ನು ಬೆಳೆಸಿಕೊಳ್ಳುವರು. ಮಕ್ಕಳು ಆಡಲು ಮತ್ತು ಆಟವನ್ನು ನೋಡಲು ಇಷ್ಟ ಪಡುತ್ತಾರೆ. ಈ ಹವ್ಯಾಸವು ಮಕ್ಕಳನ್ನು ಸದೃಢರು ಮತ್ತು ಆರೋಗ್ಯವಂತರನ್ನಾಗಿ ಮಾಡುತ್ತದೆ.
“ಸಂಗ್ರಹ”, ಇದು ವಿಶೇಷವಾದ ಹವ್ಯಾಸ. ನಾಣ್ಯಗಳನ್ನು ಮತ್ತು ಅಂಚೆ ಚೀಟಿ ಸಂಗ್ರಹಿಸುವುದು. “ವೀಕ್ಷಣೆ” ಇದು ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಸ್ಥಳಗಳನ್ನು, ರಮಣೀಯ ನಿಸರ್ಗಧಾಮಗಳನ್ನು, ಸಂಗ್ರಹಾಲಯಗಳನ್ನು ನೋಡುವುದು. ಸಂಗೀತ ಕೇಳುವುದರಿಂದ, ನುಡಿಸುವುದರಿಂದ, ಹಾಡುವದರಿಂದ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ.
ಹವ್ಯಾಸವಿಲ್ಲದಿದ್ದರೆ ನಮ್ಮ ಜೀವನ ವ್ಯರ್ಥವಾಗುವದು. ನಮ್ಮ ಜೀವನದ ಸಮಯ ವ್ಯರ್ಥವಾಗುವುದು. ನಮ್ಮ ಬೆಳವಣಿಗೆಯಲ್ಲಿ ಕುಂಟಿತವಾಗುವುದು. ಹಾಗಾಗಿ ಉತ್ತಮ ಹವ್ಯಾಸಗಳು ಪ್ರತಿಯೊಬ್ಬರಿಗೂ ಅವಶ್ಯಕ.