Dhanyavada helida kokkare grade VI lesson is about how to be thankful. Dhanyavada helida kokkare kannada notes. Hari, a kind boy, once saved an injured crane near a lake by removing an arrow and caring for it. After a few days, the crane flew away. Later, a girl came to Hari’s house and took good care of his parents. During a drought, she locked herself in a room and wove a beautiful silk cloth with gold and silver threads, helping the family earn money. The next year, when Hari opened the door secretly, he saw a crane weaving. It was the same bird he had saved. The crane thanked Hari for his kindness and flew away forever.

ಧನ್ಯವಾದ ಹೇಳಿದ ಕೊಕ್ಕರೆ

ಅ. ಪದಗಳ ಅರ್ಥ ಬರೆಯಿರಿ. (Write the meaning of the words)

ರಸಮೂಲಿಕೆ =  ಗಿಡಮೂಲಿಕೆ, ಔಷಧಿ
ಕೊಳ = ಸರೋವರ
ನೆರವು = ಸಹಾಯ
ವೃದ್ಧ = ವಯಸ್ಸಾದ
ಕ್ಷಾಮ = ಬರಗಾಲ
ಆದೇಶ = ಆಜ್ಞೆ
ವರಹ = ಚಿನ್ನದ ನಾಣ್ಯ
ನೇಯುವುದು = ತಯಾರಿಸುವುದು, ಹೆಣೆಯುವುದು
ಕರುಣಾಳು = ಕನಿಕರವುಳ್ಳವನು
ಪೀತಾಂಬರ = ರೇಷ್ಮೆಬಟ್ಟೆ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ಹರಿಯ ಗುಣ ಎಂತಹುದು?
ಉ. ಹರಿಯ ಸದ್ಗುಣವುಳ್ಳವನು ಮತ್ತು ಕರುಣಾಳವು ಆಗಿದ್ದನು.

೨. ಕೊಕ್ಕರೆಗೆ ಏನಾಗಿತ್ತು?
ಉ. ಕೊಕ್ಕರೆಯ ಮೈಯೊಳಗೆ ಬಾಣವೊಂದು ಚುಚ್ಚಿ ಗಾಯವಾಗಿತ್ತು.

೩. ಹರಿಯು ಕೊಕ್ಕರೆಯನ್ನು ಹೇಗೆ ಉಪಚರಿಸಿದನು?
ಉ. ಹರಿಯು ಬಾಣವನ್ನು ಹೊರತೆಗೆದು, ಗಾಯಕ್ಕೆ ತನಗೆ ತಿಳಿದ ರಸ ಮೂಲಿಕೆಯನ್ನು ಹಾಕಿ ಉಪಚರಿಸಿದನು.

೪. ವೃದ್ಧ ತಂದೆ ತಾಯಿಗಳು ಹುಡುಗಿಗೆ ಏನು ಹೇಳಿದರು?
ಉ. ವೃದ್ಧ ತಂದೆ ತಾಯಿಗಳು ಹುಡುಗಿಗೆ, “ನೀನು ನಮ್ಮಲ್ಲಿಯೆ ಇದ್ದು ಬಿಡು, ಮಗಳ ಹಾಗೆ ನೋಡ್ಕೊತೇವೆ” ಎಂದು ಹೇಳಿದರು.

೫. ಹರಿಗೆ ಪೀತಾಂಬರ ಮಾರಿದಾಗ ಬಂದ ಹಣವೆಷ್ಟು?
ಉ. ಹರಿಗೆ ಪೀತಾಂಬರ ಮಾರಿದಾಗ ನೂರಾರು ವರಹಗಳು ಬಂದಿತು.

ಇ. ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ: (Answer the following in three – four sentences)

೧. ಹುಡುಗಿ ಕೊಠಡಿಯೊಳಗೆ ಏನು ಮಾಡುತ್ತಿದ್ದಳು?
ಉ. ಹುಡುಗಿಯು ಕೊಠಡಿಯೊಳಗೆ ಕೊಕ್ಕರೆಯಾಗಿದ್ದಳು. ಆ ಕೊಕ್ಕರೆಯು ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು.

೨. ಹರಿಯು ಕೊಠಡಿಯೊಳಗೆ ಹೋದಾಗ ಉಂಟಾದ ಆಶ್ಚಯ೯ವೇನು?
ಉ. ಹರಿಯು ಕೊಠಡಿಯೊಳಗೆ ಹೋದಾಗ ಅಲ್ಲಿ ಹುಡುಗಿಯಿರಲಿಲ್ಲ, ಬದಲಾಗಿ ಕೊಕ್ಕರೆಯು ಚಿನ್ನ ಮತ್ತು ಬೆಳ್ಳಿ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು. ಕೊಠಡಿಯೊಳಗೆ ಕೊಕ್ಕರೆಯನ್ನು ನೋಡಿ ಹರಿಯು ಆಶ್ಚಯ೯ಪಟ್ಟನು.

ಈ. ಈ ಮಾತುಗಳ ಸಂದಭ೯ವನ್ನು ವಿವರಿಸಿರಿ. (Explain the context)

೧. “ನಮ್ಮ ಮಗಳ ಹಾಗೆ ನೋಡ್ಕೊತೇವೆ.”
ಉ. ಈ ವಾಕ್ಯವನ್ನು ಅನುಪಮ ನಿರಂಜನರವರು ಬರೆದ “ಧನ್ಯವಾದ ಹೇಳಿದ ಕೊಕ್ಕರೆ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತುಗಳನ್ನು ವೃದ್ಧ ರೈತ ದಂಪತಿಗಳು ಹುಡುಗಿಗೆ ಹೇಳಿದರು.
ಹುಡುಗಿಯು ವೃದ್ಧ ರೈತ ದಂಪತಿಗಳಿಗೆ ಸಹಾಯ ಮಾಡುದಳು. ಅವಳು ತಿರುಗಿ ಹೋಗಬಾರದೆಂದು ಈ ಮಾತನ್ನು ಹೇಳಿದರು.

೨. “ಶ್ರೀಮಂತ ವತ೯ಕರಿಗೆ ಮಾರಿ ಬನ್ನಿ.”
ಉ. ಈ ವಾಕ್ಯವನ್ನು ಅನುಪಮ ನಿರಂಜನರವರು ಬರೆದ “ಧನ್ಯವಾದ ಹೇಳಿದ ಕೊಕ್ಕರೆ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಹುಡುಗಿಯು ಕೊಠಡಿಯೊಳಗೆ ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು. ಮೂರು ದಿನಗಳ ನಂತರ ಹೊರಗೆ ಬಂದು ಪೀತಾಂಬರವನ್ನು ಕೊಟ್ಟು ಈ ಮೇಲಿನ ಮಾತುಗಳನ್ನು ಹೇಳಿದಳು.

೩. “ನಾನು ನೀನು ಕಾಪಾಡಿದ ಕೊಕ್ಕರೆಯೇ!”
ಉ. ಈ ವಾಕ್ಯವನ್ನು ಅನುಪಮ ನಿರಂಜನರವರು ಬರೆದ “ಧನ್ಯವಾದ ಹೇಳಿದ ಕೊಕ್ಕರೆ” ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಹುಡುಗಿಗೆ ತನ್ನ ಪ್ರೇಮದ ವಿಷಯವನ್ನು ಹೇಳಲು ಹರಿಯು
ಕೊಠಡಿಯೊಳಗೆ ಹೋದನು. ಹುಡುಗಿಯ ಬದಲಾಗಿ ಕೊಕ್ಕರೆಯು ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಪೀತಾಂಬರವನ್ನು ನೇಯುತ್ತಿತ್ತು.   ಆಶ್ಚರ್ಯದಲ್ಲಿದ್ದ ಹರಿಗೆ ಕೊಕ್ಕರೆಯು ಮೇಲಿನ ಮಾತನ್ನು ಹೇಳಿತು.

ಉ. ತತ್ಸಮ ತದ್ಭವ ಪದಗಳನ್ನು ಬರೆಯಿರಿ. ( Write Tatsama Tadbhava)

ತತ್ಸಮತದ್ಭವತತ್ಸಮತದ್ಭವ
ಆರ್ಯಅಜ್ಜನಿತ್ಯನಿಚ್ಚ
ಕಾರ್ಯಕಜ್ಜಪದ್ಮಪದುಮ
ಚಂದ್ರಚಂದಿರಭಕ್ತಿಭಕುತಿ
ವಿಜ್ಞಾನಬಿನ್ನಣವೀಥಿಬೀದಿ

Click here to download dhanyavada helida kokkare