Tayigondu patra kannada letter is written by the son to his mother. Tayigondu patra kannada notes grade IV is about personal letter.
ತಾಯಿಗೊಂದು ಪತ್ರ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು?
ಉ: ಅಜ್ಜ ಮಕ್ಕಳನ್ನು ಮೈಸೂರು ದಸರೆಗೆ ಕರೆದುಕೊಂಡು ಹೋಗಿದ್ದರು.
೨. ಅಜ್ಜಿ ಮಕ್ಕಳಿಗೆ ಏನೇನು ಕೊಡಿಸಿದರು?
ಉ: ಅಜ್ಜಿ ಮಕ್ಕಳಿಗೆ ಆಟದ ಸಾಮಾನು, ಸರ ಮತ್ತು ಬಳೆಗಳನ್ನು ಕೊಡಿಸಿದರು.
೩. ಮಕ್ಕಳು ಏನು ನೋಡಿ ಆಶ್ಚರ್ಯಪಟ್ಟರು?
ಉ: ಮಕ್ಕಳು ಜಿರಾಫೆಯ ಕತ್ತು ನೋಡಿ ಆಶ್ಚರ್ಯಪಟ್ಟರು.
೪. ಅಮ್ಮನಿಗೆ ಕಾಗದ ಬರೆದವರು ಯಾರು?
ಉ: ಅಮ್ಮನಿಗೆ ಕಾಗದ ಬರೆದವರು ಮಗ ಉಲ್ಲಾಸ್.
ಆ) ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಮೈಸೂರು ದಸರೆಯಲ್ಲಿ ಉಲ್ಲಾಸ್ ಏನೇನು ನೋಡಿದನು?
ಉ:ಮೈಸೂರು ದಸರೆಯ ಮೆರವಣಿಗೆಯಲ್ಲಿ ಚಾಮುಂಡಿ ದೇವಿಯನ್ನು, ಸ್ಥಬ್ದ ಚಿತ್ರಗಳನ್ನು, ಕಲಾತಂಡಗಳ ಪ್ರದರ್ಶನ ಪಂಜಿನ ಕವಾಯತನ್ನು ನೋಡಿದನು.
೨.ಪ್ರಾಣಿ ಸಂಗ್ರಹಾಲಯದಲ್ಲಿ ಯಾವ ಯಾವ ಪ್ರಾಣಿಗಳು ಇದ್ದವು?
ಉ: ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹ, ಆನೆ, ಚಿರತೆ, ಜಿಂಕೆ, ಘೇಂಡಾಮೃಗ, ಜಿರಾಫೆ ಮತ್ತು ಕೋತಿಗಳು ಇದ್ದವು. ವಿವಿಧ ಬಗೆಯ ಹಾವುಳಾದ ಹೆಬ್ಬಾವು, ಕಾಳಿಂಗ ಸರ್ಪ ಇದ್ದವು.
೩. ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು?
ಉ: ಉಲ್ಲಾಸನಿಗೆ ಅವನ ಅಜ್ಜ ಮೈಸೂರು ದಸರೆಗೆ ಕರೆದುಕೊಂಡು ಹೋಗಿದ್ದರು. ದಸರೆಯಲ್ಲಿ ಮೆರವಣಿಗೆ ನೋಡಿ ಮತ್ತು ಮೃಗಾಲಯದಲ್ಲಿ ವಿವಿಧ ಪ್ರಾಣಿಗಳನ್ನು ನೋಡಿದನು. ಅದಕ್ಕೆ ಉಲ್ಲಾಸನಿಗೆ ಸಂತೋಷವಾಯಿತು.
ಇ)ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿ.(Fill in the blanks)
೧. ಅಜ್ಜ ನಮ್ಮನ್ನು ಮೈಸೂರು ದಸರಾಗೆ ಕರೆದುಕೊಂಡು ಹೋಗಿದ್ದರು.
೨. ಆನೆಯ ಮೇಲಿನ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ಇಟ್ಟಿದ್ದರು.
೩. ಮೈಸೂರಿನಲ್ಲಿ ಶ್ರೀ ಜಯಚಾಮರಾಜೇಂದ್ರ ಮೃಗಾಲಯವಿದೆ.
೪. ಸಿಂಹದ ಘರ್ಜನೆ ನಮ್ಮ ಗಮನ ಸೆಳೆಯಿತು.
೫. ಕೊಂಬೆಯ ಮೇಲೆ ಕಾಡು ಮನುಷ್ಯ ನಮ್ಮಹಾಗೆಯೇ ನಡೆಯುತ್ತಿತ್ತು.
ಈ)ಕೊಟ್ಟಿರುವ ವಾಕ್ಯಗಳು ಸರಿ – ಇದ್ದರೆ ✓ ತಪ್ಪು ಇದ್ದರೆ X ಗುರುತು ಹಾಕಿ. (Mark Correct or Wrong accordingly)
೧. ಉಲ್ಲಾಸನು ತನ್ನ ತಂದೆಗೆ ಕಾಗದ ಬರೆದನು. – ತಪ್ಪು ( X )
೨. ಕೆಂಪು ಮತ್ತು ಕಪ್ಪು ಬಣ್ಣದ ಕೋತಿಗಳು ‘ಚಿಂವ್ ಚಿಂವ್ʼ ಎಂದು ಶಬ್ದ ಮಾಡುತ್ತಿದ್ದವು. – ತಪ್ಪು ( X )
೩. ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕೆ ಹೋದೆವು. – ಸರಿ ( ✓)
೪. ಜಿರಾಫೆ ತನ್ನ ಮರಿಗೆ ಹಾಲು ಉಣಿಸುತ್ತಿತ್ತು. – ಸರಿ (✓)
೫. ಮೃಗಾಲಯದಲ್ಲಿ ಹಾವುಗಳನ್ನು ಬಂಡೀಪುರದ ಕಾಡಿನಿಂದ ತರಲಾಗಿದೆ. – ಸರಿ (✓)
೬. ದಸರೆ ಹಬ್ಬ ಆರು ದಿನ ನಡೆಯುತ್ತದೆ. – ತಪ್ಪು ( X )
ಅ) ಮಾದರಿಯಂತೆ ಲಿಂಗ ಬದಲಿಸಿರಿ. (Change the gender)
ಮಾದರಿ : ಅಜ್ಜ : ಅಜ್ಜಿ
ತಂದೆ : ತಾಯಿ
ಮಾವ : ಅತ್ತೆ
ಮಗಳು : ಮಗ
ತಮ್ಮ: ತಂಗಿ
ಚಿಕ್ಕಪ್ಪ : ಚಿಕ್ಕಮ್ಮ
ಆ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ಬರೆಯಿರಿ. (Write the appropriate word as per the example)
ಮಾದರಿ:ನಮ್ಮ – ನಮ್ಮದು – ನಮ್ಮವರು
ನನ್ನ – ನನ್ನದು – ನನ್ನವರು
ನಿನ್ನ – ನಿನ್ನದು – ನಿನ್ನವರು
ನಿಮ್ಮ- ನಿಮ್ಮದು – ನಿಮ್ಮವರು
ತಮ್ಮ- ತಮ್ಮದು – ತಮ್ಮವರು
ಇ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ. (Write the odd one out)
ಶೇಂಗಾ , ಮಾವು , ಗೆಣಸು , ಆಲೂಗಡ್ಡೆ
ಕಾಗೆ , ಗೂಬೆ , ಕೋಳಿ, ಘೇಂಡಾಮೃಗ
ಬಾಳೆಹಣ್ಣು , ಇಡ್ಲಿ , ವಡೆ , ದೋಸೆ
ಚಿರತೆ , ಗಿಳಿ , ಸಿಂಹ , ಹುಲಿ
ಈ) ಈ ಪದಗಳನ್ನು ಉಪಯೋಗಿಸಿ ಸಂತ ವಾಕ್ಯ ರಚಿಸಿರಿ. (Make your own sentence)
ಕ್ಷೇಮ : ನಾನು ಇಲ್ಲಿ ಕ್ಷೇಮವಾಗಿ ಇದ್ದೇನೆ.
ಪ್ರಾಣಿ ಸಂಗ್ರಹಾಲಯ: ನಾವು ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿದ್ದೆವು.
ಉದ್ಯಾನವನ: ನಾವು ಉದ್ಯಾನವನಕ್ಕೆ ಹೋಗಿದ್ದೆವು.
ಸೂಚನಾ ಫಲಕ : ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ.