Annadaana grade 7th kannada lesson is about rice donation. Annadaana written by Chandrashekhar Kambar. A poor mother and her son survived by collecting leftover food. The mother often gave most of it to the needy, even going hungry herself. One day, her son asked why she gave away food instead of saving it. She replied that food donation (Annadaana) is sacred, but the boy didn’t understand and went in search of Lord Shiva to learn more.
In the forest, a kind hunter gave the boy fruits, milk, and shelter, but was later killed by a tiger along with his wife. When the boy reached Shiva, he asked about the value of food donation. Shiva told him that true charity brings great rewards, and explained that the hunter had now been reborn as a prince for his selfless act, while his wife, who refused to give, was reborn as a pig. Annadaana is important in life.
Through this, the boy realized the deep merit of Annadaana, and how even a simple act of feeding someone in need can lead to great blessings.

ಅನ್ನದಾನ
I. ಪದಗಳ ಅರ್ಥ. (Word Meaning)
| ಅಡವಿ = ಕಾಡು, ಅರಣ್ಯ ಬೇಡ = ಬೇಟೆಗಾರ ಹಡೆ = ಹೆರಿಗೆಯಾಗು, ಜನ್ಮ ನೀಡು ದರ್ಬಾರು = ಅಧಿಕಾರ ನಡೆಸುವಿಕೆ ವರ = ಮದುವೆಯಾಗುವ ಗಂಡು | ದಣಿವು = ಆಯಾಸ ಮಂದಿ = ಜನ ಹುತ್ತ = ಹಾವಿನ ವಾಸಸ್ಥಾನ ಧಾರೆ = ಒಂದೇ ಸಮನೆ ನೀರು ಸುರಿಸುವಿಕೆ ಸೀದಾ = ನೇರವಾಗಿ | ದಾನ = ಕೊಡುಗೆ ಸರ್ಪ = ಹಾವು, ಉರಗ ಕೈಲಾಸ = ಶಿವನ ವಾಸಸ್ಥಳ ಭಿಕ್ಷೆ = ಬೇಡುವದು ಹಳಹಳಿಸು = ಉಮ್ಮಡಿಸು, ದುಃಖಿತನಾಗು |
II. ಪ್ರಶ್ನೆಗಳು (Questions)
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Answer the following in one sentence)
೧. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು?
ಉ: ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ತಾಯಿಯು ಅನ್ನದಾನವನ್ನು ಬಿಟ್ಟಿದ್ದರೆ ತಾವು ಶ್ರೀಮಂತರಾಗಬಹುದಿತ್ತು ಎಂಬ ಯೋಚನೆ ಬಂದಿತು.
೨. ತಾಯಿಯು ಅನ್ನದಾನದ ಬಗ್ಗೆ ಮಗನಿಗೆ ಏನೆಂದು ಹೇಳಿದಳು?
ಉ: ತಾಯಿಯು ಅನ್ನದಾನದ ಬಗ್ಗೆ ಮಗನಿಗೆ “ಮಗು ದಾನಗಳಲ್ಲಿ ಅನ್ನದಾನ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂತಹದ್ದು.”
೩. ತಾಯಿ ಮಗನನ್ನು ಶಿವನ ಬಳಿ ಏಕೆ ಕಳುಹಿಸಿದಳು?
ಉ: ಅನ್ನದಾನದ ಮಹಿಮೆ ತಿಳಿಯಲು ತಾಯಿ ಮಗನನ್ನು ಶಿವನ ಬಳಿ ಕಳುಹಿಸಿದಳು.
೪. ಹುಡುಗನು ನೇಪಾಳ ದೇಶಕ್ಕೆ ಏಕೆ ಹೋದನು?
ಉ: ಹುಡುಗನು ಶಿವನ ಕೊಟ್ಟ ಪ್ರಸಾದವನ್ನು ನೇಪಾಳ ದೇಶದ ರಾಜನ ಹೆಂಡತಿಗೆ ಕೊಡಲು ಹೋದನು.
೫. ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದ್ದು ಏಕೆ?
ಉ: ಮನೆಗೆ ಬಂದ ಹುಡುಗನಿಗೆ ಹಣ್ಣು, ಹಂಪಲು ಮತ್ತು ಹಾಲನ್ನು ನೀಡದೆ ಇದ್ದ ಕಾರಣ ಬೇಡನ ಹೆಂಡತಿಯು ಹಂದಿಯಾಗಿ ಹುಟ್ಟಿದಳು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer the following in two – three sentences)
೧. ತಾಯಿ ಒಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?
ಉ: ತಾಯಿ ಅವರಿವರ ಮನೆಯ ಕಸಮುಸುರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ ಉಳಿದುದ್ದನ್ನು ಇಬ್ಬರು ತಿನ್ನುತ್ತಿದ್ದರು. ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನು ದಾನ ಮಾಡುತ್ತಾ ಜೀವಿಸುತ್ತಿದ್ದಳು.
೨. ಮಗನು ತಾಯಿಯ ಅನ್ನದಾನವನ್ನು ಕಂಡು ಏನೆಂದು ಹೇಳಿದನು?
ಉ: ಮಗನು ತಾಯಿಯ ಅನ್ನದಾನವನ್ನು ಕಂಡು “ತಾಯಿ, ಇದೇಕೆ ಹೀಗೆ ಅನ್ನದಾನ ಮಾಡುತ್ತಿ? ಒಂದೊಂದು ದಿನ ನೀನೆ ಉಪವಾಸವಿದ್ದು, ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ವ? ಹೇಳು” ಎಂದು ಕೇಳಿದನು.
೩. ಬೇಡನು ಹುಡುಗನಿಗೆ ಏನೆಂದು ಹೇಳಿ ತನ್ನ ಗುಡಿಸಲಿಗೆ ಕರೆದುಕೊಂಡು ಹೋದನು?
ಉ: ಬೇಡನು ಹುಡುಗನಿಗೆ “ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳು ಇರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಿಲಿನಲ್ಲಿದ್ದು ನಾಳೆ ಹೋದಿಯಂತೆ ಬಾ” ಎಂದು ಹೇಳಿ ಕರೆದುಕೊಂಡು ಹೋದನು.
೪. ಬೇಡನು ಹುಡುಗನನ್ನು ಯಾವ ರೀತಿ ಉಪಚರಿಸಿದನು?
ಉ: ಬೇಡನು ಹುಡುಗನಿಗೆ ತನ್ನ ಪಾಲಿನ ಹಣ್ಣು ಹಾಲು ಕೊಟ್ಟನು. “ಹುಡುಗ ದಣಿದಿದ್ದೀಯಪ್ಪ. ಮಲಗು” ಎಂದು ಕರುಣೆಯಿಂದ ಹುಡುಗನನ್ನು ಉಪಚರಿಸಿದನು. ಹಾಸಿಗೆ ಹಾಸಿ ಮಲಗಿಸಿದನು.
೫. ಸರ್ಪ ಯಾವ ಕಷ್ಟದಲ್ಲಿ ಸಿಲುಕಿತ್ತು?ಆ ಕಷ್ಟದಿಂದ ಅದು ಹೇಗೆ ಪಾರಾಯಿತು?
ಉ: ಸರ್ಪ ಹುತ್ತದ ಒಳಗೂ ಹೋಗದೆ ಹೊರಗೂ ಬರದೇ ಸಿಲುಕಿತ್ತು. ಆ ಕಷ್ಟದಿಂದ ಅದು ತನ್ನ ನೆತ್ತಿಯ ಮೇಲಿನ ರತ್ನವನ್ನು ಯೋಗ್ಯನಾದ ಹುಡುಗನಿಗೆ ದಾನ ಮಾಡಿ ಪಾರಾಯಿತು.
೬. ಶಿವನು ಹುಡುಗನಿಗೆ ಏನೆಂದು ಹೇಳಿ ಕಳುಹಿಸಿದನು?
ಉ:ಶಿವನು ಹುಡುಗನಿಗೆ “ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆಂಬುದನ್ನು ಹೇಳುತ್ತದೆ” ಎಂದು ಹೇಳಿ ಕಳುಹಿಸಿದನು.
ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು – ಏಳು ವಾಕ್ಯಗಳಲ್ಲಿ ಉತ್ತರಿಸಿರಿ. ( Answer the following in six – seven sentences)
೧. ಬೇಡ ಮತ್ತು ಆತನ ಹೆಂಡತಿ ಹುಲಿಯ ಬಾಯಿಗೆ ಹೇಗೆ ತುತ್ತಾದರು?
ಉ: ಹುಡುಗನು ಶಿವನನ್ನು ಹುಡುಕಿ ಕೈಲಾಸಕ್ಕೆ ಹೋಗುವಾಗ ದಟ್ಟ ಕಾಡಿನಲ್ಲಿ ಸಾಗುತ್ತಿದ್ದನು. ಸಂಜೆಯಾಯಿತು. ಆಗ ಒಬ್ಬ ಬೇಡನು ಇವನನ್ನು ನೋಡಿ ತನ್ನ ಗುಡಿಸಲಿಗೆ ಕರೆದನು. ಅಲ್ಲಿ ಹುಡುಗನಿಗೆ ಹಾಲು, ಹಣ್ಣು ಕೊಟ್ಟು ಉಪಚರಿಸಿ ಹಾಸಿಗೆ ಹಾಸಿ ಮಲಗಿಸಿದನು. ಆದರೆ ಬೇಡನಿಗೆ ಜಾಗವಿಲ್ಲದ ಕಾರಣ ಅವನು ಅರ್ಧ ಹೊರಗೂ ಅರ್ಧ ಒಳಗೂ ಕಾಲು ಚಾಚಿ ಬಾಗಿಲಲ್ಲಿ ಮಲಗಿಕೊಂಡನು. ರಾತ್ರಿ ಹಸಿದ ಹುಲಿಯು ಬೇಡನನ್ನು ನೋಡಿ ಅವನನ್ನು ಕೊಂದು ತಿಂದು ಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನು ತಿಂದು ಹಾಕಿತು.
೨. ಹುಡುಗನು ಶಿವನ ಬಳಿ ಕೇಳಿದ ಪ್ರಶ್ನೆಗಳಾವುವು? ಅದಕ್ಕೆ ಶಿವನು ನೀಡಿದ ಉತ್ತರಗಳೇನು?
ಉ: ಹುಡುಗನು ಶಿವನ ಬಳಿ ಶಂಭು ಅನ್ನದಾನದ ಪುಣ್ಯ ಏನು ಹೇಳಬೇಕು ಎಂದು ಕೇಳಿದನು. ಅದಕ್ಕೆ
ಶಿವನು ಹುಡುಗನಿಗೆ “ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆಂಬುದನ್ನು ಹೇಳುತ್ತದೆ” ಎಂದು ಹೇಳಿದನು. ರಾಜನ ಕೆರೆಯಲ್ಲಿ ನೀರು ತುಂಬದಿರುವ ಕಾರಣ ಕೇಳಿದಾಗ, ಶಿವನು ರಾಜನಿಗೆ ಬೆಳೆದ ಮಗಳಿದ್ದಾಳೆ. ಅವಳನ್ನು ಯೋಗ್ಯವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ ಎಂದನು. ಹಾಗೆ ಕುಂಟನ ಕಾಲು ಏಕೆ ಹೋಗಿವೆ ಎಂದು ಹುಡುಗ ಕೇಳಿದನು. ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ ಎಂದು ಶಿವನು ತಿಳಿಸಿದನು. ನಂತರ ಸರ್ಪ ಒಂದು ಹುತ್ತದ ಒಳಗೂ ಹೊರಗೂ ಹೋಗದೆ ಬರಲಾರದೆ ಸಿಕ್ಕಿಕೊಂಡಿದೆಯಲ್ಲ ಏನು ಕಾರಣ ಎಂದು ಹುಡುಗ ಪ್ರಶ್ನಿಸಿದನು. ಶಿವ ಹುಡುಗನಿಗೆ ಆ ಸರ್ಪದ ನೆತ್ತಿಯ ರತ್ನವನ್ನು ಯಾರಾದರೂ ಯೋಗ್ಯನಿಗೆ ದಾನ ಮಾಡಿದಲ್ಲಿ ಅದು ಸರಿದಾಡಬಹುದು ಎಂದು ತಿಳಿಸಿದನು. ಈ ರೀತಿ ಹುಡುಗನ ಪ್ರಶ್ನೆಗೆ ಶಿವನು ಉತ್ತರ ನೀಡಿದನು.
೩. ಮಗು ಹುಡುಗನಿಗೆ ಅನ್ನದಾನದ ಮಹತ್ವವನ್ನು ಹೇಗೆ ತಿಳಿಸಿಕೊಟ್ಟಿತು?
ಉ: “ಅಯ್ಯಾ, ಶಿವನನ್ನು ಕಾಣುವುದಕ್ಕೆ ಹೊರಟಿದ್ದಿ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಿ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಲಿಗೆ ಕರೆದು ಹಣ್ಣು, ಹಾಲು ಕೊಟ್ಟಿದ್ದು ನೆನಪಿದೆಯೇ ಎಂದು ಮಗು ಕೇಳಿದಾಗ, ಹೌದು ಎಂದ ಹುಡುಗ. ಹಾಗೇ ಮಾಡಿದ ಬೇಡ ನಾನೇ. ಅಂದು ನನ್ನನ್ನು ನನ್ನ ಹೆಂಡತಿಯನ್ನು ಹುಲಿ ತಿಂದಿತು. ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಕೊಡಲು ಒಪ್ಪದಿದ್ದಕ್ಕೆ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು ಎಂದು ಮಗು ಹುಡುಗನಿಗೆ ಅನ್ನದಾನದ ಮಹತ್ವವನ್ನು ಹೇಳಿತು.
ಈ) ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ. (Who told whom)
೧. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ.
ಉ: ಈ ಮಾತನ್ನು ಹುಡುಗನ ತಾಯಿ ಹುಡುಗನಿಗೆ ಹೇಳಿದಳು.
೨. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು.
ಉ: ಈ ಮಾತನ್ನು ಬೇಡನ ಹೆಂಡತಿ ಬೇಡನಿಗೆ ಹೇಳಿದಳು
೩. ನಿನಗಿಂತ ಯೋಗ್ಯವರ ಇನ್ನಾರಿದ್ದಾರೆ! ಬಾ.
ಉ: ಈ ಮಾತನ್ನು ತಲೆ ಮೇಲೆ ಕೈಹೊತ್ತು ಕೂತಿದ್ದ ರಾಜ ಹುಡುಗನಿಗೆ ಹೇಳಿದನು.
III. ಭಾಷಾಭ್ಯಾಸ
ಅ) ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ಅಲ್ಲಿಗೊಬ್ಬ = ಅಲ್ಲಿಗೆ +ಒಬ್ಬ
ಆಗಲೆಂದು = ಆಗಲಿ + ಒಂದು
ಸರ್ಪವಿತ್ತು = ಸರ್ಪ + ಇತ್ತು
ಕೆರೆಯಲ್ಲಿ = ಕೆರೆ + ಅಲ್ಲಿ
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಶ್ರೀಮಂತ X ಬಡವ ಬೆಳಕು X ಕತ್ತಲು
ಕರುಣೆ X ನಿಷ್ಕರುಣೆ ಅನ್ಯಾಯ X ನ್ಯಾಯ
ಹೊರಗೆ X ಒಳಗೆ ಯೋಗ್ಯ X ಅಯೋಗ್ಯ
ವಿದ್ಯೆ X ಅವಿದ್ಯೆ ಸುಖ X ದುಃಖ
ಇ) ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ಅನ್ನದಾನ: ದಾನಗಳಲ್ಲಿ ಮಹಾದಾನ ಅನ್ನದಾನ.
ಪುಣ್ಯ: ಒಳ್ಳೆಯ ಕೆಲಸಕ್ಕೆ ಯಾವಾಗಲೂ ಪುಣ್ಯ ಸಿಗುತ್ತದೆ.
ಪ್ರಸಾದ: ದೇವಾಲಯದಲ್ಲಿ ಪ್ರಸಾದ ಸಿಗುತ್ತದೆ.
ಕೈಲಾಸ: ಕೈಲಾಸ ಶಿವನ ವಾಸಸ್ಥಾನ.
ದಣಿವು: ಬೇಸಿಗೆಯಲ್ಲಿ ತುಂಬಾ ದಣಿವಾಗುತ್ತದೆ.
ಈ) ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ. (Write as per the instruction)
೧. ನನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ. (ಭೂತಕಾಲದಲ್ಲಿ ಬರೆಯಿರಿ)
ಉ: ನನಗೆ ತಿಳಿದ ವಿದ್ಯೆಯನ್ನು ಯೋಗ್ಯನಿಗೆ ದಾನ ಮಾಡಲು ಹೋದ ಕಾಲು ಬಂದವು.
೨. ಹುಡುಗನನ್ನು ನೋಡಿ ಬೇಡನಿಗೆ ಕರುಣೆ ಬಂತು. (ಬಹುವಚನದಲ್ಲಿ ಬರೆಯಿರಿ)
ಉ: ಹುಡುಗರನ್ನು ನೋಡಿ ಬೇಡನಿಗೆ ಕರುಣೆ ಬಂತು.
೩. ಖರ್ಚು ಮಾಡಿ ಕೋಟಿ ಒಂದು ಹಣ ಕೆರೆಕಟ್ಟಿಸಿದೆ (ವಾಕ್ಯವನ್ನು ಸರಿಪಡಿಸಿ ಬರೆಯಿರಿ)
ಉ: ಕೋಟಿ ಹಣ ಖರ್ಚು ಮಾಡಿ ಒಂದು ಕೆರೆಕಟ್ಟಿಸಿದೆ.
೪. ಹುಡುಗ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ)
ಉ: ಹುಡುಗ ಎಲ್ಲಿ ಹೊರಟಿರುವೆ?