Pu ti narasimacharya famous kannada writer.
Pu. Ti. Na.
- Full Name & Birth: Purohita Thirunarayanayyangarya Narasimhachar, popularly known by his pen name Pu. Ti. Na., was born in 1905 CE.
- Native Place: He hailed from Melukote in the Mandya district.
- Career: He served as a translator for the Kannada Encyclopedia and as an editor for the English–Kannada Dictionary at the University of Mysore.
- Literary Contributions: One of the prominent poets of the Kannada Navodaya (Renaissance) movement, he wrote across various genres including musical plays (geetanataka), poetry, short stories, essays, and reflective prose. Musical plays are considered his signature genre.
- Major Works: Ahalye, Gokula Nirgamana, Shabari, Vikatakavi Vijaya, Hamsadamayanti Mattu Itara Roopakagalu, Hanate, Rasasaraswati, Ganesha Darshana, Sharadayamini, Sriharicharite, and Rathasaptami.
- Awards & Honors:
- Kendra Sahitya Akademi Award for Hamsadamayanti Mattu Itara Roopakagalu.
- Pampa Award for his epic poem Sriharicharite.
- Honorary D.Litt. degree from the University of Mysore.
- Presided over the 53rd All India Kannada Literary Conference (Akhila Bharata Kannada Sahitya Sammelana) held in Chikkamagaluru in 1981.
ಪು.ತಿ.ನ. ಅವರ ಪರಿಚಯ
- ಪೂರ್ಣ ಹೆಸರು ಮತ್ತು ಜನನ: ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಇವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್. ಇವರು ಸಾ. ಶಾ. ೧೯೦೫ರಲ್ಲಿ ಜನಿಸಿದರು.
- ಸ್ಥಳ: ಇವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು.
- ವೃತ್ತಿ: ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
- ಸಾಹಿತ್ಯ ಸೇವೆ: ಕನ್ನಡ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಗೀತನಾಟಕ ಇವರ ಪ್ರಾತಿನಿಧಿಕ ಪ್ರಕಾರವಾಗಿದೆ.
- ಪ್ರಮುಖ ಕೃತಿಗಳು: ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶ ದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ.
- ಪ್ರಶಸ್ತಿ ಮತ್ತು ಗೌರವಗಳು:
- ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
- ‘ಶ್ರೀಹರಿಚರಿತೆ’ ಕಾವ್ಯಕ್ಕೆ ಪಂಪಪ್ರಶಸ್ತಿ ಲಭಿಸಿದೆ.
- ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ.
- ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.