Bakasurana Vadhe kannada notes 5th Standard notes pdf. Bakasurana Vadhe kannada lesson is about how Bheema killed demon Bakasura.

After escaping the wax palace, the Pandavas lived in disguise in Ekachakra. They discovered that the villagers were terrorized by a demon, Bakasura, who demanded a daily cartload of food and a human sacrifice. To help a kind Brahmin family, Kunti sent her son Bhima as the sacrifice. Bhima reached the hill and ate the demon’s food himself. An enraged Bakasura attacked, leading to a fierce battle. Bhima eventually killed the demon with his immense strength, freeing the village from fear and restoring peace to the people.

ಅರಗಿನ ಅರಮನೆಯಿಂದ ಪಾರಾದ ಪಾಂಡವರು ಏಕಚಕ್ರ ನಗರಿಯ ಅಗ್ರಹಾರದಲ್ಲಿ ವಾಸವಿದ್ದರು. ಅಲ್ಲಿನ ಜನರನ್ನು ಬಕಾಸುರನೆಂಬ ರಾಕ್ಷಸನು ಪೀಡಿಸುತ್ತಿದ್ದನು. ದಿನಕ್ಕೊಬ್ಬ ಮನುಷ್ಯ ಹಾಗೂ ಒಂದು ಬಂಡಿ ಆಹಾರ ಅವನಿಗೆ ಸಲ್ಲಬೇಕಿತ್ತು. ಬ್ರಾಹ್ಮಣ ಕುಟುಂಬವನ್ನು ರಕ್ಷಿಸಲು ಕುಂತಿ ತನ್ನ ಮಗ ಭೀಮನನ್ನು ರಾಕ್ಷಸನ ಬಳಿ ಕಳುಹಿಸಿದಳು. ಭೀಮನು ಬಕಾಸುರನ ಆಹಾರವನ್ನು ತಾನೇ ತಿಂದು ಅವನನ್ನು ಕೆರಳಿಸಿದನು. ನಂತರ ನಡೆದ ಘೋರ ಯುದ್ಧದಲ್ಲಿ ಭೀಮನು ಬಕಾಸುರನನ್ನು ಸಂಹರಿಸಿದನು. ಈ ಮೂಲಕ ಏಕಚಕ್ರ ನಗರಿಯ ಜನರು ರಾಕ್ಷಸನ ಭಯದಿಂದ ಮುಕ್ತರಾಗಿ ನೆಮ್ಮದಿಯಿಂದ ಬಾಳುವಂತಾಯಿತು.

ಬಕಾಸುರನ ವಧೆ

I. ಪದಗಳ ಅರ್ಥ (Word Meanings)

ಅರಗು – ಕರಗುವ ಒಂದು ಬಗೆಯ ದ್ರವ್ಯ
ಅಗ್ರಹಾರ – ಬ್ರಾಹ್ಮಣರು ವಾಸಿಸುವ ಕೇರಿ
ಒಪ್ಪಂದ – ಕರಾರು
ಕಾರು – ವಾಂತಿ ಮಾಡು
ಕುನ್ನಿ – ನಾಯಿಮರಿ
ಕೊಂಡಾಡು – ಹೊಗಳು
ನಸುಕು – ಬೆಳಗಿನ ಜಾವ
ನೆತ್ತಿಗೇರು – ಹೆಚ್ಚಾಗು
ಬಂಡಿ – ಗಾಡಿ, ಚಕ್ಕಡಿ
ಭಕ್ಷ್ಯ – ಸಿಹಿ ತಿಂಡಿ
ಭೋಜನ – ಊಟ
ಮೃಷ್ಟಾನ್ನ – ರಸಕವಳ
ಮಿಕ್ಕು – ಮೀರು, ಉಳಿದ
ಮುಷ್ಟಿ – ಮುಚ್ಚಿದ ಕೈ
ವಧೆ – ಸಂಹರಿಸು, ಕೊಲ್ಲು
ವೀರಗಚ್ಚೆ – ವೀರರು ಹಾಕುವ ಕಚ್ಚೆ
ಸರದಿ – ಪಾಳಿ, ಅನುಕ್ರಮ
ಹಂಗಿಸು – ಮೊದಲಿಸು, ಹೀಯಾಳಿಸು
ಹಿಂಡು – ಪೀಡಿಸು, ತೊಂದರೆ ಕೊಡು
ಹೋರಿ – ಎತ್ತು, ಗೂಳಿ, ವೃಷಭ

I ಪ್ರಶ್ನೆಗಳು (Questions)

ಅ) ಒಂದು ವಾಕ್ಯದಲ್ಲಿ ಉತ್ತರಿಸಿರಿ: (Answer the following in one sentence)

೧. ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ ಯಾವ ಊರಿಗೆ ಬಂದರು?
ಉ: ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ ಏಕಚಕ್ರ ಊರಿಗೆ ಬಂದರು.

೨. ಕುಂತಿ ಬ್ರಾಹ್ಮಣನ ಮನೆಗೆ ಏಕೆ ಹೋದಳು?
ಉ: ಬ್ರಾಹ್ಮಣರ ಮನೆಯ ಜೋರಾದ ಅಳುವ ಧ್ವನಿ ಕೇಳಿಸಿ, ಏನೆಂದು ಕೇಳಲು ಬ್ರಾಹ್ಮಣನ ಮನೆಗೆ ಕುಂತಿ ಹೋದಳು.

೩. ಪಾಂಡವರ ತಾಯಿಯ ಹೆಸರೇನು?
ಉ: ಪಾಂಡವರ ತಾಯಿಯ ಹೆಸರು ಕುಂತಿ.

೪. ಕುಂತಿ ಬ್ರಾಹ್ಮಣ ದಂಪತಿಗಳಿಗೆ ಏನೆಂದು ಸಮಾಧಾನ ಪಡಿಸಿದಳು?
ಉ: ಕುಂತಿಯು ತನ್ನ ಐವರು ಮಕ್ಕಳಲ್ಲಿ ಒಬ್ಬನನ್ನು ಆಹಾರಕ್ಕಾಗಿ ಕಳುಹಿಸುವದಾಗಿ ಹೇಳಿ ಸಮಾಧಾನ ಪಡಿಸಿದಳು.

೫. ಕುಂತಿ ಭೀಮನಿಗೆ ಏನೆಂದು ಹೇಳಿದಳು?
ಉ: ಕುಂತಿಯು ಭೀಮನಿಗೆ ಎಲ್ಲ ವಿಷಯ ತಿಳಿಸಿ ನಾಳೆ ಮೃಷ್ಟಾನ್ನ ಭೋಜನ, ಹೊಟ್ಟೆ ತುಂಬಾ ಉಣ್ಣು ಎಂದು ಹೇಳಿದಳು.

೬. ಭೀಮನು ರಾಕ್ಷಸನನ್ನು ಏನೆಂದು ಕೂಗಿ ಕರೆದನು?
ಉ: ಭೀಮನು ರಾಕ್ಷಸನನ್ನು “ಎಲವೋ ಕುನ್ನಿ, ಇಲ್ಲಾ ಬಾ, ತಿನ್ನು ಬಾ” ಎಂದು ಕರೆದನು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ (Answer the following in two – three sentences)

೧. ಏಕಚಕ್ರ ಊರಿನ ಜನರು ಯಾವಾಗಲೂ ಏಕೆ ಭಯಪಡುತ್ತಿದ್ದರು?
ಉ: ಏಕಚಕ್ರ ಊರಿನ ಸಮೀಪದ ಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷಸನಿದ್ದನು. ಅವನು ಊರಿನೊಳಗೆ ನುಗ್ಗಿ ಜನರನ್ನು ಕೊಂದು ತಿನ್ನುತ್ತಿದ್ದನು. ಆದ್ದರಿಂದ ಆ ಊರಿನ ಜನರು ಯಾವಾಗಲೂ ಭಯಪಡುತ್ತಿದ್ದರು.

೨. ಏಕಚಕ್ರ ಊರಿನ ಜನರು ರಾಕ್ಷಸನೊಂದಿಗೆ ಯಾವ ಒಪ್ಪಂದ ಮಾಡಿಕೊಂಡಿದ್ದರು?
ಉ: ಏಕಚಕ್ರ ಊರಿನ ಜನರು ರಾಕ್ಷಸನಿಗೆ ದಿನವೂ ಸರದಿಯಂತೆ ಒಬ್ಬ ಮನುಷ್ಯನು, ಒಂದು ಬಂಡಿ ಅನ್ನ, ಎರಡು ಎಮ್ಮೆಗಳನ್ನು ಕಳುಹಿಸಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು.

೩. ಭೀಮನು ರಾಕ್ಷಸನ ಬಳಿ ಯಾವ ಸಿದ್ಧತೆಗಳೊಂದಿಗೆ ಹೊರಟನು?
ಉ: ಭೀಮನು ಮುಂಜಾನೆ ಎದ್ದು, ಬೇಗ ಸ್ನಾನಾದಿಗಳನ್ನು ಮಾಡಿ ವೀರಗಚ್ಚೆ ಹಾಕಿದನು. ಬಂಡಿಯಲ್ಲಿರುವ ಬಗೆಬಗೆಯ ಆಹಾರವನ್ನು, ಮೊಸರು, ಮಜ್ಜಿಗೆ, ಪಾಯಸದ ಗಡಿಗೆಗಳನ್ನು ರಾಕ್ಷಸನ ಬಳಿಗೆ ಹೊರಟನು.

೪. ರಾಕ್ಷಸನ ಬಳಿಗೆ ಹೊರಟ ಭೀಮನು ತನ್ನ ಹಸಿವನ್ನು ಹೇಗೆ ನೀಗಿಸಿಕೊಂಡನು?
ಉ: ರಾಕ್ಷಸನ ಬಳಿಗೆ ಹೋಗುವಾಗ ಭೀಮನಿಗೆ ಅಡುಗೆಯ ಸುವಾಸನೆ ಹಸಿವನ್ನು ಕೆರಳಿಸಿತು. ಒಂದೊಂದಾಗಿ ಭಕ್ಷ್ಯಗಳನ್ನು ಸವಿದನು. ದೊಡ್ಡ ತುತ್ತುಗಳನ್ನು ಮಾಡುತ್ತ ಬೆಟ್ಟದಂತೆ ಇದ್ದ ಅನ್ನದಿಂದ ಊಟ ಮಾಡಿದನು. ಮಧ್ಯದಲ್ಲಿ ಮೊಸರು, ಮಜ್ಜಿಗೆ, ಗಡಿಗೆಗಳನ್ನು ಎತ್ತಿ ಕುಡಿದನು. ಮುಕ್ಕಾಲು ಪಾಲು ಬಂಡಿಯ ಅನ್ನವನ್ನು ಭೀಮನೇ ಮುಗಿಸಿದನು.

೫. ಭೀಮನು ರಾಕ್ಷಸನಿಗೆ ಹೇಗೆ ಕೋಪ ಬರಿಸಿದನು?
ಉ: ಭೀಮನು ರಾಕ್ಷಸನಿಗೆ “ಎಲವೋ ಕುನ್ನಿ, ಇಲ್ಲಾ ಬಾ, ತಿನ್ನು ಬಾ” ಎಂದು ಕರೆದನು ಮತ್ತು ಭೀಮ ತಿಂದು ಮಿಕ್ಕಿದ್ದನ್ನು ತಿನ್ನು ಬಾ ಎಂದು ಕೂಗಾಡುತ್ತ ಕೋಪ ಮಾಡಿಸಿದನು. ಮತ್ತೆ ಭೀಮನು ಅನ್ನದ ದೊಡ್ಡ ದೊಡ್ಡ ತುತ್ತನ್ನು ಮಾಡುತ್ತಾ ಬಾಯಿ ಚಪ್ಪರಿಸುತ್ತಿದ್ದನು. ರಾಕ್ಷಸನನ್ನು ನೋಡಿ ಭಕ್ಷ್ಯಗಳನ್ನು ತೋರಿಸಿ ಅಣಕಿಸದನು. ಬಕಾಸುರ ಕೋಪದಿಂದ ಬಂದು ಕೈ ಮುಷ್ಟಿ ಕಟ್ಟಿ, ಭೀಮನ ಬೆನ್ನಿಗೆ ಗುದ್ದನ್ನು ಕೊಟ್ಟನು. ಭೀಮ ಆ ಏಟಿಗೆ ನಗುತ್ತಾ “ಇಷ್ಟೇನಾ ನಿನ್ನ ಶಕ್ತಿ?” ಎಂದು ಹಂಗಿಸಿದನು. ಹೀಗೆ ಭೀಮನು ರಾಕ್ಷಸನಿಗೆ ಕೋಪ ಬರಿಸಿದನು.

೬. ಭೀಮನು ರಾಕ್ಷಸನೊಂದಿಗೆ ಹೇಗೆ ಹೋರಾಡಿದನು?
ಉ: ಭೀಮನ ಮೇಲೆ ರಾಕ್ಷಸನು ಏರಿ ಬಂದನು. ಇಬ್ಬರೂ ಗುದ್ದಾಡಿದರು. ಬೆಟ್ಟದ ಬಂಡೆಗಲ್ಲುಗಳನ್ನು ಎಸೆದಾಡಿದರು. ಮರಗಳನ್ನು ಬೇರು ಸಹಿತ ಕಿತ್ತು ಒಬ್ಬರ ಮೇಲೊಬ್ಬರು ಎಸೆದರು. ಕೊನೆಗೆ ಭೀಮ ಬಲವಾದ ಮುಷ್ಟಿ ಏಟನ್ನು ಕೊಟ್ಟನು. ಬಕಾಸುರ ರಕ್ತವನ್ನು ಕಾರುತ್ತಾ ಸತ್ತುಬಿದ್ದನು.

ಇ) ಈ ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ (Who told to whom)

೧. “ನಾಳೆ ನಿನಗೆ ಮೃಷ್ಟಾನ್ನ ಭೋಜನ, ಹೊಟ್ಟೆ ತುಂಬಾ ಊಟ ಮಾಡಬಹುದು.”
ಉ: ಈ ಮಾತನ್ನು ಕುಂತಿಯು ಭೀಮನಿಗೆ ಹೇಳಿದಳು.

೨. “ಎಲವೋ ಕುನ್ನಿ, ಇಲ್ಲಾ ಬಾ”
ಉ: ಈ ಮಾತನ್ನು ಭೀಮನು ರಾಕ್ಷಸನಿಗೆ ಹೇಳಿದನು.

೩. “ಇಷ್ಟೇನಾ ನಿನ್ನ ಶಕ್ತಿ?”
ಉ: ಈ ಮಾತನ್ನು ಭೀಮನು ರಾಕ್ಷಸನಿಗೆ ಹೇಳಿದನು.

ಈ) ಸರಿಯಾದ ಉತ್ತರವನ್ನು ಆರಿಸಿ, ಬಿಟ್ಟ ಸ್ಥಳ ತುಂಬಿರಿ (Fill in the blanks)

೧. ಪಾಂಡವರ ಸಂಖ್ಯೆ ಐದು.
೨. ಬ್ರಾಹ್ಮಣ ದಂಪತಿಗಳು ಮಗನ ಬಗ್ಗೆ ಚಿಂತಿಸುತ್ತಿದ್ದರು.
೩. ರಾಕ್ಷಸನ ಬಳಿಗೆ ಹೊರಟ ಭೀಮನನ್ನು ಜನರು ದುಃಖದಿಂದ ನೋಡುತ್ತಿದ್ದರು.
೪. ಏಕಚಕ್ರ ಊರಿನ ಜನರು ರಾಕ್ಷಸನ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

III. ಭಾಷಾಭ್ಯಾಸ

ಅ) ಈ ಕೆಳಗಿನ ಪದಗಳನ್ನು ಗಮನಿಸಿರಿ:

ಚಿಕ್ಕ ಚಿಕ್ಕ, ಮೃದುಮೃದು, ಬೇಗಬೇಗ –  ದ್ವಿರುಕ್ತಿ

ಆ) ಈ ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ (Make your own sentence)

೧. ಸಿದ್ಧನಾಗು: ರಾಜನು ಯುದ್ಧಕ್ಕೆ ಸಿದ್ಧನಾದನು.
೨. ತೊಡಗಿ: ತಾಯಿ ತನ್ನ ಕೆಲಸದೊಳಗೆ ತೊಡಗಿದ್ದಾಳೆ.
೩. ಸಂತಾಪಪಡು: ಮಗನಿಲ್ಲದೆ ಬ್ರಾಹ್ಮಣನು ಬಹಳ ಸಂತಾಪ ಪಟ್ಟನು.
೪. ಪಾರಾಗು: ಕೃಷ್ಣನು ಸೆರೆಮನೆಯಿಂದ ಪಾರಾದನು.
೫. ಕೊಂಡಾಡು: ರಾಮನು ಸೀತೆಯನ್ನು ಕೊಂಡಾಡಿದನು.

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ (Split the words):

೧. ಸ್ನಾನಾದಿ = ಸ್ನಾನ + ಆದಿ
೨. ವೀರಗಚ್ಚೆ = ವೀರ + ಕಚ್ಚೆ
೩. ಇನ್ನೊಬ್ಬ = ಇನ್ನು + ಒಬ್ಬ
೪. ಕೆಳಗಿಳಿದು = ಕೆಳಗೆ + ಇಳಿದು
೫. ಬಂಡೆಗಲ್ಲು = ಬಂಡೆ + ಕಲ್ಲು

ಈ) ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ (Write the opposite words)

ಭಯ x ನಿರ್ಭಯ
ಬಲಿಷ್ಠ x ದುರ್ಬಲ
ದುಃಖ x ಸುಖ
ಸಮಾಧಾನ x ಅಸಮಾಧಾನ
ಧೈರ್ಯ x ಅಧೈರ್ಯ

ಉ) ಈ ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ (Write the synonyms)

ಬಂಡಿ : ಗಾಡಿ, ವಾಹನ
ಹಿಂಡು : ಸಮೂಹ, ಗುಂಪು
ಹೋರಿ : ಎತ್ತು, ಗೂಳಿ

ಊ) ಈ ಕೆಳಗಿನ ಪದಗಳಿಗೆ ವಿಭಿನ್ನ ಅರ್ಥಬರುವ ಪದಗಳನ್ನು ಬರೆಯಿರಿ (Words with Multiple Meanings)

ಹಿಂಡು : ಗುಂಪು, ಹಿಂಡುವುದು, ಪೀಡಿಸುವುದು
ಕಾರು : ವಾಂತಿ ಮಾಡು, ಋತು, ವಾಹನ

Click here to download Bakaasurana vade

One Response

Leave a Reply

Your email address will not be published. Required fields are marked *