Jana ame kannada poem grade VII is about an intelligent turtle. Jana ame class IV kannada poem is written by Bhaskar Nelyadi.

Jaana Aame, the intelligent turtle, lived in a quiet lake but always dreamed of flying like the birds. One day, it befriended two gentle swans who often glided gracefully across the sky. Seeing the turtle’s desire, the swans came up with an idea. They brought a long, strong stick and held it firmly at both ends. They asked Jaana Aame to bite the middle of the stick tightly and warned it not to open its mouth during the flight.

Excited, the turtle agreed. As the swans lifted the stick and soared into the sky, Jaana Aame felt thrilled. It saw the glowing sun up close and enjoyed the cool breeze brushing against its shell. Below, some naughty children noticed the turtle flying and shouted, teasing it that it would fall any moment. Feeling proud, the turtle tried to say, “Don’t be jealous! Bye!”

ಜಾಣ ಆಮೆ

I. ಪದಗಳ ಅರ್ಥ. (Word Meaning)

ಕಿರುಚು = ಚೀರು, ಒದರು, ಕೂಗು
ತೆಪ್ಪಗಾಗು = ಸುಮ್ಮನಾಗು
ಬಾನು = ಆಕಾಶ, ಗಗನ
ಸಂಗ = ಗೆಳೆತನ, ಸ್ನೇಹ
ಹೆಕ್ಕಿ = ಆರಿಸಿ, ಹುಡುಕಿ
ಕೊಳ = ಸರೋವರ
ಪಡ್ಡೆ = ಪ್ರಾಯಕ್ಕೆ ಬಂದವರು, ತರುಣರು
ಬೆಪ್ಪ= ದಡ್ಡ, ಮೂರ್ಖ
ಹಂಸ = ಒಂದು ಜಾತಿಯ ಪಕ್ಷಿ

II. ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)

೧. ಕೊಳದಲ್ಲಿನ ಆಮೆಗೆ ಯಾವ ಆಸೆ ಮೂಡಿತು?
ಉ: ಕೊಳದಲ್ಲಿನ ಆಮೆಗೆ ಹಕ್ಕಿಯಂತೆ ಬಾನಲಿ ಹಾರುವ ಆಸೆ ಮೂಡಿತು.

೨. ಆಮೆ ಹಂಸಗಳ ಸಂಗವನ್ನು ಏಕೆ ಬೆಳೆಸಿತು?
ಉ: ಆಮೆ ಹಂಸಗಳ ಸಂಗವನ್ನು ಹಕ್ಕಿಯಂತೆ ಬಾನಲಿ ಹಾರಲು ಬೆಳೆಸಿತು.

೩. ಬಾನಿನಲ್ಲಿ ಸಾಗಿದ ಆಮೆಗೆ ಏಕೆ ಸಿಟ್ಟು ಬಂತು?
ಉ: ಬಾನಿನಲ್ಲಿ ಸಾಗಿದ ಆಮೆಯನ್ನು ಪಡ್ಡೆ ಹುಡುಗರು ಟೀಕಿಸಿದ್ದಕ್ಕೆ ಸಿಟ್ಟು ಬಂತು.

೪. ಆಮೆ ಪಡ್ಡೆ ಹುಡುಗರಿಗೆ ಏನೆಂದು ಬೈದಿತು?
ಉ: ಆಮೆ ಪಡ್ಡೆ ಹುಡುಗರಿಗೆ ಹೊಟ್ಟೆಕಿಚ್ಚನ್ನು ಎಂದು ಬಿಟ್ಟೀರಿ ಎಂದು ಬೈದಿತು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in two – three sentences)

೧. ಹಂಸಗಳು ಆಮೆಯನ್ನು ಬಾನಲ್ಲಿ ಒಯ್ಯಲು ಮಾಡಿದ ಉಪಾಯವೇನು?
ಉ: ಹಂಸಗಳು ಆಮೆಯನ್ನು ಬಾನಲ್ಲಿ ಒಯ್ಯಲು ಒಂದು ಕೋಲನ್ನು ತಂದವು. ಮಧ್ಯೆ ಅಮೆಯನ್ನು ಕಚ್ಚು ಎಂದು, ತಾವು ಅತ್ತ ಇತ್ತ ಕೋಲನ್ನು ಕಚ್ಚಿಕೊಂಡು ಹಾರಿದವು.

೨. ಬಾನಿನಲ್ಲಿ ಸಾಗಿದ ಆಮೆಗೆ ಯಾವ ಅನುಭವಗಳಾದವು?
ಉ: ಬಾನಿನಲ್ಲಿ ಸಾಗಿದ ಆಮೆಗೆ ತಂಪು ಗಾಳಿ, ಮೋಡ ಮತ್ತು ಸೂರ್ಯನನ್ನು ನೋಡಿ ಹರುಷವಾಯಿತು.

೩. ಆಮೆಯು ಪಡ್ಡೆ ಹುಡುಗರನ್ನು ಹೇಗೆ ಬೆಪ್ಪು ಮಾಡಿತು?
ಉ: ಆಮೆಯು ಪಡ್ಡೆ ಹುಡುಗರನ್ನು ಹೊಟ್ಟೆಕಿಚ್ಚು ಬಿಡಿರಿ ಎಂದಿತು. ಕೋಲನ್ನು ಬಾಯಲ್ಲಿ ಹಿಡಿದು ಟಾ ಟಾ ಎಂದು ಹೇಳಿ ಬೆಪ್ಪು ಮಾಡಿತು.

ಇ) ಬಿಟ್ಟ ಸ್ಥಳವನ್ನು ಸೂಕ್ತ ಪದದಿಂದ ತುಂಬಿರಿ. (Fill in the blanks)

೧. ಆಮೆಯು ಹಂಸಗಳ ಸಂಗ ಬೆಳೆಸಿತು.
೨. ಬಾನಿನಲ್ಲಿ ಸಾಗಿದ ಆಮೆಯು ಸನಿಹದಿಂದ ಸೂರ್ಯನನ್ನು  ಕಂಡೆನೆಂದಿತು.
೩. ಪಡ್ಡೆ ಹುಡುಗರು ಆಮೆಯು  ಬೀಳಬೇಕು ಎಂದುಕೊಂಡರು.
೪. ಆಮೆಯು ಪಡ್ಡೆ ಹುಡುಗರಿಗೆ ನೀವು ಹೊಟ್ಟೆಕಿಚ್ಚನ್ನು  ಎಂದು ಬಿಡುವಿರಿ ಎಂದಿತು.

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)

೧. ಬಾನಲೊಮ್ಮೆ =  ಬಾನಲಿ +ಒಮ್ಮೆ
೨. ಆಮೆಗೊಂದು = ಆಮೆಗೆ + ಒಂದು
೩. ಬಯಕೆಯನ್ನು = ಬಯಕೆ +ಅನ್ನು
೪. ಹಂಸವೆರಡು = ಹಂಸವು + ಎರಡು
೫. ಹಾರಲೆಂದಿತು = ಹಾರಲು + ಎಂದಿತು

ಉ) ಕೆಳಗೆ ನೀಡಲಾಗಿರುವ ಪದಗಳ ಅರ್ಥ ಬರೆಯಿರಿ. (Write the word meaning for the following)

ಉದಾಹರಣೆ: ಧನ – ದನ  (ಧನ=  ಹಣ ದನ = ಹಸು)

ಕೊಳ – ಕೋಳ  (ಕೊಳ- ಸರೋವರ  – ಕೋಳ – ಬೇಡಿ
ಬಾನು – ಭಾನು (ಬಾನು – ಆಕಾಶ  – ಭಾನು – ಸೂರ್ಯ)
ಹಾರು – ಆರು   ( ಹಾರು  – ಜಿಗಿ –  ಆರು – ಸಂಖ್ಯೆ)
ಮಧ್ಯ – ಮದ್ಯ  ( ಮಧ್ಯ – ನಡು –  ಮದ್ಯ – ಹೆಂಡ)
ಮತ್ತೆ – ಮೆತ್ತೆ     (ಮತ್ತೆ- ಪುನಃ  – ಮೆತ್ತೆ – ಮೃದುವಾದ ಹಾಸಿಗೆ)
ಹಕ್ಕಿ – ಹೆಕ್ಕಿ       (ಹಕ್ಕಿ – ಪಕ್ಷಿ – ಹೆಕ್ಕಿ – ಆರಿಸಿ)

ಊ) ಕೆಳಗಿನ ಶಬ್ದಗಳ ಹಿಂದೆ ಅಥವಾ ಮುಂದೆ ಒಂದು ಅಕ್ಷರ ಸೇರಿಸಿ ಹೊಸ ಪದ ರಚಿಸಿರಿ. (Fill in the blanks)

ಮಾದರಿ : ಪ್ರಸಂಗ

ಹಾರ
ಮನ
ಕೊಳಲು

ಋ) ಜಾಣ ಆಮೆ ಪದ್ಯದಲ್ಲಿನ ಪ್ರಾಸ ಪದಗಳನ್ನು ಪಟ್ಟಿ ಮಾಡಿರಿ. (Write the rhyming words from jaanna aame)

ಮೂಡಿತು –    ಬೆಳೆಸಿತು
ಬೆಳೆಸಿತು – ಹೇಳತೊಡಗಿತು
ಬಂದವು – ತಂದವು
ಹಾರತೊಡಗಿತು – ಸಾಗತೊಡಗಿತು
ಕಂಡರು – ಕೊಂಡರು
ಬೆಪ್ಪರಾದರು  – ತೆಪ್ಪಗಾದರು
ಎಂದಿತು –  ಅಂದಿತು

Click here to download Jaana aame kannada notes grade VII