Shabari is a celebrated Kannada musical play (geetanataka) by renowned poet Pu. Ti. Narasimhachar (Pu. Ti. Na.), prescribed for CBSE 10th grade boards. Based on the Ramayana, this drama portrays the innocent ascetic Shabari’s intense devotion (bhakti) and lifelong yearning to see Sri Rama at Sage Matanga’s hermitage. When Rama and Lakshmana visit her forest leaf-hut while searching for Sita, Shabari welcomes them with fresh fruits and garlands, experiencing pure spiritual fulfillment. Having achieved her life’s sole purpose through Rama’s darshan, she joyfully attains salvation (mukti) by entering the sacred sacrificial fire.
ಸಿಬಿಎಸ್ಇ (CBSE) 10ನೇ ತರಗತಿಯ ಬೋರ್ಡ್ (Boards) ಪರೀಕ್ಷೆಗೆ ನಿಗದಿಪಡಿಸಲಾಗಿರುವ ‘ಶಬರಿ’ ಗೀತನಾಟಕವನ್ನು ಪ್ರಸಿದ್ಧ ಕವಿ ಪು.ತಿ. ನರಸಿಂಹಾಚಾರ್ (ಪು.ತಿ.ನ.) ಅವರು ರಚಿಸಿದ್ದಾರೆ. ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಈ ನಾಟಕವು, ಮತಂಗ ಋಷಿಯ ಆಶ್ರಮದಲ್ಲಿ ಶ್ರೀರಾಮನ ದರ್ಶನಕ್ಕಾಗಿ ಹಂಬಲಿಸುವ ಮುಗ್ಧ ತಪಸ್ವಿನಿ ಶಬರಿಯ ಅಪಾರ ಭಕ್ತಿಯನ್ನು ಚಿತ್ರಿಸುತ್ತದೆ. ಸೀತೆಯನ್ನು ಹುಡುಕುತ್ತಾ ರಾಮಲಕ್ಷ್ಮಣರು ಪರ್ಣಶಾಲೆಗೆ ಬಂದಾಗ, ಶಬರಿ ಹಣ್ಣು-ಹೂಮಾಲೆಗಳಿಂದ ಅವರನ್ನು ಸತ್ಕರಿಸಿ ಪರಮ ಆನಂದವನ್ನು ಪಡೆಯುತ್ತಾಳೆ. ಶ್ರೀರಾಮನ ದರ್ಶನದಿಂದ ತನ್ನ ಜನ್ಮ ಸಾರ್ಥಕವಾಯಿತೆಂದು ಭಾವಿಸಿದ ಆಕೆ, ಅಗ್ನಿಪ್ರವೇಶ ಮಾಡಿ ಮುಕ್ತಿಯನ್ನು ಪಡೆಯುತ್ತಾಳೆ.
About PuTiNa
Purohita Thirunarayanaiyengar Narasimhachar (17 March 1905 – 23 October 1998), commonly known as PuTiNa, was a playwright and poet in the Kannada language. He was awarded the Padma Shri by the Government of India in 1991.He was a Sahitya Akademi fellow and the winner of the Pampa Award, awarded by the Government of Karnataka in 1991.
ಪು.ತಿ. ನರಸಿಂಹಾಚಾರ್ : – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ,ಗೀತನಾಟಕಕಾರರು, ಜಿಜ್ಞಾಸೆಯ ಕವಿ .ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ.
ಶಬರಿ
ಪು. ತಿ. ನರಸಿಂಹಾಚಾರ್
ಪ್ರವೇಶ : ಕಾವ್ಯಗಳಲ್ಲಿ ನಾಟಕ ಮನೋಹರವಾದುದು. ಅಭಿನಯ, ದೃಶ್ಯ, ಸಂಭಾಷಣೆ, ಸಂಗೀತಗಳಿಂದ ಪ್ರೇಕ್ಷಕ ಸಹೃದಯರಿಗೆ ಆನಂದವನ್ನು ನೀಡುತ್ತದೆ. ಆಧುನಿಕ ನಾಟಕದ ವಿವಿಧ ಪ್ರಕಾರಗಳಲ್ಲಿ ಗೀತನಾಟಕವೂ ಒಂದು. ಗದ್ಯ ಪದ್ಯಗಳಿಂದ ಕೂಡಿದ ಇದರಲ್ಲಿ ಗೀತೆಗಳಿಗೆ ಹೆಚ್ಚು ಪ್ರಾಧಾನ್ಯ. ಕಥೆಯ ಘಟನೆಗಳಿಗೆ ಪೂರಕವಾಗುವ ಮೇಳದವರ ಭಾಗವಹಿಸುವಿಕೆ ನಾಟಕದ ಸೊಗಸನ್ನು ಹೆಚ್ಚಿಸುತ್ತದೆ.
ರಾಮಾಯಣ, ಮಹಾಭಾರತ ಪ್ರಸಿದ್ಧ ಮಹಾಕಾವ್ಯಗಳು. ಅವುಗಳಿಂದ ಪ್ರೇರಿತವಾಗಿ ಹಲವು ಕೃತಿಗಳು ರಚಿತವಾಗಿವೆ. ಅವುಗಳಲ್ಲಿ ಗೀತನಾಟಕಗಳೂ ಜನಪ್ರಿಯವಾಗಿವೆ. ಸಾಹಿತ್ಯ, ಸಂಗೀತ, ನೃತ್ಯ, ಕಲೆಗಳ ಸಂಗಮವಾದ ಗೀತನಾಟಕ ಸಂಭಾಷಣಾಯುಕ್ತವಾದುದು, ಪ್ರತಿಯೊಂದು ಪಾತ್ರದ ಹಿರಿಮೆಯೊಂದಿಗೆ ಸಂವೇದನಾಶೀಲವಾಗಿ ಕಥೆಯನ್ನು ನಿರೂಪಿಸುವ ಗುಣ ಈ ಗೀತನಾಟಕದ್ದಾಗಿದೆ.
Introduction: Among all forms of poetry (literature), drama is the most enchanting. Through acting, scenery, dialogue, and music, it brings joy to discerning audiences. Musical play (geetanataka) is one of the various genres of modern drama. Composed of both prose and verse, it places greater emphasis on songs. The participation of the chorus (mela), which complements the events of the story, enhances the beauty of the play.
The Ramayana and the Mahabharata are famous epics. Inspired by them, numerous literary works have been composed. Among these, musical plays are also popular. A musical play—which is a confluence of literature, music, dance, and art—is rich in dialogue, and this particular musical play possesses the quality of narrating the story sensitively while upholding the greatness of each character.
(ಮತಂಗಾಶ್ರಮದಲ್ಲಿ ತನ್ನ ಪರ್ಣಶಾಲೆಯ ಮುಂದಿನ ವನದಲ್ಲಿ ಶಬರಿ ಹಂಬಲುಗೊಂಡಿದ್ದಾಳೆ. ಶ್ರಮಣಿಯಂತೆ ರೂಪ; ವೃದ್ಧೆ, ಚೀರ ಕೃಷ್ಣಾಜಿನಾಂಬರೆ ; ನೋಡುವುದಕ್ಕೆ ಬುದ್ಧಿಹೀನಳಂತೆ ಕಾಣುತ್ತಾಳೆ.)
(In the forest in front of her leaf-hut at Matanga’s hermitage, Shabari is filled with yearning. She has the appearance of a female ascetic; an old woman, clad in bark-cloth and black deerskin; to look at, she appears as though she has lost her senses.)
ಶಬರಿ : ನಿಂತಲ್ಲಿಯೆ ನಾ ನಿಂತಿರುವೆ | ರಾಮಾ ನೀನೆಂದೈತರುವೆ
ನೀನಿಹುದೆಲ್ಲೋ ನಾನರಿಯೆ | ನಿನ್ನೆಡೆಗೈದುವ ಬಳಿಯರಿಯೆ
ನೀ ಬಹೆ ಎನ್ನುವ ನೆಚ್ಚಿನೊಳು | ನಾನಿಹೆ ಬಯಕೆಯ ಹುಚ್ಚಿನೊಳು !! ನಿಂತಲ್ಲಿಯೇ….
[ಶಬರಿ ಬನದೊಳಕ್ಕೆ ಹೋಗುವಳು. ರಾಮ ಲಕ್ಷ್ಮಣರು ಪ್ರವೇಶಿಸುತ್ತಾರೆ.]
Shabari : Right where I stood, I remain standing | O Rama, when will you arrive? I do not know where you are | I do not know the path that leads to you In the trust that you will come | I remain in the madness of this longing!! Right where I stood…. [Shabari goes into the forest. Rama and Lakshmana enter.]
ರಾಮ : ದೊರೆವಳೇ ಸೀತೆ | ಭೂಮಿಜಾತೆ ಆತ್ಮ ಕಾಮಕಲ್ಪಲತೆ
ದೊರೆವಳೇ ಚೆಲುವೆ? | ಎರೆವೆ ಎರೆವೆ ಗಿರಿವನವೇ, ಪೇಳಿರಿ ನಾನೆರೆವೆ
ದೊರೆವಳೇ? ದೊರೆಯಳೇ?
ಅವಳ ನೆಲೆ ಯಾರು ಅರಿಯಿರೇ, ಪೇಳಿ ಎನ್ನರಸಿ ದೊರೆಯಳೇ?
ಈ ಬೇಗೆ ಕೆಡದಲಾ | ನನ್ನೆದೆಯ ಬಿಡದಲಾ ಈ ಜಗವ ಸುಡದಲಾ! ಹಾ ! ಹಾ ! ಹಾ!
Rama : Will Sita be found | Daughter of the Earth, the wish-fulfilling creeper of my soul? Will that beauty be found? | I beg of you, I beseech you, O hills and forests, tell me, I plead with you— Will she be found? Will she not be found? Does no one know her whereabouts? Tell me, will my queen not be found? This fire of agony does not subside | It does not leave my heart, nor does it burn this world to ashes! Ha! Ha! Ha!
ಲಕ್ಷ್ಮಣ : ತಾಳಿಕೋ ಅಣ್ಣ ತಾಳಿಕೋ | ಸೂರ್ಯನೇ ತೇಜಗೆಡೆ ತೇಜಕೆಡೆಯಾರು?
ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು?
Lakshmana : Be patient, brother, be patient | If the sun itself loses its radiance, where else is there a place for radiance? If Rama himself loses courage, where else is there a place for fortitude?
ರಾಮ : [ಸ್ಥೈರ್ಯವಾಂತು] ಅವಳ ನೆನಪಿನ ಸೆಳೆತಕೆನ್ನಾತ್ಮ ಸಿಲ್ಕೆ | ಎನ್ನ
ಬಗೆಗನಿವಾರ್ಯವೀ ಶೋಕದುಲ್ಕೆ. ಇಗೋ ನೋಡು ಲಕ್ಷ್ಮಣ ತಾಪಸರ ಬೀಡು |
ಇದ ನೋಡಿ ಮರುಕೊಳಿಸಿತೆನಗವಳ ಪಾಡು.
Rama : [Regaining composure] When my soul gets caught in the pull of her memories | This meteor of grief becomes inevitable for my mind. Behold, Lakshmana, this abode of ascetics | Seeing this, my heart fills with pity thinking of her plight.
ಲಕ್ಷ್ಮಣ : ಅಹುದು ದಿಟ ಚಿತ್ರಕೂಟವೆ ಮನಕೆ ಬಹುದು | ಜತೆಯೊಳತ್ತಿಗೆಯಿದ್ದ ಬಗೆಯಂತಹುದು. ಹಾ!
ಪಾಪಿ, ನಾ ಆಕೆಯನು ಒಂಟಿಯೊಳೆ ಬಿಟ್ಟೆ | ಎನ್ನಹಂಕೃತಿಗೆಯೇ ಮನ್ನಣೆಯ ಕೊಟ್ಟೆ !
Lakshmana : Yes, indeed, Chitrakoota itself comes to mind | Such was the way it felt when sister-in-law (Sita) was with us. Ah! Sinner that I am, I left her all alone | I gave importance only to my own pride!
ರಾಮ : ಮರುಗದಿರು ತಮ್ಮಯ್ಯ ಆದುದಾಯಿತ್ತು |
ನಿಮ್ಮನಿಂತಾ ದೈವ ಮರುಳು ಮಾಡಿತ್ತು.
ದನುಪೇಳ್ದ ದಾರಿಯೊಳೆ ನಾವು ಬಂದಿಹೆವೆ? | ಶ್ರಮಣಿಯಾಶ್ರಮವಿದುವೆ?
ಅಗೊ ಲಕ್ಷ್ಮಣಾ, ಅತ್ತ ಆವುದೀ ಮರುಳು? | ನಮ್ಮೆಡೆಗೆ ಬರುತಿಹುದು ಏನಿದರ ಹುರುಳು?
Rama : Do not grieve, younger brother, what has happened has happened | Destiny has deluded you like this. Have we arrived along the path told by Danu? | Is this the female ascetic’s hermitage? Look there, Lakshmana, what is that strange sight over there? | It is coming towards us; what is its meaning?
ಲಕ್ಷ್ಮಣ : ಮರೆಗೆ ಬಾ ಅಣ್ಣಯ್ಯ, ಪರಿಕಿಸುವ ಮುನ್ನ | ಇದಿರುಗೊಳ್ಳೆ ನಾವಿದನು ಏನಹುದೊ ಬನ್ನ. [ಮರೆಯೊಳಿರುವರು. ಶಬರಿ ತಳಿರು ಹೂ ಹಣ್ಣುಹಂಪಲಗಳನ್ನು ತಲೆ ಕಂಕುಳು ಕೈಯಲ್ಲಿ ಕೊಂಡು ಬರುವಳು.]
Lakshmana : Step into hiding, elder brother, before we examine it | If we confront this directly, what trouble might it bring. [They remain hidden. Shabari enters carrying tender leaves, flowers, and fruits on her head, under her arm, and in her hands.]
ಶಬರಿ : ರಾಮ ಬಾರದೇ | ನನಗೇನು ತೋರದೇ ||ಪ||
ಅವ ಸವಿದಲ್ಲದೆ ಸವಿಯಾಗದ ಈ | ಕಡುಸವಿ ಹಣ್ಗಳನೇಗೆಯ್ವೆಂ
ಮಧುಕರ ಗೀತದ ಮಧು ಊರಿರುವೀ | ಮಧುಪರ್ಕವ ನಾನಾರ್ಗೀವೆಂ ||
ರಾಮ ಬಾರದೇ….
ಬಾ ರಾಮಾ, ಬಾ ರಾಮಾ, ಬಾರೈ | ಬಾ ಬಾ ಬಗೆಯಿರುಳಿನ ಪೆರೆಯೇ
ಕೋ ಕೋ ಹಣ್ಣಳ ಕೋ ಹೂಗಳ ಕೋ | ಎಲ್ಲವ ಕೋ ಎನ್ನೊಳಮೊರೆಯೇ
ರಾಮ ಬಾರದೇ | ನನಗೇನು ಸೇರದೇ.
[ಪರ್ಣಶಾಲೆಯೊಳಕ್ಕೆ ಹೋಗುವಳು. ರಾಮ ಲಕ್ಷ್ಮಣರು ಕಾಣಿಸಿಕೊಳ್ಳುತ್ತಾರೆ.]
Shabari : Without Rama coming | Nothing is clear to me (nothing appeals to me) ||Pallavi|| Unless he tastes them, they will not become sweet | What shall I do with these exceedingly sweet fruits? To whom shall I offer this Madhuparka (sweet offering) | Infused with honey gathered to the humming song of bumblebees? || Without Rama coming…. Come Rama, come Rama, do come | Come, O moon to the night of my mind Take, take these fruits, take these flowers | Take everything, O my inner plea Without Rama coming | Nothing feels fulfilling to me. [She goes inside the leaf-hut. Rama and Lakshmana appear.]
ರಾಮ : ಎನಗಿನಿತು ಹಂಬಲಿಪ ಈ ಜಟಿಲಕಬರಿ | ಆ ಉದರಮುಖಿನೊರೆದ ಶ್ರಮಣಿ ಶಬರಿ.
ಉಪಕಾರವಿನಿತಿಲ್ಲ ಈಕೆಗೆನ್ನಿಂದ | ಆದೊಡೆಯು ನೆನೆಯುತಿಹಳೆನಿತರ್ತಿಯಿಂದ! ನಾಚುತಿಹೆನೀ
ಪೂಜ್ಯೆಯೀ ನಲುಮೆಯಿಂದ.
Rama : This woman with matted locks who yearns so much for me | Is the female ascetic Shabari, of whom that Udaramukhi (Kabandha) spoke. She has received not the slightest favor from me | Yet, with how much affection she remembers me! I feel humbled (shy) by this venerable woman’s love.
ಲಕ್ಷ್ಮಣ : ನಿನ್ನ ನೋಡದೆ ಇಂತು ಮರುಳಾದ ಈ ಸಿದ್ಧೆ | ಇನ್ನು ನೋಡಿದ ಬಳಿಕ ಏನಪ್ಪಳೋ ವೃದ್ಧೆ!
Lakshmana : Without even seeing you, this accomplished ascetic has become so infatuated | Once she sees you now, what will become of this old woman!
ರಾಮ : ರೂಪಕೂ ನಾಮ ಮಿಗಿಲಾತ್ಮ ಸುರಭಿಯದು | ಎನ್ನ ಕಾಣುತಲಿವಳ ಬೆರಗು ತಿಳಿಯುವುದು.
Rama : The fragrance of the soul (reputation/name) surpasses physical form | Upon seeing me, her wonder (delusion) will clear up.
ಲಕ್ಷ್ಮಣ : ನಿತ್ಯ ನೋಡುತಲಿಹೆನು ಬೆರಗು ತಣಿಯದಿದೆ | ಪರಿಕಿಸುವ ಬಾ ಇದನು ಶ್ರಮಣಿಯಾಶ್ರಮದೆ.
Lakshmana : I see you every day, yet my wonder never ceases | Come, let us observe this at the female ascetic’s hermitage.
ರಾಮ : ನಡೆ ಮುಂದೆ, ಲಕ್ಷ್ಮಣ.
Rama : Walk ahead, Lakshmana.
ಲಕ್ಷ್ಮಣ : ಇಂದು ನೀನೆ ಮುಂದೆ | ನಾನಿರುವೆ ಹಿಂದೆ | ಮೊದಲ ದಿಟ್ಟಿಗೆ ನೀನು | ಬಳಿಕ ನಾನು – [ಹೊರಡುವರು.]
[ಒಳತೆರೆ ಎದ್ದು ವಿಶಾಲವಾದ ಶಬರಿಯಾಶ್ರಮವನ್ನು ತೋರುವುದು. ಅಲ್ಲಿ ದೂರದಲ್ಲಿ, ಹಿಂಬದಿಗೆ ವೇದಿಯಿದೆ. ಅದರ ಸುತ್ತ ಆಶ್ರಮದ ಸಿದ್ಧರು ಅಲಂಕರಿಸಿ ಹೋದ ಹೂವು ಇನ್ನೂ ಬಾಡದಂತಿವೆ. ವೇದಿಯಲ್ಲಿ ಅಗ್ನಿ ಹೊಗೆಯಾಡುತ್ತಿದೆ. ಶಬರಿ ನಿನ್ನೆ ರಾಮನಿಗೆಂದು ಆರಿಸಿ ತಂದ, ಈಗ ಬಾಡಿ ಹೋಗಿರುವ ಹೂ ಹಣ್ಣು ತಳಿರುಗಳನ್ನು ವಿಂಗಡಿಸುತ್ತಾ ಅವುಗಳ ಜಾಗದಲ್ಲಿ ಹೊಸದನ್ನು ಇಡುತ್ತಾ ಇದ್ದಾಳೆ. ಅವುಗಳನ್ನು ಉದ್ದೇಶಿಸಿ ಈ ತೆರ ಹಾಡುತ್ತಾಳೆ.]
Lakshmana : Today, you go first | I will be behind. You for her first glance | And after that, me – [They depart.]
[The inner curtain rises, revealing Shabari’s spacious hermitage. In the distance, toward the back, there is a sacrificial altar (vedi). Around it, the flowers decorated by the sages of the hermitage before they left still appear fresh and unwithered. A fire is smoldering on the altar. Shabari is sorting out the flowers, fruits, and tender leaves that she had gathered yesterday for Rama—which have now withered—and placing fresh ones in their stead. Addressing them, she sings in this manner.]
ಶಬರಿ : ನಿನ್ನೆಳಮೆ ಮೃದುತೆಯನು ಅವನ ಸ್ಪರ್ಶಕೆ ತೆರದೆ |
ಬರಿಗಾಳಿಗಾರಿರುವ ನಿನ್ನೆ ಚೆಂದಳಿರೇ,
ತುಂಬಿ ಬಂಬಲ ಹೊಗಳ್ಗೆಗಿಂಬಾದ ಕಂಪಿನಿಂ- |
ದವನಸುವನುದ್ದೀಪಿಸದೆ ಸೊರಗಿದಲರೇ,
ಅವನ ಪ್ರಾಣಾಹುತಿಗೆ ಬರದೆ ರುಚಿ ಹದ ಕೆಟ್ಟು |
ಹುಳುವಿಗಾಸರೆಯಾದ ಎಲೆ ವನ್ಯ ಫಲವೇ
ಮೀಸಲಾಗದೆ ಇಂತು ಮಾಸಲಾಗುವ ಇವನು |
ಮರಮರಳಿ ಹೊಸತರಿಂದಣಿಗೈವ ಛಲವೇ
[ಮಾಲೆಯನ್ನು ಕಟ್ಟುತ್ತಾ ಹಾಡುತ್ತಾಳೆ.]
ಎಂದು ಕಾಂಬೆ ನಾ ರಾಮನ | ನೆಂದು ಕಾಂಬೆ ನಾ !!ಪ!!
ದಶರಥನ ಪುತ್ರನಂತೆ | ಸಾಧು ಜನರ ಮಿತ್ರನಂತೆ
ಧೀರ ಶೂರ ವೀರ ಗಂ- | ಭೀರ ಸದ್ಗುಣ ಸಾರನಂತೆ – ಎಂದು ಕಾಂಬೆ ನಾ . . .
ಅಂಜಿಸುವವರಂಜುವಂತೆ | ಬಿಲ್ಲ ಹಿಡಿದು ಬರುವನಂತೆ ಆದೊಡೆ ಬಲು ಸೌಮ್ಯನಂತೆ |
ಹಸುಳೆಯಂತೆ ಕಾಂಬನಂತೆ – ಎಂದು . . .
ಅರಸುತನವ ತೊರೆದನಂತೆ | ತವಸಿತನವ ಕೊಂಡನಂತೆ
ತಮ್ಮನೊಡನೆ ಬನಕೆ ಬರಲು | ಮನದಿ ಭಯವೆ ಇಲ್ಲವಂತೆ – ಎಂದು . . .
ಕೆಟ್ಟ ಕನಸಿನುರುಳ ಕಳೆವ | ಸುಪ್ರಭಾತದಂಥವನನು
ಗುರುಸಿದ್ಧರೆ ಮೆಚ್ಚಿದಂಥ | ಸನ್ಮಂಗಳ ಮೂರುತಿಯನು – ಎಂದು . . .
[ಕಟ್ಟಿದ ಮಾಲೆಗೆ ಮುದ್ದಿಕ್ಕುವಳು]
Shabari : O lovely tender leaf, you dried up in the empty breeze without offering your youthful softness to his touch,
O flower, you withered away without refreshing his breath with your sweet fragrance that attracts swarms of bumblebees,
O wild forest fruit, without serving as an offering to him, you lost your flavor and ripeness, becoming shelter for worms.
Seeing these things go to waste without being dedicated to him, I am filled with the determination to gather fresh ones again and again.
[She sings while stringing a garland.] When will I see Rama? | When will I see him?
They say he is Dasharatha’s son |
They say he is the friend of good and noble people
They say he is brave, heroic, courageous, dignified, and the essence of all good virtues – When will I see him…
They say he comes holding a bow that frightens those who terrify others |
Yet, he is very gentle and looks as innocent as a child – When will I…
They say he gave up his kingship |
They say he took up the life of an ascetic
They say he came to the forest with his younger brother without any fear in his heart – When will I…
He is like a bright morning that removes the snare of bad dreams
He is the auspicious figure admired even by my great guru sages –
When will I… [She kisses the garland she has strung]
ರಾಮ : ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆವುದೇ?
Rama : Mother, can travelers find shelter here?
ಶಬರಿ : [ನಡುಗುವೆದೆಯಿಂದ ಹಿಂತಿರುಗಿ ನಿಟ್ಟಿಸಿ ಮೊದಲು ಬೆರಗು ಕಳೆದ ಮೇಲೆ] ನೀ ರಾಮನೇ, ಮಹಾಪುರುಷ!
Shabari : [Turning back with a trembling heart and gazing intently, after her initial astonishment subsides] You are Rama himself, O great soul!
ರಾಮ : ಅಹುದು ತಾಯಿ, ಅಹುದು, ರಾಮನೆಂಬರು ನನ್ನ ; ಈತ ನನ್ನನುಜ ಸೌಮಿತ್ರಿ.
Rama : Yes, mother, yes, they call me Rama; and this is my younger brother, Saumitri (Lakshmana).
ಶಬರಿ : ರಾಮ ಲಕ್ಷ್ಮಣರೆ ನೀವು – | ರಾಮನೇ ನೀನು ! –
Shabari : Are you Rama and Lakshmana – | Are you really Rama! –
[ಶಬರಿ ತುಂಬ ಸಡಗರಗೊಳ್ಳುತ್ತಾಳೆ. ಮುಂದೆ ಮೇಳದವರು ಹಾಡುವ ಹಾಡು ಅವಳು ಗೈದ ಉಪಚಾರವನ್ನು ಬಣ್ಣಿಸುತ್ತದೆ.]
[Shabari becomes overjoyed. Next, the song sung by the chorus describes the hospitality she offered them.]
ಕಂಡಳು ಶಬರಿ | ರಾಮ ಬಂದು ನಿಂದಿರುವುದ || ಪ ||
ಕಂಡ ಬೆರಗು ಕಳೆದ ಬಳಿಕ | ಸನಿಯಕೈದಿ ಮೈಯ ಮುಟ್ಟಿ
ಪದದಿ ಕೆಡೆದು ಕೈಯ ಕಣ್ಣಿ | ಗೊತ್ತಿಕೊಂಡು ಹನಿಯ ಸುರಿಸಿ!!
ಬನ್ನಿರೆಂದು ಗದ್ಗದಿಸುತ | ಅಯ್ಯೋ ಏನೂ ಅಣಿಯೆ ಇಲ್ಲ
Shabari saw | Rama having arrived and standing there ||Pallavi||
After the astonishment of seeing him subsided |
Going near him, touching his body Falling at his feet, pressing his hands to her eyes |
And shedding tears of joy!! Saying “Please come in” with a voice choked with emotion |
“Alas, nothing is prepared at all…
ನಿನ್ನೆಯಷ್ಟು ಚೆನ್ನವಿಲ್ಲ । ಎನ್ನುತ ಬಲು ಹಂಬಲಾಂತು !!……..
ತನ್ನ ಬಗೆಯ ಬಯಕೆಯಂತೆ । ಬಗೆಯ ಬಗೆಯ ಕಂಪನಿಡುವ
ವನಮಾಲೆಯ ಕೊರಳಿಗಿಟ್ಟು । ಅಬ್ಬ ಎಂದು ಹಿಗ್ಗಿ ಹಿಗ್ಗಿ!!
ಇದು ರುಚಿ ಇದರಷ್ಟು ರುಚಿಯ । ಹಣ್ಣೇ ಇಲ್ಲ ಜಗದೊಳೆಂದು
ನಿಮಗೆ ಎಂದೆ ತಂದೆನೆಂದು । ತಾನೆ ಅವರ ಕೈಯೊಳಿತ್ತು!!
ಪೂಜೆಯಿಂದ ಸುಪ್ರಸನ್ನ । ರಾಗಿ ರಾಜಕುವರರಂದು
ಮಂದಹಾಸ ತೋರೆ, ನೋಡಿ । ಧನ್ಯಭಾವದಿಂದ ಕೂಡಿ!!
“Nothing is as lovely as yesterday,” |
Saying so, she yearned deeply!!………
According to her heart’s desire |
Various fragrant Forest garlands she placed around their necks |
Saying “Abba” (how wonderful), rejoicing greatly!!
“This is tasty, this is just as tasty |
There is no fruit in this world like this I brought these just for you,” saying so |
She placed them in their hands herself!!
Deeply pleased by her worship |
As the princes Smiled gently, seeing that |
She was filled with a sense of blessedness!!
[ಹೀಗೆ ಅವರಿಗೆ ಉಪಚಾರವನ್ನು ಮಾಡಿ ಶಬರಿ ತನ್ನ ಅಂತಸ್ಸುಖವನ್ನು ತೋರುವುದಕ್ಕೆ ಈ ತೆರ ಹಾಡಿಕೊಂಡು ನರ್ತಿಸುತ್ತಾಳೆ.]
[Having thus offered them hospitality, Shabari sings and dances in this manner to express her inner bliss.]
ಸುಖಿ ನಾ ಸುಖಿ ನಾ ಸುಖಿ ನಾನು ಬರಿ ಸುಖಿ ಸುಮ್ಮನೆ ಸುಖಿ ನಾನು. . . ॥ಪ॥
ನಾನಿಲ್ಲದ ನಾನಾಗಿಹೆನು । ಆಸೆ ತೀರಿ ಹಾಯಾಗಿಹೆನು
ಹಂಬಲನಳಿದಿಹೆ ತುಂಬಿರುವೆನು ನಾ । ಸುಮ್ಮನೆಯೇ ಬಲು ಸುಖಿ ನಾನು_!!
ಸುಖಿ ನಾ… ಹೊಳೆ ಕಡಲಿಗೆ ಸೇರುವ ತೆರದಿ । ನಾವೆ ರೇವಿಗೆ ಬಹ ತೆರದಿ
ಬಗೆ ಬಗೆ ಹಾರೈಕೆಯ ಪಟವಿಳಿಸಿ । ನಿಂತಿದೆ ಮನ ಇದೇ ಬಿಡುವೆನಿಸಿ !! ಸುಖಿ ನಾ…
ನಿಮ್ಮ ನೋಡುತ ಸುಖಿ ನಾನು । ನಿಮ್ಮನೆ ನುಡಿಸುತ ಸುಖಿ ನಾನು
ನಿಮ್ಮ ತಣಿವು ನಿಮ್ಮಾನಂದದಿ ಸುಖಿ । ನಿಮ್ಮೆಡೆ ಸುಮ್ಮನೆ ಸುಖಿ ನಾನು !! ಸುಖಿ ನಾ …
ಇಂದಾಗಿಹೆ ನಾ ಬಲು ಹಗುರ । ನೀಡಿಹುದೋ ಪರ ತನ್ನ ಕರ
ನಿನ್ನೆ ನಾಳೆ ಇನ್ನಿಲ್ಲವೆನಗೆನೆ । ಈ ನಲವೇ ಚಿರವೆಂಬ ತೆರ !!
ಸುಖಿ ನಾ ಸುಖಿ ನಾ ಸುಖಿ ನಾನು । ಬರಿ ಸುಖಿ ಸುಮ್ಮನೆ ಸುಖಿ ನಾನು !!
Happy am I, happy am I, happy am I, simply happy, effortlessly happy am I . . . ||P||
I have become myself without my ego (“I”) | My desire fulfilled,
I am at peace I have shed my longing and am completely full |
Effortlessly, I am immensely happy!!
Happy am I… Like a river merging into the ocean |
Like a boat reaching the harbor Lowering the sails of various wishes |
My mind stands still, feeling as if this is the final refuge!!
Happy am I… Looking at you, I am happy |
Speaking to you, I am happy I am happy in your satisfaction and your joy |
Near you, I am effortlessly happy!!
Happy am I… Today I have become very light |
Has the Supreme extended its hand to me?
As if there is no yesterday or tomorrow for me |
As if this joy itself is eternal!! Happy am I, happy am I, happy am I | Simply happy, effortlessly happy am I!!
ರಾಮ : ನಿನ್ನಾದರದೊಳು ಸುಖಿ ನಾವು । ನಿನ್ನೀ ಸೊಗದೊಳು ಸುಖಿ ನಾವು ಕಾಡಿನೊಳೀ ಸವಿ ಕಾಣುವ ಪುಣ್ಯಕೆ । ನಿನಗೆಂದೆಂದಿಗು ಋಣಿ ನಾವು !!
Rama : In your affection, we are happy | In this joy of yours, we are happy For the good fortune of finding such sweetness in the forest | We are forever indebted to you!!
ಶಬರಿ : [ರಾಮನ ಮಾತನ್ನು ಕೇಳಿ ತನ್ನ ಸೊಗದ ಉನ್ಮಾದವನ್ನು ಸ್ವಲ್ಪ ಹದಕ್ಕೆ ತಂದುಕೊಂಡು ಅವನನ್ನು ನೋಡುತ್ತ ಕೊನೆ ಕೊನೆಗೆ ಕಂಬನಿದುಂಬಿ] ಬಲು ಸಂತಸ ಬಲು ಸಂತಸ ಬಲು ಸಂತಸವೆನಗೆ ನನ್ನಾಸೆಯ ಜಾಡ ಹಿಡಿದು ಬಂದಿರಲ್ಲೆ ಕೊನೆಗೆ ದಣಿದಿರಯ್ಯ, ತಣಿದಿರಾ । ಹಸಿವು ತೃಷೆಯನುಳಿದಿರಾ? ಬಡವೆ, ಒಬ್ಬಳೇನಗೈವೆ, ನನಗೆ ಮರುಕ ತಳೆದಿರಾ?
Shabari : [Hearing Rama’s words, calming down the ecstasy of her joy a little, looking at him, and finally filling with tears] Great joy, great joy, great joy is mine You finally arrived, following the trail of my longing You were exhausted, are you satisfied now? | Have you overcome your hunger and thirst? I am poor, all alone, what can I do? | Have you felt pity for me?
ರಾಮ : ಕಣ್ಣ ನೀರಿದೇಕೆ ತಾಯೆ, ತುಸವೂಣೆಯವಿಲ್ಲ ನಮ್ಮಯೋಧ್ಯೆಯರಮನೆಯೊಳು ಇದಕು ಲೇಸು ಸಲ್ಲ. ಇಂದು ಹಳುವ ಮರೆತೆವು । ಇಲ್ಲೆ ಮನೆಯನರಿತೆವು ಇನಿತಾದರ ತೋರ್ವ ನಿನ್ನನಬ್ಬೆಯೆಂದೆ ಕುರಿತೆವು.
Rama : Why these tears, mother? There is not the slightest shortcoming Even in our palace at Ayodhya, nothing better than this is served. Today we have forgotten the forest | Right here we have found a home Seeing you, who show such affection, we felt as though we were with our own mother.
ಶಬರಿ : ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!
ಧನ್ಯೆ ನಾನು ಸಿದ್ಧರ ವರವಿಂದೂ ನನಗೆ ಫಲಿಸಿದೆ.
ನಿಮ್ಮ ಕಂಡ ಪುಣ್ಯವಂತೆ; | ಹಿಂಗಿಹೋಯಿತೆಲ್ಲ ಚಿಂತೆ.
ಗುರುವ ಪೂಜೆ ಗೈದ ತಣಿವು ನನಗೆ ಸಂದಿತಿಂತೆ.
Shabari : Just like your form, your words too are so generous!
Blessed am I; the boon of the sages has borne fruit for me today.
Fortunate am I to have seen you; | All my worries have vanished.
Thus, the fulfillment of having worshipped my gurus has reached me.
ರಾಮ : ಇಂಥ ಶಿಷ್ಯೆಯರ್ತಿ ಪಡೆದ ನಿನ್ನ ಗುರುಗಳೆಂಥರೋ
ಅವರ ಮಹಿಮೆ ಕೇಳಿ ಬಲ್ಲೆ ಎಂಥ ಶಾಂತದಾಂತರೊ.
ಅಳಲನೆಲ್ಲ ಮರೆಸಿ ಶಾಂತಿಯೊಂದ ತೋರುವೀ ಬನ –
ಇದರ ನಡುವೆ ಪ್ರೇಮಶುದ್ಧೆ ನೀನು! ಸುದಿನವೀ ದಿನ
Rama : What great souls your gurus must have been to receive the devotion of such a disciple!
I have heard of their greatness—how peaceful and self-controlled they were.
This forest, which makes one forget all sorrow and shows only peace – Amidst it,
you are pure love itself! Today is truly an auspicious day.
ಶಬರಿ : ನನ್ನ ಪೊಗಳಲೇಕೆ ರಾಮ, ಎಲ್ಲ ಅವರ ಕರುಣೆ!
ನೀವಿಲ್ಲಗೆ ಪಾದ ಬೆಳಸಿ ನನ್ನ ಕಂಡ ಕರುಣೆ.
ನೀವು ಬಹಿರಿ ನಿಮ್ಮ ಕಾಣೆ ನಲ್ಮೆಯಹುದು ಎಂದು
ಸಿದ್ಧರೊರೆದ ಮಾತು ನನಗೆ ಸಿದ್ಧಿಯಾಯಿತಿಂದು …….
Shabari : Why praise me, Rama? All of this is their grace!
It is grace that you graced this place with your footsteps and saw me.
That you would come, and that seeing you would bring joy –
The words spoken by the sages have come true for me today…….
(ಹಾಡುವಳು) (Sings)
ಕೋಟಿಕರಗಳಿಂ ರವಿಯೆತ್ತಿರುವೀ | ನೀಲದಾಚೆ ಗಮನ, ನನಗೀ
ಮಾಯೆಯಾಚೆ ಪಯಣ || ಪ ||
ಹಾರಬಯಸೆನೀ ಹಕ್ಕಿಗಳಂತೆ | ತೇಲ ಬಯಸೆನೀ ಬಿಳಿಮುಗಿಲಂತೆ
ಕಾರ್ಮೋಡವ ಸೆಳೆಮಿಂಚಿನ ತೆರದೊಳು | ಭವ ಬಿಡೆ ಬಯಸಿಹೆನಿಂತೆ !!
ಕೋಟಿ ಕರಗಳಿಂ…
Beyond this blue expanse lifted by the sun with its myriad rays |
Lies my destination, my Journey beyond this illusion (Maya) ||P||
I do not wish to fly like these birds | Nor do I wish to float like these white clouds Like a streak of lightning piercing through dark clouds |
Thus do I wish to break free from this worldly existence !! With its myriad rays…
ರಾಮ : ಮಾತೆಯ ತೆರ ನೀನೆಮ್ಮಾದರಿಸುತ
ಬಳಿಕೀ ತೆರ ನುಡಿಯೆ ತಾಯೇ | ನಿನಗೀ ಬಗೆ ಸರಿಯೆ !!……
Rama : After welcoming us with the affection of a mother, To speak in this manner afterward, Mother—is this thought right for you!!……
ಶಬರಿ : ಪುಣ್ಯ ಲೋಕ ದೊರೆಯಲೆಂದು ಹರಕೆಯಿಡೆನಗೆ.
Shabari : Bless me so that I may attain the sacred heavenly realm.
ರಾಮ : ಇನಿತು ಪ್ರಿಯವ ಗೈದ ನಿನಗೆ ಸಾವೆ ನಮ್ಮ ಕಾಣ್ಕೆ !
Rama : To you, who have shown us such immense love, is death to be our gift in return!
ಶಬರಿ : ಮರಣವಲ್ಲ ಮುಕ್ತಿ ಪ್ರಭೋ ಇದುವೆ ನನ್ನ ಪೂಣ್ಕೆ !
Shabari : Not death, O Lord, it is liberation (Mukti)—this itself is my solemn vow!
ರಾಮ : ಮನ ಒಪ್ಪಿದರೂ ಎದೆಯೊಪ್ಪದಲಾ !
Rama : Even if the mind agrees, the heart cannot bear to consent!
ಶಬರಿ : ನೀನೊಲಿದೊಪ್ಪಲು ದಿವ ತಪ್ಪದಲಾ !
Shabari : When you willingly consent, heaven is assured!
ರಾಮ : ಬೆರಗಾಗಿಹೆ ನಾ ನಿನಗೆ | ಅಸ್ತು ಎಂಬೆ ನಲ್ಮೆಗೆ ಅಸ್ತು ಅಸ್ತು ಪೋಗವ್ವಾ ನಿನ್ನಭೀಷ್ಟ ಸಿದ್ಧಿಗೆ.
Rama : I stand amazed at you | I say “So be it” to your devotion—so be it, so be it; go, Mother, toward the fulfillment of your cherished wish.
ಶಬರಿ : ನಮೋ ನಮೋ ನಿಮಗೆ ನಮೋ | ಬನಕೆ ನಮೋ ಮಲೆಗೆ ನಮೋ ಎಲ್ಲರಿಗೆಲ್ಲಕು ಶರಣು. (ವೇದಿಯಲ್ಲಿ ಉದ್ದೀಪ್ತವಾದ ಅಗ್ನಿಯನ್ನು ಬಲವಂದು ಹಾಡುತ್ತಾ ಪ್ರವೇಶಿಸುತ್ತಾಳೆ.)
Shabari : Salutations, salutations to you, salutations | Salutations to the forest, salutations to the hills; I bow in surrender to everyone and everything. (Circumambulating the blazing fire on the altar clockwise, she enters it while singing.)
ರಾಮ : ಹೆಣ್ಣ ರೀತಿಯನರಿಯಬಹುದೇ | ಅವರ ಬಗೆ ಬಲು ಸೋಜಿಗ ! ಎಂಥ ನಿಷ್ಠೆ ಎಂಥ ಪ್ರೀತಿ | ಇವಳ ಮರೆವುದೆ ಈ ಜಗ?
Rama : Can one ever fathom the ways of a woman? | Their heart is a great wonder! What devotion, what love—will this world ever forget her?
ಲಕ್ಷ್ಮಣ : ಆರು, ಎತ್ತ, ಏಕೆ ಎನ್ನದೆ | ಹಸುಳೆಯಂದದಿ ಒಲಿದಳು ಕಾಣುತಲೆ ಬಹು ನಲಿದಳಣ್ಣಾ | ನಲವೊಳೆಮ್ಮನೆ ಮರೆತಳು.
Lakshmana : Without asking who, from where, or why | She loved us like an innocent child; upon seeing us, she rejoiced immensely, brother | In her sheer joy, she forgot even us.
ರಾಮ : ಬೆಳಕಿಗೊಲಿದವರ್ ಉರಿವ ಬತ್ತಿಯ | ಕರುಕ ಕಾಣರು ಲಕ್ಷ್ಮಣ ಬಾಳ ಸುತ್ತಿಹ ದೇವ ತೇಜವ | ಕಾಂಬರಿಗೆ ಇದೆ ಲಕ್ಷಣ.
Rama : Those who are devoted to the light | Do not see the charring of the burning wick, Lakshmana; this is the very mark of those who behold the divine radiance surrounding life.
ಲಕ್ಷ್ಮಣ : ಅಸುರನೆಡರಿಂ ಕಾದು ತನ್ನೆಡೆ– | ಗೆಮ್ಮ ಸೆಳೆದೀ ಅರ್ತಿಗೆ, ಏನನೆಂಬೆನು ಅಣ್ಣ, ಇಂತೆಯೆ | ನೆನೆಯುತಿರಬಹುದತ್ತಿಗೆ.
Lakshmana : Protecting us from the demon’s peril | And drawing us toward her with this deep affection—what can I say, brother? In this very same way, sister-in-law (Sita) too must be thinking of you.
ರಾಮ : ಇರಬಹುದು ಇರಬಹುದು–ಸೀತೇ | ಹಾ ಪ್ರಿಯೇ ಚಂದ್ರಾನನೇ ! ಎಲ್ಲಿರುವೆ, ಎಂತಿರುವೆ, ನಿನ್ನನು | ಜೀವದೊಂದಿಗೆ ಕಾಂಬೆನೇ?
Rama : It may be so, it may be so—Sita! | Ah, beloved with a moon-like face! Where are you, how are you? Will I ever see you alive again?
ಲಕ್ಷ್ಮಣ : ಭೂಮಿ ತಾಯಿಯು ತನ್ನ ಮಗಳನು | ಎಲ್ಲಿರಲಿ ಅದೆ ತವರೇನೆ ಪೊರೆವಳೈ, ಧೃತಿಯಾನು, ಚಿಂತಿಸು | ಇನ್ನು ಮುಂದಿನ ಹವಣನೆ.
Lakshmana : Wherever Mother Earth’s daughter may be, that place itself is her maternal home; she will protect her. Take courage, and think now of our next course of action.
ರಾಮ : ಅಹುದಹುದು ಮರೆತಿದ್ದೆ ಲಕ್ಷ್ಮಣ | ಪಂಚಭೂತದಿ ಬೆರೆಯುತ ಶಬರಿ ಸೀತೆಗೆ ರಕ್ಷೆಯಿಡಲಿ | ಪೋಪ ಬಾ ನೆರವರಸುತ.
Rama : Yes, yes, I had forgotten, Lakshmana | Merging with the five elements, may Shabari grant protection to Sita | Come, let us go in search of help.
ಕೃತಿಕಾರರ ಪರಿಚಯ
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ (ಸಾ. ಶಾ. ೧೯೦೫) ಇವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು. ಕನ್ನಡ ವಿಶ್ವಕೋಶದ ಭಾಷಾಂತರಕಾರರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಂಪಾದಕರಾಗಿ ಸೇವೆಸಲ್ಲಿಸಿದ್ದಾರೆ.
ಕನ್ನಡ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಪು.ತಿ.ನ. ಅವರು ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ, ವಿಚಾರಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಗೀತನಾಟಕ ಇವರ ಪ್ರಾತಿನಿಧಿಕ ಪ್ರಕಾರ. ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶ ದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಇವರ ಪ್ರಮುಖ ಕೃತಿಗಳು. ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಚಿಕ್ಕಮಗಳೂರಿನಲ್ಲಿ ೧೯೮೧ರಲ್ಲಿ ಸಮಾವೇಶಗೊಂಡ ೫೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
Introduction to the Author
Purohita Thirunarayanayyangarya Narasimhachar (1905 CE), popularly known by his pen name Pu. Ti. Na., hailed from Melukote in Mandya district. He served as a translator for the Kannada Encyclopedia and as an editor for the English–Kannada Dictionary at the University of Mysore.
One of the prominent poets of the Kannada Navodaya (Renaissance) movement, Pu. Ti. Na. wrote literature across various genres such as musical plays (geetanataka), poetry, short stories, essays, and reflective prose. Musical plays are his signature genre. His major works include Ahalye, Gokula Nirgamana, Shabari, Vikatakavi Vijaya, Hamsadamayanti Mattu Itara Roopakagalu, Hanate, Rasasaraswati, Ganesha Darshana, Sharadayamini, Sriharicharite, and Rathasaptami. He received the Kendra Sahitya Akademi Award for Hamsadamayanti Mattu Itara Roopakagalu and the Pampa Award for his epic poem Sriharicharite. The University of Mysore honored him with an honorary D.Litt. degree. He also presided over the 53rd All India Kannada Literary Conference (Akhila Bharata Kannada Sahitya Sammelana) held in Chikkamagaluru in 1981.
ಆಶಯ
ಶಬರಿ ಗೀತನಾಟಕ ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ತನ್ನ ಆರಾಧ್ಯ ಪುರುಷನ ದರ್ಶನದಿಂದ ಕೃತಾರ್ಥಳಾಗುವೆನೆಂಬ ಭಾವದಿಂದ ಶಬರಿ ಶ್ರೀರಾಮನಿಗಾಗಿ ಹಂಬಲಿಸಿ ಕಾತರಿಸುತ್ತಾಳೆ. ಶ್ರೀರಾಮದರ್ಶನ ಆಕೆಗೆ ಧನ್ಯತೆಯನ್ನು ತಂದು ಕೊಡುತ್ತದೆ. ರಾಮಲಕ್ಷ್ಮಣರನ್ನು ಆದರ ಆತಿಥ್ಯದಿಂದ ಸತ್ಕರಿಸಿ, ಗೌರವಿಸಿದ ಶಬರಿ ತನ್ನ ಬಾಳಿನ ಹಂಬಲ ತೀರಿದ ನಂತರ ಬಾಳು ಅರ್ಥಹೀನವೆಂದು ಭಾವಿಸಿ, ಮುಕ್ತಿಗಾಗಿ ಪ್ರಯತ್ನಿಸುವ ಸಂವೇದನೆಗೆ ಒಳಗಾಗುತ್ತಾಳೆ. ಶಬರಿಯ ಮುಗ್ಧತೆ, ಶ್ರೀರಾಮನ ಸರಳ, ಸಜ್ಜನಿಕೆ, ಹಿತ-ಮಿತ ಮೃದುವಚನ, ಲಕ್ಷ್ಮಣನ ವಿನಯದ ಸಹಚರತೆ ಮನೋಜ್ಞವಾಗಿ ಇಲ್ಲಿ ಮೂಡಿಬಂದಿದೆ.
ಪು.ತಿ.ನ. ವಿರಚಿತ ‘ಶಬರಿ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ ಏಕಾಂಕ ನಾಟಕಗಳು ಕೃತಿಯಿಂದ ಆಯ್ದು, ಸಂಪಾದಿಸಿ, ನಿಗದಿಪಡಿಸಲಾಗಿದೆ.
Theme / Objective
The musical play Shabari is based on the epic Ramayana. Believing that her life will be fulfilled by the sight (darshan) of her revered Lord, Shabari yearns and anxiously waits for Sri Rama. The sight of Sri Rama brings her a profound sense of fulfillment and blessedness. After welcoming and honoring Rama and Lakshmana with warm hospitality, Shabari feels that her life has lost its purpose once her lifelong longing is satisfied, and she becomes deeply inclined toward seeking salvation (mukti). Shabari’s innocence, Sri Rama’s simplicity, nobility, and gentle, measured words, along with Lakshmana’s humble companionship, are exquisitely portrayed here.
The musical play Shabari, composed by Pu. Ti. Na., has been selected, edited, and prescribed from the work Ekanka Natakagalu (One-Act Plays), edited by Sriranga and Na. Kasturi.
ಪೂರ್ವಕಥೆ
ರಾಮಾಯಣ ಮಹಾಕಾವ್ಯವು ಭಾರತೀಯರ ಪವಿತ್ರ ಗ್ರಂಥಗಳಲ್ಲಿ ಒಂದು. ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು. ಈಕೆ ಮತಂಗ ಋಷಿಯ ಆಶ್ರಮದಲ್ಲಿದ್ದವಳು. ಮತಂಗರು ದಿವ್ಯಲೋಕವನ್ನು ಸೇರಿದ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು. ಸೀತಾಪಹರಣದ ಅನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಿರುವಾಗ ತಪಸ್ವಿಯಾದ ದನು ಎಂಬವರ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಅಲ್ಲಿ ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ. ತನ್ನ ಆರಾಧ್ಯದೈವ ಶ್ರೀರಾಮನನ್ನು ಕಂಡು ಆನಂದಿಸಿ, ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸಿದ ಸಂದರ್ಭವೇ ಈ ಗೀತ ನಾಟಕ.
Background Story
The epic Ramayana is one of the sacred texts of Indians. Drawn by Sri Rama’s virtues and nature, Shabari was one among the countless devotees who believed that seeing him was the sole purpose of their life. She lived in the hermitage of Sage Matanga. After Matanga attained the heavenly abode, she immersed herself in meditating upon Rama and waited for his sight (darshan). Following the abduction of Sita, a grief-stricken Rama and Lakshmana, while searching for Sita, enter Matanga’s hermitage on the guidance of an ascetic named Danu. There, they behold Shabari, who had grown old anxiously waiting for Sri Rama’s arrival and looked like devotion personified. This musical play portrays the episode where Shabari rejoices upon seeing her beloved deity Sri Rama, desires salvation (mukti) out of a sense of fulfillment, and is granted salvation by Sri Rama.
ಪದಗಳ ಅರ್ಥ
ಅಣಿ – ಸಿದ್ಧತೆ (Preparation)
ಅರಿ – ತಿಳಿ (Know)
ಅಸುರ – ರಾಕ್ಷಸ (Demon)
ಆದರ – ಪ್ರೀತಿ (Affection)
ಆನು – ತಾಳು (Bear)
ಊಣೆಯ – ಕೊರತೆ (Deficiency)
ಎಡೆ – ಸ್ಥಳ (Place)
ಐದಿ – ಹೋಗಿ (Having gone)
ಕಡು – ಅತಿ (Excessive)
ಕರುಕ – ಉರಿದ ಬತ್ತಿಯ ಕಪ್ಪು ಭಾಗ (Charred wick)
ಚೀರ (ತ್ಸ) – ಸೀರೆ (ದ್ಭ) – ನಾರುಬಟ್ಟೆ (Bark cloth)
ತವಸಿ(ದ್ಭ) – ತಪಸ್ವಿ(ತ್ಸ) (Ascetic)
ತೃಷೆ – ಬಾಯಾರಿಕೆ (Thirst)
ದಿಟ್ಟಿ (ದ್ಭ) – ದೃಷ್ಟಿ (ತ್ಸ) (Sight)
ನಲ್ಮೆ – ಪ್ರೀತಿ (Love)
ನೆರವು – ಸಹಾಯ (Help)
ಪೆರೆ – ಚಂದ್ರ (Moon)
ಬಂಬಲ – ಗುಂಪು (Crowd)
ಬಯಕೆ – ಇಚ್ಛೆ (Desire)
ಬೆರಗು – ಆಶ್ಚರ್ಯ (Wonder)
ಭೂಮಿಜಾತೆ – ಸೀತೆ (Sita)
ಮಧುಪರ್ಕ – ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಹಾಲು, ಜೇನುತುಪ್ಪ, ಸಕ್ಕರೆ ಮಿಶ್ರಿತ ಪಾನೀಯ. (Offering drink)
ರೇವು – ಬಂದರು (Harbor)
ವೇದಿ – ಹೋಮ ನಡೆಯುವ ಸ್ಥಳ (Altar)
ಸನಿಯ(ಹ) – ಸಮೀಪ (Near)
ಸಿದ್ಧ – ತಪಸ್ವಿ (Sage)
ಹವಣು – ಸಿದ್ಧತೆ (Readiness)
ಅಬ್ಬೆ – ತಾಯಿ (Mother)
ಅರ್ತಿ – ಪ್ರೀತಿ (Fondness)
ಅಳಲು – ದುಃಖ (Sorrow)
ಆನನ – ಮುಖ (Face)
ಉಲ್ಕೆ – ಆಕಾಶದಿಂದ ಭೂಮಿಗೆ ಬೀಳುವ ತೇಜಃಪುಂಜವಾದ ಆಕಾಶಕಾಯ. (Meteor)
ಎಂಥರೋ – ಎಂತಹವರೋ (What kind of people)
ಎರೆ – ಬೇಡು, ಪ್ರಾರ್ಥಿಸು. (Beg)
ಕಂಪು – ಸುವಾಸನೆ (Fragrance)
ಕರ – ಕೈ (Hand)
ಚಿರ – ಶಾಶ್ವತ (Eternal)
ತಣಿವು – ತೃಪ್ತಿ (Satisfaction)
ತುಸ – ಸ್ವಲ್ಪವೂ (A little)
ತೇಜ – ಕಾಂತಿ (Radiance)
ಧೃತಿ – ಧೈರ್ಯ (Courage)
ನೆಚ್ಚು – ನಂಬು (Trust)
ಪದ – ಪಾದ (Foot)
ಪೂಣ್ಕೆ – ದೃಢ ನಿರ್ಧಾರ (Vow)
ಪೊಗಳು – ಹೊಗಳು (Praise)
ಬನ್ನ – ಕಷ್ಟ, ತೊಂದರೆ (Trouble)
ಬಳಿ – ದಾರಿ (Path)
ಬೇಗೆ – ದುಃಖವೆಂಬ ಬೆಂಕಿ (Agony)
ಮಧುಕರ – ದುಂಬಿ (Bumblebee)
ಮರುಳು – ಮೋಡಿ (Infatuation)
ಲೇಸು – ಉತ್ತಮ (Good)
ಶ್ರಮಣಿ – ತಪಸ್ವಿನಿ (Female ascetic)
ಸವಿ – ಸಿಹಿ (Sweet)
ಸುರಭಿ – ಕಾಮಧೇನು (Kamadhenu)
ಹಳು – ಕಾಡು (Forest)
ಟಿಪ್ಪಣಿ (Notes)
- ಶಬರಿ : ಶಬರನ ಮಗಳು, ಮತಂಗ ಋಷಿಯ ಶಿಷ್ಯೆ. Daughter of Shabara, disciple of Sage Matanga.
- ಮತಂಗ : ಒಬ್ಬ ಬ್ರಹ್ಮರ್ಷಿ. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ. ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು “ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ” ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು. A Brahmarshi (sage). He was performing penance near the Rishyamukha mountain. When Vali killed a demon named Dundubhi and, intoxicated with pride, threw the carcass into the hermitage, the sage’s hermitage became polluted. Enraged by this, Sage Matanga cursed, “If Vali enters this hermitage, let death befall him.” Sugriva, who was terrified of Vali, lived here. Shabari resided in Matanga’s hermitage.
- ಭೂಮಿಜಾತೆ : ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರ ಕಾಮೇಷ್ಟಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ ‘ಭೂಮಿಜಾತೆ’ಯೆಂದು ಮತ್ತೊಂದು ಹೆಸರು. Daughter of the Earth. Sita is the child found when King Janaka performed the Putrakameshti sacrifice for progeny and was ploughing the land in Mithila. Therefore, Sita has another name, ‘Bhumijate’ (born of the Earth).
- ಚಿತ್ರಕೂಟ : ಒಂದು ಪರ್ವತ. ಉತ್ತರ ಭಾರತದ ಪಯೋಷ್ಣಿ ನದಿಯ ಪಕ್ಕದಲ್ಲಿದೆ. ಶ್ರೀರಾಮನು ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ ಹೊರಟಾಗ ಮೊತ್ತಮೊದಲು ಇಲ್ಲಿ ಆಶ್ರಮವನ್ನು ಕಟ್ಟಿಕೊಂಡನು. ಭರತನು ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಗಳನ್ನು ಇಲ್ಲಿ ಪಡೆದನು. A mountain. It is located beside the Payoshni river in North India. When Sri Rama set out for forest exile with Sita and Lakshmana, he first built a hermitage here. Bharata met Sri Rama and received his sandals (Padukas) here.
- ದಶರಥ : ಅಯೋಧ್ಯೆಯ ಅರಸು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈತನ ಮಕ್ಕಳು. ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು. King of Ayodhya. Rama, Lakshmana, Bharata, and Shatrughna are his sons. Kausalya, Sumitra, and Kaikeyi are his wives.
- ಸೌಮಿತ್ರಿ : ದಶರಥನ ಎರಡನೆಯ ಮಡದಿಯಾದ ಸುಮಿತ್ರೆಯ ಮಗ ಲಕ್ಷ್ಮಣ. ಸುಮಿತ್ರೆಯ ಮಗನಾದುದರಿಂದ ಸೌಮಿತ್ರಿ ಎಂದು ಈತನನ್ನು ಕರೆಯುತ್ತಾರೆ. Lakshmana, the son of Dasharatha’s second wife, Sumitra. Because he is the son of Sumitra, he is called Saumitri.
- ದನು : ದಂಡಕಾರಣ್ಯದಲ್ಲಿ ವಾಸ ಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ. ಹಿಂದಣ ಜನ್ಮದಲ್ಲಿ ವಿಶ್ವಾವಸು ಎಂಬ ಗಂಧರ್ವನಾಗಿದ್ದ. ಈತ ಸ್ಥೂಲಶಿರನೆಂಬ ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖ ಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖಿ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪ ವಿಮೋಚನೆಯಾಯಿತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯ ಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ. A demon named Kabandha who lived in the Dandakaranya forest. In his previous birth, he was a Gandharva named Vishvavasu. He was born as a demon because he insulted a sage named Sthulashira. Once, due to a blow from Indra’s Vajrayudha (thunderbolt), his face collapsed and got pushed into his stomach. Hence, he got the name Udaramukhi (stomach-faced). He was liberated from his curse by Rama and Lakshmana. Having informed Rama about Shabari, he advises Rama to befriend Sugriva in order to get Sita back.
- ಜಟಿಲಕಬರಿ : ಜಟಿಲ-ಜಡೆಯಾಕಾರದ, ಕಬರಿ – ತುರುಬು = ಜಡೆಯಾಕಾರದ ತುರುಬುಳ್ಳವಳು – ಶಬರಿ. Jatila = matted/braided shape, Kabari = hair bun; meaning “one with a matted hair bun” – Shabari.
- ಮೇಳ : ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.
Mela (Chorus) : A group dedicated to singing in plays; they appear on stage and sing according to the situation of the drama.
- ಬಲವಂದು : ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು, ಕಲ್ಪವೃಕ್ಷಗಳಿಗೆ, ಹೋಮಕುಂಡ ಮುಂತಾದವುಗಳಿಗೆ ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ.
Balavandu (Circumambulation) : Means going around in a clockwise direction (from left to right). When going around God, a Tulasi platform (Tulasikatte), Kamadhenu, Kalpavriksha, a sacrificial fire pit (Homakunda), etc., one walks around such that they remain on the right side. Then it becomes a Pradakshina (clockwise circumambulation). If one walks around keeping the object to be circumambulated on the left side (Edabandu), it becomes Apradakshina (counter-clockwise).
- ಪರ್ಣಶಾಲೆ : ಎಲೆಗಳಿಂದ ಮೇಲ್ಛಾವಣಿ ನಿರ್ಮಿಸಿರುವ ಕುಟೀರ.Parnashale (Hermitage/Leaf-hut) : A hut with a roof built out of leaves.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence).
೧. ಶ್ರೀರಾಮನ ತಂದೆಯ ಹೆಸರೇನು?
ಉ. ಶ್ರೀರಾಮನ ತಂದೆಯ ಹೆಸರು ದಶರಥ.
೨. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಉ. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ಮಧುಪರ್ಕ ಮತ್ತು ರುಚಿಕರ ಹಣ್ಣು ಹಂಪಲುಗಳನ್ನುಸಂಗ್ರಹಿಸಿದ್ದಳು.
೩. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಉ: ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
೪. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಉ. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಕಬಂಧ ಎಂಬ ರಾಕ್ಷಸ.
೫. ಶಬರಿ ಗೀತ ನಾಟಕದ ಕರ್ತೃ ಯಾರು?
ಉ. ಶಬರಿ ಗೀತ ನಾಟಕದ ಕರ್ತೃ ಪು.ತಿ. ನರಸಿಂಹಾಚಾರ್.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in two to three sentences)
೧. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ಉ: ರಾಮನು ಗಿರಿವನಗಳನ್ನು ಕುರಿತು “ಗಿರಿವನಗಳೇ ನಾನು ನಿಮ್ಮನ್ನು ಬೇಡಿಕೊಳ್ಳುವೆನು. ಹೇಳಿ, ಪ್ರೀತಿಯ ರಾಣಿ ಸೀತೆಯು ನನಗೆ ಸಿಗುವಳೇ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವರೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ” ಎಂದು ಪ್ರಾರ್ಥಿಸಿದನು.
೨. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಉ: ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣ ರಾಮನನ್ನು ಕುರಿತು, “ತಾಳಿಕೋ ಅಣ್ಣ, ತಾಳಿಕೋ. ಸೂರ್ಯನೆ ತೇಜ ಗೆಡಲು ಕಾಂತಿಯನ್ನು ನೀಡುವವರು ಯಾರು? ಲೋಕಕ್ಕೆ ಧೈರ್ಯ ನೀಡುವವರು ಯಾರು? ಎಂದು ಸಂತೈಸಿದನು.
೩. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಉ: ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆ ಬಗೆಯ ಹಣ್ಣುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕ ಪಾನೀಯವನ್ನು, ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು.
೪. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಉ: ಶಬರಿಯು ರಾಮಲಕ್ಷ್ಮಣರನ್ನು ಕಂಡು, ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿದಳು. ಜಗದಲ್ಲಿ ಇದಕ್ಕಿಂತ ರುಚಿಯಾದ ಹಣ್ಣೇ ಇಲ್ಲ. ನಿಮಗೆಂದೇ ತಂದೆನು ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.
೫. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಉ: ಆಥಿತ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸ ಗೊಂಡೆವು. ನಿನ್ನ ಸುಖದಲ್ಲಿ ನಮ್ಮ ಸುಖ ಇದೆ. ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಋಣಿಗಳು ಎಂದು ಹೇಳಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ಉ: ಶಬರಿಯು ರಾಮಲಕ್ಷ್ಮಣರನ್ನು ಕಂಡು ಹಿಗ್ಗಿ ಸಂತಸ ಪಡುತ್ತಾಳೆ. ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕುತ್ತಾಳೆ. ಸವಿಯಾದ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನನ್ನು ಕಂಡ ತಾನು ಪರಮಸುಖಿ ಎಂದು ನರ್ತಿಸುತ್ತಾಳೆ. ರಾಮನೂ ಕೂಡ ನಿನ್ನ ಸುಖದಲ್ಲಿ ನಮ್ಮ ಸುಖ ಇದೆ. ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಋಣಿಗಳು ಎಂದು ಹೇಳುತ್ತಾನೆ. ಶಬರಿಯು ಕಣ್ಣೀರು ತುಂಬಿಕೊಂಡು ನನ್ನನ್ನು ಹುಡುಕಿ ಬಂದು ಸಂತಸ ನೀಡಿದಿರಿ, “ಹಸಿವು ತೃಷೆ ಹಿಂಗಿತೇ? ನಾನೊಬ್ಬಳು ಬಡವಿ, ನನ್ನ ಮೇಲೆ ಮರುಕ ತೋರಿದಿರಾ” ಎನ್ನುತ್ತಾಳೆ. ಶ್ರೀರಾಮುನು “ನಿನ್ನ ಆತಿತ್ಯದಲ್ಲಿ ಸ್ವಲ್ಪವೂ ಕೊರತೆ ಇಲ್ಲ. ನಮ್ಮ ಅರಮನೆಗಿಂತ ನಿನ್ನ ಆಶ್ರಮವೇ ಚಂದ. ನಿನ್ನ ಮನೆಯೇ ನಮ್ಮ ಮನೆ. ನೀನೇ ತಾಯಿಯಂತೆ ಎನ್ನುತ್ತಾನೆ”. ಶಬರಿಯು “ನಿನ್ನ ರೂಪದಂತೆ ನಿನ್ನ ಮಾತು ಸುಂದರ ಹಾಗೂ ಉದಾರ. ನಾನು ಧನ್ಯ. ಗುರು ಮತಂಗರ ವರ ನನಗೆ ಫಲಿಸಿತು. ನಿಮ್ಮನ್ನು ಕಂಡು ಪುಣ್ಯವು ತುಂಬಿತು. ಗುರು ಪೂಜೆಯನ್ನು ಮಾಡಿದ ಪುಣ್ಯ ನನಗೆ ಇಂದು ಸೇರಿತು. ನನ್ನ ಚಿಂತೆಯಲ್ಲ ಹಿಂಗಿ ಹೋಯಿತು” ಎನ್ನುತ್ತಾಳೆ.
೨. ಶಬರಿಯ ಸಡಗರ, ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ಉ. ರಾಮನು ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿ ಆಶ್ಚರ್ಯಪಟ್ಟಳು. ರಾಮನ ಹತ್ತಿರ ಬಂದು ಅವನನ್ನು ಮುಟ್ಟಿ, ಪಾದಕ್ಕೆ ನಮಸ್ಕರಿಸಿದಳು. ಕೈಯನ್ನು ಕಣ್ಣಿಗೆ ಒತ್ತುಕೊಂಡು ಕಣ್ಣೀರು ಸುರಿಸಿದಳು. ಗದ್ಗದ ಸ್ವರದಿಂದ “ಬನ್ನಿರಿ” ಎಂದು ಆಹ್ವಾನಿಸಿದಳು. “ಸಿದ್ಧತೆ ಇಲ್ಲವಲ್ಲ” ಎಂದು ಹಂಬಲಿಸಿದಳು. ಮನಸ್ಸಿನ ಬಯಕೆಯಂತೆ ಬಗೆ ಬಗೆಯ ಪರಿಮಳದ ಹೂವುಗಳಿಂದ ಮಾಲೆಯನ್ನು ಮಾಡಿ ರಾಮನ ಕೊರಳಿಗೆ ಹಾಕಿದಳು. ಜಗತ್ತಿನಲ್ಲಿ ಇಂತಹ ರುಚಿಕರವಾದ ಹಣ್ಣು ಇಲ್ಲವೆಂದು ಹೇಳುತ್ತಾ ಹಣ್ಣುಗಳನ್ನು ರಾಮನ ಕೈಗೆ ಇಟ್ಟಳು. ಶಬರಿಯ ಈ ಸೇವೆಯಿಂದ ರಾಮನು ಪ್ರಸನ್ನನಾದನು. ರಾಮಲಕ್ಷ್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು. ಹೀಗೆ ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ.
೩. ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಉ. ಶಬರಿ ಮತಂಗ ಋಷಿ ಆಶ್ರಮದಲ್ಲಿ ಇರುತ್ತಾಳೆ. ಸಿದ್ದರಾದ ಮತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು, ರಾಮಲಕ್ಷ್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ ಎಂದು ಶಬರಿಗೆ ಹೇಳಿದ್ದರು. ಅವರು ಹೇಳಿದಂತೆ ಶಬರಿಗೆ ರಾಮನ ದರ್ಶನವಾಯಿತು. ಶಬರಿಯು ರಾಮಲಕ್ಷ್ಮಣರನ್ನು ಕಂಡು ಹಿಗ್ಗಿ ಸಂತಸಪಟ್ಟಳು. ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣುಗೊತ್ತಿಕೊಂಡಳು. ಬಗೆ ಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿದಳು. ಸವಿಯಾದ ಹಣ್ಣುಗಳನ್ನು ನೀಡಿ ಸತ್ಕರಿಸಿದಳು. ರಾಮನನ್ನು ಕಂಡ ತಾನು ಪರಮಸುಖಿ ಎಂದು ನರ್ತಿಸಿದಳು. ಮತಂಗ ಋಷಿಯ ಮಾತನ್ನು ನಂಬಿ ಹಲವಾರು ವರ್ಷಗಳು ರಾಮನ ದರ್ಶನಕ್ಕಾಗಿ ಕಾದಳು. ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು. ಮನದಾಸೆ ಈಡೇರಿತು. ಹಾಗಾಗಿ ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.
ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ಆವುದೀ ಮರುಳು? ನಮ್ಮೆಡೆಗೆ ಬರುತ್ತಿಹುದು”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ಸೀತಾಪರಣದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ತಪಸ್ವಿ ಧನುವಿನ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಶಬರಿಯನ್ನು ಕಂಡು ರಾಮನು ಈ ಮಾತನ್ನು ಲಕ್ಷ್ಮಣನಿಗೆ ಹೇಳುತ್ತಾನೆ.
ಸ್ವಾರಸ್ಯ: ಶ್ರೀರಾಮನ ಬರುವಿಕೆಗಾಗಿ ಕಾದು ಮರುಳಳಂತೆ ಆಗಿದ್ದ ಶಬರಿಯನ್ನು ಕಂಡು ರಾಮ ಲಕ್ಷ್ಮಣರು ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯವಾಗಿ ವರ್ಣಿಸಲಾಗಿದೆ.
೨. “ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ “
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ತನ್ನಿಂದ ಯಾವ ಉಪಕಾರವಿಲ್ಲದಿದ್ದರೂ ತನ್ನನ್ನು ಪ್ರೀತಿಯಿಂದ ನೆನೆಯುತ್ತಾ ಹಂಬಲಿಸುತ್ತಿರುವ ವೃದ್ಧೆ ಶಬರಿಯನ್ನು ಕಂಡ ಸಂದರ್ಭದಲ್ಲಿ ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಪೂಜ್ಯೆಯಾದ ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತಾ ಬರುವಿಕೆಗಾಗಿ ಭಕ್ತಿಯಿಂದ ಕಾಯುತ್ತಾ ಇರುವ ದೃಶ್ಯವನ್ನು ನೋಡಿ ರಾಮನು “ಅವಳ ಅನುರಾಗವನ್ನು ಕಂಡು ನಾಚಿದನು” ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೩. “ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ಮತಂಗಾಆಶ್ರಮವನ್ನು ಪ್ರವೇಶಿಸಿದ ಸಂದರ್ಭದಲ್ಲಿ “ಎಂದು ಕಾಣುವೇನು ಶ್ರೀರಾಮನನ್ನು ಸನ್ಮಂಗಳ ಮೂರ್ತಿಯನ್ನು” ಎಂದು ಹಾಡುತ್ತಾ ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕಂಡು ರಾಮನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನು ಅರಿಯದಂತೆ ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳ ದೊರೆಯುವುದೇ ಎಂದು ಕೇಳುವುದು ಸ್ವಾರಸ್ಯವಾಗಿದೆ.
೪. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ರಾಮನು ಶಬರಿಯ ಅತಿಥಿ ಸತ್ಕಾರವನ್ನು ಕುರಿತು “ನಿನ್ನ ಆತಿಥ್ಯದ ಸವಿಯು ಅಯೋಧ್ಯೆಯ ಅರಮನೆಗಿಂತ ಮಿಗಿಲಾದದು. ಇಷ್ಟು ಪ್ರೀತಿಯನ್ನು ತೋರುವ ನಿನ್ನನ್ನು ತಾಯಿ ಎಂದು ತಿಳಿಯುವೆವು” ಎಂಬ ಸಂದರ್ಭದಲ್ಲಿ ಶಬರಿಯು ಈ ಮಾತನ್ನು ಹೇಳುತ್ತಾಳೆ.
ಸ್ವಾರಸ್ಯ: ರಾಮನ ಪ್ರೀತಿಯ ಮಾತುಗಳು ಅವನ ರೂಪದಂತೆ ಮಧುರವಾಗಿದೆ ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಸ್ವಾರಸ್ಯ ಪೂರ್ಣವಾಗಿ ವರ್ಣಿಸುತ್ತಾಳೆ.
೫. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು”
ಆಯ್ಕೆ: ಪುತಿನ ರಚಿಸಿದ ಏಕಾಂತ ನಾಟಕಗಳು ಎಂಬ ಕೃತಿಯಿಂದ ಶಬರಿ ಗೀತನಾಟಕವನ್ನು ಆರಿಸಲಾಗಿದೆ.
ಸಂದರ್ಭ: ರಾಮನ ದರ್ಶನ ಭಾಗ್ಯದಿಂದ ಸಂತಸಳಾದ ಶಬರಿಯು ಮುಕ್ತಿಯನ್ನು ಪಡೆಯುವದಕ್ಕಾಗಿ ಅಗ್ನಿ ಪ್ರವೇಶಿಸುವ ಸಂದರ್ಭದಲ್ಲಿ ರಾಮನು “ಬೆಳಕಿಗೆ ಒಲಿದವರು ಉರಿವ ಬತ್ತಿಯ ಕಪ್ಪನ್ನು ನೋಡುವುದಿಲ್ಲ” ಹೇಳುತ್ತಾನೆ.
ಸ್ವಾರಸ್ಯ: “ಬೆಳಕನ್ನು ಇಷ್ಟಪಡುವವರು ಉರಿಯುವ ಬತ್ತಿಯ ಕಪ್ಪನ್ನು ನೋಡುವುದಿಲ್ಲ.” ಎಂಬ ಮಾತು ಶಬರಿಯ ರಾಮಭಕ್ತಿಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ.
ಉ) ಹೊಂದಿಸಿ ಬರೆಯಿರಿ (Match the following)
ಅ ಬ
ಮತಂಗ ಸೀತೆ ಆಶ್ರಮ
ಪುತಿನ ಆಶ್ರಮ ಮೇಲುಕೋಟೆ
ದಶರಥ ಮೇಲುಕೋಟೆ ರಾಮ
ಚಿತ್ರಕೂಟ ಪರ್ವತ ಪರ್ವತ
ಭೂಮಿಜಾತೆ ರಾಮ ಸೀತೆ
ಅರಣ್ಯ
ಊ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. (Explain the proverbs)
೧. ತಾಳಿದವನು ಬಾಳಿಯಾನು (Click to open the link)
೨. ಮನಸ್ಸಿದ್ದರೆ ಮಾರ್ಗ (Click to open the link)
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ. (Identify the Vijatiya Sayukthakshara from the following words)
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ, ಎಚ್ಚರ, ಕಣ್ಣಿಗೆ, ಅದ್ಭುತ, ಬಟ್ಟೆ
೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ. (Identify the avargiya vyanjanagalu from the following words and write)
ಸಮನಾಗಿ, ದೇಶ, ಮನೆಯ, ಬಳಿಕ, ನೆಲ, ಮದುವೆ, ಮನುಷ್ಯ, ಹೊತ್ತು, ಒಳಗೆ
೩. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.(Write the 4th word related to the 3rd word)
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್ , ಝ್ : ಮಹಾಪ್ರಾಣಾಕ್ಷರಗಳು
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೯
ಇ) ಆ, ಈ, ಊ : ದೀರ್ಘ ಸ್ವರಗಳು : : ಅ, ಇ, ಉ, ಋ : ಹ್ರಸ್ವ ಸ್ವರಗಳು
ಈ) ಸ್ವರಗಳು : ೧೩ : : ಯೋಗವಾಹಗಳು : ೨
೪. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ. (Write essays for the following topics)
೧. ರಾಷ್ಟ್ರೀಯ ಹಬ್ಬಗಳ ಮಹತ್ವ (Click to open the link)
೨. ಗ್ರಂಥಾಲಯಗಳ ಮಹತ್ವ (Click to open the link)
೩. ಸಾಮಾಜಿಕ ಪಿಡುಗುಗಳು (Click to open the link)
ಬಹು ಆಯ್ಕೆ ಪ್ರಶ್ನೋತ್ತರಗಳು
1. ‘ಶಬರಿ‘ ಗೀತನಾಟಕವನ್ನು ಬರೆದವರು.
| (ಎ) ವಿ.ಕೃ. ಗೋಕಾಕ್ | (ಬಿ) ದ.ರಾ. ಬೇಂದ್ರೆ |
| (ಸಿ) ಲಕ್ಷ್ಮೀಶ | (ಡಿ) ಪು.ತಿ. ನರಸಿಂಹಾಚಾರ್ |
2. ‘ಶಬರಿ‘ ಗೀತನಾಟಕದ ಆಕರ ಗ್ರಂಥ.
| (ಎ) ಶ್ರೀಹರಿಚರಿತೆ | (ಬಿ) ರಥಸಪ್ತಮಿ |
| (ಸಿ) ಭರತ | (ಡಿ) ಏಕಾಂಕ ನಾಟಕಗಳು |
3. ಶ್ರೀರಾಮನ ತಂದೆಯ ಹೆಸರು __________
| (ಎ) ಲಕ್ಷ್ಮಣ | (ಬಿ) ದಶರಥ |
| (ಸಿ) ಭರತ | (ಡಿ) ಮತಂಗ |
4. ಶಬರಿ ವಾಸಮಾಡುತ್ತಿದ್ದ ಆಶ್ರಮ.
| (ಎ) ವಾಲ್ಮೀಕಿ ಆಶ್ರಮ | (ಬಿ) ಚಿತ್ರಕೂಟ ಆಶ್ರಮ |
| (ಸಿ) ಮತಂಗ ಆಶ್ರಮ | (ಡಿ) ಕಬಂದ ಆಶ್ರಮ |
5. ಶಬರಿ ಗದ್ಯಭಾಗದಲ್ಲಿ ಬರುವ ಭೂಮಿಜಾತೆ ಎಂದರೆ.
| (ಎ) ಶಬರಿ | (ಬಿ) ಸೀತೆ |
| (ಸಿ) ಕೌಸಲ್ಯೆ | (ಡಿ) ಸೌಮಿತ್ರಿ |
6. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದರು.
| (ಎ) ದಶರಥ | (ಬಿ) ಮತಂಗ |
| (ಸಿ) ದನು | (ಡಿ) ಭರತ |
7. ಶಬರಿ ಸಾಹಿತ್ಯದ __________ ಪ್ರಕಾರಕ್ಕೆ ಸೇರುತ್ತದೆ.
| (ಎ) ಲೇಖನ ಸಾಹಿತ್ಯ | (ಬಿ) ಲಲಿತ ಪ್ರಬಂಧ |
| (ಸಿ) ಗೀತ ನಾಟಕ | (ಡಿ) ಪ್ರವಾಸ ಸಾಹಿತ್ಯ |
8. ಪು.ತಿ.ನ ರವರಜನ್ಮ ಸ್ಥಳ __________.
| (ಎ) ಗದಗದ ಕೋಳಿವಾಡ | (ಬಿ) ಮಂಡ್ಯದ ಮೇಲುಕೋಟೆ |
| (ಸಿ) ಕಿಸುನಾಡಿನ ಸಯ್ಯಡಿ | (ಡಿ) ಶಿವಮೊಗ್ಗದ ಈಸೂರು |
9. ರೂಪಿನಂತೆ __________ ಕೂಡ ಎನಿತುದಾರವಾಗಿದೆ.
| (ಎ) ಪ್ರೀತಿ | (ಬಿ) ದ್ವೇಷ |
| (ಸಿ) ನೀತಿ | (ಡಿ) ಮಾತು |
10. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ
| (ಎ) ಅಹಲ್ಯೆ | (ಬಿ) ಸೀತೆ |
| (ಸಿ) ಕೌಸಲ್ಯೆ | (ಡಿ) ಶಬರಿ |
11. ಚಿತ್ರಕೂಟ ಎಂಬುದು ಒಂದು
| (ಎ) ನದಿ | (ಬಿ) ಬೆಟ್ಟ |
| (ಸಿ) ಪರ್ವತ | (ಡಿ) ಆಶ್ರಮ |
12. ಸೌಮಿತ್ರಿ ಎಂದರೆ __________
| (ಎ) ರಾಮ | (ಬಿ) ಭರತ |
| (ಸಿ) ಸೀತೆ | (ಡಿ) ಲಕ್ಷ್ಮಣ |
13. ಬೆಳಕಿಗೊಲಿದವರ್ ಉರಿವ ಬತ್ತಿಯ __________ ಕಾಣರು.
| (ಎ) ಕರುಕ | (ಬಿ) ಬೆಳಕು |
| (ಸಿ) ಕತ್ತಲು | (ಡಿ) ಕೊರತೆ |
14. ಶಬರಿಯು __________ ಲೋಕ ದೊರೆಯಲೆಂದು ಶ್ರೀರಾಮನಲ್ಲಿ ಬೇಡಿದಳು.
| (ಎ) ನರಕಲೋಕ | (ಬಿ) ಪುಣ್ಯಲೋಕ |
| (ಸಿ) ಪಾತಾಳಲೋಕ | (ಡಿ) ಭೂಲೋಕ |
ಉತ್ತರಗಳು (Answer Key)
| ಪ್ರಶ್ನೆ | ಸರಿಯಾದ ಉತ್ತರ | ಪ್ರಶ್ನೆ | ಸರಿಯಾದ ಉತ್ತರ |
| 1. | (ಡಿ) ಪು.ತಿ. ನರಸಿಂಹಾಚಾರ್ | 8. | (ಬಿ) ಮಂಡ್ಯದ ಮೇಲುಕೋಟೆ |
| 2. | (ಎ) ಶ್ರೀಹರಿಚರಿತೆ | 9. | (ಎ) ಪ್ರೀತಿ |
| 3. | (ಬಿ) ದಶರಥ | 10. | (ಡಿ) ಶಬರಿ |
| 4. | (ಸಿ) ಮತಂಗ ಆಶ್ರಮ | 11. | (ಬಿ) ಬೆಟ್ಟ |
| 5. | (ಬಿ) ಸೀತೆ | 12. | (ಡಿ) ಲಕ್ಷ್ಮಣ |
| 6. | (ಸಿ) ದನು | 13. | (ಎ) ಕರುಕ |
| 7. | (ಸಿ) ಗೀತ ನಾಟಕ | 14. | (ಬಿ) ಪುಣ್ಯಲೋಕ |
Click here to download shabari exercises cbse X boards