Baviyali Chandra means moon inside the well. Baviyali Chandra kannada notes grade IV KSEEB solutions. B M Sharma describes the childrens innocence in this poem.

Baaviyalli Chandraa poem describes the innocent and playful nature of two children, Puttu and Gopi. They see the reflection of the moon in a well and mistakenly believe that the real moon has fallen into it. They try to lift the moon out using a hook and rope. The rope breaks and Puttu falls down, but later he sees the moon in the sky and proudly believes that he has saved and lifted it back. The poem highlights the innocence and imagination of children.

ಬಾವಿಯಲ್ಲಿ ಚಂದ್ರ

ತಿಂಗಳು ಬೆಳಕಿನ ಇರುಳಿನಲಂದು

ಅಮ್ಮನು ಕೆಲಸದೊಳಿರುತಿರೆ ಕಂಡು

ಗೋಪಿಯು ಪುಟ್ಟುವು ಹೊರಗಡೆ ಬಂದು

ಬಾವಿಗೆ ಇಣುಕಿದರು

ಬಾವಿಲಿ ಚಂದ್ರನ ಬಿಂಬವ ಕಂಡು

ಚಂದ್ರನು ಬಾವಿಗೆ ಬಿದ್ದನು ಎಂದು

    ಅಯ್ಯೋ ! ಪಾಪವೆ ! ಎನ್ನುತಲೊಂದ

ಕೊಕ್ಕೆಯ ಹುಡುಕಿದರು 

ಚಂದ್ರನ ಮೇಲಕೆ ಎತ್ತಲಿಕೆಂದು

ಬಾವಿಯ ಹಗ್ಗಕೆ ಕೊಕ್ಕೆಯ ಬಿಗಿದು

ದೂರದಿ ಗೋಪಿಯ ನಿಲ್ಲಿಸಿ ಪುಟ್ಟು

ಹಗ್ಗವನಿಳಿಸಿದನು

ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ

ಪುಟ್ಟುವು ಚಂದ್ರನು ಸಿಕ್ಕೇ ಸಿಕ್ಕ

ಎನ್ನುತ ತುಂಬಾ ಬಲದಿಂದೆಳೆಯ

ಹಗ್ಗವು ತುಂಡಾಯ್ತು

ಎಳೆತದ ರಭಸಕೆ ಪುಟ್ಟುವು ಬಿದ್ದ

ಮೆಲ್ಲನೆ ಮನೆ ಕಡೆ ನೋಡುತಲೆದ್ದ

ತಂಗಿಗೆ ಆಗಸ ತೋರುತಲೆಂದ

” ಗೋಪೀ ನೋಡಲ್ಲಿ ! ”

ಚಂದ್ರನ ಮೇಲಕೆ ಏರಿಸಿಬಿಟ್ಟೆ

   ನಮ್ಮಯ ದೇವರ ಬದುಕಿಸಿಕೊಟ್ಟೆ

ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ

    ಎಂದೋಡಿದ ಪುಟ್ಟು

ಪದಗಳ ಅರ್ಥ

ತಿಂಗಳು = ಚಂದ್ರ
ತಿಂಗಳು ಬೆಳಕು = ಹುಣ್ಣಿಮೆಯ ಬೆಳಕು
ಬಿಂಬ = ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ಕಂಡಾಗ ಕಾಣುವ ನಮ್ಮ ರೂಪ, ಪ್ರತಿಬಿಂಬ
ಕೊಕ್ಕೆ = ಯಾವುದನ್ನಾದರೂ ಹಿಡಿದು ಎಳೆಯಲು ಬಳಸುವ ಲೋಹದ ಅಥವಾ ಮರದ ಸಾಧನ, ಕೊಂಡಿ
ರಭಸ = ವೇಗ
ಆಗಸ = ಆಕಾಶ, ಬಾನು
ಮೆಲ್ಲನೆ = ನಿಧಾನವಾಗಿ

ಅಭ್ಯಾಸ

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಗೋಪಿ ಪುಟ್ಟು ಬಾವಿಯಲ್ಲಿ ಏನು ನೋಡಿದರು?
ಉ: ಗೋಪಿ ಪುಟ್ಟು ಬಾವಿಯಲ್ಲಿ ಚಂದ್ರನ ಬಿಂಬ ನೋಡಿದರು.

೨. ಕೊಕ್ಕೆಯನ್ನು ಏಕೆ ತಂದರು?
ಉ: ಕೊಕ್ಕೆಯನ್ನು ಚಂದ್ರನನ್ನು ಮೇಲೆತ್ತಲು ತಂದರು.

೩. ಪುಟ್ಟು ಏಕೆ ಬಿದ್ದನು?
ಉ: ಪುಟ್ಟು ಎಳೆತದ ರಭಸಕ್ಕೆ ಬಿದ್ದನು.

೪. ಚಂದ್ರನು ಎಲ್ಲಿದ್ದನು?
ಉ: ಚಂದ್ರನು ಆಗಸದಲ್ಲಿದ್ದನು.

೫. ತಾಯಿಗೆ ಪುಟ್ಟು ಏಕೆ ಅಂಜಿದನು?
ಉ: ಚಂದ್ರನನ್ನು ಮೇಲೆತ್ತಿದ್ದು ಅಮ್ಮನಿಗೆ ಗೊತ್ತಾದರೆ ಎಂದು ಅಂಜಿದನು.

ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (Answer the following in two – three sentences)

೧.ಚಂದ್ರನ ಬಿಂಬ ನೋಡಿದಾಗ ಪುಟ್ಟು ಏನು ಮಾಡಿದನು?
ಉ: ಚಂದ್ರನ ಬಿಂಬ ನೋಡಿದಾಗ ಪುಟ್ಟು ಚಂದ್ರನ ಮೇಲೆತ್ತಲು ಹಗ್ಗಕ್ಕೆ ಕೊಕ್ಕೆ ಕಟ್ಟಿ ಬಾವಿಯಲ್ಲಿ ಬಿಟ್ಟನು.

೨. ಬಾವಿಗೆ ಕೊಕ್ಕೆ ಇಳಿಸಿ ಎಳೆದಾಗ ಏನಾಯಿತು?
ಉ: ಬಾವಿಗೆ ಕೊಕ್ಕೆ ಇಳಿಸಿ ಎಳೆದಾಗ ಕೊಕ್ಕೆ ಕಲ್ಲಿಗೆ ಸಿಲುಕಿತು. ಚಂದ್ರನು ಸಿಕ್ಕನೆಂದು ಬಲವಾಗಿ ಎಳೆದನು. ಹಗ್ಗ ತುಂಡಾಗಿ ಎಳೆತದ ರಭಸಕೆ ಪುಟ್ಟು ಬಿದ್ದನು.

ಇ. ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ. (Correct these sentences and write them down.)

೧. ಪುಟ್ಟು ಎಳೆತದ ಬಿದ್ದ ರಭಸಕ್ಕೆ
ಉ. ಪುಟ್ಟು ಎಳೆತದ ರಭಸಕ್ಕೆ ಬಿದ್ದ.

೨. ಗೊತ್ತಾದರೆ ಕೆಟ್ಟೆ ಅಮ್ಮಗೆ ನಾ
ಉ. ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ.

೩.ಮನೆ ಮೆಲ್ಲನೆ ನೋಡುತಲೆದ್ದ ಕಡೆ
ಉ.ಮೆಲ್ಲನೆ ಮನೆ ಕಡೆ ನೋಡುತಲೆದ್ದ.

೪. ಬಾವಿಗೆ ಎಂದು ಚಂದ್ರನು ಬಿದ್ದನು.
ಉ. ಚಂದ್ರನು ಬಾವಿಗೆ ಬಿದ್ದನು ಎಂದು

ಈ. ಈ ಪದ್ಯವನ್ನು ಪೂರ್ಣಗೊಳಿಸಿ. (Complete the poem)

ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ
ಪುಟ್ಟುವು ಚಂದ್ರನು ಸಿಕ್ಕೇ ಸಿಕ್ಕ
ಎನ್ನುತ ತುಂಬಾ ಬಲದಿಂದೆಳೆಯ
ಹಗ್ಗವು ತುಂಡಾಯ್ತು

ಉ. ಈ ಪದ್ಯದಲ್ಲಿ ಬರುವ ಮೂರು ಅಕ್ಷರದ ಪದಗಳನ್ನು ಹುಡುಕಿ ಬರೆಯಿರಿ.( Find and write the three-letter words in this verse)

ತಿಂಗಳು            ಅಮ್ಮನು            ಗೋಪಿಯು          ಪುಟ್ಟುವ
ಬಾವಿಗೆ            ಚಂದ್ರನ             ಬಿಂಬವ             ಪಾಪವೇ
ಕೊಕ್ಕೆಯ          ಬಿದ್ದನು              ಮೇಲಕೆ             ಹಗ್ಗಕ್ಕೆ
ದೂರದಿ           ನಿಲ್ಲಿಸಿ               ಎನ್ನುತ್ತ              ಮೆಲ್ಲನೆ

ಊ. ‘ ಚ ’ ಅಕ್ಷರದಿಂದ ಪ್ರಾರಂಭವಾಗುವ ಪದಗಳನ್ನು ಬರೆಯಿರಿ. (Write the words that start with the letter ‘ch’)

ಮಾದರಿ: ಬಟ್ಟೆ ಮೇಲೆ ಮಾಡಲು ಬಳಸುವ ಸಾಧನ: ಚರಕ

೧. ಸುರಳಿಯಾಕಾರದಂತಿರುವ ಎಣ್ಣೆಯಲ್ಲಿ ಕರೆದ ತಿಂಡಿ: ಚಕ್ಕುಲಿ
೨. ಅನ್ನ ತಿನ್ನಲು ನೀನು ಇದನ್ನು ಬಳಸುತ್ತಿಯಾ: ಚಮಚ
೩. ನಾಲ್ಕು ಸೈನ್ಯ ಬಲದೊಂದಿಗೆ ಆಡುವ ಒಳಾಂಗಣ ಆಟ: ಚದುರಂಗ
೪. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಮುಷ್ಕರ: ಚಳುವಳಿ

ಭಾಷಾ ಚಟುವಟಿಕೆ

ಅ. ಮಾದರಿಯಲ್ಲಿ ಸೂಚರಿಸಿರುವಂತೆ ಸೂಕ್ತ ಪದ ರಚಿಸಿ ಬರೆದು ಸ್ಪಷ್ಟವಾಗಿ ಓದಿ.( write the appropriate word as indicated in the sample and read it clearly)

ಮಾದರಿ: ಮರ + ಗಳು = ಮರಗಳು
ಮನೆ + ಗಳು = ಮನೆಗಳು
ಚಿತ್ರ + ಗಳು = ಚಿತ್ರಗಳು
ಹಕ್ಕಿ + ಗಳು = ಹಕ್ಕಿಗಳು
ಪುಸ್ತಕ + ಗಳು = ಪುಸ್ತಕಗಳು
ನದಿ + ಗಳು = ನದಿಗಳು

ಆ. ಈ ಪದ್ಯದಲ್ಲಿ ಬರುವ ಒತ್ತಕ್ಷರಗಳ ಪದಗಳನ್ನು ಪಟ್ಟಿ ಮಾಡಿ ಬಳಕೆ ಚಟುವಟಿಕೆ. (List and use the stressed syllables in this verse)

ಪುಟ್ಟುವು            ಅಮ್ಮನು            ಚಂದ್ರನ             ಅಯ್ಯೋ
ಕೊಕ್ಕೆಯ            ಹಗ್ಗಕ್ಕೆ                ನಿಲ್ಲಿಸಿ               ಕಲ್ಲಿಗೆ
ಸಿಕ್ಕಿ                 ತುಂಡಾಯ್ತು      ಮೆಲ್ಲನೆ              ನೋಡಲ್ಲ

ಬಳಕೆ ಚಟುವಟಿಕೆ

ಅ ಮತ್ತು ಆ ಪಟ್ಟಿಯಲ್ಲಿರುವ ಶಬ್ದಗಳನ್ನು ಜೋಡಿಸಿ ಕವಿತೆಯ ಸಾಲುಗಳನ್ನು ಪೂರ್ತಿ ಗೊಳಿಸಿ. ( Usage Activity Complete the lines of the poem by matching the words in the list A and B)

ಅ                                   ಆ

ತಿಂಗಳು ಬೆಳಕಿನ                 ಬದುಕಿಸಿ ಕೊಟ್ಟೆ            ಇರುಳಿಲನಂದು
ಚಂದ್ರನ ಮೇಲಕೆ                  ತೋರುತಲೆಂದ            ಎತ್ತಲಿಕೆಂದು
ಪುಟ್ಟುವ ಚಂದ್ರನು               ಎತ್ತಲಿಕೆಂದು               ಸಿಕ್ಕೇ ಸಿಕ್ಕ
ತಂಗಿಗೆ ಆಗಸ                     ಸಿಕ್ಕೇ ಸಿಕ್ಕ                 ತೋರುತಲೆಂದ
ನಮ್ಮಯ ದೇವರ                 ಇರುಳಿಲನಂದು            ಬದುಕಿಸಿ ಕೊಟ್ಟೆ

ಆ. ‘ ದುಡುಕಿದರೆ ಫಲವಿಲ್ಲ ‘ ಇದು ಒಂದು ಗಾದೆ ಮಾತು. ಇದೇ ಅರ್ಥದ ಇನ್ನಷ್ಟು ಗಾದೆ ಮಾತುಗಳನ್ನು ಸಂಗ್ರಹಿಸಿ ಬರೆಯಿರಿ. (‘If you rush, you will not get results’ is a proverb. Collect and write more proverbs with the same meaning.)

೧. ತಾಳಿದವನು ಬಾಳಿಯಾನು
೨. ಕಾಯಕವೇ ಕೈಲಾಸ
೩. ಮನಸ್ಸಿದ್ದರೆ ಮಾರ್ಗ

Click here to download Baviyalli chandra notes 4th standard

One Response

Leave a Reply

Your email address will not be published. Required fields are marked *