“Manasiddhare maarga” means where there is a will, there is a way. Mind is needed to achieve any achievement. A drive to accomplish is necessary for the path of exertion to reveal itself. A line from a song goes like this. “If you sit with your hands tied that it will not happen, the work will not move forward”. As Napoleon Bonaparte used to say, remove the word impossible. Above all the intention should be big. There should be a mind to achieve the goal. Altogether Must try. If you try to climb a small hill every day with the goal of climbing Gauri Shankar peak, Certainly, you can climb Gauri peak one day. An example of this is Ten Singh. He climbed Mount Everest and achieved the path he set his mind to with his own efforts. A student should be determined to achieve success. Must try. Everything is possible if you put your mind to it. If there is a mind, there is a way. Basically, “Manasiddhare maarga” is a famous Kannada proverb.

ಮನಸ್ಸಿದ್ದರೆ ಮಾರ್ಗ

ಯಾವುದೇ ಸಾಧನೆಯನ್ನು ಸಾಧಿಸಬೇಕಾದರೆ ಮನಸ್ಸು ಬೇಕು. ಸಾಧಿಸುತ್ತೇನೆ ಎಂಬ ಛಲವು ಇರಬೇಕು. ಆಗ ಪ್ರಯತ್ನದ ಹಾದಿ ತೋರುತ್ತದೆ. ಒಂದು ಚಿತ್ರಗೀತೆಯ ಸಾಲು ಹೀಗಿದೆ. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ”. ನನ್ನ ಕೈಯಲ್ಲಿ ಆಗುವದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಿಲ್ಲ. ಮಾಡಬಲ್ಲೆ ಎಂಬ ಮನಸ್ಸು ಮಾಡುವವನು ಎಂತ ಕೆಲಸವನ್ನಾದರೂ ಮಾಡಬಲ್ಲ. ಅಸಾಧ್ಯ ಎನ್ನುವ ಪದವನ್ನು ತೆಗೆದುಹಾಕಿ ಎಂದು ನೆಪೋಲಿಯನ್ ಬೋನಾಪಾರ್ಟೆ ಹೇಳುತ್ತಿದ್ದನಂತೆ. ಉದ್ದೇಶ ದೊಡ್ಡದಾಗಿರಬೇಕು. ಗುರಿಯನ್ನು ಸಾಧಿಸುವ ಮನಸ್ಸು ಇರಬೇಕು. ಪ್ರಯತ್ನ ಪಡಬೇಕು. ಗೌರಿಶಂಕರ ಶಿಖರವನ್ನೇ ಏರಬೇಕೆಂಬ ಗುರಿ ಇರಿಸಿಕೊಂಡು ಪ್ರತಿದಿನ ಚಿಕ್ಕ ಬೆಟ್ಟ ಹತ್ತಿ ಪ್ರಯತ್ನಿಸಿದರೆ ಕೊನೆಗೊಂದು ದಿನ ಗೌರಿ ಶಿಖರವನ್ನು ಏರಬಹುದು. ಇದಕ್ಕೆ ಉದಾಹರಣೆ ಛಲಬಿಡದ ತೇನ್ ಸಿಂಗ್. ಅವರು ಎವರೆಸ್ಟ್ ಶಿಖರವನ್ನು ಏರಿ ತಮ್ಮ ಮನಸ್ಸಿನಲ್ಲಿರುವ ಮಾರ್ಗವನ್ನು ತಮ್ಮ ಪ್ರಯತ್ನದಿಂದಲೇ ಸಾಧಿಸಿದರು. ವಿದ್ಯಾರ್ಥಿಯಾದವನು ಯಶಸ್ಸು ಗಳಿಸಲು ಮನಸ್ಸು ಮಾಡಬೇಕು. ಪ್ರಯತ್ನ ಪಡಬೇಕು. ಮನಸ್ಸಿಟ್ಟು ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ. ಮನಸ್ಸಿದ್ದರೆ ಮಾರ್ಗ ಕನ್ನಡದ ಗಾದೆ ಮಾತು

Click here to download manasidre marg

One Response