Dr Salim Ali kannada lesson grade IV is about Salim Alee. Dr Salim Ali class 4 kannada chapter is about the ornithologist.

Dr Saleem Ali, known as the “Birdman of India,” was born in 1896 in Mumbai to Moizuddin and Zeenat-un-Nissa. Orphaned at a young age, he was raised by his uncle and aunt, who encouraged his curiosity about nature. His childhood interest in birds led him to study zoology at St. Xavier’s College and later receive advanced training in Germany. Salim Ali worked with the Bombay Natural History Society, conducting large-scale bird surveys across India. His books and research transformed Indian ornithology. He received the Padma Bhushan and Padma Vibhushan for his remarkable contributions.

ಡಾ. ಸಲೀಂ ಅಲಿ

ಪದಗಳ ಅರ್ಥ ಬರೆಯಿರಿ. (Write the word Meaning)

ಕುತೂಹಲ = ಅಚ್ಚರಿ, ವಿಸ್ಮಯ
ಪಕ್ಷಿತಜ್ಞ = ಪಕ್ಷಿಗಳ ಬಗ್ಗೆ ತಿಳಿದವನು,  
ನಿರ್ಧರಿಸು = ತೀರ್ಮಾನಿಸು, ನಿಶ್ಚಯಿಸು
ಖ್ಯಾತ = ಪ್ರಸಿದ್ಧವಾದ, ಹೆಸರುವಾಸಿಯಾದ,
ಜೀವನ ನಿರ್ವಹಣೆ = ಬದುಕು ಸಾಗಿಸುವುದು
ಧೃತಿಗೆಡು = ಧೈರ್ಯವನ್ನು ಕಳೆದುಕೊಳ್ಳು, ಎದೆಗುಂದು
ಪ್ರಭೇದ = ವಿಭಾಗ, ಪ್ರಕಾರ
ಪ್ರಶಸ್ತಿ = ಗೌರವ ಸೂಚಕವಾದ ಪದವಿ, ಬಿರುದು
ಕರ್ತವ್ಯ = ಮಾಡಬೇಕಾದ ಕೆಲಸ, ಜವಾಬ್ದಾರಿ

ಅ) ಹೊಂದಿಸಿ ಬರೆಯಿರಿ. (Match the following)

ಅ                                             ಬ

ಡಬ್ಲ್ಯೂ ಎಸ್ ಮಿಲ್ಲರ್               ಪ್ರಕೃತಿ ವಿಜ್ಞಾನ ಸಂಘದ ಪಕ್ಷಿ ತಜ್ಞ
ಅಮೀರುದ್ದೀನ್‌  ತಯಾಬ್ದಿ        ಸಲೀಂಅಲಿಯವರ ಸೋದರಮಾವ
ತೆಹ್ಮಿನಾ                                    ಸಲೀಂ ರವರ ಪತ್ನಿ
ಅದಿರಿನ ಗಣಿ                             ಬರ್ಮಾ
ಬರ್ಲಿನ್ ವಿಶ್ವವಿದ್ಯಾನಿಲಯ       ಜರ್ಮನಿ

ಆ) ಒಂದು ವಾಕ್ಯದಲ್ಲಿ ಬರೆಯಿರಿ. (Answer the following questions in one sentence)

೧. ಕಾಡುಗುಬ್ಬಚ್ಚಿಯ ಕುತ್ತಿಗೆಯ ಕೆಳಗೆ ಯಾವ ಬಣ್ಣವಿತ್ತು?
ಉ: ಕಾಡುಗುಬ್ಬಚ್ಚಿಯ ಕುತ್ತಿಗೆಯ ಕೆಳಗೆ ಹಳದಿ ಬಣ್ಣವಿತ್ತು.

೨. ಸಲೀಂ ಅಲಿ ಯಾವಾಗ ಮತ್ತು ಎಲ್ಲಿ ಜನಿಸಿದರು?
ಉ: ಸಲೀಂ ಅಲಿಯವರು ನವೆಂಬರ್‌ ೧೨, ೧೮೯೬ರಂದು  ಮತ್ತು ಮುಂಬಯಿಯಲ್ಲಿ ಜನಿಸಿದರು.

೩. ತೆಹ್ಮಿನಾ ಯಾರು?
ಉ: ತೆಹ್ಮಿನಾ ಸಲೀಂ ಅಲಿಯವರ ಪತ್ನಿ.

೪. ಸಲೀಂ ಅಲಿಯವರು ಬರ್ಲಿನ್‌ ವಿಶ್ವವಿದ್ಯಾನಿಲಯದಲ್ಲಿ ಯಾವುದರ ಬಗ್ಗೆ ತರಬೇತಿ ಪಡೆದರು?
ಉ: ಸಲೀಂ ಅಲಿಯವರು ಬರ್ಲಿನ್‌ ವಿಶ್ವವಿದ್ಯಾನಿಲಯದಲ್ಲಿ ಪಕ್ಷಿಶಾಸ್ತ್ರದ ಬಗ್ಗೆ ತರಬೇತಿ ಪಡೆದರು.

೫. ಭಾರತದಲ್ಲಿ ಪಕ್ಷಿ ಅಧ್ಯಯನಕ್ಕೆ ನಾಂದಿ ಹಾಡಿದವರು ಯಾರು?
ಉ: ಭಾರತದಲ್ಲಿ ಪಕ್ಷಿ ಅಧ್ಯಯನಕ್ಕೆ ನಾಂದಿ ಹಾಡಿದವರು ಸಲೀಂ ಅಲಿ.

ಇ) ತಪ್ಪಾಗಿರುವದನ್ನು ಸರಿಪಡಿಸಿ ಬರೆಯಿರಿ. (Correct the sentence)

೧. ಸಲೀಂ ಅಲಿ ಹತ್ತು ಮಕ್ಕಳಲ್ಲಿ ಮೊದಲನೆಯವರು
ಉ: ಸಲೀಂ ಅಲಿ ಹತ್ತು ಮಕ್ಕಳಲ್ಲಿ ಕೊನೆಯವರು.

೨. ಪ್ರಕ್ರತಿ ವಿಜ್ಷಾನ ಸಂಸ್ಥೆಯ ಪಕ್ಷಿತಜ್ಷ ಡಬ್ಲೂ. ಎಸ್‌ ಮಿಲ್ಲರ್ಡ
ಉ: ಪ್ರಕ್ರತಿ ವಿಜ್ಷಾನ ಸಂಸ್ಥೆಯ ಪಕ್ಷಿತಜ್ಷ ಡಬ್ಲೂ. ಎಸ್‌ ಮಿಲ್ಲರ್ಡ

೩. ಅಮೀರುದ್ದೀನ್‌ ತಯಾಬ್ದಿಯವರು ತುಂಬಾ ಬಡವರಾಗಿದ್ದರು.
ಉ: ಅಮೀರುದ್ದೀನ್‌ ತಯಾಬ್ದಿಯವರು ತುಂಬಾ ಶ್ರೀಮಂತರಾಗಿದ್ದರು.

ಈ) ಎರಡು ಮೂರು ವಾಕ್ಯದಲ್ಲಿ ಉತ್ತರಿಸಿರಿ.  (Answer the following in two – three sentences)

೧. ಸಲೀಂ ಅಲಿಯವರಿಗೆ ಪಕ್ಷ ತಜ್ಞರಾಗಬೇಕೆಂದು ಅನಿಸಿದ್ದೇಕೆ?
ಉ: ಸಲೀಂ ಅಲಿಯವರು ಚಿಕ್ಕವರಾಗಿದ್ದಾಗ ಪ್ರಕೃತಿ ವಿಜ್ಞಾನ ಸಂಘದಲ್ಲಿ ಸತ್ತ ಪಕ್ಷಿ ಲೋಕವನ್ನು ನೋಡಿ ಬೆರಗಾದರು. ಪ್ರಪಂಚದಲ್ಲಿ ಅಷ್ಟು ದೊಡ್ಡ ಪಕ್ಷಿ ಲೋಕವಿದೆ ಎಂಬುದನ್ನು ಊಹಿಸಿರಲಿಲ್ಲ. ಆಗ ಅವರಿಗೆ ಪಕ್ಷ ತಜ್ಞರಾಗಬೇಕೆಂದು ಅನಿಸಿತು.

೨. ಯಾವ ಪರಂಪರೆಯನ್ನು ಬೆಳೆಸುವುದು ನಮ್ಮ ಕರ್ತವ್ಯ?
ಉ: ಭಾರತದ ಪಕ್ಷಿ ಲೋಕಕ್ಕೆ ನಾಂದಿ ಹಾಡಿದವರು ಡಾಕ್ಟರ್ ಸಲೀಂ ಅಲಿಯವರು. ಅವರು ಬೆಳೆಸಿದ ಪಕ್ಷಿ ಪರಂಪರೆ ನಮ್ಮ ಜೊತೆ ಇದೆ. ಅದನ್ನು ಬೆಳೆಸುವುದು ನಮ್ಮ ಕರ್ತವ್ಯ.

೩. ಪ್ರಾಣಿ ಪಕ್ಷಿಗಳ ಬಗ್ಗೆ ನಿಮ್ಮದೇ ಮಾತುಗಳಲ್ಲಿ ಬರೆಯಿರಿ.
ಉ: ನನಗೆ ಹಕ್ಕಿ ಮತ್ತು ಪ್ರಾಣಿಗಳನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ. ಅವುಗಳ ಜೊತೆ ಸಮಯ ಕಳೆಯುವುದು ನನಗೆ ತುಂಬಾ ಇಷ್ಟ. ನಾನು ಅವುಗಳನ್ನು ತುಂಬಾ ಪ್ರೀತಿಸುತ್ತೇನೆ.

ಉ) ಪದಗಳಿಗೆ ಅರ್ಥ ಬರೆಯಿರಿ. (Write the word meaning)

ತಜ್ಞ = ಜ್ಞಾನಿ
ಸಂಸ್ಥೆ = ಸಂಘ
ವೀಕ್ಷಣೆ = ನೋಟ

ಊ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)

ಕರೆದೊಯ್ದರು = ಕರೆದು + ಒಯ್ದರು
ಹಡಗಿನಲ್ಲಿ =  ಹಡಗಿನ +ಅಲ್ಲಿ
ಪಾಲಾಯಿತು = ಪಾಲು + ಆಯಿತು

Click here to download Salim ali kannada notes grade 4