Krishna sudhama drama grade VI kannada is about Krsna and sudama’s friendship. Krishna sudhama kannada drama written by V S Shirahattimat. They both were childhood friends who studied together at Sage Sandipani’s ashram. Sudama lived a life of poverty, while Krishna became the mighty king of Dwaraka. Years later, Sudama’s wife urged him to seek help from Krishna. Hesitant but hopeful, Sudama carried a small gift of beaten rice, the only thing he could afford. Krishna welcomed his dear friend with immense love and respect, valuing the friendship over riches. Though Sudama never asked for help, Krishna silently blessed him. When Sudama returned home, he found his hut transformed into a palace, symbolizing divine grace and true friendship.

ಕೃಷ್ಣ – ಸುಧಾಮ (ನಾಟಕ)

ಲೇಖಕ – ವಿ.ಎಸ್ . ಶಿರಹಟ್ಟಿಮಠ
ಜನನ – ೦೧-೦೨-೧೯೫೩
ಸ್ಥಳ – ಗದಗ ಜಿಲ್ಲೆಯ, ಹೊಂಬಳ ಗ್ರಾಮ
ತಂದೆ – ಶಂಕರಯ್ಯ  
ತಾಯಿ – ಗುರುಸಿದ್ದವ್ವ
ವೃತ್ತಿ – ಮುಖ್ಯೋಪಾಧ್ಯಾಯರು , ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ , ಹಲಗಲಿ
ಪ್ರವೃತ್ತಿ – ಅನುವಾದಕರು, ನಾಟಕಕಾರರು
ಕೃತಿಗಳು –  ನಾಟಕಗಳು – ತುಂಬದ ಕೊಡ , ನರಗುಂದ ಬಂಡಾಯ , ಮಾಡಿದ್ದುಣ್ಣೆ ಮಾರಾಯ , ಗುಣವಂತ, ರಾಜಕುಮಾರ ಮುಂತಾದ 60 ಕ್ಕೂ ಹೆಚ್ಚಿನ ಮಕ್ಕಳ ನಾಟಕ ರಚಿಸಿದ್ದಾರೆ. 
ಪ್ರಶಸ್ತಿಗಳು – 2002 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.

ಅ) ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ. (Write two synonyms to the each word)

೧. ಗೆಳೆಯ – ಮಿತ್ರ , ಸ್ನೇಹಿತ
೨. ಹೆಂಡತಿ – ಪತ್ನಿ , ಶ್ರೀಮತಿ , ಮಡದಿ
೩. ರಾಜ – ಅರಸ , ರಾಯ 
೪. ದುಡಿಮೆ – ಪರಿಶ್ರಮ , ಶ್ರಮಿಸು 

ಆ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ. (Make your own sentences)

೧. ಪರಮಮಿತ್ರ : ಸುಧಾಮನು ಕೃಷ್ಣನ ಪರಮಮಿತ್ರ.
೨. ವಿಶ್ರಾಂತಿ : ನನಗೆ ಈಗ ವಿಶ್ರಾಂತಿ ಬೇಕು.
೩. ಸತ್ಕಾರ : ಕೃಷ್ಣನು ಸುಧಾಮನ ಸತ್ಕಾರ ಮಾಡಿದನು.
೪. ಸಂತೋಷ :  ನನಗೆ ಸಂತೋಷ ಆಯಿತು.
೫. ಶ್ರಮಿಸು : ನಾನು ತುಂಬಾ ಶ್ರಮಿಸುತ್ತೇನೆ. 

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಸುಧಾಮ ಯಾವುದನ್ನು ಮಾನವಧರ್ಮ ಎನ್ನುತ್ತಾನೆ?
ಉ: ಸುಧಾಮ “ ಜೀವನದಲ್ಲಿ ಬಂದುದ್ದನ್ನು ಅನುಭವಿಸುವುದು ” ಮಾನವ ಧರ್ಮ ಎಂದು ಹೇಳುತ್ತಾನೆ. 

೨. ಯಾರಿಗಾಗಿ ಶ್ರೀಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ? 
ಉ: ಮಕ್ಕಳಿಗಾಗಿ ಶ್ರೀ ಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ.

೩. ಸುಧಾಮನ ಕಣ್ಣಲ್ಲಿ ನೀರು ಏಕೆ ಬಂತು?
ಉ: ಶ್ರೀ ಕೃಷ್ಣ ಸುಧಾಮನ ಕೈ ಹಿಡಿದು ಒಳಗೆ ಕರೆದುಕೊಂಡು ಬಂದಾಗ ಸುಧಾಮನ ಕಣ್ಣಲ್ಲಿ ಸಂತೋಷದಿಂದ ನೀರು ಬಂತು. 

೪. ಮನೆಗೆ ಮರಳಿದ ಸುಧಾಮನು ಏನನ್ನು ಕಂಡನು? 
ಉ: ಮನೆಗೆ ಮರಳಿದ ಸುಧಾಮನು ತನ್ನ ಮನೆಯ ಜಾಗದಲ್ಲಿ ದೊಡ್ಡ ಅರಮನೆ ನೋಡಿದನು. ಹೆಂಡತಿ, ಮಕ್ಕಳು ರೇಷ್ಮೆ ವಸ್ತ್ರ ಧರಿಸಿ , ಮೈಮೇಲೆ ಚಿನ್ನದ ಒಡವೆಗಳನ್ನು ಧರಿಸಿದ್ದನ್ನು ನೋಡಿದನು. 

೫. ಸುಧಾಮನ ಮನೆಯನ್ನು ಕಟ್ಟಿಸಿದವರು ಯಾರು? 
ಉ: ಸುಧಾಮನ ಮನೆಯನ್ನು ಕಟ್ಟಿಸಿದವರು ಶ್ರೀಕೃಷ್ಣ. 

ಈ) ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in five – six sentences)

೧. ಕೃಷ್ಣ – ಸುಧಾಮರು ಗುರುಕುಲದಲ್ಲಿ ಕಳೆದ ದಿನಗಳನ್ನು ಪರಸ್ಪರ ನೆನಪಿಸಿಕೊಂಡದ್ದು ಹೇಗೆ ?
ಉ: ಕೃಷ್ಣ ಸುಧಾಮರು ಗುರುಕುಲದಲ್ಲಿ ಒಟ್ಟಿಗೆ ಊಟ ಮಾಡಿದ್ದನ್ನು ನೆನೆಪಿಸಿಕೊಂಡರು. ಕಟ್ಟಿಗೆ ತರಲು ಹೋಗುತ್ತಿದ್ದದ್ದು , ಗುರುಮಾತೆ ಕೊಟ್ಟಿದ್ದ ಹುರಿದ ಕಡಲೆ ತಿಂದದ್ದನ್ನು ನೆನೆಪಿಸಿಕೊಂಡರು. ಕೃಷ್ಣನು ಸುಧಾಮನ ಕಡಲೆ ಕಸಿದು ತಿಂದದ್ದನ್ನು ನೆನೆಪಿಸಿಕೊಂಡರು.

೨. ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ವಿವರಿಸಿರಿ. 
ಉ: ಸುಧಾಮನು ದ್ವಾರಕ ನಗರ ತಲುಪಿದ ದಿನವೇ ಅಲ್ಲಿಂದ ಸೇವಕರು ಬಂದರು. ಬೇಕಾದ ಎಲ್ಲಾ ವಸ್ತುಗಳನ್ನು ತಂದು, ಮನೆ ನಿರ್ಮಿಸಿದರು ಎಂದು  ಶ್ರೀ ಕೃಷ್ಣನು ಮನೆ ಕಟ್ಟಿಸಿದ ರೀತಿಯನ್ನು ಸುಧಾಮನ ಹೆಂಡತಿ ಈ ರೀತಿ ವಿವರಿಸಿದಳು.  

ಉ) ಕೆಳಗಿನ ಮಾತುಗಳನ್ನು ಯಾರು , ಯಾರಿಗೆ , ಯಾವಾಗ ಹೇಳಿದರು? (Who told whom and when)

೧. ನನ್ನನ್ನು ಕಂಡರೆ ಅವನಿಗೆ ಅಪಾರ ಪ್ರೀತಿ , ಸ್ನೇಹ , ಗೌರವ. 
ಆಯ್ಕೆ: ಈ ವಾಕ್ಯವನ್ನು  ವಿ.ಎಸ್ . ಶಿರಹಟ್ಟಿಮಠ ಅವರು ಬರೆದ ʼಕೃಷ್ಣ- ಸುಧಾಮʼ ಪಾಠದಿಂದ ಆರಿಸಲಾಗಿದೆ.
ಈ ಮಾತನ್ನು ಸುಧಾಮನು ಹೆಂಡತಿಗೆ ಹೇಳಿದನು.  
ಸಂದರ್ಭ: ಶ್ರೀ ಕೃಷ್ಣನಲ್ಲಿ ಸಹಾಯ ಕೇಳಲು ಹೇಳುವ ಸಂದರ್ಭದಲ್ಲಿ ಹೇಳಿದನು. 

೨. ಹಸಿದಿರುವ ಮಕ್ಕಳಿಗೋಸ್ಕರನಾದರೂ ಹೋಗಿ ಕೇಳಿ. 
ಆಯ್ಕೆ: ಈ ವಾಕ್ಯವನ್ನು  ವಿ.ಎಸ್ . ಶಿರಹಟ್ಟಿಮಠ ಅವರು ಬರೆದ ʼಕೃಷ್ಣ- ಸುಧಾಮʼ ಪಾಠದಿಂದ ಆರಿಸಲಾಗಿದೆ.
ಈ ಮಾತನ್ನು ಸುಧಾಮನ ಹೆಂಡತಿ, ಸುಧಾಮನಿಗೆ ಹೇಳಿದಳು.
ಸಂದರ್ಭ: ಕೃಷ್ಣನಲ್ಲಿ ಮಕ್ಕಳಿಗೋಸ್ಕರ ಸಹಾಯ ಕೇಳಲು ಹೇಳುವ ಸಂದರ್ಭದಲ್ಲಿ ಹೇಳಿದಳು. 

೩. ನನಗೆ ಗುರುಕುಲದ ಜೀವನ ನೆನಪಾಗುತ್ತದೆ. 
ಆಯ್ಕೆ: ಈ ವಾಕ್ಯವನ್ನು  ವಿ.ಎಸ್ . ಶಿರಹಟ್ಟಿಮಠ ಅವರು ಬರೆದ ʼಕೃಷ್ಣ- ಸುಧಾಮʼ ಪಾಠದಿಂದ ಆರಿಸಲಾಗಿದೆ.
ಈ ಮಾತನ್ನು ಕೃಷ್ಣನು ಸುಧಾಮನಿಗೆ ಹೇಳಿದನು.
ಸಂದರ್ಭ: ಗುರುಕುಲದ ಜೀವನ ನೆನಪಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದನು.

೪. ನಿಮಗೂ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ. 
ಆಯ್ಕೆ: ಈ ವಾಕ್ಯವನ್ನು  ವಿ.ಎಸ್ . ಶಿರಹಟ್ಟಿಮಠ ಅವರು ಬರೆದ ʼಕೃಷ್ಣ- ಸುಧಾಮʼ ಪಾಠದಿಂದ ಆರಿಸಲಾಗಿದೆ.
ಈ ಮಾತನ್ನು ಸುಧಾಮನ ಹೆಂಡತಿ, ಸುಧಾಮನಿಗೆ ಹೇಳಿದಳು.
ಸಂದರ್ಭ: ಶ್ರೀ ಕೃಷ್ಣನನ್ನು ಭೇಟಿ ಮಾಡಿ ಬಂದಾಗ ಸುಧಾಮನ ಹೆಂಡತಿ ಮಕ್ಕಳು ರೇಷ್ಮೆ ಬಟ್ಟೆ ತೊಟ್ಟಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಿದಳು.

Click here to download krsna sudhama exercises