Suntaragali grade VI kannada lesson tili kannada text book. Suntaragali means tornado. This poem is written by Kayyara Kinhanna Rai.
There is wind all around us, there is the sun that gives light, there are plants, trees, lakes, streams, rivers, and mountains. This is nature. The role of wind in this nature is very important. Living beings need air to breathe. This wind not only brings happiness and joy, but also brings fear, anxiety, and loss. Here, the poet, Kayyara Kinhanna Rai has emotionally and sonorously depicted the way a tornado blows and the consequences it causes.
I ಪದಗಳ ಅರ್ಥ
ಕಂಗು = ಅಡಿಕೆ
ಕಡಲು = ಸಮುದ್ರ
ಗುಲ್ಲು = ಗದ್ದಲ
ತಿರ್ರನೆ = ತಿರುತಿರುಗಿ ಸುರಳಿಯಂತೆ ಸುತ್ತುವದು
ತಾಪ = ಉಷ್ಣತೆ
ಧೂಳಿ = ಧೂಳು
ಪಾತಾಳ = ಭೂಮಿಯ ತಳದಲ್ಲಿರುವ ಲೋಕ
ಬಂತೈ = ಬಂದಿತು
ಬಾನು = ಆಕಾಶ
ಬೆಂಬತ್ತು = ಹಿಂಬಾಲಿಸಿ ಹೋಗು
ಬೊಬ್ಬೆ = ಜೋರಾಗಿ ಕೂಗು, ಚೀರು
ಶಾಪ = ಕೇಡು ಬಯಸಿ ಹೇಳುವ ಮಾತು
ಸುಂಟರಗಾಳಿ = ಸುತ್ತುತ್ತ ರಭಸವಾಗಿ ಬೀಸುವ ಗಾಳಿ
II ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧) ಸುಂಟರಗಾಳಿಯನ್ನು ನೋಡಿದ ಕವಿ ಏನೆಂದು ಅಚ್ಚರಿ ವ್ಯಕ್ತಪಡಿಸಿದರು?
ಉ: ಸುಂಟರಗಾಳಿಯನ್ನು ನೋಡಿದ ಕವಿ ಏನಿದು ಧೂಳಿ, ಓಹೋ ಗಾಳಿ ಎಂದು ಅಚ್ಚರಿ ವ್ಯಕ್ತಪಡಿಸಿದರು.
೨) ಸುಂಟರಗಾಳಿಗೆ ಕರು ಯಾವ ರೀತಿ ಬೆಚ್ಚಿತು?
ಉ: ಸುಂಟರಗಾಳಿಗೆ ಕರು ‘ ಅಂಬಾ ’ ರೀತಿ ಬೆಚ್ಚಿತು.
೩) ಸುಂಟರಗಾಳಿಗೆ ದನಗಳು ಯಾವ ರೀತಿ ಓಡಿದವು?
ಉ: ಸುಂಟರಗಾಳಿಗೆ ದನಗಳು ಕಣ್ಣು ಮುಚ್ಚುತ ಬಾಲವನ್ನು ಎತ್ತಿ ಓಡಿದವು.
೪) ಸುಂಟರಗಾಳಿಗೆ ಜನರು ಏಕೆ ಬೊಬ್ಬೆ ಇಟ್ಟರು?
ಉ: ಸುಂಟರಗಾಳಿಗೆ ಜನರು ಹುಲ್ಲು ಮತ್ತು ಹೆಂಚು ಹಾರಿದ್ದಕ್ಕೆ ಬೊಬ್ಬೆ ಇಟ್ಟರು.
೫) ಸುಂಟರಗಾಳಿಯ ಕೋಪ ಏಕೆ ಇರಬಹುದೆಂದು ಕವಿ ಭಾವಿಸುತ್ತಾರೆ?
ಉ: ಸುಂಟರಗಾಳಿಯ ಕೋಪ ಭೂಮಿಯ ತಾಪ ಹೆಚ್ಚಿದ್ದರಿಂದ ಇರಬಹುದೆಂದು ಕವಿ ಭಾವಿಸುತ್ತಾರೆ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧) ಸುಂಟರಗಾಳಿಯಿಂದ ಉಂಟಾದ ಪರಿಣಾಮಗಳೇನು?
ಉ: ತೆಂಗಿನ, ಕಂಗಿನ, ಬಾಳೆ, ತಾಳೆ, ಮಾವು, ಹಲಸುಗಳ ಮರಗಳು ತೂಗಿ ಬಾಗಿದವು. ದನಗಳು ಕಣ್ಣು ಮುಚ್ಚುತ ಬಾಲವನ್ನು ಎತ್ತಿ ಓಡಿದವು. ಕರು ‘ ಅಂಬಾ ’ ರೀತಿ ಬೆಚ್ಚಿತು. ಜನರು ಹುಲ್ಲು ಮತ್ತು ಹೆಂಚು ಹಾರಿದ್ದಕ್ಕೆ ಬೊಬ್ಬೆ ಇಟ್ಟರು. ಇವು ಸುಂಟರಗಾಳಿಯಿಂದ ಉಂಟಾದ ಪರಿಣಾಮಗಳು.
೨) ಸುಂಟರಗಾಳಿಯ ಬಗ್ಗೆ ಕವಿಯ ಮನದಲ್ಲಿ ಯಾವ ಯಾವ ಪ್ರಶ್ನೆಗಳು ಮೂಡಿದವು?
ಉ: ಏನಿದು ಕೋಪ? ಯಾರಲ್ಲಿ ಶಾಪ? ಹೆಚ್ಚಿದೆಯೇ ಭೂಮಿಯ ತಾಪ? ಸುಂಟರಗಾಳಿ ಕಡಲಲ್ಲಿ ಹುಟ್ಟಿತೇ? ಪಾತಾಳದ ಹೊಟ್ಟೆಯೊಳಗೆ ಅಡಗಿತ್ತೇ? ಎಂಬ ಪ್ರಶ್ನೆಗಳು ಕವಿಯ ಮನದಲ್ಲಿ ಮೂಡಿದವು.
೩) ಸುಂಟರಗಾಳಿಗೆ ಯಾವ ಯಾವ ಮರಗಳು ತೂಗಿ ಬಾಗಿದವು?
ಉ: ತೆಂಗಿನ ಮರಗಳು, ಕಂಗಿನ ಮರಗಳು, ಬಾಳೆ ಮರಗಳು, ತಾಳೆ ಮರಗಳು, ಮಾವಿನ ಮರಗಳು, ಹಲಸು ಮರಗಳು ತೂಗಿ ಬಾಗಿದವು.
III ಭಾಷಾಭ್ಯಾಸ
ಅ) ಇಲ್ಲಿರುವ ಪದಗಳನ್ನು ಬಳಸಿ ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ತೂಗು = ಉಯ್ಯಾಲೆಯು ತೂಗುತ್ತಿದೆ.
ಬೆಂಬತ್ತು = ಬೆಕ್ಕು ಇಲಿಯನ್ನು ಬೆಂಬತ್ತಿತ್ತು
ಶಾಪ = ರಾಮನಿಗೆ ಶಾಪವಿತ್ತು.
ಪಾತಾಳ = ಪಾತಾಳಲೋಕದಲ್ಲಿ ನಾಗದೇವತೆಗಳು ಇದ್ದಾರೆ.
ಕಡಲು = ಕಡಲು ತೀರ ಸುಂದರ.
ಆ) ‘ ಗಾಳಿ ‘ ಪದದಿಂದ ಅಂತ್ಯಗೊಳ್ಳುವ ಪದಗಳನ್ನು ಪಟ್ಟಿ ಮಾಡಿರಿ. ( List the words ending with the word ‘ gali ‘)
ಬಿರುಗಾಳಿ, ತಂಗಾಳಿ, ಸುಂಟರಗಾಳಿ, ಚಳಿಗಾಳಿ
ಇ) ಕೆಳಗೆ ನೀಡಿರುವ ಪದ್ಯಕ್ಕೆ ಚಿನ್ಹೆ ಹಾಕಿ ಬರೆಯಿರಿ. (Add the correct signs to the verse given below)
ಏನಿದು ಧೂಳಿ? ಓಹೋ ಗಾಳಿ
ಸುಳಿಯುತ ಬಂತೈ ಸುಂಟರಗಾಳಿ!
ಕಣ್ಣು ಮುಚ್ಚುತ ಬಾಲವನೆತ್ತಿ !
ದನ ಓಡುತ್ತಿದೆ ಎತ್ತಲೊ ಸುತ್ತಿ !
‘ ಅಂಬಾ ‘ ಎನುತ ಕರು ಬೆಂಬತ್ತಿ
ಏನಿದು ಧೂಳಿ ?
IV ಚಟುವಟಿಕೆಗಳು
ಇಲ್ಲಿರುವ ಚಿತ್ರಗಳನ್ನು ಗಮನಿಸಿ ನಿಮ್ಮ ಅನಿಸಿಕೆಗಳನ್ನು ಹೇಳಿರಿ. (Look at the pictures here and tell us what you think)
ಕಲ್ಪನಾ, ಶಹೀನಾ, ಲೂಸಿ, ಜಹೀರ, ಶಂಕರ, ಪೀಟರ್ ಎಲ್ಲರೂ ಶಾಲಾ ಬಯಲಿನಲ್ಲಿ ಸೇರಿದ್ದಾರೆ.
ಮಳೆ ಮೋಡ, ಧೋ ಧೋ ಮಳೆ! ಹರಿವ ನೀರು ಕಲ್ಪಿಸಿಕೊಂಡು, ಮಳೆ ಬಗ್ಗೆ ಎಲ್ಲರೂ ಒಂದೊಂದು ವಾಕ್ಯ ಬರೆಯಿರಿ.

ಕಲ್ಪನಾ: ಅಬ್ಬಾ! ಏನು ಸೆಕೆ! ಇವತ್ತು ಮಳೆ ಬಂದರೂ ಬರಬಹುದು.
ಪೀಟರ್: ಆಕಾಶದ ತುಂಬಾ ಮಳೆ ಮೋಡ. ನೋಡ್ರೋ! ಅಲ್ಲಿ ಅದೆಷ್ಟು ಕರಿಮೋಡ ಆಕಾಶ ತುಂಬಿದೆ.
ಶಹೀನಾ : ಮಳೆ ಬಂತು.
ಜಹೀರ : ಹೌದು, ಮಳೆ ಬಂತು.
ಶಂಕರ : ಮಳೆ ಜೋರಾಗಿ ಬರಬೇಕು.
ಲೂಸಿ : ಮಳೆ ಜೋರಾಗಿ ಬಂದರೆ ಆಡಲು ಆಗುವದಿಲ್ಲ.
ಶಂಕರ : ಹೌದು, ಮಳೆ ಜೋರಾಗಿ ಬಂದರೆ ಆಡಲು ಆಗುವದಿಲ್ಲ.
ಶಹೀನಾ : ನನಗೆ ಆಟ ಆಡಬೇಕು.
(ಖಾಲಿ ಬಿಟ್ಟ ಜಾಗದಲ್ಲಿ ಮಕ್ಕಳು ಒಂದೊಂದು ವಾಕ್ಯ ಬರೆಯಲಿ)
Click here to download suntaragali kannada lesson notes question and answer
One Response