Mallakamba kannada 6th standarad tili kannada text book. Mallakamba lesson explains about the Indian sports.

Mallakhamb is a traditional Indian sport that combines strength, flexibility, balance, and concentration. It is performed on a vertical wooden pole, rope, or cane, where athletes execute complex yoga-like poses and dynamic movements. Mallakhamb originated in India as a training method for wrestlers to improve physical fitness and mental discipline. The sport enhances core strength, agility, coordination, and self-confidence. Mallakhamb also promotes focus and body control, making it both a physical and mental exercise. Today, it is practiced in schools and sports academies and is gaining recognition at national and international levels as a unique cultural sport of India.

The Mallakhamb pillar has a specific traditional configuration designed for safety and performance:

  • It is usually made of teak or sheesham wood, polished smooth with oil.
  • The height of the pillar is about 8 to 9 feet above the ground.
  • The base diameter is around 21–24 inches, gradually tapering to 5–6 inches at the top.
  • The top is shaped like a rounded knob or cone to support gripping and balancing.
  • The pillar is firmly fixed into the ground or mounted on a strong base for stability.

This design helps athletes perform complex movements with balance, grip, and control.

ಮಲ್ಲಕಂಬ

ಅ. ಕೆಳಗಿನ ಪದಗಳ ಅರ್ಥ ಬರೆಯಿರಿ. (Write the word meaning)

ಅಚ್ಚರಿ = ಆಶ್ಚರ್ಯ, ಬೆರಗು
ಆಸ್ಥಾನ =  ರಾಜಸಭೆ, ದರ್ಬಾರು
ಛಂದೈತಿ = ಬಹಳಷ್ಟು ಚಂದವಿದೆ
ಪ್ರಾರ್ಥಿಸು = ಬೇಡು
ದೇಖೋ =  ನೋಡು
ಹಂಗಾ = ಹಾಗಾಯ್ತೇನು
ಅಬ್ಬಬ್ಬ = ಅಚ್ಚರಿ ಪದ
ಔಡಲೆಣ್ಣೆ =  ಹರಳೆಣ್ಣೆ
ಜಟ್ಟಿ = ಕುಸ್ತಿಪಟು
ಪಟ್ಟು = ಕುಸ್ತಿಯಲ್ಲಿ ಉಪಯೋಗಿಸುವ ತಂತ್ರ
ಭೈಯ್ಯಾ = ಅಣ್ಣ
ಹೆಡ್ಮಾಸ್ತರ =ಮುಖ್ಯೋಪಾಧ್ಯಾಯ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.(Answer in one sentence)

೧.ರಾಜ್ಯೋತ್ಸವದ ಮೆರವಣಿಗೆಯಲ್ಲಿ ಇಬ್ರಾಹಿಂ ಕಂಡ ಕಸರತ್ತು ಯಾವುದು?
ಉ: ರಾಜ್ಯೋತ್ಸವದ ಮೆರವಣಿಗೆಯಲ್ಲಿ ಇಬ್ರಾಹಿಂ  ಕಂಡ ಕಸರತ್ತು ಮಲ್ಲಕಂಬ.

೨.ಮಲ್ಲಕಂಬದ ಮೇಲೆ ಹತ್ತಿದವರು ಏಕೆ ಜಾರುತ್ತಿದ್ದರು?
ಉ: ಮಲ್ಲಕಂಬದ ಮೇಲೆ ಹತ್ತಿದವರು ಔಡಲೆಣ್ಣೆ ಹಚ್ಚಿದ್ದಕ್ಕೆ ಜಾರುತ್ತಿದ್ದರು.

೩.ಮಲ್ಲಕಂಬವನ್ನು ಕುಸ್ತಿ ಆಡುವವರು ಏಕೆ ಅಭ್ಯಾಸ ಮಾಡುತ್ತಾರೆ?
ಉ: ಮಲ್ಲಕಂಬವನ್ನು ಕುಸ್ತಿ ಆಡುವವರು ಎದುರಾಳಿಯನ್ನು ಸೋಲಿಸಲು ಅಭ್ಯಾಸ ಮಾಡುತ್ತಾರೆ.

೪.ಪುರಾಣಕಾಲದಲ್ಲಿ ಮಲ್ಲಕಂಬವನ್ನು ಯಾರು ಅಭ್ಯಾಸ ಮಾಡಿದ್ದರು?
ಉ: ಪುರಾಣ ಕಾಲದಲ್ಲಿ ಮಲ್ಲಕಂಬವನ್ನು ಭೀಮ, ಜರಾಸಂಧ, ಹನುಮಂತ, ವಾಲಿ, ಸುಗ್ರೀವರು ಅಭ್ಯಾಸ ಮಾಡಿದ್ದರು.

೫.ಹೈದರಾಬಾದ್ ನಿಜಾಮನ ಆಸ್ಥಾನದಲ್ಲಿದ್ದ ಕುಸ್ತಿಪಟುಗಳು ಯಾರು ಯಾರು?
ಉ: ಹೈದರಾಬಾದ್ ನಿಜಾಮನ ಆಸ್ಥಾನದಲ್ಲಿದ್ದ ಕುಸ್ತಿ ಪಟುಗಳು ಅಲಿ ಮತ್ತು ಗುಲ್.

೬.ಅಲಿ ಮತ್ತು ಗುಲ್ ಕುಸ್ತಿಪಟುಗಳು ಹಾಕಿದ ಸವಾಲನ್ನು ಯಾರು ಒಪ್ಪಿಕೊಂಡರು?
ಉ: ಅಲಿ ಮತ್ತು ಗುಲ್ ಕುಸ್ತಿಪಟುಗಳು ಹಾಕಿದ ಸವಾಲನ್ನು ಬಾಳಂಭಟ್ಟ ಒಪ್ಪಿಕೊಂಡನು.

೭. ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕಲಿಯಲು ಎಲ್ಲಿಗೆ ಹೋದನು?
ಉ: ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕಲಿಯಲು ನಾಸಿಕದ ಕಾಡಿನಲ್ಲಿರುವ ಸಪ್ತಗಿರಿ ದೇವಿಗೆ ಹೋದನು.

ಇ. ಈ ಕೆಳಗಿನ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer in three – four sentences)

೧. ಇಬ್ರಾಹಿಂ ಮಲ್ಲಕಂಬದ ಕಸರತ್ತನ್ನು ನೋಡಿ ಯಾವ ರೀತಿ ಆಶ್ಚರ್ಯ ವ್ಯಕ್ತಪಡಿಸಿದನು?
ಉ: ಇಬ್ರಾಹಿಂ ಮಲ್ಲಕಂಬದ ಕಸರತ್ತನ್ನು ನೋಡಿ ದೇಖೋ ಭೈಯ್ಯಾ ಅವ ಹೆಂಗಾ ಹತ್ಯಾನ ನೋಡು, ಅಬ್ಬಬ್ಬಾ ಕಂಬದ ತುದಿ ಮುಟ್ಟ್ತಾನಂದ್ರ ಪಸಕ್ಕನೆ ಜಾರಿಬಿಟ್ಟ, ಬಿದ್ದ ನೋಡು ಎಂದು ಆಶ್ಚರ್ಯ ವ್ಯಕ್ತಪಡಿಸಿದನು.

೨. ಅಲಿ ಮತ್ತು ಗುಲ್ ಕುಸ್ತಿಪಟುಗಳು ಪೇಶ್ವೆಗೆ ಏನೆಂದು ಸವಾಲು ಹಾಕಿದರು?
ಉ: ಅಲಿ ಮತ್ತು ಗುಲ್ ಕುಸ್ತಿಪಟುಗಳು ಪೇಶ್ವೆಗೆ “ನಿಮ್ಮ ರಾಜ್ಯದ ಮಲ್ಲರು ನಮ್ಮನ್ನು ಕುಸ್ತಿಯಲ್ಲಿ ಸೋಲಿಸಬೇಕು. ಇಲ್ಲದಿದ್ದರೆ ನಮ್ಮನ್ನು ಕುಸ್ತಿಯಲ್ಲಿ ಸೋಲಿಸುವಂತಹ ಮಲ್ಲರು ಇಲ್ಲವೆಂದು ಪ್ರಶಸ್ತಿ ಪತ್ರ ನೀಡಬೇಕು” ಎಂದು ಸವಾಲು ಹಾಕಿದರು.

೩. ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಹೇಗೆ ಕಲಿತನು?
ಉ: ಹುಡುಗನು ಸಪ್ತಗಿರಿ ದೇವಿ ಗುಡಿಯ ಮುಂದಿನ ದೀಪದ ಕಂಬದ ಮೇಲೆ ಕೋತಿ ಕಸರತ್ತು ಮಾಡುತ್ತಿದ್ದು ಅದನ್ನು ನೋಡಿ ಅದೇ ರೀತಿ ಶಕ್ತಿ ನೀಡುವಂತೆ ದೇವಿಗೆ ಪ್ರಾರ್ಥಿಸಿದ. ದಿನವೂ ಮಂಗನಂತೆ ಆ ದೀಪದ ಕಂಬದ ಮೇಲೆ ಕಸರತ್ತು ಮಾಡಿ ಕುಸ್ತಿಪಟ್ಟುಗಳನ್ನು ಕಲಿಯುತ್ತಿದ್ದನು. ಜೊತೆಗೆ ಯೋಗವನ್ನು ಮಾಡುತ್ತಿದ್ದನು.

ಈ. ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (Who said to whom)

೧. ʼಕಂಬದ ತುದಿ ಮುಟ್ಟುತ್ತಾನಂದ್ರ ಪಸಕ್ಕನೆ ಜಾರಿಬಿಟ್ಟರʼ
ಉ: ಈ ಮಾತನ್ನು ಇಬ್ರಾಹಿಂ ಪೀಟರ್ ಗೆ ಹೇಳಿದನು.

೨. ʼಔಡಲೆಣ್ಣಿ ತೆಳ್ಳಗೆ ಸವರಾರ ಕೈಯಿಟ್ಟರ ಜಾರತೈತಿ.ʼ
ಉ: ಈ ಮಾತನ್ನು ಪೀಟರ್ ಇಬ್ರಾಹಿಂಗೆ ಹೇಳಿದನು.

೩. ʼನಿಮ್ಮ ರಾಜ್ಯದ ಮಲ್ಲರು ನಮ್ಮನ್ನು ಕುಸ್ತಿಯಲ್ಲಿ ಸೋಲಿಸಬೇಕುʼ
ಉ: ಈ ಮಾತನ್ನು ಅಲಿ ಮತ್ತು ಗುಲ್ ಬಾಳಾಜಿ ಪೇಶ್ವೆಗೆ ಹೇಳಿದರು.

ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ಮಲ್ಲಕಂಬಕ್ಕೆ ಔಡಲ ಎಣ್ಣೆ ಸವರಿರುತ್ತಾರೆ.
೨. ಮಲ್ಲಕಂಬವನ್ನು ಕುಸ್ತಿ ಪಟ್ಟುಗಳನ್ನು ಕಲಿಯಲು ಅಭ್ಯಾಸ ಮಾಡುತ್ತಾರೆ.
೩. ಬಾಳಾಜಿ ಪೇಶ್ವೆಯ ಸ್ಥಳ ಪುಣೆ.
೪. ಬಾಳಂಭಟ್ಟನು ಕುಸ್ತಿಪಟ್ಟುಗಳನ್ನು ಕೋತಿ ನೋಡಿ ಕಲಿತುಕೊಂಡನು.

ಊ. ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)

ಮೆರವಣಿಗೆ: ರಾಜ್ಯೋತ್ಸವದ ಮೆರವಣಿಗೆ ಚೆನ್ನಾಗಿತ್ತು.
ಆಸ್ಥಾನ: ಮೈಸೂರು ಆಸ್ಥಾನದಲ್ಲಿ ತುಂಬಾ ಜಾಣರು ಇದ್ದರು.
ಫಲನೀಡು: ಓದಿದ್ದು ನನಗೆ ಫಲನೀಡಿತು.
ಪ್ರಶಸ್ತಿಪತ್ರ: ನನಗೆ ಪ್ರಶಸ್ತಿಪತ್ರ ಸಿಕ್ಕಿತು.
ಕಸರತ್ತು: ಕಸರತ್ತು ಮಾಡುವುದು ಒಳ್ಳೆಯದು.
ಸವಾಲು: ಸವಾಲನ್ನು ಎದುರಿಸಬೇಕು.

ಋ: ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)

ರಾಜ್ಯೋತ್ಸವ: ರಾಜ್ಯ + ಉತ್ಸವ
ಮಲ್ಲಗಂಬ: ಮಲ್ಲ + ಕಂಬ
ಜಟ್ಟಿಯಾಳು: ಜಟ್ಟಿ + ಆಳು
ಅಲ್ನೋಡು: ಅಲ್ಲಿ + ನೋಡು

ಎ. ಲಘು ಟಿಪ್ಪಣಿ ಬರೆಯಿರಿ. (Write a short note on the following topics)

ಮಲ್ಲಕಂಬ

ಮಲ್ಲಕಂಬವು ಭಾರತದಲ್ಲಿ ಹುಟ್ಟಿದ ಪಾರಂಪರಿಕ ಕ್ರೀಡೆಯಾಗಿದೆ. ಮರದ ಕಂಬ ಅಥವಾ ಹಗ್ಗದ ಮೇಲೆ ದೇಹದ ಸಮತೋಲನ, ಬಲ ಮತ್ತು ಚುರುಕನ್ನು ಪ್ರದರ್ಶಿಸುವ ಕೌಶಲ್ಯ ಇದರಲ್ಲಿ ಮುಖ್ಯ. ಇದು ದೈಹಿಕ ಸಾಮರ್ಥ್ಯ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದು ಮಲ್ಲಕಂಬವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿದೆ.

ರಾಜ್ಯೋತ್ಸವ

ರಾಜ್ಯೋತ್ಸವವನ್ನು ಪ್ರತಿವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ. ಈ ದಿನ ಕರ್ನಾಟಕ ಏಕೀಕರಣಗೊಂಡ ಸ್ಮರಣಾರ್ಥವಾಗಿ ಆಚರಣೆ ನಡೆಯುತ್ತದೆ. ಶಾಲೆ–ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು ಮತ್ತು ನಾಡಗೀತೆಗಳು ನಡೆಯುತ್ತವೆ. ರಾಜ್ಯೋತ್ಸವವು ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಹೆಮ್ಮೆಯನ್ನು ವ್ಯಕ್ತಪಡಿಸುವ ಮಹತ್ವದ ಹಬ್ಬವಾಗಿದೆ.

ದಸರಾ ಉತ್ಸವ

ದಸರಾ ಉತ್ಸವವು ಕರ್ನಾಟಕದ ಅತ್ಯಂತ ಪ್ರಸಿದ್ಧ ಹಬ್ಬವಾಗಿದ್ದು, ವಿಶೇಷವಾಗಿ ಮೈಸೂರಿನಲ್ಲಿ ಭವ್ಯವಾಗಿ ಆಚರಿಸಲಾಗುತ್ತದೆ. ಇದು ದುಷ್ಟರ ಮೇಲೆ ಧರ್ಮದ ವಿಜಯವನ್ನು ಸಂಕೇತಿಸುತ್ತದೆ. ಹತ್ತು ದಿನಗಳ ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಅರಮನೆಯ ದೀಪಾಲಂಕಾರ ಮತ್ತು ಜಂಬೂ ಸವಾರಿ ಪ್ರಮುಖ ಆಕರ್ಷಣೆಗಳಾಗಿವೆ. ದಸರಾ ಉತ್ಸವವು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಜಗತ್ತಿಗೆ ಪರಿಚಯಿಸುತ್ತದೆ.

Click here to download Malakhamba grade 6 notes

One Response