Anthima Vidhaya kannada chapter grade 8 is about a doctor leaving his son’s funeral comes to the hospital to save a patient. Anthima Vidhaya kannada notes is here for the reference.

A doctor rushed to the hospital after receiving an urgent call. As soon as he arrived, the patient’s father angrily confronted him, demanding to know why he was late and questioning his sense of responsibility.

The doctor gently replied that he had come as soon as he received the call and had not been informed earlier about the emergency. He requested the father to remain calm and assured him that he would do his best. He also added, “Please pray to God. Only He can guide us now.” The operation went well, and the doctor came out to inform the father that his son was safe. He said, “Be grateful to God. If you have any more questions, the nurse will help you,” and hurried away.

The father was irritated again, complaining that the doctor didn’t even bother to answer properly and that people seem to care only about money these days. With tears in her eyes, the nurse explained, “The doctor is rushing to bid his final goodbye to his own son. He passed away yesterday in an accident.”

Hearing this, the father felt deeply ashamed and regretful.

ಅಂತಿಮ ವಿದಾಯ

ಅ) ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write the word meaning)

ಅಂತ್ಯಕ್ರಿಯೆ = ಉತ್ತರಕ್ರಿಯೆ
ಗೊಣಗಾಟ = ಆಕ್ಷೇಪಿತ ಅಸ್ಪಷ್ಟಮಾತು
ದೌಡಾಯಿಸು = ಓಡುವದು, ಅವಸರ
ಪಣಕ್ಕಿಡು = ಪ್ರತಿಜ್ಞೆ ಭರವಸೆ
ಪುರುಸೊತ್ತು = ಬಿಡುವು, ವಿರಾಮ
ಮಡು = ಆಳ, ಗುಂಡಿ
ವಿಧಾಯ = ಬೀಳ್ಕೊಡು
ಸಾಂತ್ವನ = ಸಮಾಧಾನ, ಸಂತೈಸು
ಅನುವು = ಅವಕಾಶ
ತುರ್ತು = ಜರೂರು, ಬೇಗನೆ
ಧಾವಂತ = ಈ ಕ್ಷಣ, ಆತುರ
ಪಾರಾಗು = ಬಿಡುಗಡೆಯಾಗು
ಬಚಾವು = ಕಾಪಾಡು, ರಕ್ಷಿಸು
ಮೂದಲಿಸು = ಹೀಯಾಳಿಸು
ಶತಪಥ = ಅತ್ತಿಂದಿತ್ತ  ನಡೆದಾಡುವದು
ಹರಿಹಾಯಿ = ಕೋಪಗೊಳ್ಳು, ರೇಗುವುದು

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು ಏಕೆ?
ಉ: ರೋಗಿಯೊಬ್ಬನನ್ನು ಉಳಿಸಲು ತಡವಾಗುತ್ತಿದೆ ಎಂದು ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು.

೨. ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ಯಾವ ಆತಂಕವಿತ್ತು?
ಉ: ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ತನ್ನ ಮಗನನ್ನು ಜೀವಂತವಾಗಿ ನೋಡುತ್ತೇನೋ ಇಲ್ಲವೋ ಎಂಬ ಆತಂಕವಿತ್ತು.  

೩. ಸಾವಿನ ಬಗ್ಗೆ ವೈದ್ಯರು ಏನೆಂದು ಹೇಳಿದರು?
ಉ: ವೈದ್ಯರಾದವರು ಸಾವನ್ನು ಮುಂದೂಡಬಹುದು. ಆದರೆ ಸಾವಿನಿಂದ ಸಂಪೂರ್ಣವಾಗಿ ಬಚಾವೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.

೪. ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು ಯಾವಾಗ?
ಉ: ವ್ಯಕ್ತಿಗೆ ಕಷ್ಟ ಬಂದಾಗ ಅದರ ಭಾರ ಅರ್ಥವಾಗುವದು.

೫. ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದ್ದು ಏಕೆ?
ಉ: ವೈದ್ಯರು ಆಪರೇಷನ್ ಮುಗಿಸಿ ತಮ್ಮ ಮಗನ ಅಂತಿಮ ವಿದಾಯಕ್ಕಾಗಿ ಅವಸರದಿಂದ ಮನೆಗೆ ತೆರಳಿದರು.

ಇ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)

೧. ಆಪರೇಷನ್ ಥಿಯೇಟರ್ ನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ ಏನೆಂದು ಹರಿಹಾಯ್ದನು?
ಉ: ಆಪರೇಷನ್ ಥಿಯೇಟರ್ ನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ “ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕೆ? ನನ್ನ ಮಗನ ಜೀವ ಅಪಾಯದಲ್ಲಿದೆ ಎಂಬುದು ನಿಮಗೆ ಗೊತ್ತಿಲ್ಲವೇ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಇಲ್ಲವೇ?” ಎಂದು ಹರಿಹಾಯ್ದನು.

೨. ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು ಏನೆಂದು ವಿನಂತಿಸಿಕೊಂಡರು?
ಉ: ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು “ ದಯವಿಟ್ಟು ಕ್ಷಮಿಸಿ ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದೇನೆ. ದಯಮಾಡಿ ನೀವೀಗ ಸ್ವಲ್ಪ ಶಾಂತವಾಗಿ. ನನ್ನ ಕೆಲಸ ಮಾಡಲು ಬಿಡಿ. ಈಗಾಗಲೇ ತಡವಾಗಿ ಹೋಗಿದೆ” ಎಂದು ನಗುವಿನೊಂದಿಗೆ ವಿನಂತಿಸಿಕೊಂಡರು.

೩. ವೈದ್ಯರು ರೋಗಿಯ ತಂದೆಗೆ ಏನೆಂದು ಭರವಸೆ ನೀಡಿದರು?
ಉ: ವೈದ್ಯರು ರೋಗಿಯ ತಂದೆಗೆ “ಒಬ್ಬ ವೈದ್ಯನಾಗಿ ನಾನು ಏನು ಮಾಡಬಹುದು ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿನ್ನ ಮಗನನ್ನು ಉಳಿಸಲು ನನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಡುತ್ತೇನೆ. ಆದರೂ ವಿಧಿಯ ಶಕ್ತಿಯ ಮುಂದೆ ನಮ್ಮ ಆಟ ನಡೆಯದು. ವೈದ್ಯರಾದವರು ಸಾವನ್ನು ಮುಂದೂಡಬಹುದು. ಆದರೆ ಸಾವಿನಿಂದ ಸಂಪೂರ್ಣವಾಗಿ ಬಚಾವೂ ಮಾಡಲು ಆಗುವುದಿಲ್ಲ. ದೇವರ ಬಳಿ ನಿನ್ನ ಮಗನನ್ನು ಉಳಿಸಿಕೊಡುವಂತೆ ಬೇಡಿಕೋ” ಎಂದು ಭರವಸೆ ನೀಡಿದರು.

೪. ಆಪರೇಷನ್ ಮುಗಿಸಿ ಹೊರ ನಡೆದ ವೈದ್ಯರನ್ನು ರೋಗಿಯ ತಂದೆ ಏನೆಂದು ಮೂದಲಿಸಿದನು?
ಉ: ಆಪರೇಷನ್ ಮುಗಿಸಿ ಹೊರ ನಡೆದ ವೈದ್ಯರನ್ನು ರೋಗಿಯ ತಂದೆ “ಇವನಿಗೆ ಎಷ್ಟು ತಾಳ್ಮೆಗೆಟ್ಟವನಂತೆ ವರ್ತಿಸುತ್ತಿದ್ದಾನೆ. ನನ್ನ ಮಗನ ಸ್ಥಿತಿಗತಿ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಎಂದರೆ ಅದಕ್ಕೂ ಪುರುಸೊತ್ತಿಲ್ಲದಂತೆ ಓಡುತ್ತಿದ್ದಾನಲ್ಲ. ಹಣದ ಹಿಂದೆ ಬಿದ್ದವರ ಧಾವಂತವೇ ಇಂತದ್ದು. ಇವರಿಗೆ ರೋಗಿಗಳ ಜೀವನಕ್ಕಿಂತ ದುಡ್ಡೇ ದೊಡ್ಡದು ಎಂದು ಮೂದಲಿಸಿದನು.

೫. ನರ್ಸ್ ರೋಗಿಯ ತಂದೆಗೆ ಏನು ಹೇಳಿದಳು?
ಉ: ನರ್ಸ್ ರೋಗಿಯ ತಂದೆಗೆ “ ಅವರ ಮಗ ನಿನ್ನೆಯಷ್ಟೇ ನಡೆದ ಆಕ್ಸಿಡೆಂಟ್ ನಲ್ಲಿ ಸತ್ತು ಹೋದ. ನಾವು ಅವರಿಗೆ ಫೋನ್ ಮಾಡಿದಾಗ ತಮ್ಮ ಮಗನ ಅಂತ್ಯಕ್ರಿಯೆಯ ದುಃಖದಲ್ಲಿದ್ದರು. ನಿನ್ನ ಮಗನ ಆಪರೇಷನ್ ತುರ್ತನ್ನು ಹೇಳುತ್ತಿದ್ದಂತೆಯೇ ಆ ಕೆಲಸವನ್ನು ಬಿಟ್ಟು ನಿನ್ನ ಮಗನ ಜೀವ ಉಳಿಸಿದರು. ಈಗ ಅವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆ” ಎಂದು ಹೇಳಿದಳು.

ಈ) ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in seven – eight sentences)

೧. ವೈದ್ಯ ಹಾಗೂ ರೋಗಿಯ ತಂದೆಯ ನಡುವೆ ಯಾವ ಮಾತುಕತೆಗಳು ನಡೆದವು?
ಉ: ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರದಿದ್ದಕ್ಕೆ ರೋಗಿಯ ತಂದೆ ಸಿಟ್ಟಿನಿಂದ “ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕೆ? ನನ್ನ ಮಗನ ಜೀವ ಅಪಾಯದಲ್ಲಿದೆ ಎಂಬುದು ನಿಮಗೆ ಗೊತ್ತಿಲ್ಲವೇ ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಇಲ್ಲವೇ? ಎಂದರು. ಅದಕ್ಕೆ ವೈದ್ಯರು “ದಯವಿಟ್ಟು ಕ್ಷಮಿಸಿ, ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದೇನೆ. ದಯಮಾಡಿ ನೀವೀಗ ಸ್ವಲ್ಪ ಶಾಂತವಾಗಿ. ನನ್ನ ಕೆಲಸ ಮಾಡಲು ಬಿಡಿ. ಈಗಾಗಲೇ ತಡವಾಗಿ ಹೋಗಿದೆ” ಎಂದು ನಗುವಿನೊಂದಿಗೆ ವಿನಂತಿಸಿಕೊಂಡರು.

೨. ವೈದ್ಯರ ಯಾವ ಗುಣಗಳು ನಿಮಗೆ ಮೆಚ್ಚುಗೆಯಾದವು ಏಕೆ?
ಉ: ವೈದ್ಯರು ತನ್ನ ಮಗನ ಅಂತ್ಯಕ್ರಿಯೆಯನ್ನು ಬಿಟ್ಟು ರೋಗಿಯನ್ನು ಉಳಿಸಲು ಆಸ್ಪತ್ರೆಗೆ ಬಂದರು. ರೋಗಿಯ ತಂದೆ ಅವನ ಮೇಲೆ ಹರಿಹಾಯ್ದರೂ ಬೇಸರಗೊಳ್ಳದೆ, ನಗುಮೊಗದಿಂದ ತನ್ನ ಕೆಲಸವನ್ನು ಮಾಡಲು ಬಿಡಿ ಎಂದು ವಿನಂತಿಸಿಕೊಂಡರು. ಅಂತಹ ಆತಂಕದ ಸ್ಥಿತಿಯಲ್ಲೂ ಸಹ ಆಪರೇಷನ್ ಮಾಡಿ ರೋಗಿಯನ್ನು ಉಳಿಸಿದರು.  ವೈದ್ಯರ ಸಹನೆ, ತಾಳ್ಮೆ, ನಗುಮುಖ ಹಾಗೂ ಸಮಯಪ್ರಜ್ಞೆ ನನಗೆ ಮೆಚ್ಚುಗೆಯಾದವು.

ಉ) ಕೆಳಗಿನ ಮಾತುಗಳನ್ನು ಯಾರು, ಯಾರಿಗೆ ಹೇಳಿದರು ವಿವರಿಸಿರಿ. (Who told whom?)

೧. ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೆ?
ಉ: ಈ ಮಾತನ್ನು ರೋಗಿಯ ತಂದೆಯು ವೈದ್ಯರಿಗೆ ಹೇಳಿದನು.


೨. ಹಣದ ಹಿಂದೆ ಬಿದ್ದವರ ದಾವಂತವೇ ಇಂತಹದ್ದು.
ಉ: ಈ ಮಾತನ್ನು ರೋಗಿಯ ತಂದೆಯು ವೈದ್ಯರಿಗೆ ಹೇಳಿದನು.


೩. ಈಗ ಅವರು ತಮ್ಮ ಮಗನ ಅಂತಿಮವಿದಾಯಕ್ಕೆ ಹೋಗುತ್ತಿದ್ದಾರೆ.
ಉ: ನರ್ಸ ರೋಗಿಯ ತಂದೆಗೆ ಹೇಳಿದಳು.

ಊ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentences)

ಧಾವಂತ = ವೈದ್ಯರ ನಡಿಗೆಯಲ್ಲಿ ಧಾವಂತವಿತ್ತು.
ಸಾಂತ್ವನ = ವೈದ್ಯರು ರೋಗಿಯ ತಂದೆಗೆ ಸಾಂತ್ವನ ಹೇಳಿದರು.
ಪಾರಾಗು = ಬೆಂಕಿಯಿಂದ ನಾನು ಪಾರಾದೆನು.
ಆಕ್ರೋಶ = ರಮೇಶ ತುಂಬಾ ಆಕ್ರೋಶದಲ್ಲಿದ್ದನು.
ಮೂದಲಿಸು = ಯಾರನ್ನೂ ಮೂದಲಿಸಬಾರದು.
ವಿದಾಯ = ನಾನು ನನ್ನ ಗೆಳೆಯರಿಗೆ ವಿದಾಯ ಹೇಳಿದೆನು.

ಋ) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)

ರೋಗಿ X ನಿರೋಗಿ        ದುಃಖ X ಸುಖ            ಶಕ್ತಿ X ನಿಶ್ಶಕ್ತಿ
ಶಾಂತ  X  ಅಶಾಂತ       ಸಾವು X ಹುಟ್ಟು        ಅಂತಿಮ X ಆರಂಭ
ಅಸಹನೆ X ಸಹನೆ        ಪ್ರಾಮಾಣಿಕ X ಅಪ್ರಾಮಾಣಿಕ

ಎ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)

ತಾಳ್ಮೆಗೆಟ್ಟ = ತಾಳ್ಮೆ + ಕೆಟ್ಟ
ಪ್ರಾಣಪಾಯ = ಪ್ರಾಣ + ಅಪಾಯ
ಮತ್ತೇನಾದರೂ = ಮತ್ತೆ + ಏನಾದರೂ
ಪಣಕ್ಕಿಡು = ಪಣಕ್ಕೆ + ಇಡು
ಬೇಸರವಾಯಿತು = ಬೇಸರ + ಆಯಿತು

ಏ) ಕೆಳಗೆ ನೀಡಿದ ಅನ್ಯದೇಶೀಯ ಪದಗಳಿಗೆ ಸಮಾನಾಂತರ ಕನ್ನಡ ಪದಗಳನ್ನು ಬರೆಯಿರಿ. (Write the equivalent Kannada words for the foreign words given below)

ಫೋನ್ = ದೂರವಾಣಿ
ರೂಂ = ಕೊಠಡಿ
ಆಪರೇಷನ್ = ಶಸ್ತ್ರ ಚಿಕಿತ್ಸೆ
ಆಕ್ಸಿಡೆಂಟ್ = ಅಪಘಾತ
ಥಿಯೇಟರ್ = ಚಿತ್ರಮಂದಿರ
ಸಿಸ್ಟರ್ = ದಾದಿ

Click here to download anthima vidaya kannada notes grade VII