Mitrara Samagama kannada chapter grade 8th. Mitrara Samagama unfolds the unique bond between Emperor Akbar and his witty minister Birbal. Though one wore the crown and the other held courtly duties, their friendship ran deep beyond royal roles. One day, in a moment of anger, Akbar commanded Birbal never to show his face again. Days passed, and the emperor, though stubborn, began to feel the void left by Birbal’s absence. He searched high and low, but Birbal was nowhere to be found.
Just as the court grew dull without Birbal’s sharp wit, a mysterious sage appeared in Akbar’s darbar, claiming he could outwit the finest minds in debate. Eager to test his claim, Akbar turned to his esteemed ministers—Tansen, Abul Fazal, Faizi, and Todarmal—who began posing challenging questions to the sage

Akbar’s scholars Abul Fazl, Todar Malla, Faizi and Tanasena asked this question.
Abul Fazl: What is lost that cannot be regained?
Sadhu: Life, opportunity, time.
Todar Malla: Who is the best friend in the world?
Sadhu: Knowledge, foresight of a person.
Faizi: What is the best thing in the world?
Sadhu: Knowledge
Mansingh: What is the best quality of a person? What is faster than the wind? What is the sweetest? Sadhu: The best quality of a person is courage, faster than the wind is the imagination of a man, the sweetest is the laughter of a child.
Tanasena: What is indestructible in music?
Sadhu: Swaragalu
ಮಿತ್ರರ ಸಮಾಗಮ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಅವಿನಾಶಿ = ನಾಶವಿಲ್ಲದ್ದು, ಆಜ್ಞೆ = ಅಪ್ಪಣೆ,
ಕೌಶಲ = ಜಾಣತನ, ನಿಪುಣತೆ, ತೇಜಸ್ವಿ = ತೇಜಸುಳ್ಳವ, ಕಾಂತಿಯುಳ್ಳವ
ದ್ವಾರ = ಬಾಗಿಲು, ಮಿತ್ರ = ಸ್ನೇಹಿತ, ಗೆಳೆಯ
ಸಮಾಗಮ = ಸೇರುವುದು, ಅಸಮಾಧಾನ = ಬೇಸರ, ಅತ್ರಪ್ತಿ
ಆಲಂಗಿಸು = ಅಪ್ಪಿಕೊಳ್ಳು ಆತುರ = ಕಾತರ,
ದರ್ಬಾರು = ರಾಜಾಸ್ಥಾನ, ಅಧಿಕಾರ ನಡೆಸುವಿಕೆ ಮಾರುತ = ಗಾಳಿ,
ರಾಜ್ಯಭಾರ=ರಾಜ್ಯದ ಹೊಣೆಗಾರಿಕೆ, ಆಳ್ವಿಕೆ ಸ್ವಾರ್ಥ = ಸ್ವಹಿತ, ಸ್ವಪ್ರಯೋಜನ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಅಕ್ಬರ್ ಮತ್ತು ಬೀರಬಲ್ ಇವರ ನಡುವಿನ ಸಂಬಂಧ ಯಾವ ರೀತಿಯಲ್ಲಿ ಇತ್ತು?
ಉ: ಅಕ್ಬರ್ ಮತ್ತು ಬೀರಬಲ್ ರಾಜ ಮತ್ತು ಮಂತ್ರಿಯಾಗಿದ್ದರೂ, ಆತ್ಮೀಯ ಮಿತ್ರರಾಗಿದ್ದರು.
೨. ಅಕ್ಬರ್ ಬೀರಬಲ್ ನನ್ನು ಏಕೆ ಹುಡುಕಾಡಿಸಿದನು?
ಉ: ಅಕ್ಬರ್ ನಿಗೆ ಬೀರಬಲ್ ನನ್ನು ನೋಡುವ ತವಕ ಆಗಿದ್ದಕ್ಕೆ ಹುಡುಕಾಡಿಸಿದನು.
೩. ಅರಮನೆಯನ್ನು ಪ್ರವೇಶಿಸಿದ ಸಾಧು ಹೇಗಿದ್ದನು?
ಉ: ಅರಮನೆಯನ್ನು ಪ್ರವೇಶಿಸಿದ ಸಾಧು ತುಂಬಾ ತೇಜಸ್ವಿಯಾಗಿದ್ದು, ಬುದ್ದಿವಂತನಂತೆ ಕಾಣುತ್ತಿದ್ದನು.
೪. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರೇನು?
ಉ: ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರು ತಾನ್ ಸೇನ್, ತೋದರಮಲ್ಲ, ಅಬುಲ್ ಫಜಲ್, ಫೈಜಿ಼ ಮತ್ತು ಮುಂತಾದವರು.
೫. ಅತ್ಯುತ್ತಮವಾದ ವಸ್ತು ಯಾವುದು?
ಉ: ಅತ್ಯುತ್ತಮವಾದ ವಸ್ತು ಜ್ಞಾನ.
೬. ಕಳೆದು ಹೋದವುಗಳಲ್ಲಿ ಮತ್ತೆ ಪಡೆಯಲು ಸಾಧ್ಯವಾಗದೆ ಇರುವವು ಯಾವುದು?
ಉ: ಕಳೆದು ಹೋದವುಗಳಲ್ಲಿ ಮತ್ತೆ ಪಡೆಯಲು ಸಾಧ್ಯವಾಗದೆ ಇರುವವು ಜೀವ, ಅವಕಾಶ ಮತ್ತು ಸಮಯ.
ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಬೀರಬಲ್ ಅಕ್ಬರನಿಗೆ ಕಾಣದಂತೆ ಏಕೆ ಮರೆಯಾಗಿದ್ದನು?
ಉ: ಅಕ್ಬರನು ಬೀರಬಲ್ಲನ ಮೇಲೆ ಅಸಮಾಧಾನಗೊಂಡು ಹೊರಟು ಹೋಗಲು ಹೇಳಿದನು. ಅದಕ್ಕೆ ಬೀರಬಲ್ ಅಕ್ಬರನಿಗೆ ಕಾಣದಂತೆ ಮರೆಯಾಗಿದ್ದನು.
೨. ಸೇವಕನು ಸಾಧುವಿನ ಬಗ್ಗೆ ಅಕ್ಬರ್ ನಲ್ಲಿಗೆ ಬಂದು ಏನೆಂದು ಹೇಳಿದನು?
ಉ: ಸೇವಕನು ಸಾಧುವಿನ ಬಗ್ಗೆ ಅಕ್ಬರ್ ನಲ್ಲಿ “ಅರಮನೆಯ ದ್ವಾರದಲ್ಲಿ ಒಬ್ಬ ಸಾಧು ಬಂದಿದ್ದಾರೆ. ಅವರು ವಿಶ್ವದಲ್ಲಿ ದೊಡ್ಡ ಮೇಧಾವಿ ಮತ್ತು ಬುದ್ಧಿವಂತರೆಂದು” ಎಂದು ಹೇಳಿದನು.
೩. ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್ ಏನೆಂದು ಹೇಳಿದನು?
ಉ: “ ಸಾಧು ! ನೀನು ಬಹಳ ಬುದ್ಧಿವಂತನೆಂದು ಕೇಳಿದ್ದೇನೆ. ನಮ್ಮ ಆಸ್ಥಾನದ ಪಂಡಿತರು ನಿನಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಸರಿಯಾಗಿ ಉತ್ತರಿಸಿದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತೇನೆ” ಎಂದು ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್ ಹೇಳಿದನು.
೪. ಮಾನ್ಸಿಂಗನ ಪ್ರಶ್ನೆಗಳಿಗೆ ಸಾಧುವಿನ ಉತ್ತರಗಳೇನು?
ಉ: ಮಾನ್ಸಿಂಗನ ಪ್ರಶ್ನೆಗಳಿಗೆ ಸಾಧುವು ವ್ಯಕ್ತಿಯ ಸಾಮರ್ಥ್ಯ ಆತನ ಧೈರ್ಯ, ಮಾರುತಕ್ಕಿಂತ ವೇಗವಾದದ್ದು ಕಲ್ಪನೆ, ಅತ್ಯಂತ ಸಿಹಿಯಾದದ್ದು ಮಗುವಿನ ನಗು ಎಂದು ಉತ್ತರಿಸಿದನು.
೫. ಸಾಧುವಿನ ಉತ್ತರಗಳಿಂದ ಸಂತಸ ಪಟ್ಟ ಅಕ್ಬರ್ ಏನು ಹೇಳಿದನು?
ಉ: ಸಾಧುವಿನ ಉತ್ತರಗಳಿಂದ ಸಂತಸ ಪಟ್ಟ ಅಕ್ಬರ್ ಸಾಧುವಿಗೆ ತನ್ನ ಆಸ್ಥಾನದಲ್ಲಿ ಒಂದು ಸ್ಥಾನವನ್ನು ಕೊಡುವದಾಗಿ ಹೇಳಿದನು.
೬. ಅಕ್ಬರನಿಗೆ ಸಾಧು ನನ್ನ ನಿಜರೂಪವನ್ನು ಹೇಗೆ ತೋರಿಸಿದನು?
ಉ: ಸಾಧು ತನ್ನ ಗಡ್ಡ ಮೀಸೆಗಳನ್ನು ಕಳಚಿ ಅಕ್ಬರನಿಗೆ ತನ್ನ ನಿಜರೂಪವನ್ನು ತೋರಿಸಿದನು.
ಈ. ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ. (Answer the following in seven to eight sentences)
೧. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಹಾಗೂ ಸಾಧುವಿನ ನಡುವೆ ನಡೆದ ಸಂಭಾಷಣೆ ಏನು?
ಉ: ಅಕ್ಬರನ ವಿದ್ವಾಂಸರಾದ ಅಬುಲ್ ಫಜಲ್, ತೋದರಮಲ್ಲ, ಫೈಜಿ಼ ಹಾಗೂ ತಾನಸೇನ ಈ ರೀತಿ ಪ್ರಶ್ನೆ ಕೇಳಿದರು.
ಅಬುಲ್ ಫಜಲ್: ಕಳೆದು ಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು?
ಸಾಧು: ಜೀವ, ಅವಕಾಶ, ಸಮಯ .
ತೋದರಮಲ್ಲ: ಜಗತ್ತಿನಲ್ಲಿ ಅತ್ಯುತ್ತಮವಾದ ಸ್ನೇಹಿತನಾರು?
ಸಾಧು: ಯುಕ್ತಾಯುಕ್ತ ಪರಿಜ್ಞಾನ, ವ್ಯಕ್ತಿಯ ಮುಂದಾಲೋಚನೆ.
ಫೈಜಿ಼: ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು?
ಸಾಧು: ಜ್ಞಾನ
ಮಾನ್ಸಿಂಗ್: ಒಬ್ಬ ವ್ಯಕ್ತಿಯ ಅತ್ಯುತ್ತಮವಾದ ಸಾಮರ್ಥ್ಯ ಯಾವುದು? ಮಾರುತಕ್ಕಿಂತ ವೇಗವಾದುದು ಯಾವುದು? ಅತ್ಯಂತ ಸಿಹಿಯಾದದು ಯಾವುದು? ಸಾಧು: ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ ಧೈರ್ಯ, ಮಾರುತಕ್ಕಿಂತ ವೇಗವಾದುದು ಮನುಷ್ಯನ ಕಲ್ಪನೆ, ಅತ್ಯಂತ ಸಿಹಿಯಾದದು ಮಗುವಿನ ನಗು.
ತಾನಸೇನ: ಸಂಗೀತದಲ್ಲಿ ಅವಿನಾಶ ಯಾವುದು?
ಸಾಧು: ಸ್ವರಗಳು
ಈ. ಯಾರು ಯಾರಿಗೆ ಹೇಳಿದರು? (Who told whom)
೧. “ಎಂಥ ಕೆಲಸ ಆಗಿ ಹೋಯಿತು”
ಉ: ಈ ಮಾತನ್ನು ಅಕ್ಬರ್ ತನಗೆ ತಾನೇ ಹೇಳಿದನು.
೨. “ಕಳೆದು ಹೋದದ್ದನ್ನು ಮತ್ತೆ ಪಡೆಯಲಾಗದ್ದು ಯಾವುದು?”
ಉ: ಈ ಮಾತನ್ನು ಅಬುಲ್ ಫಜ಼ಲ್ ಸಾಧುವಿಗೆ ಕೇಳಿದನು.
೩. “ ನನ್ನ ಮಂತ್ರಿ ಬೀರಬಲ್ ಕಾಣೆಯಾಗಿದ್ದಾನೆ”.
ಉ: ಈ ಮಾತನ್ನು ಅಕ್ಬರ್ ಸಾಧುವಿಗೆ ಹೇಳಿದನು.
ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ ಬೀರಬಲ್ಲ.
೨. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ಸಾಧು.
೩. ಮಾರುತಕ್ಕಿಂತ ವೇಗವಾದುದ್ದು ಕಲ್ಪನೆ.
ಭಾಷಾಭ್ಯಾಸ
ಊ: ಕೆಳಗೆ ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಅಸಮಾಧಾನ X ಸಮಾಧಾನ ಮಿತ್ರ X ಶತ್ರು
ಸೇವಕ X ದೊರೆ ಬುದ್ಧಿವಂತ X ದಡ್ಡ
ನಗು X ಅಳು ಸಿಹಿ X ಕಹಿ
ಸ್ವಾರ್ಥ X ನಿಸ್ವಾರ್ಥ ಜ್ಞಾನ X ಅಜ್ಞಾನ
ಎ. ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the word)
೧. ಅತ್ಯುತ್ತಮ = ಅತಿ + ಉತ್ತಮ
೨. ಮುಖವನ್ನು= ಮುಖ + ಅನ್ನು
೩. ಅವನೊಬ್ಬ= ಅವನು + ಒಬ್ಬ
೪. ಕಾಣೆಯಾಗು = ಕಾಣೆ + ಆಗು
ಏ. ಕೆಳಗೆ ಕೊಟ್ಟಿರುವ ಪದಗಳಿಗೆ ಸ್ವಂತ ವಾಕ್ಯ ರಚಿಸಿ. (Make your own sentences)
೧.ತವಕ = ನನಗೆ ನನ್ನ ಮಿತ್ರನನ್ನು ನೋಡುವ ತವಕ ಇದೆ.
೨.ಮೇಧಾವಿ = ಬೀರಬಲ್ಲನು ಒಬ್ಬ ಮೇಧಾವಿಯಾಗಿದ್ದನು.
೩.ತೇಜಸ್ವಿ = ಬೀರಬಲ್ಲನ ಮುಖದಲ್ಲಿ ತೇಜಸ್ವಿ ಕಳೆಯಿತ್ತು.
೪. ಉಡುಗೊರೆ = ನನಗೆ ಉಡುಗೊರೆ ತುಂಬಾ ಇಷ್ಟ.
೫. ಜ್ಞಾನ = ಬೀರಬಲ್ಲನು ಜ್ಞಾನದ ಭಂಡಾರವಾಗಿದ್ದನು.