
Besige poem in Kannada 6th Standard “Summer” written by B. R. Lakshmana Rao. Besige poem in Kannada 6th Standard Notes Summary Saramasha. In this poem, the poet explains playing in the summer sun, during the school holidays is fun. Laxman rao says that let us sing about the sun. Why is the sun so hot? Don’t ask him why he is angry. Ravi is trying to bring rain to the earth by gathering clouds. The earth is full of colors. All the trees, plants, fruits and flowers have grown. The sun is the protector of the earth. Like him, let us live happily without forgetting our duties every day, says B. R. Lakshmana Rao.
ಬೇಸಿಗೆ
ಕವಿ ಪರಿಚಯ : ಬಿ ಆರ್ ಲಕ್ಷ್ಮಣರಾವ್
ಜನ್ಮಸ್ಥಳ: ಚಿಕ್ಕಬಳ್ಳಾಪುರ ಜಿಲ್ಲೆಯ, ಚೀಮಂಗಲ ಗ್ರಾಮ
ಜನ್ಮ ದಿನಾಂಕ: ೦೯/ ೦೯/ ೧೯೪೬
ಕವನ ಸಂಕಲನಗಳು: ಗೋಪಿ ಮತ್ತು ಗಾಂಡಲಿನ, ಟುವಟಾರ, ಇವಳು ನದಿಯಲ್ಲ, ಸುಬ್ಬಾಭಟ್ಟರ ಮಗಳೇ, ಭಾರತ ಬಿಂದು ರಶ್ಮಿ, ಹನಿಗವಿತೆಗಳು, ವಿನೋದ ಕವಿತೆಗಳು
ನಾಟಕಗಳು: ನನಗ್ಯಾಕೋ ಡೌಟು, ಭಲೇ ಮಲ್ಲೇಶ
ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬಹುಮಾನ ರಾಜ್ಯೋತ್ಸವ ಪ್ರಶಸ್ತಿ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following questions)
೧. ಸೂರ್ಯ ಏಕೆ ದುಡಿಯುತ್ತಿದ್ದಾನೆ?
ಉ: ಇಳೆಗೆ ಮಳೆ ತರಲು ಸೂರ್ಯ ದುಡಿಯುತ್ತಿದ್ದಾನೆ.
೨. ಭೂಮಿಯ ಪೋಷಕ ಯಾರು?
ಉ: ಭೂಮಿಯ ಪೋಷಕ ಸೂರ್ಯ.
೩. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು?
ಉ: ಸೂರ್ಯ ಮರೆಯದೆ ಇಳೆಗೆ ಬಿಸಿಲು – ಬೆಳಕು ನೀಡುವ ಕರ್ತವ್ಯ ಮಾಡುವನು.
೪. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ?
ಉ: ಬಿರು ಬಿಸಿಲಿಗೆ ಗಿಡಮರ, ಪೊದೆ – ಬಳ್ಳಿಗಳು ಕಂಗಾಲಾಗಿಲ್ಲ.
೫. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು?
ಉ: ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದು “ಕಷ್ಟಕ್ಕೆ ಹೆದರದೆ, ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ನಾವು ನಗುತ್ತಾ ಎಲ್ಲರನ್ನು ನಗಿಸುತ್ತಾ ಧನ್ಯತೆಯನ್ನು ಪಡೆಯಬೇಕು.
ಆ . ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ. (Write 2 synonyms )
೧. ಸೂರ್ಯ : ಭಾನು,ರವಿ
೨. ಇಳೆ : ಭೂಮಿ, ಧರೆ
೩. ಪ್ರಕೃತಿ : ನಿಸರ್ಗ, ನೈಸರ್ಗಿಕ
೪. ಸಂಭ್ರಮ : ಸಡಗರ, ಉತ್ಸಾಹ
ಇ. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ. (Make your own sentences)
೧) ಪೋಷಕರು: ನಮ್ಮ ಪೋಷಕರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ.
೨) ಕರ್ತವ್ಯ: ನಾವು ನಮ್ಮ ಕರ್ತವ್ಯವನ್ನು ಮಾಡಬೇಕು.
೩) ಸಂಭ್ರಮ: ದೀಪಾವಳಿ ಎಂದರೆ ನಮಗೆ ಸಂಭ್ರಮ.
೪) ಧನ್ಯತೆ: ನಾನು ಮಾಡುವ ಕೆಲಸದಲ್ಲಿ ಧನ್ಯತೆ ಇದೆ.
ಈ) ಬೇಸಿಗೆ ಪದ್ಯದ ಸಾರಾಂಶವನ್ನು ಬರೆಯಿರಿ. (Write the summary of Besage poem)
“ಬೇಸಿಗೆ” ಕವನವನ್ನು ಬಿ ಆರ್ ಲಕ್ಷ್ಮಣರಾವ್ ಅವರು ಬರೆದಿದ್ದಾರೆ. ಈ ಕವನದಲ್ಲಿ ಕವಿ ಬೇಸಿಗೆಯ ಬಿಸಿಲಿನಲ್ಲಿ, ಶಾಲೆಯ ರಜೆಯಲ್ಲಿ ಆಡುತ್ತಾ, ಸೂರ್ಯನ ಬಗ್ಗೆ ಹಾಡೋಣ ಎಂದು ಹೇಳಿದ್ದಾರೆ. ಸೂರ್ಯನ ತಾಪ ಏಕೆ ಹೀಗೆ? ಅವನಿಗೇಕೆ ಕೋಪ ಎಂದು ಕೇಳಬೇಡಿ. ರವಿಯು ಮೋಡಗಳನ್ನು ಕೂಡಿಸಿ ಭೂಮಿಗೆ ಮಳೆ ತರಲು ಪ್ರಯತ್ತಿಸುತ್ತಿದ್ದಾನೆ. ಭೂಮಿಯು ಬಣ್ಣಗಳಿಂದ ಕೂಡಿದೆ. ಎಲ್ಲಾ ಮರ ಗಿಡಗಳು, ಹಣ್ಣು ಹೂವುಗಳಿಂದ ಬೆಳೆದಿವೆ. ಸೂರ್ಯನು ಭೂಮಿಯ ಪೋಷಕ. ಅವನ ಹಾಗೇ ದಿನವೂ ನಾವು ಕರ್ತ್ವವ್ಯ ಮರೆಯದೇ ನಲಿಯುತ ಬಾಳೋಣ ಎಂದು ಬಿ ಆರ್ ಲಕ್ಷ್ಮಣರಾವ್ ರವರು ಹೇಳಿದ್ದಾರೆ.