Ajiiya totadalli ondu dina kannada lesson grade IV is about children visiting friend’s grandmother’s farm in malnanad. Ajiiya totadalli ondu dina introduces children to the farm.
Kanaburu is a beautiful village in the Malnad region. The higher primary school children were excited when their teachers planned a visit to Kishor’s grandmother’s farm. It was a special day filled with learning and fun.
As the children entered the farm, Ajji (Kishor’s grandmother) welcomed them warmly. She took them around and showed them the different crops she grows. The students saw cashew, areca nut (betel nut), coconut, banana, and black pepper plants. They also visited the green paddy fields, which looked fresh and lively.
Ajji explained many things about farming. She showed the rainwater harvesting pits and told the children how these pits help to store rainwater and increase the water level in the wells. She also explained how her farm uses only organic manures like earthworm compost and cow dung manure instead of chemical fertilizers.
The teachers then introduced the children to the different tools used in farming, helping them understand how farmers work hard to grow crops.
In the end, Ajji shared some tasty cashews from her farm with the children. The visit not only gave them knowledge about farming but also taught them the importance of protecting nature and using eco-friendly methods.
ಅಜ್ಜಿಯ ತೋಟದಲ್ಲಿ ಒಂದು ದಿನ
ಅ) ಪದಗಳ ಅರ್ಥ ಬರೆಯಿರಿ. (Word Meaning)
ಧನ್ಯವಾದ = ಕೃತಜ್ಞತೆ ಅರ್ಪಿಸುವದು
ಚರ್ಚಿಸು = ವಾದಮಾಡು, ಚರ್ಚೆಮಾಡು
ವಿಶಾಲ = ವಿಸ್ತಾರ
ಪ್ರಕೃತಿ = ನಿಸರ್ಗ
ವಿಧಾನ = ರೀತಿ
ಹೆಕ್ಕು = ಆರಿಸು
ಬಹುಶಃ = ಬಹುತೇಕ
ಹಬ್ಬು = ಹರಡು
ತೋಡು = ಅಗೆ, ಬಗಿ
ಆ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following questions in one sentence)
೧. ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೊರಟರು?
ಉ: ಮಕ್ಕಳು ಕಿಶೋರನ ಅಜ್ಜನ ತೋಟಕ್ಕೆ ಹೊರ ಸಂಚಾರ ಹೊರಟರು.
೨. ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?
ಉ: ಸಾಮಾನ್ಯವಾಗಿ ಹೊಲವನ್ನು ನೇಗಿಲು , ನೊಗ , ಎತ್ತು , ಕೋಣವನ್ನು ಬಳಸಿ ಉಳುತ್ತಾರೆ.
೩. ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?
ಉ: ಎರೆಗೊಬ್ಬರವನ್ನು ಎರೆಹುಳದಿಂದ ತಯಾರಿಸುತ್ತಾರೆ .
೪. ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?
ಉ: ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು .
೫. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು?
ಉ: ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಊಳುವ ಯಂತ್ರವನ್ನು ನೋಡಿದಳು.
ಇ) ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. ( Answer in two – three sentences)
೧. ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?
ಉ: ಅಜ್ಜಿಯ ತೋಟದಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಕಾಫಿ, ಏಲಕ್ಕಿ ಗಿಡಗಳಿದ್ದವು .
೨. ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?
ಉ: ಹೊಲವನ್ನು ನೇಗಿಲು , ನೊಗ , ಎತ್ತು , ಕೋಣವನ್ನು ಬಳಸಿ ಉಳುತ್ತಿದ್ದರು. ಈಗ ಹೊಸ ಯಂತ್ರಗಳು ಬಂದಿವೆ ಎಂದು ಉಳುಮೆಯ ಬಗ್ಗೆ ಗುರುಗಳು ವಿವರಣೆ ನೀಡಿದರು.
೩. ಇಂಗುಗುಂಡಿಯ ಪ್ರಯೋಜನಗಳೇನು?
ಉ: ಇಂಗುಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಬಾವಿಯಲ್ಲಿ ನೀರು ಎಂದಿಗೂ ಕಡಿಮೆ ಆಗುವುದಿಲ್ಲ. ಇವು ಇಂಗುಗುಂಡಿಗಳ ಪ್ರಯೋಜನಗಳಾಗಿವೆ.
ಈ) ವಾಕ್ಯದಲ್ಲಿ ಬಿಟ್ಟಿರುವ ಸ್ಥಳಕ್ಕೆ ಸರಿಯಾದ ಪದ ತುಂಬಿ. (Fill in the blanks)
೧. ಕಿಶೋರನ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ.
೨. ಮನೆಯ ಹಿಂದಿನ ಗುಡ್ಡದಲ್ಲಿ ಅಡಿಕೆ ತೋಟಗಳಿವೆ.
೩. ಮಳೆಯ ನೀರನ್ನು ಗುಂಡಿಗಳ ಮೂಲಕ ಇಂಗಿಸುತ್ತೇವೆ.
೪. ಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದರು.
ಉ) ಹೊಂದಿಸಿ ಬರೆ. (Match of the following)
ಅ ಆ
೧. ಎರೆಹುಳ ಹಿರೇಕಾಯಿ
೨. ಕೊಕೊ ಭತ್ತ
೩. ತೆನೆ ಚಾಕಲೇಟು
೪ ಮಳೆಕೊಯ್ಲು ರೈತನಮಿತ್ರ
೫. ಹಟ್ಟಿಗೊಬ್ಬರ ಅಂತರ್ಜಲ
ಸಾವಯವ ಗೊಬ್ಬರ
ಊ) ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ. (Make your own sentence)
೧. ಕಿರುಚು = ಅವನು ಕಿರುಚುತ್ತಿದ್ದನು.
೨. ಹೊರ ಸಂಚಾರ = ನಾನು ಹೊರ ಸಂಚಾರಕ್ಕೆ ಹೋಗಿದ್ದೆ.
೩. ಹಾರೈಕೆ = ನಿಮಗೆ ನನ್ನ ಹಾರೈಕೆ ಇದೆ.
೪. ಹುಲುಸಾಗಿ = ಹುಲ್ಲು ಹುಲುಸಾಗಿ ಬೆಳೆದಿದೆ.
ಋ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ. (Write the odd one out)
೧. ತೆಂಗು, ಅಡಿಕೆ, ಬಾಳೆ, ಭತ್ತ
೨. ಮೊಲ, ಹಂದಿ, ಮುಂಗುಸಿ, ಚಿಟ್ಟೆ
೩. ಸೀಬೆಕಾಯಿ, ಸಪೋಟ, ಅನಾನಸು, ಕೊಕೊ
ಎ) ಕೆಳಗಿನವುಗಳನ್ನು ಕೂಡಿಸಿ ಬರೆಯಿರಿ. (Join the words)
ಒಂದು + ಆದ = ಒಂದಾದ
ಇಲ್ಲಿ + ಒಂದು = ಇಲ್ಲೊಂದು
ಹೇರಳ + ಆಗಿ = ಹೇರಳವಾಗಿ
ಹದ + ಆಗಿತ್ತು = ಹದವಾಗಿತ್ತು
ಏ) ನಿಮ್ಮ ಶಾಲಾ ಕೈತೋಟದಲ್ಲಿ ಏನೇನು ಬೆಳೆಯಬೇಕು? ಹೇಗೆ ಬೆಳೆಸಬೇಕು? ಎಂದು ತರಗತಿಯಲ್ಲಿ ಚರ್ಚಿಸಿ ನಿಮ್ಮ ತೀರ್ಮಾನವನ್ನು ಕೆಳಗೆ ಬರೆಯಿರಿ.
ಉ: ನಮ್ಮ ಶಾಲಾ ಕೈತೋಟದಲ್ಲಿ ನಾವು ತರಕಾರಿಗಳನ್ನು ಬೆಳೆಯಬೇಕು. ಪಾಲಕ್, ಟೊಮೇಟೊ, ಹುರುಳಿಕಾಯಿ, ಕ್ಯಾರೆಟ್, ಕೊತ್ತಂಬರಿ ಹೀಗೆ ಮುಂತಾದ ತರಕಾರಿಗಳನ್ನು ಬೆಳೆಯಬೇಕು. ನಾವು ಇದಕ್ಕೆ ನೀರನ್ನು ಹಾಕಿ ಒಳ್ಳೆಯ ಸಾವಯವ ಗೊಬ್ಬರವನ್ನು ಹಾಕಿ ಬೆಳೆಯಬೇಕು.
ಐ) ನಿಮ್ಮ ಶಾಲೆಯಲ್ಲಿ ರೈತನೊಬ್ಬನನ್ನು ಸನ್ಮಾನಿಸುವ ಸಮಾರಂಭದ ಮುಖ್ಯ ಅತಿಥಿಯಾಗಿ ನೀನು ಮಾಡುವ ಭಾಷಣವನ್ನು ಇಲ್ಲಿ ಬರೆ. ನಂತರ ತರಗತಿಯಲ್ಲಿ ಶಿಕ್ಷಕರೆದುರು ಭಾಷಣ ಮಾಡು.
ಉ: ನಮ್ಮ ಊರಿನ ರೈತನಾದ ರಮೇಶನು ತುಂಬಾ ಒಳ್ಳೆಯ ರೀತಿಯಲ್ಲಿ ತರಕಾರಿಗಳನ್ನು ಬೆಳೆಸಿದ್ದಾನೆ. ಸಾವಯವ ಗೊಬ್ಬರವನ್ನು ಹಾಕಿ ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ ಈ ತರಕಾರಿಗಳನ್ನು ಬೆಳೆದಿದ್ದಾನೆ. ಈ ತರಕಾರಿಗಳು ಎಲ್ಲರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿಯೊಬ್ಬರು ಸಾವಯವ ಕೃಷಿಯನ್ನು ಮಾಡಬೇಕು.
ಒ) ನಿನ್ನ ಶಾಲೆಗೆ ಜಮೀನು ಕೊಟ್ಟರೆ ನೀನೇನು ಮಾಡುವೆ?
ಉ: ನನ್ನ ಶಾಲೆಗೆ ಜಮೀನು ಕೊಟ್ಟರೆ ನಾನು ತರಕಾರಿಗಳನ್ನು ಬೆಳೆಸುತ್ತೇನೆ. ಪಾಲಕ್, ಟೊಮೇಟೊ, ಹುರುಳಿಕಾಯಿ, ಕ್ಯಾರೆಟ್, ಕೊತ್ತಂಬರಿ ಹೀಗೆ ಮುಂತಾದ ತರಕಾರಿಗಳನ್ನು ಬೆಳೆಯುತ್ತೇನೆ. ಇದಕ್ಕೆ ನೀರನ್ನು ಹಾಕಿ ಒಳ್ಳೆಯ ಸಾವಯವ ಗೊಬ್ಬರವನ್ನು ಹಾಕಿ ಬೆಳೆಯುತ್ತೇನೆ.
ಓ) ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಏನಾಗಬಹುದು?
ಉ: ರೈತರು ಕೈ ಕೆಸರಾಗುತ್ತದೆ ಎಂದು ಸುಮ್ಮನೆ ಕುಳಿತರೆ ಕೃಷಿ ಮಾಡುವುದಿಲ್ಲ. ಇದರಿಂದ ಆಹಾರವನ್ನು ಬೆಳೆಯುವದಿಲ್ಲ. ಆಗ ನಮಗೆ ಆಹಾರದ ಕೊರತೆ ಉಂಟಾಗುತ್ತದೆ.