Kanasu matu sandesha kannada chapter is about Dr APJ Abdul Kalam. Kanasu matu sandesha means dream and messege. Dr. A.P.J. Abdul Kalam, born on October 15, 1931, in Rameswaram, was a renowned Indian scientist and the 11th President of India. Known as the “Missile Man of India” for his role in missile and space programs, he served as President from 2002 to 2007. Loved by all, especially children, he believed in education and dreaming big. He authored inspiring books like Wings of Fire and Ignited Minds. While delivering a lecture, he passed away on July 27, 2015. His life continues to inspire millions.

The Kannada chapter Kanasu mattu Sandesha is about a dream of Dr. A.P.J. Abdul Kalam, where he imagines meeting his five favourite personalities—Emperor Ashoka, Albert Einstein, Khalif Umar, Mahatma Gandhi, and Abraham Lincoln. In this dream, he sees them engaging in a thoughtful conversation. Emperor Ashoka reflects on the principle of “Ahimsa Paramo Dharma” (non-violence is the ultimate dharma), while Mahatma Gandhi speaks about the power and importance of non-violence.

ಕನಸು ಮಾತು ಸಂದೇಶ ಕನ್ನಡ ಅಧ್ಯಾಯವು ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕುರಿತಾಗಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಕ್ಟೋಬರ್ ೧೫, ೧೯೩೧ರಂದು ರಾಮೇಶ್ವರಂನಲ್ಲಿ ಜನಿಸಿದರು. ಅವರು ಭಾರತದ ೧೧ ನೇ ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿಯಾಗಿದ್ದರು. ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ತಮ್ಮ ಪಾತ್ರಕ್ಕಾಗಿ “ಭಾರತದ ಕ್ಷಿಪಣಿ ಮನುಷ್ಯ” ಎಂದು ಕರೆಯಲ್ಪಡುವ ಅವರು ೨೦೦೨ ರಿಂದ ೨೦೦೭ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಎಲ್ಲರೂ, ವಿಶೇಷವಾಗಿ ಮಕ್ಕಳಿಂದ ಪ್ರೀತಿಸಲ್ಪಟ್ಟ ಅವರು ಶಿಕ್ಷಣ ಮತ್ತು ದೊಡ್ಡ ಕನಸುಗಳಲ್ಲಿ ನಂಬಿಕೆ ಇಟ್ಟಿದ್ದರು. ಅವರು ವಿಂಗ್ಸ್ ಆಫ್ ಫೈರ್ ಮತ್ತು ಇಗ್ನೈಟೆಡ್ ಮೈಂಡ್ಸ್‌ನಂತಹ ಸ್ಪೂರ್ತಿದಾಯಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಜುಲೈ ೨೭, ೨೦೧೫ರಂದು ಉಪನ್ಯಾಸ ನೀಡುತ್ತಿರುವಾಗ ನಿಧನರಾದರು.

ಕನಸು ಮತ್ತು ಸಂದೇಶ

ಅ. ಪದಗಳ ಅರ್ಥ ಬರೆಯಿರಿ. (Write the word meaning)

ಆಘಾತ = ಪೆಟ್ಟು, ಕೇಡು          ಆಹುತಿ = ಬಲಿ    ಕುಬ್ಜ = ಕುಳ್ಳ, ಸಣ್ಣವ ಕೃತ್ಯ = ಕೆಲಸ      ಧಿರಿಸು = ಉಡುಪು       ಧರಣಿ = ಭೂಮಿ ನೀರವತೆ = ಮೌನ, ನಿಶ್ಶಬ್ದ             ಭೀಬತ್ಸ = ಜಿಗುಪ್ಸೆ, ಅಸಹ್ಯ ಮರುಭೂಮಿ = ಮರಳು ತುಂಬಿದ ಭೂಮಿ ವಿಭಜಿತ = ಬೇರೆಯಾದ, ವಿಂಗಡಿಸಿದ
ಆರಾಧಿಸು = ಪೂಜಿಸು, ಸ್ಮರಿಸು ಉದ್ಯುಕ್ತ = ಪ್ರಯತ್ನಿಸು, ಸಿದ್ದವಾಗುವುದು     ಕೃತಜ್ಞತೆ = ಉಪಕಾರ, ಸ್ಮರಣೆ
ದಿಗಂತ = ಕ್ಷಿತಿಜ,          ದಿಗ್ವಿಜಯ = ರಾಜ್ಯಗಳನ್ನು ಜಯಿಸುವುದು, ನಿರ್ದಯಿ = ಕ್ರೂರಿ, ದಯೆ ಇಲ್ಲದವ
ಪವಾಡಸದೃಶ = ಆಶ್ಚರ್ಯಕರ ರೀತಿಯಲ್ಲಿ, ಭಾಸವಾಗು = ಕಾಣು, ತೋರು, ಅನ್ನಿಸುತ್ತದೆ   
ಮೇಧಾವಿ = ಬುದ್ಧಿವಂತ

I. ಪ್ರಶ್ನೆಗಳು

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)

೧. ಕಲಾಂ ಅವರು ಸಾಮಾನ್ಯವಾಗಿ ನಿತ್ಯ ಎಷ್ಟು ಗಂಟೆಗೆ ಮಲಗಿ ಎಷ್ಟು ಗಂಟೆಗೆ ಏಳುತ್ತಿದ್ದರು?
ಉ: ಕಲಾಂ ಅವರು ಸಾಮಾನ್ಯವಾಗಿ ನಿತ್ಯ ರಾತ್ರಿ ಒಂದು ಗಂಟೆಗೆ ಮಲಗಿ, ಬೆಳಿಗ್ಗೆ ಆರು ಗಂಟೆಗೆ ಏಳುತ್ತಿದ್ದರು.
೨. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವುದು?
ಉ: ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಮರುಭೂಮಿ.
೩. ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಯಾರು?
ಉ: ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಚಕ್ರವರ್ತಿ ಅಶೋಕ, ಮಹಾತ್ಮಾ ಗಾಂಧಿ, ಆಲ್ಬರ್ಟ ಐನ್‌ ಸ್ಟೀನ್, ಅಬ್ರಹಾಂ ಲಿಂಕನ್‌ ಮತ್ತು ಖಲೀಫ್ ಉಮಾರ್.‌
೪. ಅಶೋಕನು ಪ್ರತಿಪಾದಿಸಿದ ಧರ್ಮ ಯಾವುದು?
ಉ: ಅಶೋಕನು ಪ್ರತಿಪಾದಿಸಿದ ಅಹಿಂಸಾ ಧರ್ಮ.
೫. ಅಶೋಕನ ಪ್ರಕಾರ ನಿಜವಾದ ಗೆಲುವು ಯಾವುದು?
ಉ. ಅಶೋಕನ ಪ್ರಕಾರ ಶಾಂತಿ, ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣ  ನಿಜವಾದ ಗೆಲುವು.

ಇ. ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in 3 – 4 sentences)

೧.ಕಲಾಂ ಅವರಿಗೆ ನಿದ್ದೆಯಲ್ಲಿ ಯಾವ ಯಾವ ಯೋಚನೆಗಳು ಸುಳಿದಾಡಿದವು?
ಉ: ಕಲಾಂ ಅವರಿಗೆ ನಿದ್ರೆಯಲ್ಲಿ ಆ ದೇವರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದದು ಮಾನವ ಕುಲ, ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದೆ ಎಂಬ ಯೋಚನೆಗಳು ಸುಳಿದಾಡಿದವು.

೨. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವ ರೀತಿ ಇತ್ತು?
ಉ: ಕಲಾಮ್ ಅವರು ಕನಸಿನಲ್ಲಿ ಕಂಡ ಪ್ರದೇಶ ಒಂದು ಮರುಭೂಮಿಯಾಗಿತ್ತು. ಸುತ್ತ ನೋಡಿದರೂ ಮೈಲಿಗಟ್ಟಲೆ ಮರಳು. ದೂರ ದಿಗಂತದವರೆಗೂ ಮರಳು. ಆಗಸದಲ್ಲಿ ಪೂರ್ಣಚಂದ್ರ. ಮರುಭೂಮಿ ಉದ್ದಕ್ಕೂ ಹಾಲು ಬೆಳದಿಂಗಳು.

೩. ಕಳಿಂಗ ಯುದ್ಧದ ಪರಿಣಾಮವೇನು?
ಕಳಿಂಗ ಯುದ್ಧವು ಕಡಿಮೆ ಎಂದರೂ ಮೂರು ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಎಷ್ಟೋ ಜನ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು.

೩. ಕಲಾಂ ಅವರಿಗೆ ಕನಸಿನಲ್ಲಿ ಅಶೋಕನು ಕಂಡದ್ದು ಹೇಗೆ?
ಕಲಾಂ ಅವರ ಮನಸ್ಸಿನಲ್ಲಿ ಅಶೋಕ ಮಂಡಿಯೂರಿ ಕುಳಿತು ಕವಚ ಮತ್ತು ಕಿರೀಟವನ್ನು ಕಳಚಿಟ್ಟಿದ್ದನು. ಆತನ ಮುಖ ಯಾಕೋ ಕಳೆಗುಂದಿತ್ತು. ಅಸಂಖ್ಯ ಜನರ ಸಾವು ನೋವಿನಿಂದ ಆತ ಚಿಂತಿತನಾದಂತೆ ಕಂಡುಬರುತ್ತಿತ್ತು.

೪. ಕಲಾಂ ಅವರ ಕನಸಿನಲ್ಲಿ ಅಶೋಕನು ಯಾವ ಸಂದೇಶ ನೀಡಿದನು?
ಕಲಾಂ ಅವರ ಕನಸಿನಲ್ಲಿ ಅಶೋಕನು “ಜಯ ಎಂಬುದು ಸಾವು ನೋವು ಉಂಟುಮಾಡುವುದರಲ್ಲಿಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು” ಎಂಬ ಸಂದೇಶವನ್ನು ನೀಡಿದನು.

೫. ಕನಸಿನ ಬಗ್ಗೆ ಕಲಾಂ ಅವರ ಸಂದೇಶವೇನು?
“ಕನಸು ಕಾಣಿರಿ. ಕನಸುಗಳು ಯೋಚನೆಗಳ ರೂಪ ತಳೆಯುತ್ತವೆ”. ಆ ಯೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬುದು ಕನಸಿನ ಬಗ್ಗೆ ಕಲಾಂ ಅವರ ಸಂದೇಶ.

ಈ. ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in 7 – 8 sentences)

೧. ಕಲಾಂ ಅವರ ಕನಸಿನಲ್ಲಿ ಮಹಾತ್ಮ ಗಾಂಧೀಜಿ ಏನೆಂದು ಮಾತನಾಡಿದರು?
ಕಲಾಂ ಅವರ ಕನಸಿನಲ್ಲಿ ಮಹಾತ್ಮ ಗಾಂಧಿಯವರು “ಸ್ನೇಹಿತರೆ ನಮಗೆ ಕೇಳಿ ಬರುತ್ತಿರುವ ದಿವ್ಯ ಸಂದೇಶವು ಆ ಸೃಷ್ಟಿ ಮಾಡಿದವನದು. ನಾವೆಲ್ಲರೂ ಭೂಮಿಗೆ ಸೇರಿದವರಾಗಿರುವುದರಿಂದ ಇಡೀ ಮಾನವ ಕುಲಕ್ಕೆ ನಾವು ಈ ಸಂದೇಶವನ್ನು ತಲುಪಿಸಬೇಕಾಗಿದೆ. ಹಲವು ಜಾತಿ, ಜನಾಂಗ, ಮತ, ಧರ್ಮ ಹಾಗೂ ಭಾಷೆಗಳ ಜನರು ಶಾಂತಿ, ನೆಮ್ಮದಿಯಿಂದ ಏಳಿಗೆ ಸಾಧಿಸುತ್ತಾ ಹೇಗೆ ಬಾಳಬಹುದು ಎಂಬುದನ್ನು ನಾವು ತಿಳಿಸಿಕೊಡಬೇಕಾಗಿದೆ. ಆ ದೇವರು ನಮ್ಮೆಲ್ಲರಿಗೂ ವಿಶಿಷ್ಟವಾದ ಶಕ್ತಿಯನ್ನು ದಯಪಾಲಿಸಿದ್ದಾನೆ. ಅದನ್ನು ನಾವು ನಮ್ಮ ಸತ್ಕಾರ್ಯಗಳು ಹಾಗೂ ಶ್ರಮದ ಮೂಲಕ ಮಾನವ ಕುಲಕ್ಕೆ ತಲುಪಿಸಿದ್ದು ಆಗಿದೆ. ಆದರೆ ಅದರ ಪರಿಣಾಮ ಬೀರಿದೆಯೇ? ಅದಕ್ಕಾಗಿ ಯಾವುದಾದರೂ ದಿವ್ಯ ಸಂದೇಶ ಅಥವಾ ತತ್ವ ಇದೆಯೇ? ದೈವಿಕ ಸೌಂದರ್ಯವೂ ಮಾನವ ಹೃದಯವನ್ನು ಪ್ರವೇಶಿಸುವಂತೆ ಆಗಬೇಕು. ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.
೨. ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಏನು ಮಾಡಬೇಕು?
ಅಶೋಕ ಚಕ್ರವರ್ತಿ ಸಾರಿದ ಅಹಿಂಸಾ ಪರಮೋಧರ್ಮ ಸಿದ್ಧಾಂತದ ಮೂಲಕ ಮಾನವರ ನಡುವಣ ಪ್ರೀತಿಯ ಮಹತ್ವವನ್ನು ಅರಿಯಬೇಕು. ಅಶೋಕ ಚಕ್ರವರ್ತಿ ಹೇಳಿದಂತೆ ಜಯ ಎಂಬುದು ಸಾವು ನೋವು ಉಂಟುಮಾಡುವುದರಲ್ಲಿಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು. ಇವುಗಳನ್ನು ಸಾಧಿಸಿದಾಗ ಮಾನವನ ತನುಮನಗಳಲ್ಲಿ ಸಂತೋಷ ಅರಳಲು ಸಾಧ್ಯವಾಗುತ್ತದೆ.
ಗಾಂಧೀಜಿ ಹೇಳಿದಂತೆ ಹಲವು ಜಾತಿ, ಜನಾಂಗ, ಮತ, ಧರ್ಮಗಳ ಜನರು ಶಾಂತಿ ನೆಮ್ಮದಿಯಿಂದ ಬಾಳಬೇಕು. ದೈವಿಕ ಸೌಂದರ್ಯವೂ ಮಾನವ ಹೃದಯವನ್ನು ಪ್ರವೇಶಿಸುವಂತೆ ಆಗಬೇಕು.

ಉ. ಸಂದರ್ಭದೊಡನೆ ವಿವರಿಸಿರಿ. (Explain the context)

೧. “ನಾವು ನಿಜಕ್ಕೂ ಅದೃಷ್ಟ ಮಾಡಿರಬೇಕು”
ಈ ವಾಕ್ಯವನ್ನು ಅಬ್ದುಲ್ ಕಲಾಂ ಅವರು ರಚಿಸಿರುವ “ಪ್ರಜ್ವಲಿತ ದ್ವೀಪಗಳು” ಎಂಬ ಪುಸ್ತಕದಿಂದ ಆಯ್ದ “ಕನಸು ಮತ್ತು ಸಂದೇಶ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಓದುಗರಿಗೆ ಹೇಳುತ್ತಾರೆ.  
ಕಲಾಂರು ರಾತ್ರಿ ಬೊಕಾರೋಗೆ ಪಯಣಿಸುತ್ತಿದ್ದ ಹೆಲಿಕ್ಯಾಪ್ಟರ್ ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಭಾರಿ ಸದ್ದಾಗಿ ನೆಲಕಪ್ಪಳಿಸಿತು. ಆದರೆ ಎಲ್ಲರೂ ಪವಾಡ ಸದೃಶ ರೀತಿಯಲ್ಲಿ ಬದುಕಿದರು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.

೨. “ನನ್ನ ಅತ್ಯಂತ ಮೆಚ್ಚಿನ ಮಹಾಪುರುಷರು ಅವರು ನಾನು ಆರಾಧಿಸುವಂತವರು”
ಈ ವಾಕ್ಯವನ್ನು ಅಬ್ದುಲ್ ಕಲಾಂ ಅವರು ರಚಿಸಿರುವ “ಪ್ರಜ್ವಲಿತ ದ್ವೀಪಗಳು” ಎಂಬ ಪುಸ್ತಕದಿಂದ ಆಯ್ದ “ಕನಸು ಮತ್ತು ಸಂದೇಶ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಓದುಗರಿಗೆ ಹೇಳುತ್ತಾರೆ.
ಉದ್ವೇಗ ನಿವಾರಣೆಗೆಂದು ಔಷಧಿ ತೆಗೆದುಕೊಂಡು ಬೇಗನೆ ನಿದ್ರಿಸಿದ ಕಲಾಂರಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಮಾನವ ಕುಲ ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದೆ? ಹೀಗೆ ಏನೇನೋ ಯೋಚನೆಗಳು. ಆಗ ಅವರ ಕನಸಿನಲ್ಲಿ ಐವರು ಮಹಾಪುರುಷರಾದ ಮಹಾತ್ಮ ಗಾಂಧಿ, ಆಲ್ಬರ್ಟ ಐನ್‌ ಸ್ಟೀನ್, ಚಕ್ರವರ್ತಿ ಅಶೋಕ, ಅಬ್ರಹಾಂ ಲಿಂಕನ್ ಮತ್ತು ಖಲೀಫ್ ಉಮಾರ್ರು ಏನೇನೊ ಮಾತನಾಡುತ್ತಿರುವಂತೆ ಭಾಸವಾಯಿತು.

೩. “ಅಹಿಂಸಾ ಧರ್ಮದ ಉದಯವಾಯಿತು”
ಈ ವಾಕ್ಯವನ್ನು ಅಬ್ದುಲ್ ಕಲಾಂ ಅವರು ರಚಿಸಿರುವ “ಪ್ರಜ್ವಲಿತ ದ್ವೀಪಗಳು” ಎಂಬ ಪುಸ್ತಕದಿಂದ ಆಯ್ದ “ಕನಸು ಮತ್ತು ಸಂದೇಶ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಅಬ್ದುಲ್ ಕಲಾಂ ಅವರ ಕನಸಿನಲ್ಲಿ ಚಕ್ರವರ್ತಿ ಅಶೋಕ ಕಳಿಂಗ ಯುದ್ಧದ ಸಾವು ನೋವಿನಿಂದ ಬೇಸತ್ತು ಆಗಸದತ್ತ ನೋಡಿದ. ರಮ್ಯ ಮನೋಹರ, ಭೀಭತ್ಸ ದೃಶ್ಯಗಳ ಸಮಾಗಮದ ಆ ಕ್ಷಣದಲ್ಲಿ ಅಶೋಕನ ಕೃತ್ಯದ ಬಗ್ಗೆ ಸ್ವತಃ ನಿಸರ್ಗವೇ ಅಸಹನೆಯಲ್ಲಿತ್ತು. ಆ ಕ್ಷಣದಲ್ಲಿ ಅಹಿಂಸಾಧರ್ಮದ ಉದಯವಾಯಿತು ಎಂಬುದನ್ನು ಕಾಣುತ್ತಾರೆ.

೪. “ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು”
ಈ ವಾಕ್ಯವನ್ನು ಅಬ್ದುಲ್ ಕಲಾಂ ಅವರು ರಚಿಸಿರುವ “ಪ್ರಜ್ವಲಿತ ದ್ವೀಪಗಳು” ಎಂಬ ಪುಸ್ತಕದಿಂದ ಆಯ್ದ “ಕನಸು ಮತ್ತು ಸಂದೇಶ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಅಶೋಕ ಚಕ್ರವರ್ತಿ ಅಬ್ದುಲ್ ಕಲಾಂ ಅವರ ಕನಸಿನಲ್ಲಿ ಹೇಳುತ್ತಾನೆ.
ಕಳಿಂಗ ಯುದ್ಧದ ನಂತರ ಅಹಿಂಸಾಧರ್ಮವನ್ನು ಪಾಲಿಸಿದ ಅಶೋಕ ಚಕ್ರವರ್ತಿ, ಜಯ ಎಂಬುದು ಸಾವು ನೋವು ಉಂಟುಮಾಡುವುದರಲ್ಲಿ ಇಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು ಎಂಬ ಸಂದೇಶವನ್ನು ಸಾರುತ್ತಾನೆ. ಆ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.

II. ಭಾಷಾಭ್ಯಾಸ

೧. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ದಿಟ್ಟಿಸು = ನಾನು ಆಕಾಶವನ್ನು ದಿಟ್ಟಿಸಿ ನೋಡಿದೆ.
ಪವಾಡ ಸದೃಶ = ಕಲಾಂರು ಪವಾಡ ಸದೃಶ ರೀತಿಯಲ್ಲಿ ಬದುಕಿದರು.
ಸವಿನಿದ್ದೆ = ಎಲ್ಲರಿಗೂ ಸವಿನಿದ್ದೆ ಅವಶ್ಯಕ.
ಅಹಿಂಸೆ = ಗಾಂಧೀಜಿಯವರು ಅಹಿಂಸೆಯ ಬದುಕು ಬದುಕಿದರು.
ಸತ್ಕಾರ್ಯ = ನಾವು ಸತ್ಕಾರ್ಯ ಮಾಡಬೇಕು.

೨. ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write Tatsama – Tadbhava)

ಸಹಸ್ರ –                               ದಿಟ್ಟಿ – ದೃಷ್ಟಿ
ಸೃಷ್ಟಿ –                                 ಕ್ಷಣ – ಚಣ
ಧರ್ಮ –  ದಮ್ಮ                      ಪಯಣ – ಪ್ರಯಾಣ
ಆಗಸ – ಆಕಾಶ              ಯುದ್ಧ – ಜುದ್ಧ

೩. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite word)

ಕೃತಜ್ಞತೆ X  ಕೃತಘ್ನತೆ             ದಯೆ X ನಿರ್ದಯೆ                           
ಸತ್ಕಾರ್ಯ X ದುಷ್ಕಾರ್ಯ       ಅನಿರೀಕ್ಷಿತ X ನಿರೀಕ್ಷಿತ
ಅದೃಷ್ಟ X    ದುರಾದೃಷ್ಟ            ಹಿಂಸೆ X ಅಹಿಂಸೆ
ಅಸಹನೆ X ಸಹನೆ

೪. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ನೆಲಕಪ್ಪಳಿಸು = ನೆಲಕ್ಕೆ + ಅಪ್ಪಳಿಸು
ಅಂಗಾಂಗ = ಅಂಗ + ಅಂಗ
ದಿಗಂತ = ದಿಕ್‌ + ಅಂತ
ಅತ್ಯಂತ = ಅತಿ + ಅಂತ್ಯ
ದಿಗ್ವಿಜಯ = ದಿಕ್‌ + ವಿಜಯ
ಕಳೆಗುಂದು = ಕಳೆ + ಕುಂದು

೫. ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ. (Write the synonym)

ಯುದ್ಧ = ಕದನ, ಸಮರ, ಕಾಳಗ
ಭೂಮಿ = ಇಳೆ, ಧರೆ, ಧರಣಿ
ಆರಾಧಿಸು = ಪೂಜಿಸು, ಅರ್ಚಿಸು
ಯಾತನೆ = ನೋವು, ಹಿಂಸೆ

Click here to download kansu mathu sandesh exercise