Job application (ಉದ್ಯೋಗಕ್ಕೆ ಅರ್ಜಿ ಪತ್ರ) format for the CBSE Class 10 Kannada board exam is made simple with this complete, ready-to-use guide. Designed to help students score full marks in formal letter writing, it clearly outlines the sender and recipient addresses, subject line, body, and educational qualification table. Students can effortlessly adapt this structured template for any job role asked in their board examination.
ಸಿ.ಬಿ.ಎಸ್.ಇ (CBSE) 10ನೇ ತರಗತಿ ಕನ್ನಡ ಬೋರ್ಡ್ ಪರೀಕ್ಷೆಗೆ ಉಪಯುಕ್ತವಾಗುವ ಉದ್ಯೋಗಕ್ಕೆ ಅರ್ಜಿ ಪತ್ರದ (Job application) ಮಾದರಿಯನ್ನು ಈ ಸಂಪೂರ್ಣ ಮತ್ತು ಬಳಸಲು ಸಿದ್ಧವಿರುವ ಮಾರ್ಗದರ್ಶಿಯೊಂದಿಗೆ ಅತ್ಯಂತ ಸರಳಗೊಳಿಸಲಾಗಿದೆ. ವ್ಯವಹಾರಿಕ ಪತ್ರ ಲೇಖನದಲ್ಲಿ ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆಯಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಇವರಿಂದ ಮತ್ತು ಇವರಿಗೆ ವಿಳಾಸಗಳು, ವಿಷಯ, ಪತ್ರದ ಒಡಲು ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯ ಕೋಷ್ಟಕವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಯಲ್ಲಿ ಕೇಳಲಾಗುವ ಯಾವುದೇ ಹುದ್ದೆಗೆ ತಕ್ಕಂತೆ ಈ ವ್ಯವಸ್ಥಿತ ಮಾದರಿಯನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು.
Job Application Format ಉದ್ಯೋಗಕ್ಕೆ ಅರ್ಜಿ ಪತ್ರದ ಮಾದರಿ
ದಿನಾಂಕ : [ದಿನಾಂಕ]
ಸ್ಥಳ : [ಸ್ಥಳ]
ಇವರಿಂದ,
[ಅರ್ಜಿದಾರರ ಹೆಸರು / ಅ.ಬ.ಕ],
[ಬಡಾವಣೆ / ಬೀದಿ],
[ಊರು / ನಗರ],
[ಜಿಲ್ಲೆ].
ಇವರಿಗೆ,
[ಅಧಿಕಾರಿಗಳ ಹುದ್ದೆ – ಉದಾ: ವ್ಯವಸ್ಥಾಪಕರು],
[ಸಂಸ್ಥೆ / ಕಂಪನಿ / ಬ್ಯಾಂಕ್ ಹೆಸರು],
[ಸ್ಥಳ / ನಗರ].
ಮಾನ್ಯರೇ
ವಿಷಯ: [ಹುದ್ದೆಯ ಹೆಸರು] ಹುದ್ದೆಗೆ ಅರ್ಜಿ
ದಿನಾಂಕ [ಜಾಹೀರಾತಿನ ದಿನಾಂಕ]ರ [ಪತ್ರಿಕೆಯ ಹೆಸರು] ದಿನಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಮೇರೆಗೆ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ [ಹುದ್ದೆಯ ಹೆಸರು] ಹುದ್ದೆಗೆ ನಾನು ಅರ್ಹನಾಗಿದ್ದು / ಅರ್ಹಳಾಗಿದ್ದು, ಈ ಅರ್ಜಿ ಸಲ್ಲಿಸುತ್ತಿದ್ದೇನೆ. ನನ್ನ ಬಗ್ಗೆ ಸಂಪೂರ್ಣ ಸ್ವ-ವಿವರ ಮಾಹಿತಿ ಈ ಕೆಳಗಿನಂತಿದೆ.
| ಕ್ರಮ ಸಂಖ್ಯೆ | ಶೈಕ್ಷಣಿಕ ವಿದ್ಯಾರ್ಹತೆ | ಪಾಸಾದ ವರ್ಷ | ಸಂಸ್ಥೆ/ವಿಶ್ವವಿದ್ಯಾಲಯ | ಶೇಕಡಾವಾರು ಅಂಕಗಳು |
| 1. | ಎಸ್.ಎಸ್.ಎಲ್.ಸಿ | [ತಿಂಗಳು, ವರ್ಷ] | [ಮಂಡಳಿಯ ಹೆಸರು] | [___%] |
| 2. | ಪಿ.ಯು.ಸಿ | [ತಿಂಗಳು, ವರ್ಷ] | [ಮಂಡಳಿಯ ಹೆಸರು] | [___%] |
| 3. | [ಪದವಿ – ಉದಾ: ಬಿ.ಕಾಂ / ಬಿ.ಎ] | [ತಿಂಗಳು, ವರ್ಷ] | [ವಿಶ್ವವಿದ್ಯಾಲಯದ ಹೆಸರು] | [___%] |
| 4. | [ಇತರೆ ಕೋರ್ಸ್ / ಸ್ನಾತಕೋತ್ತರ ಪದವಿ] | [ತಿಂಗಳು, ವರ್ಷ] | [ಸಂಸ್ಥೆ / ವಿಶ್ವವಿದ್ಯಾಲಯ] | [___%] |
ನನಗೆ [ಅನುಭವದ ಅವಧಿ – ಉದಾ: ಎರಡು ವರ್ಷಗಳ ಕಾಲ] [ಸಂಸ್ಥೆಯ ಪ್ರಕಾರ] ಸೇವೆ ಸಲ್ಲಿಸಿದ ಅನುಭವವಿದೆ. ನನ್ನ ಎಲ್ಲ ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿದ್ದೇನೆ. ದಯಾಳುಗಳಾದ ತಾವು ತಮ್ಮ ಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳು
ಇಂತಿ ತಮ್ಮ ಸೇವಾಕಾಂಕ್ಷಿ
([ಅರ್ಜಿದಾರರ ಹೆಸರು / ಅ.ಬ.ಕ])
Click here to download the format for the job application ಉದ್ಯೋಗಕ್ಕೆ ಅರ್ಜಿ cbse 10th grade
ದಿನಾಂಕ ೨ ಜನವರಿ ೨೦೨೫ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಮೇರೆಗೆ ಶ್ರೀ ಶಿವರಾಮ ಕೋ-ಆಪ್ ರೇಟಿವ್ ಬ್ಯಾಂಕ್ ಬಸವನಗರ ಬೆಳಗಾವಿ. ಇಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗೆ ಅರ್ಜಿ ಕರೆದಿದ್ದು ನೀವು ಹುಬ್ಬಳ್ಳಿಯ ರಮೇಶ. ಸಿ ಎಂದು ಭಾವಿಸಿ ಆ ಬ್ಯಾಂಕಿನ ವ್ಯವಸ್ಥಾಪಕರು ಇವರಿಗೆ ಒಂದು ಅರ್ಜಿ ಸಲ್ಲಿಸಿರಿ.
ದಿನಾಂಕ : ೦೭.೦೧.೨೦೨೫
ಸ್ಥಳ : ಹುಬ್ಬಳ್ಳಿ
ಇವರಿಂದ,
ರಮೇಶ. ಸಿ,
ವಿವೇಕ ನಗರ,
ಹುಬ್ಬಳ್ಳಿ – ೫೨೦೦೪೫
ಇವರಿಗೆ,
ವ್ಯವಸ್ಥಾಪಕರು,
ಶ್ರೀ ಶಿವರಾಮ ಕೋ-ಆಪ್ ರೇಟಿವ್ ಬ್ಯಾಂಕ್,
ಬಸವನಗರ, ಬೆಳಗಾವಿ.
ಮಾನ್ಯರೇ
ವಿಷಯ: ಗುಮಾಸ್ತ ಹುದ್ದೆಗೆ ಅರ್ಜಿ
ದಿನಾಂಕ ೨.೧.೨೦೨೫ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಮೇರೆಗೆ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗೆ ನಾನು ಅರ್ಹನಾಗಿದ್ದು, ಈ ಅರ್ಜಿ ಸಲ್ಲಿಸುತ್ತಿದ್ದೇನೆ. ನನ್ನ ಬಗೆಗೆ ಸಂಪೂರ್ಣ ಸ್ವ-ವಿವರ ಮಾಹಿತಿ ಈ ಕೆಳಗಿನಂತಿದೆ.
| ಕ್ರಮ ಸಂಖ್ಯೆ | ಶೈಕ್ಷಣಿಕ ವಿದ್ಯಾರ್ಹತೆ | ಪಾಸಾದ ವರ್ಷ | ಸಂಸ್ಥೆ/ವಿಶ್ವವಿದ್ಯಾಲಯ | ಶೇಕಡಾವಾರು ಅಂಕಗಳು |
| 1. | ಎಸ್.ಎಸ್.ಎಲ್.ಸಿ | ಏ. 2005 | ಕೆ.ಎಸ್.ಇ.ಇ.ಬೋರ್ಡ್ | 71% |
| 2. | ಪಿ.ಯು.ಸಿ | ಏ. 2007 | ಪಿ.ಯು.ಬೋರ್ಡ್ | 73% |
| 3. | ಬಿ.ಕಾಂ | ಏ. 2010 | ಕರ್ನಾಟಕ ವಿಶ್ವ ವಿದ್ಯಾಲಯ | 75% |
| 4. | ಎಂ.ಕಾಂ | ಜೂ. 2013 | ಕರ್ನಾಟಕ ವಿಶ್ವ ವಿದ್ಯಾಲಯ | 77% |
ನನಗೆ ಎರಡು ವರ್ಷಗಳ ಕಾಲ ಸ್ಥಳೀಯ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಎಲ್ಲ ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿದ್ದೇನೆ. ದಯಾಳುಗಳಾದ ತಾವು ತಮ್ಮ ಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳು
ಇಂತಿ ತಮ್ಮ ಸೇವಾಕಾಂಕ್ಷಿ
(ರಮೇಶ ಸಿ)
Click here to download job application clerk co-operative bank ಗುಮಾಸ್ತ ಹುದ್ದೆಗೆ ಅರ್ಜಿ
ದಿನಾಂಕ : 15-02-2022
ಸ್ಥಳ : ಬೆಂಗಳೂರು
ಇವರಿಂದ,
ಅ.ಬ.ಕ,
ನಂ. 24, 3ನೇ ಮುಖ್ಯರಸ್ತೆ,
ಜಯನಗರ,
ಬೆಂಗಳೂರು – 560011.
ಇವರಿಗೆ,
ನಿರ್ದೇಶಕರು,
ಇಂಧನ ಇಲಾಖೆ,
ಬೆಂಗಳೂರು – 01.
ಮಾನ್ಯರೇ,
ವಿಷಯ: ಕಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ.
ದಿನಾಂಕ 10-02-2022ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಮೇರೆಗೆ ತಮ್ಮ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ ನಾನು ಅರ್ಹನಾಗಿದ್ದು, ಈ ಅರ್ಜಿ ಸಲ್ಲಿಸುತ್ತಿದ್ದೇನೆ. ನನ್ನ ಬಗೆಗೆ ಸಂಪೂರ್ಣ ಸ್ವ-ವಿವರ ಮಾಹಿತಿ ಈ ಕೆಳಗಿನಂತಿದೆ.
| ಕ್ರಮ ಸಂಖ್ಯೆ | ಶೈಕ್ಷಣಿಕ ವಿದ್ಯಾರ್ಹತೆ | ಪಾಸಾದ ವರ್ಷ | ಸಂಸ್ಥೆ/ವಿಶ್ವವಿದ್ಯಾಲಯ | ಶೇಕಡಾವಾರು ಅಂಕಗಳು |
| 1. | ಎಸ್.ಎಸ್.ಎಲ್.ಸಿ | 2014 | ಕೆ.ಎಸ್.ಇ.ಇ.ಬೋರ್ಡ್ | 85% |
| 2. | ಪಿ.ಯು.ಸಿ | 2016 | ಪಿ.ಯು.ಬೋರ್ಡ್ | 82% |
| 3. | ಬಿ.ಇ. (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) | 2020 | ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) | 80% |
ನನಗೆ ಎರಡು ವರ್ಷಗಳ ಕಾಲ ಖಾಸಗಿ ವಿದ್ಯುತ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆ. ನನ್ನ ಎಲ್ಲ ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿದ್ದೇನೆ. ದಯಾಳುಗಳಾದ ತಾವು ತಮ್ಮ ಇಲಾಖೆಯಲ್ಲಿ ಸೇವೆ ಮಾಡಲು ಅವಕಾಶ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳು
ಇಂತಿ ತಮ್ಮ ಸೇವಾಕಾಂಕ್ಷಿ
(ಅ.ಬ.ಕ)
Click here to download junior asisitant engineer work application