Panchatantra kannada lesson grade VI explains a story called “Speaking Cave”. Panchatantra has many short stories that gives insight about Friendship differences, friendship benefits, war and peace, loss of benefits and rash acts.
Vishnusharma wrote Panchatantra. Once upon a time, in a forest, there lived a fox. It had made its home in a cave in a deserted area. One day, while the fox was away, a hungry lion came to that cave. When the lion sniffed around the cave, it could smell the fox. Thinking it could eat the fox when it returned, the lion stayed inside the cave. By evening, the fox came back and reached the cave. But seeing the faint footprints of a lion near the cave, the fox grew suspicious. Using its wit, the fox shouted, “Dear cave, every day you welcome me, but today you are silent. Your silence is a sign of danger.” The lion, fooled by the fox’s words, replied from inside, “Oh Mr. Fox, please come in.” Immediately, the fox laughed and thought, “This is no talking cave; it’s the lion inside.” It ran away at once. In this way, the fox saved its life through cleverness. This story teaches us the importance of wisdom, intelligence, and alertness.
ಪಂಚತಂತ್ರ
ಪದಗಳ ಅರ್ಥ
ಅಪೂರ್ವ = ಅಪರೂಪದ, ಶ್ರೇಷ್ಠವಾದ
ಊಳಿ = ಗಟ್ಟಿಯಾಗಿ ಕೂಗು
ಕಂಗಾಲು = ದುರ್ಬಲವಾಗು
ಕೊಂಚ = ಸ್ವಲ್ಪ
ಚಾವಣಿ = ಮಾಳಿಗೆ ಮನೆ, ಮೇಲಿನ ಆವರಣ
ನಿರ್ಜನ = ಜನವಸತಿ ಇಲ್ಲದ
ಪಲಾಯನ = ಓಟ, ಪರಾರಿ, ತಪ್ಪಿಸಿಕೋ
ಮುಸ್ಸಂಜೆ = ಸೂರ್ಯ ಮುಳುಗುವ ಸಮಯ
ವ್ಯರ್ಥ = ನಿರುಪಯುಕ್ತ
ಪುರಾತನ = ಹಳೆಯ ಕಾಲದ
ಉದಾತ್ತ = ಶ್ರೇಷ್ಠ
ಏಕಾಂತ = ಪ್ರಶಾಂತ ಸ್ಥಳ
ಕಾಲಿಗೆ ಬುದ್ಧಿ ಹೇಳು = ಓಡಿ ಹೋಗು
ಗುಹೆ = ಗವಿ, ಕಲ್ಲಿನ ದೊಡ್ಡಪುಟರೆ
ನಿಶ್ಚಯಿಸು = ನಿರ್ಧರಿಸು, ಗೊತ್ತು ಮಾಡು
ಪಟ್ಟ = ಅಧಿಕಾರ ಸ್ಥಾನ
ಮಂದಿ = ಜನ
ಲಕ್ಷ್ಯ = ಗಮನ
ಸಂದೇಹ = ಸಂಶಯ ಅನುಮಾನ
ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Answer the following in one semtence)
೧. ರಾಜನಿಗೆ ತನ್ನ ಮಕ್ಕಳ ಬಗ್ಗೆ ಏಕೆ ದುಃಖವಾಯಿತು?
ಉ: ರಾಜನಿಗೆ ತನ್ನ ಮಕ್ಕಳು ಸೋಮಾರಿಯಾಗಿದ್ದಕ್ಕೆ ದುಃಖವಾಯಿತು.
೨. ರಾಜನು ವಿದ್ವಾಂಸರ ಸಭೆಯನ್ನು ಏಕೆ ಕರೆದನು?
ಉ: ರಾಜನು ವಿದ್ವಾಂಸರ ಸಭೆಯನ್ನು ತನ್ನ ಸಮಸ್ಯೆಗಾಗಿ ಕರೆದನು.
೩. ವಿಷ್ಣುಶರ್ಮನು ರಾಜನಿಗೆ ಏನೆಂದು ಹೇಳಿದನು ?
ಉ: ವಿಷ್ಣುಶರ್ಮನು ರಾಜನಿಗೆ ತನ್ನ ಕೈಲಾದದ್ದನ್ನು ಮಾಡುತ್ತೇನೆ ಎಂದನು.
೪. ವಿಷ್ಣುಶರ್ಮ ಕಥೆಗಳನ್ನು ಹೇಗೆ ಆರಂಭಿಸುತ್ತಿದ್ದನು?
ಉ: ಗೋದಾವರಿ ನದಿ ತೀರದಲ್ಲಿ ದೊಡ್ಡದೊಂದು ಮರ. ಬೇರೆ ಬೇರೆ ದಿಕ್ಕುಗಳಿಂದ ಬರುತ್ತಿದ್ದ ಪಕ್ಷಿಗಳೆಲ್ಲ ರಾತ್ರಿ ಹೊತ್ತು ಆ ಮರದಲ್ಲಿ ಆಶ್ರಮ ಪಡೆಯುತ್ತಿದ್ದವು. ಹೀಗೆ ವಿಷ್ಣುಶರ್ಮ ಕಥೆಗಳನ್ನು ಆರಂಭಿಸುತ್ತಿದ್ದನು.
೫. ಸಿಂಹವು ನರಿಯನ್ನು ಹೇಗೆ ಸ್ವಾಗತಿಸಿತು?
ಉ: ಸಿಂಹವು ನರಿಯನ್ನು “ನರಿರಾಯರೇ ಬರಬೇಕು” ಎಂದು ಸ್ವಾಗತಿಸಿತು.
೬. ನರಿಯು ತನ್ನ ಗುಹೆಯನ್ನು ಏಕೆ ತ್ಯಜಿಸಿತು?
ಉ: ನರಿಯು ತನ್ನ ಗುಹೆಯನ್ನು ಜೀವ ಉಳಿಸಿಕೊಳ್ಳಲು ತ್ಯಜಿಸಿತು.
೭. ‘ಮಾತನಾಡುವ ಗುಹೆ’ ಕಥೆಯ ನೀತಿ ಏನು?
ಉ: ‘ಮಾತನಾಡುವ ಗುಹೆ’ ಕಥೆಯ ನೀತಿ ಕಷ್ಟದಲ್ಲಿ ಧೈರ್ಯದಿಂದ ಇರಬೇಕು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ವಿಷ್ಣುಶರ್ಮನು ಯಾರು?
ಉ: ವಿಷ್ಣುಶರ್ಮ ಒಬ್ಬ ವಿದ್ವಾಂಸ. ಅವನು ತನ್ನ ಜ್ಞಾನದಿಂದ ಇಡೀ ದೇಶಕ್ಕೆ ಪ್ರಸಿದ್ಧನಾಗಿದ್ದನು.
೨. ಆತನ ಮಾತುಗಳಿಂದ ರಾಜನಿಗೆ ಏಕೆ ಸಂತೋಷವಾಯಿತು?
ಉ: ದೇಶಕ್ಕೆ ಪ್ರಸಿದ್ಧನಾದ ವಿದ್ವಾಂಸ ವಿಷ್ಣುಶರ್ಮನು ರಾಜನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವೆನು ಎಂದನು. ಅದಕ್ಕೆ ಆತನ ಮಾತುಗಳಿಂದ ರಾಜನಿಗೆ ಸಂತೋಷವಾಯಿತು.
೩. ವಿಷ್ಣುಶರ್ಮನು ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದ ಸ್ಥಳ ಯಾವ ರೀತಿ ಇತ್ತು?
ಉ: ಅರಮನೆಯ ಸುತ್ತಮುತ್ತ ಮರಗಳಿದ್ದವು. ಅರಮನೆಯ ಮೇಲ್ಛಾವಣಿಯ ಮೇಲೆ ನರಳು ಬೀಳುತ್ತಿತ್ತು. ಆ ಛಾವಣಿಯ ಒಂದು ಮೂಲೆಯಲ್ಲಿ ವಿಷ್ಣುಶರ್ಮನು ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದನು.
೪. ಸಿಂಹವು ನರಿ ಗುಹೆಯಲ್ಲಿಯೇ ಏಕೆ ಉಳಿಯಿತು?
ಉ: ಸಿಂಹವು ಗುಹೆಯನ್ನು ಮೂಸಿದಾಗ ನರಿಯ ವಾಸನೆ ಬಂದಿತು. ನರಿ ತಿರುಗಿ ಬಂದಾಗ ಅದನ್ನು ತಿನ್ನಬಹುದೆಂದು ಸಿಂಹವು ನರಿ ಗುಹೆಯಲ್ಲಿಯೇ ಉಳಿಯಿತು.
೫. ನರಿಯು ಗುಹೆಯೊಳಗೆ ಸಿಂಹ ಇರುವುದನ್ನು ಹೇಗೆ ಪರೀಕ್ಷಿಸಿತು?
ಉ: ನರಿಯು ಗುಹೆಯ ಹೊರಗೆ ಅಸ್ಪಷ್ಟವಾದ ಸಿಂಹದ ಹೆಜ್ಜೆಯ ಗುರುತು ಕಂಡಿತು. ಸಂದೇಹದಿಂದ ಅದು ಗುಹೆಗೆ , “ಎಲೈ ಮಾತಾಡುವ ಗುಹೆ, ನಿನಗೆ ಏನಾಗಿದೆ? ಸಾಮಾನ್ಯವಾಗಿ ನಾನು ಮನೆಗೆ ಬಂದಾಗಲೆಲ್ಲ ನೀನು ನನ್ನನ್ನು ಕುರಿತು ನರಿಯೇ ದಯಮಾಡಿಸಬೇಕು ಎಂದು ಹೇಳಿ ನನ್ನನ್ನು ಬರಮಾಡಿಕೊಳ್ಳುತ್ತಿದ್ದೆ. ಆದರೆ ಈ ದಿನ ನೀನು ಮೌನ. ನಾನು ಒಳಕ್ಕೆ ಬರಬಾರದು ಎಂದು ನಿನ್ನ ಇಷ್ಟ ಎಂದು ನಾನು ನಂಬಲೇ” ಎಂದು ಹೇಳಿ ಸಿಂಹ ಇರುವುದನ್ನು ಪರೀಕ್ಷಿಸಿತು.
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ಪಂಚತಂತ್ರದ ಕಥೆಗಳು ಹುಟ್ಟಿಕೊಂಡದ್ದು ಹೇಗೆ?
ಉ: ಪುರಾತನ ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಮೂರು ಮಕ್ಕಳಿದ್ದರು. ಆ ಮೂವರು ಸೋಮಾರಿಯಾಗಿದ್ದರು. ಅವರಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿಲ್ಲ. ಆಗ ವಿಷ್ಣುಶರ್ಮನು ಆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಹೇಳಿಕೊಡುವ ಪ್ರಯತ್ನ ಮಾಡುವದಾಗಿ ಹೇಳಿದನು. ಅವನು ಕೆಲವು ಕಥೆಗಳನ್ನು ಹೇಳುತ್ತಾ ಹೋದನು. ಅವೆಲ್ಲ ಮೃಗಪಕ್ಷಿಗಳನ್ನು ಕುರಿತ ಕಥೆಗಳು. ಆದರೆ ಅದು ಮನುಷ್ಯನ ಬೇರೆ ಬೇರೆ ಸಮಸ್ಯೆಗಳನ್ನು, ಅವುಗಳ ಪರಿಹಾರಗಳನ್ನು ಕುರಿತ ಕಥೆಗಳು. ಉದಾಹರಣೆಗೆ, ಆದರ್ಶ ಸ್ನೇಹಿತರು ಗೆಳೆತನವನ್ನು ಉಳಿಸಿಕೊಂಡು ಬರುವುದು ಹೇಗೆ? ನಮಗೆ ವಿನಾಶತರಬಲ್ಲ ಆಸೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಒಳ್ಳೆಯವನಾಗಿದ್ದು ಜಾಗರೂಕನಾಗುವುದು ಹೇಗೆ? ಉದಾತ್ತನಾಗಿದ್ದು ಚತುರನಾಗಿರುವುದು ಹೇಗೆ? ಎಂಬುದನ್ನು ಈ ಕಥೆಗಳು ತೋರಿಸಿ ಕೊಡುತ್ತವೆ. ರಾಜಕುಮಾರರು ಜ್ಞಾನವನ್ನು ಈ ಕಥೆಗಳಿಂದ ಪಡೆದರು. ವಿಷ್ಣುಶರ್ಮನು ಬರೆದ ಈ ಕಥೆಗಳು ಪಂಚತಂತ್ರದ ಕಥೆಗಳಾಗಿ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ಹೇಳಲಾಗಿದೆ. ಹೀಗೆ ಪಂಚತಂತ್ರದ ಕಥೆಗಳು ಹುಟ್ಟಿಕೊಂಡವು.
೨. ಮಾತನಾಡುವ ಗುಹೆ ಕಥೆಯನ್ನು ನಿಮ್ಮದೇ ಮಾತುಗಳಲ್ಲಿ ಬರೆಯಿರಿ.
ಉ: ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ನರಿ ವಾಸಿಸುತ್ತಿತ್ತು. ಅದು ನಿರ್ಜನವಾದ ಪ್ರದೇಶದ ಗುಹೆಯಲ್ಲಿ ನೆಲೆಸಿತ್ತು. ಒಂದು ದಿನ ನರಿ ಅಲ್ಲಿ ಇಲ್ಲದಿರುವಾಗ, ಹಸಿವಿನಿಂದ ಬಳಲುತ್ತಿದ್ದ ಸಿಂಹ ಒಂದು ಆ ಗುಹೆಗೆ ಬಂತು. ಸಿಂಹವು ಗುಹೆಯನ್ನು ಮೂಸಿದಾಗ ನರಿಯ ವಾಸನೆ ಬಂದಿತು. ನರಿ ತಿರುಗಿ ಬಂದಾಗ ಅದನ್ನು ತಿನ್ನಬಹುದೆಂದು ಸಿಂಹವು ನರಿ ಗುಹೆಯಲ್ಲಿಯೇ ಉಳಿಯಿತು. ಸಂಜೆ ಸಮಯದಲ್ಲಿ ನರಿ ಮರಳಿ ಬಂದು ಗುಹೆಯ ಬಳಿಗೆ ತಲುಪಿತು. ಆದರೆ ಗುಹೆಯ ಬಳಿ ಸಿಂಹದ ಅಸ್ಪಷ್ಟ ಹೆಜ್ಜೆ ಗುರುತುಗಳನ್ನು ನೋಡಿ ಅದು ಅನುಮಾನಗೊಂಡಿತು. ತನ್ನ ಬುದ್ಧಿ ಬಳಸಿಕೊಂಡ ನರಿ, “ಪ್ರಿಯ ಗುಹೆಯೇ, ಪ್ರತಿದಿನ ನನಗೆ ಸ್ವಾಗತ ಮಾಡುತ್ತಿದ್ದೆ, ಆದರೆ ಇಂದು ಮಾತಾಡಲಿಲ್ಲ. ನಿನ್ನ ಮೌನವೇ ನನಗೆ ಅಪಾಯದ ಸಂಕೇತ” ಎಂದು ಜೋರಾಗಿ ಹೇಳಿತು. ಸಿಂಹ ನರಿ ಮಾತಿಗೆ ಮೋಸಹೋಗಿ “ನರಿರಾಯರೇ ಬರಬೇಕು” ಎಂದು ಹೇಳಿತು. ತಕ್ಷಣ ನರಿ ನಕ್ಕು, ಇದು ಮಾತಾಡುವ ಗುಹೆಯಲ್ಲ, ಒಳಗಿರುವ ಸಿಂಹವಷ್ಟೆ ಎಂದುಕೊಂಡು ಪಲಾಯನ ಮಾಡಿತು. ಹೀಗೆ ತನ್ನ ಚಾತುರ್ಯದಿಂದ ನರಿ ಜೀವ ಉಳಿಸಿಕೊಂಡಿತು. ಈ ಕಥೆ ನಮಗೆ ಬುದ್ಧಿ, ಚಾತುರ್ಯ ಹಾಗೂ ಎಚ್ಚರಿಕೆಯ ಮಹತ್ವವನ್ನು ತಿಳಿಸುತ್ತದೆ.
ಈ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (who told to whom)
೧.” ನಿಮ್ಮಲ್ಲಿ ಯಾರಾದರೂ ನನಗೆ ಸಹಾಯ ಮಾಡಬಲ್ಲಿರಾ”
ಉ: ಈ ಮಾತನ್ನು ರಾಜನು ವಿದ್ವಾಂಸರಿಗೆ ಹೇಳಿದನು.
೨.” ಎಲೈ ಮಾತನಾಡುವ ಗುಹೆಯೇ ನಿನಗೆ ಏನಾಗಿದೆ”
ಉ: ಈ ಮಾತನ್ನು ನರಿಯು ಗುಹೆಗೆ ಹೇಳಿತು.
೩. “ ನರಿರಾಯರೇ ಬರಬೇಕು ಬರಬೇಕು”
ಉ: ಈ ಮಾತನ್ನು ಸಿಂಹವು ನರಿಗೆ ಹೇಳಿತು.
ಉ) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ದುಃಖ X ಸುಖ ಅರ್ಹ X ಅನರ್ಹ ಜ್ಞಾನ X ಅಜ್ಞಾನ
ಅಸ್ಪಷ್ಟ X ಸ್ಪಷ್ಟ ಲಕ್ಷ್ಯ X ಅಲಕ್ಷ್ಯ ನಿರಾಶೆ X ಆಶೆ
ದ್ವೇಷ X ಪ್ರೀತಿ ಧೈರ್ಯ X ಅಧೈರ್ಯ
ಊ) ಸ್ವಂತ ವಾಕ್ಯವನ್ನು ಬರೆಯಿರಿ. (Make your own sentence)
ವಿದ್ಯಾಭ್ಯಾಸ: ನಾನು ವಿದ್ಯಾಭ್ಯಾಸ ಮಾಡುತ್ತೇನೆ.
ಅಪೂರ್ವ: ಬೆಂಗಳೂರು ಅಪೂರ್ವವಾಗಿದೆ.
ಪರಿಹಾರ : ರಮೇಶನಿಗೆ ಪರಿಹಾರ ಬೇಕು.
ಸಂದೇಹ: ನಿನಗೆ ಸಂದೇಹ ಬೇಡ.
ನಿಶ್ಚಯಿಸು: ನಾನು ಶಾಲೆಗೆ ಹೋಗಲು ನಿಶ್ಚಯಿಸಿದ್ದೇನೆ.
ಋ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
ಅವರಲ್ಲೊಬ್ಬ = ಅವರಲ್ಲಿ + ಒಬ್ಬ
ಮರಗಳಿದ್ದವು = ಮರಗಳು + ಇದ್ದವು
ಒಳಗೊಳಗೆ = ಒಳಗೆ + ಒಳಗೆ
ದುಃಖವಾಯಿತು = ದುಃಖ + ಆಯಿತು
ಗುಹೆಯನ್ನು = ಗುಹೆ + ಅನ್ನು
ಕೃತಿಕಾರರ ಪರಿಚಯ
ಎಂ ಗೋಪಾಲಕೃಷ್ಣ ಅಡಿಗ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ ೧೯೧೮ ರಲ್ಲಿ ಜನಿಸಿದರು. ಇವರು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತಿಯಾಗಿ ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ʼಕಟ್ಟುವೆವು ನಾವುʼ, ʼಚಂಡೆ ಮದ್ದಳೆʼ, ʼಭೂಮಿಗೀತಾʼ, ʼವರ್ಧಮಾನʼ, ʼಬತ್ತಲಾರದ ಗಂಗೆʼ, ʼಭಾವತರಂಗʼ ಇವು ಅಡಿಗರ ಪ್ರಮುಖ ಕೃತಿಗಳು. ಇವರ ವರ್ಧಮಾನ ಕವನ ಸಂಕಲನಕ್ಕೆ ʼಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿʼ, ʼರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿʼ ಕೇರಳದ ʼಕುಮಾರ್ ಸಮ್ಮಾನ್ ಪ್ರಶಸ್ತಿʼ ಮಧ್ಯ ಪ್ರದೇಶದ ʼಕಬೀರ್ ಸಮ್ಮಾನ್ ಪ್ರಶಸ್ತಿʼ, ʼಪಂಪ ಪ್ರಶಸ್ತಿʼ ಮುಂತಾದ ಗೌರವ ಪ್ರಶಸ್ತಿಗಳು ಅಡಿಗರಿಗೆ ಲಭಿಸಿದೆ. ಇವರು ೧೯೯೨ ರಲ್ಲಿ ಮರಣ ಹೊಂದಿದರು.
ಪ್ರಸ್ತುತ ಪಂಚತಂತ್ರ ಪಾಠವನ್ನು ಸಾರ್ವಕಾಲಿಕ ಪುಸ್ತಕಗಳು (ಮೂಲ: ಮನೋಜದಾಸ್) ಅನುವಾದಿತ ಕೃತಿಯಿಂದ ಆರಿಸಲಾಗಿದೆ.