Buddhana Salahe 8ನೇ ತರಗತಿ ಬುದ್ದನ ಸಲಹೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು. 8th Standard Buddhana salahe Kannada Notes, buddana Question Answer Summary Mcq, Kannada Medium Karnataka State Syllabus, Kseeb Solutions For Class 8 Kannada, 8th Class Kannada ಬುದನ ಸಲಹೆ, ೮ನೇಯ ತರಗತಿಯ ಬುದ್ದನ ಸಲಹೆ ಸಾರಾಂಶ, Budhane salhe.
ಬುದ್ಧನ ಸಲಹೆ
– ನಿರುಪಮಾ
ಪಾಠ ಪ್ರವೇಶ:
ಮಾನವ ಒಂದು ಕಡೆ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸುಖ, ಶಾಂತಿ ಹಾಗೂ ಸಮೃದ್ಧಿಯ ಜೀವನ ನಡೆಸಿದರೆ, ಮತ್ತೊಂದೆಡೆ ಅದೇ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ ಸ್ವಾರ್ಥ, ದ್ವೇಷ ಹಾಗೂ ದುರಾಸೆಗಳನ್ನು ತುಂಬಿಕೊಂಡು ಬದುಕನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾನೆ. ಸರ್ವರಿಗೂ ಮೀಸಲಾಗಿರುವ ನೆಲ, ಜಲಗಳನ್ನು ಹಂಚಿಕೊಳ್ಳುವಾಗ ವಿವೇಕವನ್ನು ಕಳೆದುಕೊಂಡು ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಯುದ್ಧಗಳಿಂದ ಅಪಾರ ಸಾವು ನೋವುಗಳು ಉಂಟಾಗಿ ಬದುಕು ನರಕವಾಗಿ ಬಿಡುತ್ತದೆ ಎಂಬ ಸತ್ಯವನ್ನು ಮರೆತುಬಿಡುತ್ತಾನೆ. ಇಂದು ಮನುಷ್ಯ ಬದುಕಲು ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ ಸುಖ, ಶಾಂತಿ, ನೆಮ್ಮದಿಗಳೂ ಅಷ್ಟೇ ಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಜೀವನದಲ್ಲಿ ಎಂತಹ ಸಮಸ್ಯೆಗಳು ಉದ್ಭವಿಸಿದರೂ ಅವುಗಳನ್ನು ವಿವೇಕದಿಂದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂಬ ಸಂದೇಶ ‘ಬುದ್ಧನ ಸಲಹೆ’ ಪಾಠದ ಮೂಲಕ ವ್ಯಕ್ತವಾಗುತ್ತದೆ.
Introduction to the Lesson:
On one hand, human beings lead a life of happiness, peace, and prosperity by utilizing natural resources. On the other hand, while utilizing these very resources, they fill themselves with selfishness, hatred, and greed, completely destroying their own lives. When it comes to sharing the land and water that belong to everyone, they lose their wisdom and prepare for war. They forget the truth that wars cause immense death and suffering, turning life into a living hell. Everyone needs to realize that just as air, water, and food are essential for survival, happiness, peace, and contentment are equally important today. The lesson ‘Buddha’s Advice’ conveys the message that no matter what kind of problems arise in life, they can be resolved wisely and harmoniously through wisdom.
ಬಹಳ ವರುಷಗಳ ಹಿಂದಿನ ಮಾತು. ಭಾರತದ ಉತ್ತರ ಭಾಗದಲ್ಲಿ ಕಪಿಲವಸ್ತು ಎಂಬ ನಗರವಿತ್ತು. ಅದನ್ನು ಶಾಕ್ಯರೆಂಬ ಅರಸು ಮನೆತನದವರು ಆಳುತ್ತಿದ್ದರು. ಶಾಕ್ಯರ ಅರಸ ಶುದ್ಧೋದನನಿಗೆ ಸಿದ್ಧಾರ್ಥನೆಂಬ ಮಗ ಹುಟ್ಟಿದನು. ಆತನ ಬೆಳೆದ ಮೇಲೆ ಸನ್ಯಾಸ ಸ್ವೀಕರಿಸಿ ಭಗವಾನ್ ಬುದ್ಧನಾದನು.
This is a story from many years ago. In the northern part of India, there was a city named Kapilavastu. It was ruled by a royal dynasty called the Shakyas. A son named Siddhartha was born to Shuddhodana, the king of the Shakyas. As he grew up, he renounced worldly life, took up asceticism, and became Lord Buddha.
ಈಗ ನೇಪಾಳ ದೇಶದಲ್ಲಿ ಸೇರಿಹೋಗಿರುವ ಕಪಿಲವಸ್ತು ನಗರದ ಸಮೀಪದಲ್ಲಿ ಹೇಮಕೂಟ ಪರ್ವತವಿದೆ. ಆ ಪರ್ವತದಲ್ಲಿ ಹುಟ್ಟಿದ ಗಂಗಾನದಿ ದಕ್ಷಿಣಕ್ಕೆ ಕಾಶೀನಗರದವರೆಗೆ ಹರಿದು ನಂತರ ಕವಲಾಗಿ ಬಂಗಾಳ ಸಮುದ್ರಕ್ಕೆ ಸೇರುತ್ತದೆ. ಆ ಕಾಲದಲ್ಲಿ ಗಂಗಾನದಿಯ ಎರಡು ಬದಿಗಳಲ್ಲಿ ಎರಡು ರಾಜ್ಯಗಳಿದ್ದವು. ಒಂದು ವತ್ಸ ರಾಜ್ಯ ಇನ್ನೊಂದು ಮಗದ ರಾಜ್ಯ. ಈ ನದಿಯಿಂದ ಎರಡೂ ರಾಜ್ಯಗಳು ಉಪಯೋಗ ಪಡೆದು ಸುಭಿಕ್ಷವಾಗಿದ್ದವು.
Near the city of Kapilavastu, which is now part of Nepal, lies the Hemakuta Mountain. The River Ganga, which originates in that mountain, flows southwards up to the city of Kashi and later branches out to join the Bay of Bengal. In those days, there were two kingdoms on either side of the River Ganga. One was the Vatsa kingdom and the other was the Magadha kingdom. Both kingdoms utilized this river and were highly prosperous.
ಈ ಎರಡೂ ರಾಜ್ಯಗಳವರು ಆ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಆ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯಶ್ಯಾಮಲವಾಗಿತ್ತು. ಎತ್ತ ನೋಡಿದರೂ ಹಸಿರು ತುಂಬಿ ಬೆಳೆ ಬೆಳೆದು ಸುಭಿಕ್ಷದಿಂದ ಜನರು ಸುಖವಾಗಿದ್ದರು. ಇವರೆಲ್ಲರೂ ಗಂಗಾನದಿಯನ್ನು ತಮಗೆ ಅನ್ನ ನೀಡುವ ತಾಯಿ ಎನ್ನುತ್ತಿದ್ದರು. ಆದರೆ ಅವರಿಬ್ಬರಲ್ಲೂ ಕ್ರಮೇಣ ಸ್ವಾರ್ಥ ಆವರಿಸಿತು. ಈ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ದುರಾಸೆ ಈ ಎರಡೂ ರಾಜ್ಯಗಳ ರಾಜರಿಗೆ ಉಂಟಾಯಿತು. ದಿನ ಕಳೆದಂತೆ ಈ ಸ್ವಾರ್ಥ ಹೆಮ್ಮರವಾಗಿ ಬೆಳೆದು ಎರಡೂ ರಾಜ್ಯದವರು ಯುದ್ಧಕ್ಕೆ ಸಿದ್ಧವಾಗುವ ಉತ್ಕಟ ಪರಿಸ್ಥಿತಿ ಉಂಟಾಯಿತು.
The people of both kingdoms used to worship the river like a mother. Due to the water of this river, the land of both states was lush green and fertile. Wherever one looked, there was greenery and abundant crops, and the people lived happily in prosperity. Everyone regarded the River Ganga as the mother who provided them with food. However, gradually, selfishness consumed both sides. A greed to establish absolute authority over this river arose in the minds of the kings of both nations. As days passed, this selfishness grew into a massive tree, leading to a critical situation where both sides prepared for war.
ಅವರು ಯುದ್ಧಕ್ಕೆ ನಿಂತಾಗ ಬುದ್ಧ ಭಗವಾನ್ ಅಲ್ಲಿಗೆ ಬಂದ, ಆತ ಯುದ್ಧಕ್ಕೆ ಸಿದ್ಧರಾದ ಎರಡೂ ಕಡೆಯ ಸೈನ್ಯಗಳನ್ನು ನೋಡಿ ಅವುಗಳ ನಡುವೆ ನಿಂತುಕೊಂಡ. ಬುದ್ಧದೇವನನ್ನು ನೋಡಿ ಎರಡೂ ಕಡೆಯವರು ಸ್ವಲ್ಪ ಹಿಂದಕ್ಕೆ ಸರಿದರು.
When they stood ready for battle, Lord Buddha arrived at the scene. Seeing the two armies prepared for war, he stood right between them. Upon seeing Buddhadeva, both sides stepped back a little.
ಬುದ್ಧದೇವನು ಎರಡೂ ರಾಜ್ಯಗಳ ರಾಜರನ್ನು-ಮಂತ್ರಿಗಳನ್ನು ಹಾಗೂ ಇತರ ಅಧಿಕಾರಿಗಳನ್ನು ತನ್ನ ಬಳಿಗೆ ಕರೆದು ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಕೇಳಿದ.
Buddhadeva called the kings, ministers, and other officers of both kingdoms to his side and asked loudly so that everyone could hear:
“ನೀವು ಯುದ್ಧ ಮಾಡಲು ಏಕೆ ಸಿದ್ಧರಾಗಿದ್ದೀರಿ?”
“Why are you prepared to fight a war?”
“ನಮ್ಮ ಜೀವನಾಧಾರವಾದ ಗಂಗಾನದಿಯ ನೀರಿಗಾಗಿ” – ಅವರೆಲ್ಲರೂ ಒಕ್ಕೊರಲಿನಿಂದ ಉತ್ತರಿಸಿದ್ದರು.
“For the water of the River Ganga, which is our source of life,” they answered in one voice.
“ನದಿಯ ನೀರು, ಮಾನವ ರಕ್ತ ಇವೆರಡರಲ್ಲಿ ಯಾವುದು ಹೆಚ್ಚು ಬೆಲೆಯುಳ್ಳದ್ದು?”
“Between river water and human blood, which is more valuable?”
“ಮನುಷ್ಯನ ರಕ್ತ ನದಿ ನೀರಿಗಿಂತ ತುಂಬಾ ಬೆಲೆಯುಳ್ಳದ್ದು” ಎರಡೂ ಕಡೆಯವರಿಂದ ಉತ್ತರ ಬಂತು.
“Human blood is far more valuable than river water,” came the reply from both sides.
“ಹಾಗಾದರೆ ನೀವು ಕಡಿಮೆ ಬೆಲೆ ಇರುವ ನೀರಿಗಾಗಿ ಅದಕ್ಕಿಂತಲೂ ಅಮೂಲ್ಯವಾದ ರಕ್ತವನ್ನು ಹರಿಸಲು ಏಕೆ ಸಿದ್ಧರಾಗಿದ್ದೀರಿ?” ಎಂದು ಬುದ್ಧ ಮನಃ ಪ್ರಶ್ನಿಸಿದ.
“Then why are you ready to shed invaluable blood for the sake of water, which is of lesser value?” Buddha questioned them again.
“ನಮ್ಮ ಜೀವಗಳಿಗೆ ಈ ಗಂಗಾನದಿಯ ನೀರು ತುಂಬಾ ಅವಶ್ಯಕವಲ್ಲವೇ?” ಎಂದು ಎರಡೂ ಕಡೆಯವರು ಕೇಳಿದರು.
“Is the water of this River Ganga not absolutely essential for our lives?” asked the people from both sides.
“ನೀವು ಜೀವಿಸಬೇಕೆಂದಿದ್ದೀರಲ್ಲವೇ? ಮತ್ತೆ ಸಾಯಲೇಕೆ ಸಿದ್ಧರಾಗಿದ್ದೀರಿ?” ಎಂದು ಕೇಳಿದ ಬುದ್ಧ. ಎರಡೂ ರಾಜ್ಯದ ಮಂತ್ರಿಗಳು ಹೀಗೆ ಹೇಳಿದರು:
“You say you want to live, then why are you ready to die?” asked Buddha. The ministers of both kingdoms explained:
“ಸ್ವಾಮಿ ! ಎರಡೂ ರಾಜ್ಯಗಳ ನಡುವೆ ದ್ವೇಷ ಅಸೂಯೆಗಳಿಂದ ಪರಿಸ್ಥಿತಿ ವಿಷಮಿಸಿದೆ. ಇದಕ್ಕೆ ಪರಿಹಾರವೇ ಇಲ್ಲ. ಈಗ ಯುದ್ಧದ ಹೊರತು ಬೇರೆ ದಾರಿಯಿಲ್ಲ.”
“Lord! The situation has worsened due to hatred and jealousy between the two kingdoms. There is no solution to this. Now, there is no way out other than war.”
ಬುದ್ಧದೇವ ನಕ್ಕು – “ನೀವು ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಯಲ್ಲಿ ನಿಮಗೆ ಉಳಿಯುವುದು ಈರ್ಷೆಯೇ. ಇವುಗಳಿಂದ ಜೀವಿಗಳಿಗೆ ದುಃಖವೇ ಹೊರತು ಸುಖವಲ್ಲ. ಈಗ ಸುಖವಾಗಿರುವ ನೀವು ದುಃಖ ತಂದುಕೊಳ್ಳುವ ಮಾರ್ಗ ಇದು” ಎಂದಾಗ ಎರಡೂ ಕಡೆಯ ರಾಜರು ತೆಪ್ಪಗಾದರು. ಅವರು ಕೇಳಿದರು :
Buddhadeva smiled and said, “If you try to conquer hatred with hatred, you will be left with nothing but malice in the end. These things bring only sorrow to living beings, not happiness. This is a path where you, who are currently prosperous, are inviting misery upon yourselves.” Hearing this, the kings of both sides fell silent. They asked:
“ಹಾಗಾದರೆ ಏನು ಮಾಡಬೇಕೆನ್ನುತ್ತೀರಿ ಭಗವಾನ್?”
“Then what do you want us to do, Blessed One?”
“ಮನುಷ್ಯ ಸುಖವಾಗಿ ಜೀವಿಸಲು ನೀರು, ಗಾಳಿ, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯೂ ಅಷ್ಟೇ ಮುಖ್ಯ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ನೀವೇ ಕೈಯಾರೆ ನಿಮ್ಮ ಸುಖ ನಾಶ ಮಾಡಿಕೊಳ್ಳುವುದನ್ನು ಬಿಟ್ಟು ವಿವೇಕ ತಂದುಕೊಂಡು ಸುಖವಾಗಿರಿ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಆ ವರವನ್ನು ಸರ್ವಮಾನವರೂ ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ” ಎಂದು ಬುದ್ಧದೇವ ಬೋಧಿಸಿದ. ಎರಡೂ ಕಡೆಯ ರಾಜರಿಗೆ ಈ ಸಲಹೆ ಸತ್ಯವೆನಿಸಿತು. ಎಲ್ಲರೂ ಬುದ್ಧದೇವನಿಗೆ ನಮಸ್ಕರಿಸಿ ಯುದ್ಧ ಬೇಡವೆಂದು ತಮ್ಮ ತಮ್ಮ ಊರಿಗೆ ಹೊರಟರು. ಅಂದಿನಿಂದ ಆ ಎರಡೂ ರಾಜ್ಯದ ಜನರು ಸ್ನೇಹದಿಂದ ಸುಖವಾಗಿದ್ದರು.
“Just as water, air, and food are essential for a human being to live happily, peace is equally important. Peace is destroyed by war. Instead of destroying your own happiness with your own hands, regain your wisdom and live happily. Nature is a boon to living beings, not a curse. When that boon is shared equally by all human beings, everyone finds happiness and peace,” preached Buddhadeva. The kings of both sides realized the truth of this advice. Everyone bowed to Buddhadeva, renounced the war, and left for their respective towns. From that day on, the people of both kingdoms lived happily in friendship.
****
ಕೃತಿಕಾರರ ಪರಿಚಯ :
ಡಾ. ನಿರುಪಮಾ ಅವರು ೧೯೩೩ ರಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಸಂಸ್ಕೃತ, ತೆಲುಗು, ಕನ್ನಡ, ಇಂಗ್ಲಿಷ್, ಹಿಂದಿ, ಬಂಗಾಳಿ ಭಾಷೆಗಳನ್ನು ಚೆನ್ನಾಗಿ ಬಲ್ಲ ಇವರು ವಿವಿಧ ಭಾಷೆಗಳ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ಪ್ರಮುಖ ಕೃತಿಗಳೆಂದರೆ ‘ಅಮೃತಕಲಶ’, ‘ಪರಿತ್ಯಕ್ತೆ’, ‘ಭುವನ ವಿಜಯ’ ಇವು ಕಾದಂಬರಿಗಳು. ‘ಭಾರತೀಯ ನಾರಿ ನಡೆದು ಬಂದ ದಾರಿ’, ‘ಭಾವಮುಖಿ’ ಇವು ಸಂಕಲನ ಕೃತಿಗಳು, ‘ರಣಹದ್ದು’, ‘ಅಧಿಕಾರಿಗಳ ಅವಾಂತರ’ ಇವು ನಾಟಕಗಳು, ‘ಮಕ್ಕಳ ಸಾಹಿತ್ಯ-೨೫’, ‘ಕರ್ನಾಟಕದ ಕವಯಿತ್ರಿಯರು’ ಇನ್ನು ಮುಂತಾದವು.
ಇವರಿಗೆ ಯುನಿಸೆಫ್ ಮಕ್ಕಳ ಸಾಹಿತ್ಯ ಶಾಶ್ವತ ಸಂಸ್ಥೆಯ “ಸದೋದಿತಾ” ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸಾಹಿತ್ಯ ಶಿರೋಮಣಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಲಭಿಸಿವೆ. ‘ಬುದ್ಧನ ಸಲಹೆ’ ಕಥೆಯನ್ನು ‘ಶತಮಾನದ ಮಕ್ಕಳ ಸಾಹಿತ್ಯ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
About the Author:
Dr. Nirupama was born in 1933 at Holavanahalli in Koratagere Taluk of Tumakuru district. Well-versed in Sanskrit, Telugu, Kannada, English, Hindi, and Bengali, she has translated excellent works from various languages into Kannada. Among her prominent works are the novels ‘Amrutakalasha’, ‘Parityakte’, and ‘Bhuvana Vijaya’. Her collections include ‘Bharatiya Nari Nadedu Banda Dari’ and ‘Bhavamukhi’. Her plays include ‘Ranahaddu’ and ‘Adhikarigala Avantara’. She has also written ‘Makkala Sahitya-25’, ‘Karnatakada Kavayitriyarie’, and others.
She has been honored with the “Sadodita” Award from the UNICEF Permanent Institute of Children’s Literature, the Aryabhata Award, the Anupama Award, the Sahitya Shiromani Award, and the Attimabbe Award. The story ‘Buddha’s Advice’ has been selected from the book ‘Shatamanada Makkala Sahitya’ (Children’s Literature of the Century).
II. ಪ್ರಶ್ನೆಗಳು:

ಅಭ್ಯಾಸ
I. ಪದಗಳ ಅರ್ಥ
ಅಮೂಲ್ಯ – ಬೆಲೆಕಟ್ಟಲಾಗದ – Invaluable / Priceless
ಈರ್ಷೆ – ಅಸೂಯೆ, ಹೊಟ್ಟೆಕಿಚ್ಚು – Jealousy / Envy
ಕವಲು – ಭಿನ್ನತೆ, ಎರಡು ಭಾಗ – Branch / Divergence / Divided into two parts
ತೆಪ್ಪಗಾಗು – ಸುಮ್ಮನಾಗು, ಏನೂ ತಿಳಿಯದಾಗು – To become quiet / To fall silent
ದ್ವೇಷ – ಹಗತನ, ವೈರತ್ವ – Hatred / Enmity.
ವರ – ಅನುಗ್ರಹ, ಶ್ರೇಷ್ಠ – Boon / Blessing / Supreme
ಸಲಹೆ – ಬುದ್ಧಿವಾದ, ಮಾರ್ಗದರ್ಶನ – Advice / Guidance.
ಸ್ವಾರ್ಥ – ಸ್ವಪ್ರಯೋಜನ, ಸ್ವಹಿತ, ತನಗಾಗಿ – Selfishness / Self-interest.
ಅಸೂಯೆ – ಹೊಟ್ಟೆಕಿಚ್ಚು – Jealousy / Envy
ಉತ್ಕಟ – ಅಧಿಕ, ಪ್ರಬಲವಾದ – Intense / Excessive / Severe.
ತೆಪ್ಪಗೆ – ಸುಮ್ಮನೆ, ಮಾತಿಲ್ಲದೆ – Quietly / Silently / Without speaking
ದುರಾಸೆ – ಅತಿ ಆಸೆ, ಕೆಟ್ಟ ಬಯಕೆ – Greed / Extreme or evil desire.
ನೆರೆಹೊರೆ – ಸುತ್ತಮುತ್ತ – Neighborhood / Surroundings.
ವಿಷಮಿಸು – ನಂಜಾಗು, ವಿಕೋಪಕ್ಕೆ ತಿರುಗು – To worsen / To turn critical or toxic.
ಸುಭಿಕ್ಷ – ಒಳ್ಳೆಯ ಕಾಲ, ಸಮೃದ್ಧಿ – Prosperous / Good times / Abundance.
ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿರಿ. (Fill in the blanks)
೧. ಸಿದ್ದಾರ್ಥನ ತಂದೆಯ ಹೆಸರು ಶುದ್ಧೋಧನ.
೨. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಹರಿಯುವ ನದಿ ಗಂಗಾ.
೩. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಶಾಂತಿ ನೆಲೆಸುವಂತೆ ಮಾಡಿದವರು ಬುದ್ಧ.
೪. ಬುದ್ಧನ ಸಲಹೆ ಪಾಠದ ಆಕಾರ ಕೃತಿ ಶತಮಾನದ ಮಕ್ಕಳ ಸಾಹಿತ್ಯ.
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಗಂಗಾ ನದಿ ಯಾವ ಸಮುದ್ರವನ್ನು ಸೇರುತ್ತದೆ?
ಉ: ಗಂಗಾ ನದಿ ಬಂಗಾಳ ಸಮುದ್ರವನ್ನು ಸೇರುತ್ತದೆ.
೨. ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವುದು?
ಉ: ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಶಾಂತಿ.
೩. ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಏನು ಮಾಡಬೇಕು?
ಉ: ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಪ್ರಕೃತಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು.
೪. ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ಏಕೆ ನಿಲ್ಲಿಸಿದರು?
ಉ: ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಪ್ರಕೃತಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಬುದ್ಧದೇವನ ಬೋಧನೆಯನ್ನು ಅರಿತರು. ಅದಕ್ಕೆ ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ನಿಲ್ಲಿಸಿದರು.
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three to four sentences)
೧. ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಏಕೆ ಪೂಜಿಸುತ್ತಿದ್ದರು?
ಉ: ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು. ಎರಡೂ ರಾಜ್ಯಗಳಲ್ಲಿ ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಹಾಗಾಗಿ ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು.
೨. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಏಕೆ ಹೆಚ್ಚಾಯಿತು?
ಉ: ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಯಿತು. ಹಾಗಾಗಿ ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಹೆಚ್ಚಾಯಿತು.
೩. ಬುದ್ಧನು ಹೇಳುವಂತೆ ದ್ವೇಷ ದುಃಖವನ್ನು ಹೇಗೆ ಹೆಚ್ಚಿಸುತ್ತದೆ?
ಉ: ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ದ್ವೇಷದಿಂದ ದುಃಖವೇ ಹೊರತು ಸುಖವಿಲ್ಲ. ದ್ವೇಷ ದುಃಖವನ್ನು ಹೆಚ್ಚಿಸುತ್ತದೆ ಎಂದು ಬುದ್ಧನು ಹೇಳಿದನು.
೪. ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ಏಕೆ ತಪ್ಪಿಸಿದನು?
ಉ: ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ತಪ್ಪಿಸಿದನು.
ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದು ಹೇಗೆ?
ಉ: ವತ್ಸ ಮತ್ತು ಮಗದ ರಾಜ್ಯಗಳು ಗಂಗಾ ನದಿಯ ಎರಡೂ ಬದಿಗಳಲ್ಲಿ ಇದ್ದವು. ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು, ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಎರಡೂ ರಾಜ್ಯದವರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಆದರೆ ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಗಿ ಯುದ್ಧಕ್ಕೆ ಸಿದ್ಧರಾದರು.
ಅಲ್ಲಿಗೆ ಬಂದ ಬುದ್ಧದೇವನು, ನದಿ ನೀರಿಗಿಂತ ಎಲ್ಲರ ರಕ್ತ ಬೆಲೆಯುಳ್ಳದ್ದು. ಜೀವನಕ್ಕೆ ನೀರು ಅವಶ್ಯಕ. ಆದರೆ ನೀವು ಸಾಯಲು ಸಿದ್ಧರಾಗಿದ್ದೀರಿ. ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ,ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ಹೇಳಿದಾಗ, ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದವು.
೨. ಬದುಕಿನಲ್ಲಿ ಸುಖ – ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವುದು ಹೇಗೆ? ಚರ್ಚಿಸಿ.
ಉ: ಕಪಿಲವಸ್ತು ನಗರದ ಹತ್ತಿರದ ಗಂಗಾನದಿಯ ಎರಡೂ ಬದಿಗಳಲ್ಲಿ ವತ್ಸ ಮತ್ತು ಮಗಧ ರಾಜ್ಯಗಳಿದ್ದವು. ಗಂಗಾ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯ ಶಾಮಲವಾಗಿತ್ತು, ಹಸಿರು ತುಂಬಿ ಬೆಳೆ ಬೆಳೆದು ಜನರು ಸುಖವಾಗಿದ್ದರು. ಎರಡೂ ರಾಜ್ಯದವರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು. ಆದರೆ ಎರಡೂ ರಾಜ್ಯಗಳ ರಾಜರಿಗೆ ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂಬ ಸ್ವಾರ್ಥ, ದುರಾಸೆ ಉಂಟಾಗಿ ಯುದ್ಧಕ್ಕೆ ಸಿದ್ಧರಾದರು.
ಅಲ್ಲಿಗೆ ಬಂದ ಬುದ್ಧದೇವನು, ನದಿ ನೀರಿಗಿಂತ ಎಲ್ಲರ ರಕ್ತ ಬೆಲೆಯುಳ್ಳದ್ದು. ಜೀವನಕ್ಕೆ ನೀರು ಅವಶ್ಯಕ. ಆದರೆ ನೀವು ಸಾಯಲು ಸಿದ್ಧರಾಗಿದ್ದೀರಿ. ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವದು ಈರ್ಷ್ಯೆ. ಯುದ್ಧದಿಂದ ಶಾಂತಿ ನಾಶವಾಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಈ ವರವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಾಗ ಸುಖ,ಶಾಂತಿ ಸಿಗುತ್ತದೆ ಎಂದು ಬುದ್ಧ ದೇವನು ಹೇಳಿದಾಗ, ಯುದ್ಧ ನಿಲ್ಲಿಸಿ ಎಲ್ಲರೂ ಶಾಂತಿಯಿಂದ ನೆಲೆಸಿದರು. ಈ ಕಥೆಯಿಂದ ಹಂಚಿಕೊಂಡು ಬದುಕಿದರೆ ಸುಖ, ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂಬ ಪಾಠವನ್ನು ಕಲಿಯಬಹುದು.
ಉ) ಸಂದರ್ಭದೊಡನೆ ವಿವರಿಸಿರಿ. (Write the correct context for the following)
೧. “ಮನುಷ್ಯನ ರಕ್ತ ನದಿ ನೀರಿಗಿಂತ ಬೆಲೆಯುಳ್ಳದ್ದು”
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದವರಿಬ್ಬರೂ ಬುದ್ಧನಿಗೆ ಹೇಳಿದರು. ವತ್ಸ ಮತ್ತು ಮಗಧ ರಾಜ್ಯಗಳು ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸಬೇಕೆಂದು ಯುದ್ಧಕ್ಕೆ ಸಿದ್ಧರಾಗುತ್ತಾರೆ. ಆಗ ಬುದ್ಧ ನಿಂತು ಅವರನ್ನು ನದಿಯ ನೀರು ಮತ್ತು ಮಾನವ ರಕ್ತ ಇವೆರಡರಲ್ಲಿ ಯಾವುದು ಬೆಲೆಯುಳ್ಳದ್ದು ಎಂದು ಕೇಳಿದ ಸಂದರ್ಭದಲ್ಲಿ ಮೇಲಿನ ಮಾತನ್ನು ಹೇಳುತ್ತಾರೆ.
೨. “ನೀವು ಜೀವಿಸಬೇಕೆಂದಿದ್ದೀರಲ್ಲವೇ ? ಮತ್ತೆ ಸಾಯಲೇಖ ಸಿದ್ದರಾಗಿದ್ದೀರಿ?”
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಬುದ್ಧನು ವತ್ಸ ಮತ್ತು ಮಗದ ರಾಜ್ಯದವರಿಬ್ಬರಿಗೂ ಹೇಳಿದರು.
ಗಂಗಾ ನದಿಯ ಮೇಲಿನ ಅಧಿಕಾರವನ್ನು ಸ್ಥಾಪಿಸಲು ಯುದ್ಧಕ್ಕೆ ಸಿದ್ದರಾಗಿದ್ದ ಎರಡು ರಾಜ್ಯದವರನ್ನು ನೀರಿಗಿಂತ ಹೆಚ್ಚು ಬೆಲೆಯುಳ್ಳ ರಕ್ತವನ್ನು ಹರಿಸಲು ಏಕೆ ಸಿದ್ಧರಾಗಿದ್ದೀರಿ ಎಂದು ಬುದ್ಧನು ಪ್ರಶ್ನಿಸಿದನು. ಅದಕ್ಕೆ ಅವರು ನಮ್ಮ ಜೀವಗಳಿಗೆ ಈ ಗಂಗಾ ನದಿಯ ನೀರು ತುಂಬಾ ಅವಶ್ಯಕವಲ್ಲವೇ ಎಂದು ಕೇಳುವ ಸಂದರ್ಭದಲ್ಲಿ ಬುದ್ಧ ಈ ಮಾತನ್ನು ಹೇಳುತ್ತಾನೆ.
೩. “ ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ “
ಉ: ಈ ಮಾತನ್ನು ಡಾ. ನಿರುಪಮಾರವರು ಬರೆದಿರುವ “ಬುದ್ಧನ ಸಲಹೆ” ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಬುದ್ಧನು ವತ್ಸ ಮತ್ತು ಮಗದ ರಾಜ್ಯದವರಿಬ್ಬರಿಗೂ ಹೇಳಿದರು. ಗಂಗಾ ನದಿಯ ಮೇಲಿನ ಅಧಿಕಾರವನ್ನು ಸ್ಥಾಪಿಸಲು ಯುದ್ಧಕ್ಕೆ ಸಿದ್ದರಾಗಿದ್ದ ಎರಡು ರಾಜ್ಯದವರಿಗೆ ಯುದ್ಧದಿಂದ ಶಾಂತಿ ನಾಶವಾಗುತ್ತದೆ. ನೀರು, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯು ಮುಖ್ಯವಾಗುತ್ತದೆ ಎಂದು ಭೋದಿಸುವ ಸಂದರ್ಭದಲ್ಲಿ ಬುದ್ದನು ಈ ಮಾತನ್ನು ಹೇಳುತ್ತಾನೆ.
ಭಾಷಾಭ್ಯಾಸ
ಅ) ಸ್ವರಾಕ್ಷಗಳಿಂದ ಆರಂಭಗೊಳ್ಳುವ ಪದಗಳನ್ನು ಬುದ್ಧನ ಸಲಹೆ ಪಾಠದಿಂದ ಆಯ್ದು ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಬರೆಯಿರಿ. (Choose words starting with svarakshas from Buddha’s advice lesson and arrange them alphabetically)
ಉದಾ: ಅದನ್ನು ,ಅರಸು, ಉತ್ತರ
ಅದನ್ನು, ಅಧಿಕಾರ, ಅರಸ, ಅರಸು, ಅವಶ್ಯಕ, ಆಹಾರ, ಆಳುತ್ತಿದ್ದರು, ಇರುವ, ಈರ್ಷ್ಯ, ಉತ್ತರ
ಆ) ಬುದ್ಧನ ಸಲಹೆ ಪಾಠದಲ್ಲಿ ಅನುಸ್ವಾರ ವಿಸರ್ಗಗಳಿಂದ ಕೂಡಿರುವ ಪದಗಳನ್ನು ಆಯ್ದು ಬರೆಯಿರಿ. (In the Buddha’s advice lesson, select and write the words that are associated with anuswara visarga)
ಉದಾ: ಗಂಗಾ, ಒಂದು, ದುಃಖ, ಪುನಃ
ಗಂಗಾ, ಸುಭಿಕ್ಷದಿಂದ, ಸಂಪೂರ್ಣ, ಬಂತು, ನೀರಿಗಿಂತ, ದ್ವೇಷದಿಂದ, ಶಾಂತಿ, ಅಂದಿನಿಂದ, ನಂತರ, ಒಂದು, ತಾಯಿಯಂತೆ, ನಿಂತುಕೊಂಡ, ಹಿಂದಕ್ಕೆ, ಮಂತ್ರಿ
ಇ) ಪ್ರಸ್ತುತ ಪಾಠದಲ್ಲಿ ಸ, ಶ, ಷ ಅಕ್ಷರಗಳಿರುವ ಪದಗಳನ್ನು ಪಟ್ಟಿ ಮಾಡಿ ಅವುಗಳ ಸ್ಪಷ್ಟ ಉಚ್ಚಾರಣೆಯನ್ನು ಅಭ್ಯಾಸ ಮಾಡಿರಿ. (In the present lesson, list the words with the letters sa, sha, SHA and practice their clear pronunciation.
ಉದಾ: ಸಸ್ಯಶಾಮಲೆ, ಸಂನ್ಯಾಸ, ದೇಶ, ಸುಖ, ಶಾಂತಿ, ಈರ್ಷ್ಯೆ
ಸಸ್ಯಶಾಮಲೆ, ಸನ್ಯಾಸ, ದ್ವೇಷ, ದೇಶ, ಶಾಂತಿ, ಈರ್ಷ್ಯ, ಶಾಪ, ಸ್ನೇಹ, ಶುದ್ದೋದನ, ಸಿದ್ದಾರ್ಥ, ಸುಭಿಕ್ಷ, ಸ್ವಾರ್ಥ, ಸಂಪೂರ್ಣ
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)
ಮೌಲ್ಯ X ಅಪಮೌಲ್ಯ ಸುಖ X ದುಃಖ
ವರ X ಶಾಪ ಸತ್ಯ X ಸುಳ್ಳು
ಪವಿತ್ರ X ಅಪವಿತ್ರ ಸ್ವಾರ್ಥ X ನಿಸ್ವಾರ್ಥ
ಉ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ. (Make your own sentence)
ಹಿಂಜರಿಕೆ = ಒಳ್ಳೆಯ ಕೆಲಸಗಳನ್ನು ಮಾಡಲು ಹಿಂಜರಿಕೆ ಇರಬಾರದು.
ವಿವೇಕ = ಯಾವಾಗಲೂ ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಸ್ವಾರ್ಥ = ಹೊಂದಾಣಿಕೆ ಇರಬೇಕು ಎಂದರೆ ಮನುಷ್ಯರು ಸ್ವಾರ್ಥವನ್ನು ಬಿಡಬೇಕು.
ಸುಖಶಾಂತಿ = ಜಗತ್ತಿನಲ್ಲಿ ಸುಖ ಶಾಂತಿ ನೆಲೆಸಲಿ.
ಸುಭಿಕ್ಷ = ಭಾರತವು ಹಲವಾರು ನದಿಗಳಿಂದ ಸುಭಿಕ್ಷವಾಗಿದೆ.
ಸಸ್ಯಶಾಮಲ = ಕಾವೇರಿ ನದಿಯ ದಡದಲ್ಲಿರುವ ಎಲ್ಲಾ ಊರುಗಳು ನೀರಿನಿಂದ ಸಸ್ಯಶಾಮಲವಾಗಿ ಸುಭಿಕ್ಷವಾಗಿದೆ.
IV. ಸೈದ್ಧಾಂತಿಕ ವ್ಯಾಕರಣ :
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳಲ್ಲಿ ಮೂರು ಭಾಗಗಳಿವೆ.
- ಸ್ವರಗಳು — ೧೩
- ಯೋಗವಾಹಗಳು — ೦೨
- ವ್ಯಂಜನಗಳು — ೩೪
ಒಟ್ಟು — ೪೯
೧. ಸ್ವರಗಳು : (೧೩)
ಸರಳವಾಗಿ, ಸ್ವತಂತ್ರವಾಗಿ, ಸಹಜವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಕನ್ನಡದಲ್ಲಿ ಒಟ್ಟು ೧೩ ಸ್ವರಾಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ಎರಡು ಭಾಗಗಳಾಗಿ ವಿಂಗಡಿಸಿದೆ.
ಹ್ರಸ್ವಸ್ವರ (೬) — ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹ್ರಸ್ವಸ್ವರಗಳು ಎನ್ನುತ್ತೇವೆ.
ಉದಾ : ಅ, ಇ, ಉ, ಋ, ಎ, ಒ.
ದೀರ್ಘಸ್ವರ (೭) – ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ದೀರ್ಘಸ್ವರಗಳು ಎನ್ನುತ್ತೇವೆ.
ಉದಾ : ಆ, ಈ, ಊ, ಏ, ಐ, ಓ, ಔ.
೨. ಯೋಗವಾಹಗಳು : (೨)
ಯೋಗ ಎಂದರೆ ಕೂಡು / ಸಂಬಂಧ, ವಾಹ ಎಂದರೆ ಹೋಗುವ ಎಂದರ್ಥ. ಯೋಗವಾಹ ಎಂದರೆ ಕೂಡಿಹೋಗುವ ಅಂದರೆ, ಬೇರೆ ಅಕ್ಷರಗಳ ಜೊತೆಯಲ್ಲಿ ಮಾತ್ರ ಉಚ್ಚರಿಸಬಹುದಾದ ಅಕ್ಷರ ಎಂದರ್ಥ.
ಯೋಗವಾಹಗಳಲ್ಲಿ ಎರಡು ವಿಧ: (೧) ಅನುಸ್ವಾರ (೨) ವಿಸರ್ಗ (:).
- ಉದಾ : ೦ (ಅನುಸ್ವಾರ) : (ವಿಸರ್ಗ)
೩. ವ್ಯಂಜನಗಳು : (೩೪)
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳೇ ವ್ಯಂಜನಗಳು. ಇವುಗಳಲ್ಲಿ ಎರಡು ಪ್ರಕಾರಗಳಿವೆ. ಅವುಗಳೆಂದರೆ,
- ವರ್ಗೀಯ ವ್ಯಂಜನಗಳು (೨೫)
- ಅವರ್ಗೀಯ ವ್ಯಂಜನಗಳು (೯)
ವರ್ಗೀಯ ವ್ಯಂಜನಗಳಲ್ಲಿ ಮೂರು ವಿಭಾಗಗಳಿವೆ :
| ವಿಭಾಗ | ವಿವರಣೆ | ಅಕ್ಷರಗಳು | ಒಟ್ಟು |
| ೧) ಅಲ್ಪಪ್ರಾಣ ಅಕ್ಷರಗಳು | ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು | ಕ್, ಚ್, ಟ್, ತ್, ಪ್, ಗ್, ಜ್, ಡ್, ದ್, ಬ್ (ಪ್ರತಿ ವರ್ಗದಲ್ಲಿ ಒಂದು ಮತ್ತು ಮೂರನೆಯ ಅಕ್ಷರಗಳು) | = ೧೦ |
| ೨) ಮಹಾಪ್ರಾಣ ಅಕ್ಷರಗಳು | ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳು | ಖ್, ಛ್, ಠ್, ಥ್, ಫ್, ಘ್, ಝ್, ಢ್, ಧ್, ಭ್ (ಪ್ರತಿ ವರ್ಗದಲ್ಲಿ ಎರಡು ಮತ್ತು ನಾಲ್ಕನೆಯ ಅಕ್ಷರಗಳು) | = ೧೦ |
| ೩) ಅನುನಾಸಿಕ ಅಕ್ಷರಗಳು | ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು | ಙ್, ಞ್, ಣ್, ನ್, ಮ್ (ಪ್ರತಿ ವರ್ಗದ ಐದನೆಯ ಅಕ್ಷರಗಳು) | = ೦೫ |
ಅವರ್ಗೀಯ ವ್ಯಂಜನಗಳು : ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿಸಲು ಸಾಧ್ಯವಾಗದ ವ್ಯಂಜನಗಳೇ ಅವರ್ಗೀಯ ವ್ಯಂಜನಗಳು.
- ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ = ೦೯