Suntaragaliigrade VI kannada lesson tili kannada text book. Suntaragalii means tornado. This poem is written by Kayyara Kinhanna Rai.

ಸುಂಟರಗಾಳಿ

I ಪದಗಳ ಅರ್ಥ

ಕಂಗು, ಬಂತೈ, ಬಾನು, ಕಡಲು, ಧೂಳಿ, ಪಾತಾಳ, ಬೆಂಬತ್ತು, ಬೊಬ್ಬೆ, ಶಾಪ, ಗುಲ್ಲು, ತಿರ್ರನೆ, ತಾಪ,  ಸುಂಟರಗಾಳಿ

II ಪ್ರಶ್ನೆಗಳು

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧) ಸುಂಟರಗಾಳಿಯನ್ನು ನೋಡಿದ ಕವಿ ಏನೆಂದು ಅಚ್ಚರಿ ವ್ಯಕ್ತಪಡಿಸಿದರು?
೨) ಸುಂಟರಗಾಳಿಯ ಕೋಪ ಏಕೆ ಇರಬಹುದೆಂದು ಕವಿ ಭಾವಿಸುತ್ತಾರೆ?
೩) ಸುಂಟರಗಾಳಿಗೆ ದನಗಳು ಯಾವ ರೀತಿ ಓಡಿದವು?
೪) ಸುಂಟರಗಾಳಿಗೆ ಜನರು ಏಕೆ ಬೊಬ್ಬೆ ಇಟ್ಟರು?
೫) ಸುಂಟರಗಾಳಿಗೆ ಕರು ಯಾವ ರೀತಿ ಬೆಚ್ಚಿತು?

ಆ) ಈ ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)

೧) ಸುಂಟರಗಾಳಿಯಿಂದ ಉಂಟಾದ ಪರಿಣಾಮಗಳೇನು?
೨) ಸುಂಟರಗಾಳಿಗೆ ಯಾವ ಯಾವ ಮರಗಳು ತೂಗಿ ಬಾಗಿದವು?
೩) ಸುಂಟರಗಾಳಿಯ ಬಗ್ಗೆ ಕವಿಯ ಮನದಲ್ಲಿ ಯಾವ ಯಾವ ಪ್ರಶ್ನೆಗಳು ಮೂಡಿದವು?

III ಭಾಷಾಭ್ಯಾಸ

ಅ) ಇಲ್ಲಿರುವ ಪದಗಳನ್ನು ಬಳಸಿ ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ತೂಗು, ಪಾತಾಳ, ಕಡಲು, ಬೆಂಬತ್ತು, ಶಾಪ

ಆ) ‘ ಗಾಳಿ ‘ ಪದದಿಂದ ಅಂತ್ಯಗೊಳ್ಳುವ ಪದಗಳನ್ನು ಪಟ್ಟಿ ಮಾಡಿರಿ. ( List the words ending with the word ‘ gali ‘.

ಇ) ಕೆಳಗೆ ನೀಡಿರುವ ಪದ್ಯಕ್ಕೆ ಚಿನ್ಹೆ ಹಾಕಿ ಬರೆಯಿರಿ. (Add the correct signs to the  verse given below)

ಏನಿದು ಧೂಳಿ ಓಹೋ ಗಾಳಿ
ಸುಳಿಯುತ ಬಂತೈ ಸುಂಟರಗಾಳಿ
ಕಣ್ಣು ಮುಚ್ಚುತ ಬಾಲವನೆತ್ತಿ
ದನ ಓಡುತ್ತಿದೆ ಎತ್ತಲೊ ಸುತ್ತಿ
ಅಂಬಾ ಎನುತ ಕರು ಬೆಂಬತ್ತಿ
ಏನಿದು ಧೂಳಿ

IV ಚಟುವಟಿಕೆಗಳು

ಇಲ್ಲಿರುವ ಚಿತ್ರಗಳನ್ನು ಗಮನಿಸಿ ನಿಮ್ಮ ಅನಿಸಿಕೆಗಳನ್ನು ಹೇಳಿರಿ. (Look at the pictures here and tell us what you think)

tornado- ಸುಂಟರಗಾಳಿ

ಕಲ್ಪನಾ, ಶಹೀನಾ, ಲೂಸಿ, ಜಹೀರ, ಶಂಕರ, ಪೀಟರ್ ಎಲ್ಲರೂ ಶಾಲಾ ಬಯಲಿನಲ್ಲಿ ಸೇರಿದ್ದಾರೆ.
ಮಳೆ ಮೋಡ, ಧೋ ಧೋ ಮಳೆ! ಹರಿವ ನೀರು ಕಲ್ಪಿಸಿಕೊಂಡು, ಮಳೆ ಬಗ್ಗೆ ಎಲ್ಲರೂ ಒಂದೊಂದು ವಾಕ್ಯ ಬರೆಯಿರಿ.

ಕಲ್ಪನಾ: ಅಬ್ಬಾ! ಏನು ಸೆಕೆ! ಇವತ್ತು ಮಳೆ ಬಂದರೂ ಬರಬಹುದು.
ಪೀಟರ್: ಆಕಾಶದ ತುಂಬಾ ಮಳೆ ಮೋಡ. ನೋಡ್ರೋ! ಅಲ್ಲಿ ಅದೆಷ್ಟು ಕರಿಮೋಡ ಆಕಾಶ ತುಂಬಿದೆ.
ಶಹೀನಾ : …………………………….
ಜಹೀರ : …………………………….
ಶಂಕರ : …………………………….
ಲೂಸಿ : …………………………….
ಶಂಕರ : …………………………….
ಶಹೀನಾ : …………………………….
(ಖಾಲಿ ಬಿಟ್ಟ ಜಾಗದಲ್ಲಿ ಮಕ್ಕಳು ಒಂದೊಂದು ವಾಕ್ಯ ಬರೆಯಲಿ)

Click here to download Suntargaliii worksheet kannada notes

Leave a Reply

Your email address will not be published. Required fields are marked *