Mahila Sabalikarana means women empowerment. Mahila Sabalikarana prabanda is an essay on women empowerment.

Women empowerment refers to providing equal rights, opportunities, and respect to women so they can live with dignity and self-confidence. Although women are worshipped as goddesses in Indian culture, many still face inequality and challenges. Today, women are proving their abilities in all fields, including education, healthcare, defense, and space science. Government initiatives such as self-help groups, Stree Shakti programs, skill-development training, legal aid, and financial support play a vital role in empowering women, especially in rural areas. Women empowerment promotes independence, social equality, and economic growth. When women are empowered, families, communities, and the nation progress together, leading to a stronger and more inclusive society.

ಮಹಿಳಾ ಸಬಲೀಕರಣ

ಪೀಠಿಕೆ:
ಪ್ರಕೃತಿಯ ವಿಶೇಷ ಸೃಷ್ಠಿಯೇ ಮಹಿಳೆ.  ನಮ್ಮ ದೇಶದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನವನ್ನು ಕೊಟ್ಟಿದ್ದಾರೆ. ಹಣಕಾಸು  (ಲಕ್ಷ್ಮೀ), ವಿದ್ಯಾ (ಸರಸ್ಪತಿ) ಮತ್ತು ರಕ್ಷಣೆ (ದುರ್ಗಾ ) ಯಂತಹ ಮಹತ್ವದ ಸ್ಥಾನವನ್ನು ದೇವಿಯರು ನೋಡಿಕೊಳ್ಳುತ್ತಾರೆ. ಇಂದಿನ ಪರಿಸ್ಥಿತಿಯು ಅದಕ್ಕೆ ವಿರುದ್ಧವಾಗಿದೆ.
ಮಹಿಳೆಯರು ಪುರುಷರಷ್ಟೇ ಸಮರ್ಥರು ಮತ್ತು ಸಮಾನರು. ಆಧುನಿಕ ಯುಗದಲ್ಲಿ ಆಕೆ ತನನ್ನು ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ.

ವಿಷಯ ನಿರೂಪಣೆ:
ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸಿ, ಗೌರವಿಸಿ ಅವರು ಸ್ವಾಭಿಮಾನಿಯಾಗುವಂತೆ ಮಾಡುವುದಕ್ಕೆ ಮಹಿಳಾ ಸಬಲೀಕರಣ ಎನ್ನುತ್ತಾರೆ. ಸರ್ಕಾರವು ಈ ಉತ್ತಮ ಕೆಲಸಕ್ಕಾಗಿ  ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.
೧.ಅನೇಕ ಸ್ತ್ರೀ ಶಕ್ತಿ ಸಂಘಗಳು ಗ್ರಾಮೀಣ ಮಹಿಳೆಯರನ್ನು ಸಬಲಗೊಳಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.
೨. ಸ್ವಸಹಾಯ ಗುಂಪುಗಳನ್ನು ಮಹಿಳಾ ಸಬಲೀಕರಣಕ್ಕಾಗಿ ನಿಯೋಜಿಸಲಾಗಿದೆ.
೩. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆರ್ಥಿಕ ಮತ್ತು ಕಾನೂನಿನ ಸಹಾಯ ನೀಡಲಾಗುತ್ತದೆ.
೪. ಸ್ವ ಉದ್ಯೋಗ ಕೈಗೊಳ್ಳಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ.
೫. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ.

ಉಪಸಂಹಾರ:
ರಕ್ಷಣಾ ಕ್ಷೇತ್ರ , ವೈದ್ಯಕೀಯ, ಅಂತರಿಕ್ಷ, ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳೆಯರ  ಪ್ರಗತಿ ಕಾಣಬಹುದಾಗಿದೆ. ಮಹಿಳೆಯರು ಅಬಲೆ  ಅಲ್ಲ ಸಬಲೆ  ಎಂಬ ಭಾವನೆ ಬೆಳೆದರೆ ಸಮಾಜವು ಬಹಳ ಪ್ರಗತಿಯನ್ನು ಸಾಧಿಸಬಹುದು. ಮಹಿಳಾ ಸಬಲೀಕರಣವು ಮಹಿಳೆಯರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮಹಿಳೆಯರು ಸಮಾಜದಲ್ಲಿ ಗೌರವ ಮತ್ತು ಸ್ವಾಭಿಮಾನದಿಂದ ಬದುಕುವಂತೆ ಮಾಡುವುದೇ ಪ್ರತಿಯೊಬ್ಬ ನಾಗರೀಕನ  ಹೊಣೆ.

ಸುಮನಾ ಶ್ರೀರಾಮ್

Click here to download mahila sabalikarna prabhandha women empowement essay