Pravasa Hogona kannada notes 4th standard means “Let us go on a tour”. Pravasa Hogona Kseeb Solutions For Class 4 Kannada Chapter 12 Notes. This lesson beautifully describes the joyful and memorable school excursion to Shravanabelagola, where children travel along with their teachers and friends. It highlights the excitement, curiosity, and happiness of students as they step out of their routine classroom life and begin a real-world learning experience.
In Pravaasa hogonna For many children, this is their first visit to a railway station. The lesson vividly captures their amazement at the busy railway platform, the long railway tracks, the sound of the train engine, the signal lights, vendors, passengers, and the overall lively atmosphere. Every small detail—from waiting for the train to watching it arrive—fills the children with wonder and enthusiasm.
Through simple language and engaging narration, the lesson emphasizes experiential learning, teamwork, discipline, and observation skills. The journey to Shravanabelagola, a famous historical and pilgrimage place, becomes both educational and enjoyable. Overall, Praavāsa Hogona is a heartwarming lesson that showcases the innocence of childhood, the joy of travel, and the importance of learning beyond textbooks, making it an ideal example of educational travel and student excursions.
ಪ್ರವಾಸ ಹೋಗೋಣ
ಅಭ್ಯಾಸ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ದರಾದರು?
ಉ: ಮಕ್ಕಳೆಲ್ಲರೂ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ದರಾದರು.
೨. ’ಫ್ಲಾಟ್ಫಾರಂ’ ಎಂದರೇನು ?
ಉ: ‘ಫ್ಲಾಟಫಾರಂ’ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ.
೩. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು?
ಉ: ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು.
೪. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?
ಉ: ರೈಲು ಚುಕ್ ಬುಕ್ ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ.
ಆ) ಎರಡು/ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಬೆಳಗೊಳ ಬೆಟ್ಟದಲ್ಲಿ ಮೂರ್ತಿಯನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ ಬರುತ್ತದೆ?
ಉ: ಬೆಳಗೊಳ ಬೆಟ್ಟದ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ. ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತದೆ.
೨. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ?
ಉ:ರೈಲ್ವೆ ನಿಲ್ಯಾಣದಲ್ಲಿ ವಿಶ್ರಾಂತಿ ಕೊಠಡಿ, ಲಗೇಜು ರೂಂ, ಶೌಚಾಲಯ, ಕುಡಿಯುವ ನೀರು, ಹೋಟೆಲ್ ಇತ್ಯಾದಿಗಳ ಸೌಲಭ್ಯಗಳಿರುತ್ತವೆ.
ಇ) ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು? (Who told to whom)
೧. “ನಿಮ್ಮದು ಯಾವೂರು ಮಕ್ಕಳೇ?”
ಯಾರು?: ಕೆನಡಿ ಕೇಳಿದರು.
ಯಾರಿಗೆ?: ಮಕ್ಕಳನ್ನು ಕೇಳಿದರು.
೨.“ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ?”
ಯಾರು?: ಮಕ್ಕಳು ಕೇಳಿದರು.
ಯಾರಿಗೆ?: ಮಧುವನ್ನು ಕೇಳಿದರು.
೩.“ಅದೋ ! ರೈಲು ಬಂದೇ ಬಿಟ್ಟಿತು.”
ಯಾರು?: ಕಾರ್ತಿಕ್ ಹೇಳಿದನು.
ಯಾರಿಗೆ?: ಮಕ್ಕಳಿಗೆ ಹೇಳಿದನು.
ಈ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟಸ್ಥಳದಲ್ಲಿ ಬರೆ.(Fill in the blanks)
೧. ಇವರೆಲ್ಲರೂ ನಮ್ಮಂತೆಯೇ ಪ್ರವಾಸಕ್ಕೆ ಹೊರಟಿರುವವರೆ ಗುರುಗಳೇ.
೧. ಪ್ರಯಾಣಕ್ಕೆ ೨. ಪ್ರವಾಸಕ್ಕೆ ೩. ಕೆಲಸಕ್ಕೆ ೪. ಸ್ಥಳಗಳಿಗೆ
೨. ಕಂಬಿಗಳ ಮೇಲೆ ರೈಲು ಚಲಿಸುತ್ತದೆ.
೧. ಬಸ್ಸು ೨. ರೈಲು ೩. ವಿಮಾನ ೪. ದೋಣಿ
೩. ಮೂರ್ತಿಗಳ ಮುಖದಲ್ಲಿ ಶಾಂತತೆ ಭಾವನೆಯು ಎದ್ದು ಕಾಣುತ್ತದೆ.
೧. ಕ್ರೂರತೆ ೨. ಶಾಂತತೆ ೩. ವಿಧೇಯತೆ ೪. ಗಂಭೀರತೆ
ಉ) ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆ. (Match the following)
ಅ ಆ
೧. ಹಂಪಿ ಗೊಮ್ಮಟೇಶ್ವರ ವಿಗ್ರಹ … ಕಲ್ಲಿನರಥ
೨. ಶ್ರವಣಬೆಳಗೊಳ ಕಲ್ಲಿನರಥ ……… ಗೊಮ್ಮಟೇಶ್ವರ ವಿಗ್ರಹ
೩ ವಿಜಯಪುರ ವಿಧಾನಸೌಧ ……………… ಗೋಲಗುಂಬಜ್
೪. ಬೆಂಗಳೂರು ಗೋಲಗುಂಬಜ್ ………… ವಿಧಾನಸೌಧ
ತಾಜ್ ಮಹಲ್……………………
ಭಾಷಾ ಚಟುವಟಿಕೆ
ಅ) ಮಾದರಿಯಲ್ಲಿಸೂಚಿಸಿರುವಂತೆಪ್ರಶ್ನಾರ್ಥಕವಾಕ್ಯರಚಿಸಿ. (Create an interrogative sentence as indicated in the model)
ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ.
ವಿಧಾನಸೌಧ ಯಾವ ಊರಿನಲ್ಲಿದೆ ?
೧. ಮಕ್ಕಳು ಮೈಸೂರಿಗೆ ಪ್ರವಾಸ ಹೋದರು
ಉ: ಮಕ್ಕಳು ಯಾವ ಊರಿಗೆ ಪ್ರವಾಸ ಹೋದರು ?
೨. ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ.
ಉ: ರೈಲುಗಳು ಯಾವುದರ ಮೇಲೆ ಚಲಿಸುತ್ತವೆ?
೩. ಮೇರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಉ: ಮೇರಿ ಯಾವ ತರಗತಿಯಲ್ಲಿ ಓದುತ್ತಿದ್ದಾಳೆ?
ಆ) ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ. (Make your own sentence)
೧. ಪ್ರವಾಸ: ನಾನು ವಿಜಯಪುರಕ್ಕೆ ಪ್ರವಾಸ ಮಾಡಿದೆ.
೨. ಸಂಭಾಪಣೆ: ಕೆನಡಿ, ಮಧು, ರಾಜು ಸಂಭಾಷಣೆಯಲ್ಲಿ ತೊಡಗಿದರು.
೩. ಅದ್ಭುತ: ಶ್ರವಣಬೆಳಗೊಳ ಅದ್ಭುತವಾದ ತಾಣ.
೪. ನಮಸ್ಕರಿಸು :ನಾವು ಹಿರಿಯರಿಗೆ ನಮಸ್ಕರಿಸಬೇಕು.
ಈ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ. (Create and write the appropriate word as indicated in the sample)
(ಮಾದರಿ : ಕೇಳು – ಕೇಳಿಯಾನು – ಕೇಳಿಯಾರು)
೧. ಹೇಳು: ಹೇಳಿಯಾನು – ಹೇಳಿಯಾರು
೨. ಹೋಗು: ಹೋಗಿಯಾನು – ಹೋಗಿಯಾರು
೩. ಬೇಡು: ಬೇಡಿಯಾನು – ಬೇಡಿಯಾರು
೪. ಮಾಡು: ಮಾಡಿಯಾನು – ಮಾಡಿಯಾರು
ಉ) ಮಾದರಿಯಂತೆ ಪದ ಬಳಿ ರಚಿಸಿ.(Make the chain)
(ಮಾದರಿ : ಮರ – ರಸ – ಸರ – ರಥ)
ಜನಕ – ಕಮಲ – ಲಲಿತ – ತಬಲ
ವನಜ – ಜನಕ – ಕರಗ – ಗಗನ
ಭವನ – ನಗರ – ಕನಕ – ನಯನ
ಬಳಕೆ ಚಟುವಟಿಕೆ
೧. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ.
ಉ:ನಾನು ಪ್ರವಾಸದಲ್ಲಿ ನೋಡಿದ ಸ್ಥಳಗಳೆಂದರೆ – ಬಾದಾಮಿ, ಜೋಗಜಲಪಾತ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಕಾರ್ಕಳ, ಧರ್ಮಸ್ಥಳ, ಉಡುಪಿ.
೨. ಚಿತ್ರವನ್ನು ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆ.

ವೈದ್ಯ : ಹೇಗಿದ್ದೀರಾ ? ಯಾಕೆ ಬಂದಿದ್ದು?
ರೋಗಿ : ಡಾಕ್ಟರೇ , ನನಗೆ ಹುಷಾರಿಲ್ಲ.
ವೈದ್ಯ : ನಿನಗೆ ಜ್ವರ ಬಂದಿದೆ. ವಿಶ್ರಾಂತಿ ಬೇಕು.
ರೋಗಿ : ಡಾಕ್ಟರ್ , ನನಗೆ ಶೀತ ಹಾಗೂ ತಲೆನೋವು ಇದೆ.
ವೈದ್ಯ : ನಾನು ಪರೀಕ್ಷಿಸಿದ್ದೇನೆ. ಜ್ವರ ಕಡಿಮೆಯಾಗಲು ಮಾತ್ರೆ ಬರೆದಿದ್ದೇನೆ.
ರೋಗಿ : ಡಾಕ್ಟರ್ , ಆಯ್ತು. ಮಾತ್ರೆ ತೆಗೆದುಕೊಳ್ಳುತ್ತೇನೆ.
ವೈದ್ಯ : ವೇಳೆಗೆ ಸರಿಯಾಗಿ ಮಾತ್ರೆ ಸೇವಿಸು.
ರೋಗಿ : ಧನ್ಯವಾದಗಳು. ಡಾಕ್ಟರ್

ಕಂಡಕ್ಟರ್ : ಟಿಕೆಟ್, ಟಿಕೆಟ್
ಪ್ರಯಾಣಿಕ : ಎರಡು ಟಿಕೆಟ್ ಕೊಡಿ.
ಕಂಡಕ್ಟರ್ : ಎಲ್ಲಿಗೆ ?
ಪ್ರಯಾಣಿಕ : ಮೈಸೂರಿಗೆ ಎರಡು ಟಿಕೆಟ್ ಕೊಡಿ.
ಕಂಡಕ್ಟರ್ : ಒಂದು ನೂರು ರೂಪಾಯಿ ಕೊಡಿ.
ಪಯಾಣಿಕ : ಸರಿ, ತೆಗೆದುಕೊಳ್ಳಿ.
೩. ಯಾರು – ಯಾವ ಮಾತನ್ನು ಹೇಳಿರಬಹುದು? ಗೆರೆ ಎಳೆದು ಹೊಂದಿಸು. (Match the following)
| ಅ | ಬ | ಉತ್ತರ |
| ಶಿಕ್ಷಕ | ಅಮ್ಮಾ ಭಿಕ್ಷೆ ನೀಡಿ | ಈ ಪಾಠ ಓದಿಕೊಂಡು ಬನ್ನಿ |
| ದರ್ಜಿ | ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ | ನಿನಗೆ ಅ೦ಗಿ ಹೊಲಿಯಲು 2 ಮೀಟರ್ ಬಟ್ಟೆ ಬೇಕು |
| ರೈತ | ಮಾರಿಗೆ ಹತ್ತು ರೂಪಾಯಿ | ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ |
| ಭಿಕ್ಷುಕ | ಈ ಪಾಠ ಓದಿಕೊಂಡು ಬನ್ನಿ | ಅಮ್ಮಾ ಭಿಕ್ಷೆ ನೀಡಿ |
| ಹೂವಾಡಗಿತ್ತಿ | ನಿನಗೆ ಅ೦ಗಿ ಹೊಲಿಯಲು 2 ಮೀಟರ್ ಬಟ್ಟೆ ಬೇಕು | ಮಾರಿಗೆ ಹತ್ತು ರೂಪಾಯಿ |
One Response