‘Mangala grahakke putti’ kannada poem about a girl imaginig going to the planet mars. This poem beautifully narrates the imagination of a little girl, Puṭṭi, who dreams of flying. Suddenly, she grows wings and soars into the sky with great joy. She first reaches the moon and sees Earth shining like a purple ball. Then she flies further to Mars, where she meets a rock named Yogi. The rock sadly tells her the tragic story of Mars—once full of water, trees, and life, but destroyed when people cut down trees and life disappeared. It warns Puṭṭi that Earth too could face the same fate if greenery is lost. Shocked by this, Puṭṭi promises to protect Earth’s greenery. Returning home, she urges people to plant trees and preserve nature. She herself plants saplings and dances happily, spreading the message that protecting plants and trees is the only way to save life on Earth. The poem teaches us the value of trees, greenery, and responsibility.

ಮಂಗಳ ಗ್ರಹದಲ್ಲಿ ಪುಟ್ಟಿ

ಆಗಸದಲ್ಲಿ ಹಾರುವುದೆಂದರೆ 

ಪುಟಾಣಿ ಪುಟ್ಟಿಗೆ ಬಲು ಇಷ್ಟ 

ರೆಕ್ಕೆಗಳಿಲ್ಲದೆ ಹಾರಲು ಹೋದರೆ 

ಆಗದೆ ತೊಂದರೆ ? ಇದು ಕಷ್ಟ

ಒಂದಿನ ಇದ್ದಕ್ಕಿದ್ದಂತೆ

ಪುಟ್ಟಿಗೆ ರೆಕ್ಕೆಯು ಬಂದಿತ್ತು

ಹಕ್ಕಿಯ ಹಾಗೆ ಹಾರುವ ಮನಕೆ

ಹೆಚ್ಚಿನ ಹರುಷವ ತಂದಿತ್ತು

ಕೂಡಲೇ ಪುಟ್ಟಿ ಠಣ್ಣನೆ ಜಿಗಿದು

ಆಗಸದೊಡಲಿಗೆ ಹಾರಿದಳು

ಹಾರುತ ತೇಲುತ ಮುಂದಕ್ಕೆ ಸಾಗಿ

ಚಂದ್ರನ ಮಡಿಲನು ಸೇರಿದಳು

ಚಂದ್ರನ ಮೇಲೆ ನೆಟ್ಟಗೆ ನಿಂತು

ಭೂಮಿಯ ಕಡೆಗೆ ನೋಡಿದರೆ

ನೇರಳೆ ಬಣ್ಣದ ಚೆಂಡಿನ ಹಾಗೆ

ಕಂಡಿತು ಅವಳಿಗೆ ನಮ್ಮ ಧರೆ

ಚಂದ್ರನ ಬಿಟ್ಟು ಮೇಲಕ್ಕೆ ಹಾರಿ

ಸೇರಲು ಮಂಗಳನಂಗಳವ

ಕೆಂಪಗೆ ಬಣಬಣಗುಟ್ಟುತಲಿತ್ತು

ಕಾಣಲಿಲ್ಲ ಯಾವುದೇ ಜೀವ

ಕಂಡಳು ಮಂಗಳನಲ್ಲಿ

ʼಯೋಗಿʼ ಹೆಸರಿನ ಹೆಬ್ಬಂಡೆ

ಒಡನೆ ಕೇಳಿದಳು ಕೆಂಪು ಬಂಡೆಯನು

ʼನೀನು ಹೇಗೆ ಇಲ್ಲಿಗೆ ಬಂದೆ?ʼ

ಬಂಡೆಯು ಕಣ್ಣೀರನ್ನು ಸುರಿಸುತ್ತಾ

ಹೇಳಿತು ಪುಟ್ಟಿಗೆ ನೋವಿನಲ್ಲಿ

ಪುಟ್ಟಿಯೇ ನಮ್ಮಿ ಮಂಗಳ ಗ್ರಹದ

ದುರಂತ ಕಥೆಯನು ಕೇಳಿ ತಿಳಿ

ಇಂತೊಂದು ಕಾಲದ ಈ ಗ್ರಹದಲ್ಲಿ

ಇತ್ತು ಜೀವಜಲ ಹಸಿರುಮರ

ಆಗಿನ ಜನತೆಯು ನಾಡನು ಕಟ್ಟಲು

ಮರಗಳ ಕಡೆಗೆ ಬಂತು ಬರ

ಮಳೆಬೆಳೆ ಕಾಣದೆ ಜೀವಿಯು ಅಳಿದು

ಬಂದಿತು ನಮಗೆ ಇಂಥ ಸ್ಥಿತಿ 

‘ನಿಮ್ಮ ಭೂಮಿಯಲ್ಲಿ ಗಿಡಮರ ಅಳಿದರೆ 

ಮುಂದೆ ಒಂದು ದಿನ ಇದೇ ಗತಿ’

ಬಣ ಬಣ ಗುಟ್ಟುವ ಬಯಲನು

ಕಂಡು ಡವಡವ ಗುಟ್ಟಿತು ಎಳೆ ಹೃದಯ

ಹಸಿರನ್ನು ಅಳಿಸದೆ ಗಿಡಮರ ಬೆಳೆಸಿ

ಉಳಿಸುವ ಎಂದಳು ಈ ಧರೆಯ

ಭೂಮಿಗೆ ಬಂದು ಜನತೆಯ ಕಂಡು

ಹಸಿರನು ಉಳಿಸಲು ಬೇಡಿದಳು

ತಾನು ಕೂಡ ಎಳ ಸಸಿಗಳ ನೆಟ್ಟು

ಬೆಳೆಸುತ ಕುಣಿಕುಣಿದಾಡಿದಳು

ಅ) ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)

೧. ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆ ಬಂದಿತ್ತು.

೨. ಹಾರುತ ತೇಲುತ ಮುಂದಕೆ ಸಾಗಿ ಚಂದ್ರನ ಮಡಿಲನು ಸೇರಿದಳು.

೩. ಪುಟ್ಟಿಯೇ ನಮ್ಮಿ ಮಂಗಳಗ್ರಹದ ದುರಂತ ಕಥೆಯನ್ನು ಕೇಳಿ ತಿಳಿ.

೪. ಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ಈ ಧರೆಯ

ಆ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)

೧. ಪುಟ್ಟಿಗೆ ಯಾರ ಹಾಗೆ ಹಾರುವ ಮನಸ್ಸಿತ್ತು? 

ಉ: ಪುಟ್ಟಿಗೆ ಹಕ್ಕಿಯ ಹಾಗೆ ಹಾರುವ ಮನಸ್ಸಿತ್ತು.

೨. ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಎಲ್ಲಿಗೆ ಸೇರಿದಳು? 

ಉ: ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಮಂಗಳನ ಅಂಗಳಕ್ಕೆ ಸೇರಿದಳು. 

೩. ಪುಟ್ಟಿ ಯೋಗಿಗೆ ಏನೆಂದು ಕೇಳಿದಳು?

ಉ: ಪುಟ್ಟಿ ಯೋಗಿಗೆ “ನೀನು ಹೇಗೆ ಇಲ್ಲಿಗೆ ಬಂದೆ?” ಎಂದು ಕೇಳಿದಳು. 

೪. ಮಂಗಳ ಗ್ರಹದಲ್ಲಿ ಬರ ಏಕೆ ಬಂದಿತು? 

ಉ: ಆಗಿನ ಜನತೆಯು ನಾಡನು ಕಟ್ಟಲು, ಮರಗಳನ್ನು ಕಡಿದರು. ಇದರಿಂದಾಗಿ ಬರ ಬಂದಿತು. 

೫. ಪುಟ್ಟಿ ಜನರಲ್ಲಿ ಏನನ್ನು ಉಳಿಸಲು ಬೇಡಿದಳು? 

ಉ: ಪುಟ್ಟಿ ಜನರಲ್ಲಿ ಹಸಿರನ್ನು ಉಳಿಸಲು ಬೇಡಿದಳು. 

ಇ. ಪದ್ಯಭಾಗವನ್ನು ಪೂರ್ಣಗೊಳಿಸಿರಿ. (Complete the poem)

ಆಗಸದಲ್ಲಿ ಹಾರುವುದೆಂದರೆ 

ಪುಟಾಣಿ ಪುಟ್ಟಿಗೆ ಬಲು ಇಷ್ಟ 

ರೆಕ್ಕೆಗಳಿಲ್ಲದೆ ಹಾರಲು ಹೋದರೆ 

ಆಗದೆ ತೊಂದರೆ ? ಇದು ಕಷ್ಟ

ಮಳೆಬೆಳೆ ಕಾಣದೆ ಜೀವಿಯು ಅಳಿದು

ಬಂದಿತು ನಮಗೆ ಇಂಥ ಸ್ಥಿತಿ 

‘ನಿಮ್ಮ ಭೂಮಿಯಲ್ಲಿ ಗಿಡಮರ ಅಳಿದರೆ 

ಮುಂದೆ ಒಂದು ದಿನ ಇದೇ ಗತಿ’

ಈ) ಸಿ.ಎಂ.ಗೋವಿಂದರೆಡ್ಡಿಯವರ ಸ್ಥಳ , ಕಾಲ , ಕೃತಿಗಳ ವಿವರ ತಿಳಿಸಿರಿ. (Write place, time and novels of C M Govinda Reddy)

ಸಿ.ಎಂ.ಗೋವಿಂದರೆಡ್ಡಿಯವರು ೧೧.೦೮.೧೯೫೮ ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೆನ್ನಿಗರಾಯನಪುರ ಎಂಬ ಗ್ರಾಮದಲ್ಲಿ ಜನಿಸಿದರು . ಪ್ರಸ್ತುತ ಇವರು ಬೆಂಗಳೂರಿನ ಕಾಡುಗೋಡಿನ ಪ್ರಥಮ ದರ್ಜೆಕಾಲೇಜಿನಲ್ಲಿ ಕನ್ನಡ  ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರು ʼಬಣ್ಣದ ಚಿಟ್ಟೆʼ ʼಮಕ್ಕಳ ಮಂದಾರʼ ʼಪದ್ಯ ಹೇಳುವ ಮರʼ ಮೊದಲಾದ ಕೃತಿಗಳನ್ನುರಚಿಸಿದ್ದಾರೆ. ಇವರಿಗೆ ʼಪೆರ್ಲ ಕಾವ್ಯ ಪ್ರಶಸ್ತಿ‘  ʼಸಿಸು ಸಂಗಮೇಶದತ್ತಿ  ಬಹುಮಾನ‘ ಸೇರಿದಂತೆ ವಿವಿಧ ಬಹುಮಾನಗಳು ದೊರೆತಿವೆ.

ಉ) ನಾಮಪದ , ನಾಮಪ್ರಕೃತಿ , ಮತ್ತು ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಬರೆಯಿರಿ. 

೧. ಗಗನ + ಅನ್ನು = ಗಗನವನ್ನು 

ಉ: ನಾಮಪ್ರಕೃತಿ + ದ್ವಿತೀಯ ವಿಭಕ್ತಿ = ನಾಮಪದ 

೨. ಶಾಲೆ + ಇಂದ = ಶಾಲೆಯಿಂದ 

ಉ: ನಾಮಪ್ರಕೃತಿ + ತೃತೀಯ ವಿಭಕ್ತಿ = ನಾಮಪದ

ಊ) ಕೊಟ್ಟಿರುವ ವಾಕ್ಯಗಳಲ್ಲಿರುವ ಗುಣವಾಚಕ ( ವಿಶೇಷಣ ) ಗಳನ್ನು ಗುರುತಿಸಿರಿ.  (Adjective)

ಉದಾ : ವಿವೇಕನಿಗೆ ಅಪಾರ ಬುದ್ಧಿವಂತಿಕೆಯಿದೆ . – ಅಪಾರ 

ರಫೀಕ್‌ನದು ದೊಡ್ಡಮನೆ – ದೊಡ್ಡ

ಅವಳಿಗೆ ಹಸಿರು ಬಣ್ಣ ಇಷ್ಟ – ಹಸಿರು 

ಪುಟ್ಟಿಯು ಕಂಡಳು ಕೆಂಪು ಬಂಡೆಯನು – ಕೆಂಪು 

ಋ) ಕೊಟ್ಟಿರುವ ವಾಕ್ಯಗಳಲ್ಲಿ ಸಂಖ್ಯಾವಾಚಕಗಳನ್ನು ಗುರುತಿಸಿ ಬರೆಯಿರಿ. (Write the numerals)

ಡೇವಿಡ್‌ ಊರಿನಲ್ಲಿ ನೂರು ಹಸುಗಳಿವೆ – ನೂರು 

ಪೂರ್ಣಚಂದ್ರನು ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ – ಐದು

ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆಯು ಬಂದಿತ್ತು – ಒಂದು

Click here to download Mangala gruhakke puti