Talakadina Vaibhava kannada lesson notes is about Talakaadu. Talakadina Vaibhava grade VIII written by Heeramalluru Ishwaran.
Talakadu is a historic town located on the banks of the river Cauvery in Mysuru district, Karnataka. It is known for its rich cultural heritage, ancient temples, and the mysterious sand dunes that cover much of the area. Once a flourishing capital of the Ganga dynasty, Talakadu later came under the rule of the Cholas, Hoysalas, and Vijayanagara kings, each leaving behind architectural and cultural imprints.
The town is famous for the Pancha Linga temples dedicated to Lord Shiva—Vaidyanatheshwara, Arkeshwara, Pathaleshwara, Maruleshwara, and Mallikarjuna. Every twelve years, the Panchalinga Darshana festival attracts thousands of devotees who visit these shrines for a special pilgrimage.
One of the most intriguing aspects of Talakadu is the legend of the Talakadu curse, said to have been pronounced by Queen Alamelamma in the 17th century. According to folklore, her curse caused Talakadu to be buried under sand and the royal family of Mysore to suffer lineage problems.
Today, Talakadu is both a religious site and a tourist destination, drawing visitors with its scenic beauty, riverfront views, and archaeological significance. The blend of myth, history, and nature makes Talakadu a fascinating place to explore.
ತಲಕಾಡಿನ ವೈಭವ
ಪದಗಳ ಅರ್ಥ (Word Meaning)
ಅನರ್ಘ್ಯ = ಶ್ರೇಷ್ಠ
ಉಜ್ವಲ = ಶ್ರೇಷ್ಠ
ಉದ್ರೇಕ = ಅತಿಶಯ
ಕೆಚ್ಚೆದೆಯ = ಭಯವಿಲ್ಲದ ಮನಸ್ಸಿನ
ತಂಗುಮನೆ = ಪ್ರವಾಸದ ವಾಸ್ತವ್ಯಕ್ಕಾಗಿ ಇರುವ ಮನೆ
ತಾಸು = ಗಂಟೆ
ನಂದನವನ = ದೇವೇಂದ್ರನ ಉಪವನ, ಸಂತಸ ನೀಡುವ ಪ್ರದೇಶ
ನಿಲ್ಮನೆ = ಪ್ರವಾಸಿಗರು ಉಳಿದುಕೊಳ್ಳುವ ಮನೆ, ಅತಿಥಿಗೃಹ
ನೇಸರು = ಸೂರ್ಯ
ಪಡುವಣ = ಪಶ್ಚಿಮ
ಪಾತರಗಿತ್ತಿ = ಚಿಟ್ಟೆ, ಪತಂಗ
ಬಣ್ಣಿಸು = ವರ್ಣಿಸು
ಬಿತ್ತರ = ವಿಸ್ತಾರ
ಬಿರುಗಾಳಿ = ಜೋರಾಗಿ ಬೀಸುವ ಗಾಳಿ
ಮಸುಕು = ಅಸ್ಪಷ್ಟ
ಮೃಗಜಲ = ಬಿಸಿಲ್ಗುದುರೆ, ಮರೀಚಿಕೆ
ವಾಸ್ತುಶಿಲ್ಪ = ಕಟ್ಟಡ ರಚನೆಯ ಕಲೆ
ಸಂಪದ = ಸಂಪತ್ತು, ಐಶ್ವರ್ಯ
ಸಂಬೋಧಿಸು = ಕುರಿತು ಹೇಳು
ಸಾರಥಿ = ರಥವನ್ನು ಓಡಿಸುವವ, ವಾಹನ ಚಾಲಕ
ಸ್ಮಾರಕ = ನೆನಪಿಗಾಗಿ ಕಟ್ಟಿದ್ದು
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following questions in one sentence)
೧. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?
ಉ: ಲೇಖಕರು ಪ್ರವಾಸದ ವಿವರವನ್ನು ಶಿವನ ಸಮುದ್ರದ ಪ್ರವಾಸಿಗರ ನಿಲ್ಮನೆಯಲ್ಲಿ ಕುಳಿತುಕೊಂಡು ಬರೆಯಲು ಆರಂಭಿಸಿದರು.
೨. ಗಂಗರ ಮೊದಲ ರಾಜಧಾನಿ ಯಾವುದು?
ಉ: ಗಂಗರ ಮೊದಲ ರಾಜಧಾನಿ ಕೋಲಾರ.
೩. ರಾಯ’, ‘ಅಣ್ಣ’ ಎಂದು ಯಾರನ್ನು ಕರೆಯುತ್ತಿದ್ದರು?
ಉ: ‘ರಾಯ’, ‘ಅಣ್ಣ’ ಎಂದು ಚಾವುಂಡರಾಯನನ್ನು ಕರೆಯುತ್ತಿದ್ದರು.
೪. ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?
ಉ: ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ‘ಚಾವುಂಡರಾಯ ಪುರಾಣ’ ಎಂಬ ಹೆಸರಿನ ಅರವತ್ತಮೂರು ಪುಣ್ಯಪುರುಷರ ಚರಿತ್ರೆ.
೫. ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು?
ಉ: ವಿಕ್ರಮ ಚೋಳನ ಸೇನಾನಿ ಆದಿಯಮನನ್ನು ಸೋಲಿಸಿದಾಗ, ಗೆಲುವಿನ ಸ್ಮಾರಕವಾಗಿ ವೀರನಾರಾಯಣ ದೇಗುಲವನ್ನು ಕಟ್ಟಿಸಿದನು.
೬. ರಾಷ್ಟ್ರದ ಚಾರಿತ್ಯದ ಹೆಗ್ಗುರುತು ಯಾವುದು?
ಉ: ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಚರಿತ್ರೆಯ ಹೆಗ್ಗುರುತು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಮಾಡಿದ ವ್ಯವಸ್ಥೆಗಳಾವುವು?
ಉ: ಶಿವನಸಮುದ್ರವನ್ನು ಒಳಸೇರುವ ಮುನ್ನ ಬಾಗಿಲ ಬಳಿ ನಿಂತ ಸುಬ್ರಹ್ಮಣ್ಯಮ್ ವಿಶ್ವಾಸದಿಂದ ಸ್ವಾಗತಿಸಿದರು. ನಿಲ್ಮನೆಯನ್ನು ಕೂಡಲೆ ಖಾಲಿ ಮಾಡಿಸಿ, ಹಾಸಿಗೆ ಹಾಸಿಕೊಟ್ಟರು. ಊಟ ಉಪಚಾರದ ಬಗೆಗೆ ಕೇಳಿದರು. ಹೋಗುವಾಗ ‘ಗುಡ್ನಾಯಿಟ್’ ಅಂದರು.
೨. ಚಾವುಂಡರಾಯ ಯಾರು? ಆತನ ವಿಶೇಷತೆಯೇನು?
ಉ: ಚಾವುಂಡರಾಯ ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ಮಂತ್ರಿ. ಇವರನ್ನು ಜನರು ‘ರಾಯ’, ‘ಅಣ್ಣ’ ಎಂದು ಕರೆಯುತ್ತಿದ್ದರು. ಇವನಿಗೆ ಕನ್ನಡದ ಏಳ್ಗೆಯ ಹಂಬಲವೇ ಹಂಬಲ. ಸ್ವತಃ ,ಕವಿಯಾಗಿದ್ದು ‘ಚಾವುಂಡರಾಯ ಪುರಾಣ’ ಎಂಬ ಹೆಸರಿನ ಅರವತ್ತಮೂರು ಪುಣ್ಯಪುರುಷರ ಚರಿತ್ರೆಯನ್ನು ಕನ್ನಡಕ್ಕೆ ಕಾಣಿಕೆಯಾಗಿ ಕೊಟ್ಟರು.
೩. ಚೋಳರ ಸಾಧನೆಯೇನು?
ಉ: ಚೋಳರು ಬಂದು ಗುಡಿಗೋಪುರಗಳನ್ನು ಕಟ್ಟಿಸಿದರು. ರಾಜೇಶ್ವರ, ವೈಕುಂಠನಾರಾಯಣ, ಮರಳೇಶ್ವರ, ಪಾತಾಳೇಶ್ವರ, ವೈದ್ಯೇಶ್ವರ ಗುಡಿಗಳನ್ನು ಕಟ್ಟಿಸಿದರು.
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in four – five sentences)
೧. ಗಂಗರ ಇತಿಹಾಸದ ವಿಶೇಷತೆಯೇನು?
ಉ: ತಲಕಾಡಿನ ಇತಿಹಾಸದಲ್ಲಿ ಗಂಗರ ಮತ್ತು ಜೈನಧರ್ಮದ ವಿವರಣೆ ಇದೆ. ಕನ್ನಡ ಸಾಹಿತ್ಯದ ಮತ್ತು ಹೊಯ್ಸಳ ವಾಸ್ತುಶಿಲ್ಪದ ವಿವರಣೆ ಇದೆ. ಎಲ್ಲದಕ್ಕಿಂತ ಕನ್ನಡವೇ ಧರ್ಮ, ಕನ್ನಡವೇ ಬಾಳಿನ ಪರಿಪೂರ್ಣತೆಯೆಂದು, ಅದಕ್ಕಾಗಿ ಹೋರಾಡಿ ಮಡಿದ ವೀರರ ಚರಿತ್ರೆ ಇದೆ. ಗಂಗರ ರಾಜ್ಯ ಗಂಗವಾಡಿ. ಅವರ ಮೊದಲ ರಾಜಧಾನಿ ಕೋಲಾರ. ಸುಮಾರು ಕ್ರಿ.ಶ. ೫೦೦ರ ಹೊತ್ತಿಗೆ ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು. ಅಲ್ಲಿಂದ ಮುಂದಕ್ಕೆ
ಐದು ಶತಮಾನಗಳವರೆಗೆ, ಅಂದರೆ ಹತ್ತನೆಯ ಶತಮಾನದವರೆಗೆ ಗಂಗರು ಆಳ್ವಿಕೆ ನಡೆಸಿದರು.
೨. ವೈದ್ಯೇಶ್ವರ ದೇವಾಲಯದ ನಿರ್ಮಾಣದ ಕಾಲನಿರ್ಣಯಕ್ಕೆ ಸಹಕಾರಿಯಾಗುವ ಅಂಶಗಳಾವುವು? ವಿವರಿಸಿ.
ಉ: ಕೀರ್ತಿನಾರಾಯಣ ದೇವಾಲಯದಿಂದ ೧೫೦ ಗಜದ ಅಂತರದಲ್ಲಿ ವೈದ್ಯೇಶ್ವರ ದೇವಾಲಯವಿದೆ. ಈ ದೇವಾಲಯದ ರಚನೆಯ ಕಾಲ ನಿಶ್ಚಿತವಾಗಿ ತಿಳಿದಿಲ್ಲ. ಈಗ ಸಿಕ್ಕಿರುವ ಆಧಾರಗಳ ಮೇಲೆ ಇದರ ಕಾಲವನ್ನು ಹದಿಮೂರನೆಯ ಶತಮಾನಕ್ಕಿಂತ ಮೊದಲು ಎನ್ನಬಹುದು. ದೇವಾಲಯದ ಹೊರವಲಯದ ಕಲಶಗಳೂ, ಗರ್ಭಗುಡಿಯ ಗೋಪುರವೂ, ಶಿಲ್ಪದ ನಿರ್ಮಾಣದ ಕೆಲವು ವಿಶಿಷ್ಟ ರೂಪಗಳು ಮತ್ತು ಉಪಯೋಗಿಸಿರುವ ಸಾಮಗ್ರಿಗಳು ಈ ಕಾಲವನ್ನು ನಿರ್ದೇಶಿಸುವುವು. ಇವು ಶೃಂಗೇರಿಯ ವಿದ್ಯಾಶಂಕರ ದೇಗುಲ, ಹಂಪೆಯ ಹಜಾರರಾಮರ ಗುಡಿ, ತಾಡಪತ್ರಿಯ ಲೇಪಾಕ್ಷಿ ಮಂದಿರ, ತಲಕಾಡಿನ ವೈದ್ಯೇಶ್ವರ ದೇವಾಲಯದ ಹಾಗೆ ಇವೆ.
೩. ಲೇಖಕರು ‘ಯುರೇಕಾ’ ಎಂದು ಕೂಗಿದ ಸಂದರ್ಭವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉ: ಲೇಖಕರಿಗೆ ವಿಜಯಪುರದ ಅರ್ಕೇಶ್ವರನ ದರ್ಶನ ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ ಪೂರ್ತಿಯಾಗುವುದು ಎಂದು ನಂಬಿದ್ದರು. ಅಲ್ಲಿಗೆ ಹೋಗಲು ದಾರಿ ಕೊರಕಲು, ಮೋಟಾರು ಓಡುವುದಿಲ್ಲ ಎಂದು ಸಾರಥಿ ಹೇಳಿದನು. ಮುಂದೆ ಹಳ್ಳದಲ್ಲಿ ಮೋಟಾರು ನಿಂತು ಬಿಟ್ಟಿತು. ಲೇಖಕರು, ಸಾರಥಿಗೆ ಅರ್ಕೇಶ್ವರ ದೇವಾಲಯ ನೋಡುವ ಆಸೆಯನ್ನು ಹೇಳಿದರು.ಸಾರಥಿ ಲೇಖಕರನ್ನು ಕರೆದುಕೊಂಡು ಅರ್ಕೇಶ್ವರ ದೇವಾಲಯವನ್ನು ನೋಡಲು ಹೊರಟರು, ಸಿಕ್ಕಿದರೆ ಉಳಿದವರನ್ನು ಕರೆದುಕೊಂಡು ಹೋಗೋಣ ಎಂದು ಹೇಳಿ ನಡೆದು ಮುಂದೆ ಸಾಗಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮಧ್ಯೆ ಅರ್ಕೇಶ್ವರ ದೇವಾಲಯ. ಅದನ್ನು ನೋಡಿ ಲೇಖಕರು ಯುರೇಕಾ! ಯುರೇಕಾ! ಎಂದು ಕೂಗಿದರು.
೪. ಸಳನ ವಂಶಕ್ಕೆ ‘ಹೊಯ್ಸಳ’ ಹೆಸರು ಬರಲು ಕಾರಣವೇನು?
ಉ: ಒಂದು ದಿನ ವಾಸಂತಿಕಾ ದೇವಾಲಯದ ಪೂಜೆಗೆಂದು ಹೋದ ಸಳ, ಸುದತ್ತ ಗುರುವಿನ ಬಳಿ ಉಪದೇಶ ಕೇಳುತ್ತಿದ್ದನು. ಹುಲಿಯೊಂದು ಅವನಡೆಗೆ ಜಿಗಿದು ಬಂದಿತು. ಆಗ ಸುದತ್ತಮುನಿ ತನ್ನ ಕೈಯೊಳಗಿನ ಬೆತ್ತವನ್ನು ಸಳನೆಡೆಗೆ ಚಾಚಿ ಹೊಯ್ಸಳ ಎಂದು ಆದೇಶವಿತ್ತನು. ಸಳ ಕೂಡಲೆ ಹುಲಿಯನ್ನು ಎದುರಿಸಿ ಅದರ ಗಂಟಲಲ್ಲಿ ಖಡ್ಗವನ್ನು ಹಾಕಿ ಹುಲಿಯನ್ನು ಕೊಂದನು. ಅಂದಿನಿಂದ ಸಳನ ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಬಂದಿತು.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context in detail)
೧. “ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ ‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ: ರಾತ್ರಿ ಹನ್ನೆರಡು ಹೊಡೆದು ಹದಿನೈದು ನಿಮಿಷವಾಗಿದೆ. ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ ಎಂದು ಲೇಖಕರು ಶಿವನ ಸಮುದ್ರದ ಪ್ರವಾಸಿಗರ ನಿಲ್ಮನೆಯಲ್ಲಿ ಕುಳಿತುಕೊಂಡು ಬರೆದರು.
ಸ್ವಾರಸ್ಯ : ಪ್ರವಾಸದ ದಣಿವುಗಳಿಂದ ಪ್ರವಾಸಿಗರೆಲ್ಲ ಮಲಗಿದರೂ ಲೇಖಕರು ತಮ್ಮ ಅಂದಿನ ಪ್ರವಾಸದ ವಿವರಣೆ ಬರೆಯುತ್ತಿರುವುದು ಅವರ ಬದ್ಧತೆಯು ಸ್ವಾರಸ್ಯಕರವಾಗಿದೆ.
೨. “ಅದು ಕಲಾಶ್ರೀ ವಿಹರಿಸುವ ನಂದನವನ”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ ‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮುದುವೊಳಲಿನಿಂದ ರನ್ನ ತಲಕಾಡಿನ ಮಣ್ಣನ್ನು, ರಾಯನನ್ನು, ಅಜಿತಸೇನ ಗುರುಗಳ ಶಿಷ್ಯವೃಂದನ್ನು ಮತ್ತು ಅತ್ತಿಮಬ್ಬೆಯನ್ನು ನಂಬಿ ಓಡಿ ಬಂದನು. ಅವನು ಇದನ್ನು ಕಲಾಶ್ರೀ ವಿಹರಿಸುವ ನಂದನವನ ಎಂದು ವರ್ಣಿಸಿದ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ತಲಕಾಡು ಅತ್ತಿಮಬ್ಬೆ, ಅಜಿತಸೇನ ಗುರುಗಳು, ಚಾವುಂಡರಾಯನಂತವರು ಇರುವ ಮಣ್ಣು ಎಂದು ಗೌರವದಿಂದ ಹೇಳಿರುವ ಮಾತು ಸ್ವಾರಸ್ಯಕರವಾಗಿದೆ.
೩. “ಮೋಟರು ಓಡಲೊಲ್ಲದು, ಸಾರಥಿ ನಿಲ್ಲಿಸಲಾರನು”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ ‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಲೇಖಕರಿಗೆ ವಿಜಯಪುರದ ಅರ್ಕೇಶ್ವರನ ದರ್ಶನ ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ ಪೂರ್ತಿಯಾಗುವುದು ಎಂದು ನಂಬಿದ್ದರು. ಅಲ್ಲಿಗೆ ಹೋಗಲು ದಾರಿ ಕೊರಕಲು, ಮೋಟಾರು ಓಡುವುದಿಲ್ಲ ಎಂದು ಸಾರಥಿ ಹೇಳಿದನು, ಆದರೂ ಗಾಡಿಯನ್ನು ಓಡಿಸಲು ಪ್ರಾರಂಭಿಸಿದನು. ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಲೇಖಕರ ಅರ್ಕೇಶ್ವರ ಲಿಂಗವನ್ನು ನೋಡಲೇಬೇಕು ಎಂಬ ಹಂಬಲವನ್ನು ಸಾರಥಿ ಅರಿತಿರುವುದನ್ನು ಸ್ವಾರಸ್ಯಕರವಾಗಿ ಹೇಳಿದ್ದಾರೆ.
೪. “ಬರ್ರೋ ಗುಡಿ ಸಿಕ್ಕಿತು ಬರ್ರೋ ದೇವಾಲಯ ದೊರಕಿತು”
ಆಯ್ಕೆ : ಈ ವಾಕ್ಯವನ್ನು ಹಿರೇಮಲ್ಲೂರು ಈಶ್ವರನ್ ಅವರ ‘ಕವಿಕಂಡ ನಾಡು’ ಪ್ರವಾಸ ಕಥನದಿಂದ ಆಯ್ದ ‘ತಲಕಾಡಿನ ವೈಭವ’ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಸಾರಥಿ ಲೇಖಕರನ್ನು ಕರೆದುಕೊಂಡು ಅರ್ಕೇಶ್ವರ ದೇವಾಲಯವನ್ನು ನೋಡಲು ಹೊರಟರು, ಸಿಕ್ಕಿದರೆ ಉಳಿದವರನ್ನು ಕರೆದುಕೊಂಡು ಹೋಗೋಣ ಎಂದು ಹೇಳಿ ನಡೆದು ಮುಂದೆ ಸಾಗಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಮಧ್ಯೆ ಅರ್ಕೇಶ್ವರ ದೇವಾಲಯ. ಎಲ್ಲರನ್ನೂ ಕೂಗುವ ಸಂದರ್ಭದಲ್ಲಿ ಮೇಲಿನ ಮಾತನ್ನು ಹೇಳಿದರು.
ಸ್ವಾರಸ್ಯ : ಲೇಖಕರ ತಲಕಾಡಿನ ಪಂಚಲಿಂಗಗಳ ದರ್ಶನ ಮಾಡಲೇಬೇಕು ಎಂಬ ಆಸೆ, ಉತ್ಸಾಹ, ಆನಂದ ಸ್ವಾರಸ್ಯಕರವಾಗಿದೆ.
ಉ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ. (Choose the odd one out)
೧. ಸಾಹಿತ್ಯಾವಲೋಕನ, ಭಕ್ತಿಭಂಡಾರಿಬಸವಣ್ಣ, ಹಿರೇಮಲ್ಲೂರು, ವಚನಧರ್ಮಸಾರ.
೨. ಮಾರಸಿಂಹ, ಚಾವುಂಡರಾಯ, ರಾಚಮಲ್ಲ, ರಕ್ಕಸಗಂಗ.
೩. ರಾಜೇಶ್ವರ, ಮರಳೇಶ್ವರ, ಮಹಾಲಿಂಗೇಶ್ವರ, ಪಾತಾಳೇಶ್ವರ.
೪. ಮುಚ್ಚಿಟ್ಟು, ಹಾಡುತ್ತಿರುವ, ಉದ್ಯಮವನ್ನು, ಬಾನಿನೆಡೆ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. (Answer the following)
೧. ಸಂಧಿ ಎಂದರೇನು? ಅದರ ವಿಧಗಳನ್ನು ಹೇಳಿ.
ಉ: ಎರಡು ವರ್ಣಗಳು ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.
ಸ್ವರಸಂಧಿ ಮತ್ತು ವ್ಯಂಜನಸಂಧಿ
೨. ಸಂಧಿಕ್ರಿಯೆ ಎಂದರೇನು? ಅದರ ವಿಧಗಳನ್ನು ವಿವರಿಸಿ.
ಉ: ಸಂಧಿಸುವಾಗ ಆಗುವ ಕೆಲವು ವ್ಯತ್ಯಾಸವೇ ಸಂಧಿಕ್ರಿಯೆ. ಈ ವ್ಯತ್ಯಾಸ ಪೂರ್ವಪದದ ಅಂತ್ಯದಲ್ಲಿ ಅಥವಾ ಉತ್ತರಪದದ ಆದಿಯಲ್ಲಿ ಇಲ್ಲವೇ ಎರಡೂ ಪದಗಳ ಮಧ್ಯದಲ್ಲಿ ನಡೆಯುತ್ತದೆ.
ಈ ವರ್ಣ ವ್ಯತ್ಯಾಸಕ್ಕನುಗುಣವಾಗಿ ಲೋಪ, ಆಗಮ, ಆದೇಶ ಎಂಬ ಮೂರು ವಿಧದ ಸಂಧಿಕ್ರಿಯೆಗಳು ನಡೆಯುತ್ತವೆ.
೩. ಪ್ರಕೃತಿಭಾವ ಎಂದರೇನು? ಉದಾಹರಣೆ ಕೊಡಿ.
ಉ: ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು ಪ್ರಕೃತಿಭಾವ.
ಅಯ್ಯೋ + ಇದೇನು = ಅಯ್ಯೋ! ಇದೇನು?
ಓಹೋ + ಅಜ್ಜಿ = ಓಹೋ! ಅಜ್ಜಿ
ಆ. ಕೊಟ್ಟಿರುವ ಪದಗಳನ್ನು ವಿಂಗಡಿಸಿ ಸಂಧಿ ಹೆಸರಿಸಿ. (Split the word and name the sandhi)
ನಿಮಿಷವಾಗಿದೆ = ನಿಮಿಷ+ ಆಗಿದೆ = ಆಗಮಸಂಧಿ
ದಿನವೆಲ್ಲ = ದಿನ + ಎಲ್ಲ = ಆಗಮಸಂಧಿ
ನಿಲ್ಮನೆಯನ್ನು = ನಿಲ್ಮನೆ + ಅನ್ನು = ಆಗಮಸಂಧಿ
ಸಂದೇಹವಿಲ್ಲ = ಸಂದೇಹ +ಇಲ್ಲ = ಆಗಮಸಂಧಿ
ಕಥನವಿದೆ = ಕಥನ + ಇದೆ = ಆಗಮಸಂಧಿ
ಮಿಗಿಲಾಗಿ = ಮಿಗಿಲು + ಆಗಿ = ಲೋಪಸಂಧಿ
ಚರಿತ್ರೆಯಿದೆ = ಚರಿತ್ರೆ + ಇದೆ = ಆಗಮಸಂಧಿ
ಹೆಸರಾಗಿದೆ = ಹೆಸರು + ಆಗಿದೆ = ಲೋಪಸಂಧಿ
ತಲೆಯೆತ್ತಿ = ತಲೆ + ಎತ್ತಿ = ಆಗಮಸಂಧಿ
ಮುಚ್ಚಿಟ್ಟು = ಮುಚ್ಚಿ +ಇಟ್ಟು = ಲೋಪಸಂಧಿ
ಬಾನಿನೆಡೆ = ಬಾನಿನ + ಎಡೆ = ಲೋಪಸಂಧಿ
ಪೂರ್ತಿಯಾಗು = ಪೂರ್ತಿ + ಆಗು = ಆಗಮಸಂಧಿ
ಹಳ್ಳವೊಂದು = ಹಳ್ಳ + ಒಂದು = ಆಗಮಸಂಧಿ
ತಾಸಾಗಿದೆ = ತಾಸು + ಆಗಿದೆ = ಲೋಪಸಂಧಿ
ಊರಿಂದ = ಊರು +ಇಂದ = ಲೋಪಸಂಧಿ
ಕೃತಿಕಾರರ ಪರಿಚಯ : ಹಿರೇಮಲ್ಲೂರು ಈಶ್ವರನ್
ಕಾಲ : (11 .01.1922 -22.06.1998)
ಸ್ಥಳ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು
ಕೃತಿಗಳು: ಕವಿ ಕಂಡ ನಾಡು (ಪ್ರವಾಸ ಕಥನ), ವಿಷನಿಮಿಷಗಳು, ಭಾರತದ ಹಳ್ಳಿಗಳು, ವಲಸೆ ಹೋದ ಕನ್ನಡಿಗನ ಕತೆ, ಹಾಲಾಹಲ, ರಾಜಾರಾಣಿ ದೇಖೋ, ಶಿವನ ಬುಟ್ಟಿ, ತಾಯಿನೋಟ, ಹರಿಹರನ ಕೃತಿಗಳು
ಪ್ರಶಸ್ತಿ: ಅಂತಾರಾಷ್ಟ್ರೀಯ ಪುರಸ್ಕೃತ
Click here to download Thalakadina Vhaibhava kannada grade 8 notes