Satyakke savilla sullige sukhavilla. Truth always trumphs. Truth has no death, lies have no happiness. Proverb is equivalent to Veda. Even if the Veda is false, the proverb is not false. The words of experience spoken by the proverbial elders are pearls. Truth is always alive. The meaning of this proverb is that a lie cannot give happiness. Truth is eternal. Hence our national emblem has the words ‘Satyameva Jayate’. All religions proclaim that truth is victorious. King Satya Harishchandra fought for truth all his life. Mahatmas like Gandhiji, Swami Vivekananda lived truthful lives. Lies are not happy. Nobody believes a liar. A lie is like a trap, if you get caught in it, it is difficult to get out.
Truth is light, lies are darkness. No one should ever forget the saying that truth has no death and lies have no happiness. Altogether, Satyakke savilla sullige sukhavilla.

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು. ಸತ್ಯ ಸದಾ ಜೀವಂತವಾದುದು. ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದುದು. ಆದ್ದರಿಂದ ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ‘ಸತ್ಯಮೇವ ಜಯತೇ’ ಎಂಬ ಬರೆಹವಿದೆ. ಸತ್ಯಕ್ಕೆ ಜಯ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ರಾಜ ಸತ್ಯ ಹರಿಶ್ವಂದ್ರ ಜೀವನವೆಲ್ಲ ಸತ್ಯಕ್ಕಾಗಿ ಹೋರಾಡಿದನು. ಗಾಂಧೀಜಿ , ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು. ಸುಳ್ಳಿಗೆ ಸುಖವಿಲ್ಲ. ಸುಳ್ಳು ಹೇಳುವವನನ್ನು ಯಾರೂ ನಂಬುವುದಿಲ್ಲ. ಸುಳ್ಳು ಒಂದು ಬಲೆ ಇದ್ದ ಹಾಗೆ ಅದರಲ್ಲಿ ಸಿಕ್ಕಿಬಿದ್ದರೆ ಹೊರ ಬರುವುದು ಕಷ್ಟ.
ಸತ್ಯವೇ ಬೆಳಕು, ಸುಳ್ಳೆ ಕತ್ತಲು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಎಂದಿಗೂ ಯಾರು ಮರೆಯಬಾರದು.

ಸುಮನಾ ಶ್ರೀರಾಮ್